ಸಂತ ಅನ್ನಮ್ಮನವರ ವೃದ್ಧಾಶ್ರಮ: ಭಾರತದಲ್ಲಿ ವೃದ್ಧರಿಗೆ ಆಶಾಕಿರಣ
ಉಷಾ ಮನೋರಮಾ ಟಿರ್ಕಿ
ಐದು ವರ್ಷಗಳ ಹಿಂದೆ, ಅಲೋಸಿಯಾರವರು ವಿದೇಶದಲ್ಲಿ ವಾಸಿಸುತ್ತಿದ್ದ ತನ್ನ ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಮನೆಗೆ ಮರಳುವಂತೆ ಕೇಳಲು ಆಕೆಯು ಎಂದಿಗೂ ವಿಫಲಳಾಗಲಿಲ್ಲ, ಆಕೆಯ ಧ್ವನಿಯಲ್ಲಿ ದುಃಖ ಮತ್ತು ಹತಾಶೆ ತುಂಬಿತ್ತು, ಆಕೆಯು ಅಳುತ್ತಿದ್ದಳು. ಅಲೋಸಿಯಾರವರು ತನ್ನ ಮಗಳನ್ನು ಕೊನೆಯ ಬಾರಿಗೆ ನೋಡದೆ ಸಾಯುವ ಭಯದಲ್ಲಿದ್ದರು.
ಅವರು ಸುಮಾರು ಎರಡು ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದರು, ಆದರೆ ಅವರ ಅನಾರೋಗ್ಯವು ಹದಗೆಡುತ್ತಲೇ ಇತ್ತು. ವೈದ್ಯರು ಅವರ ಅನಾರೋಗ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಕಾರಣ, ಅವರು ಆಕೆಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿಲ್ಲ. ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಕೆಗೆ ಶಕ್ತಯಿರಲಿಲ್ಲ ಮತ್ತು ಆಕೆಯ ಅನಾರೋಗ್ಯ ಮುಂದುವರೆದಂತೆ ಅವರ ಹತಾಶೆ ಹೆಚ್ಚಾಯಿತು.
ತನ್ನ ತಾಯಿಯ ಗಂಭೀರ ಸ್ಥಿತಿಯ ಬಗ್ಗೆ ಚಿಂತಿತಳಾಗಿ ಮತ್ತು ಪರಿಸ್ಥಿತಿಯನ್ನು ಪರಿಹರಿಸಲು ಒಂದು ಮಾರ್ಗವನ್ನು ಹುಡುಕುತ್ತಾ, ಆಕೆಯ ಮಗಳು ಆಗ ಸಂತ ಅನ್ನಮ್ಮನವರ ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿಯಾಗಿದ್ದ ಸಿಸ್ಟರ್ ಲಿಂಡಾ ಮೇರಿ ವಾಘನ್ ರವರು ನೀಡಿದ ಸಲಹೆಯನ್ನು ಅನುಸರಿಸಿದಳು, ಆಕೆಯು ತನ್ನ ತಾಯಿಯನ್ನು ಸಂತ ಅನ್ನಮ್ಮನವರ ಪುತ್ರಿಯರು ನಡೆಸುತ್ತಿರುವ ಆಶ್ರಮಕ್ಕೆ ಕರೆದೊಯ್ಯಲು ಸಲಹೆ ನೀಡಿದರು. ಹೀಗೆ ಅಲೋಸಿಯಾಳನ್ನು ಭಾರತದ ಉಲ್ಹಾಟು ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಲಾಯಿತು.
ಮನೆಯ ಹೊಸ ವಾತಾವರಣ
ಹೊಸ ಮನೆಯಲ್ಲಿ ಅಲೋಸಿಯಾರವರು ಸಂಪೂರ್ಣವಾಗಿ ವಿಭಿನ್ನವಾದ ವಾತಾವರಣವನ್ನು ಕಂಡರು, ಅಲ್ಲಿ ಅವರು ವಿವಿಧ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರನ್ನು ಭೇಟಿಯಾದರು.
ದಾದಿಯರು ಮತ್ತು ಸಹಾಯಕರು, ಹಗಲಿರುಳೆನ್ನದೆ ಅವರಿಗೆ ಸಹಾಯ ಮಾಡಲು ಸಿದ್ಧರಿದ್ದರು, ಅವರಿಗೆ ತಮ್ಮ ಸಮಯ ಮತ್ತು ಕೋಮಲ ಪ್ರೀತಿಯನ್ನು ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ, ರೋಗಿಗಳು ಪ್ರಾರ್ಥನೆಯ ವಾತಾವರಣವನ್ನು ಕಂಡುಕೊಂಡರು, ಇದು ಅವರ ಕಷ್ಟಗಳ ಹೊರತಾಗಿಯೂ ಅವರಿಗೆ ಭರವಸೆ ಮತ್ತು ಆಂತರಿಕ ಸಂತೋಷವನ್ನು ಹೊಂದಲು ಸಹಾಯ ಮಾಡಿತು.
ಸಂತ ಅನ್ನಮ್ಮನವರ ಪುತ್ರಿಯರ ಸಭೆಯ ಸಹೋದರಿಯರು, ರೋಗಿಗಳಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ನೆರವು ದೊರೆಯುವಂತೆ ನೋಡಿಕೊಳ್ಳಲು ವಿಶೇಷ ಕಾಳಜಿ ವಹಿಸುತ್ತಾರೆ.
ಆರಂಭದಿಂದಲೂ ಈ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಿಸ್ಟರ್ ಜೆಸಿಂತಾ ಕೆರ್ಕೆಟ್ಟಾ, ಡಿಎಸ್ಎ ರವರು, ಈಗ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿದ್ದಾರೆ. ಅವರು ಎಲ್ಲಾ ರೋಗಿಗಳನ್ನು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೆಚ್ಚಿನ ಕಾಳಜಿ ವಹಿಸುತ್ತಾರೆ.
ವೃದ್ಧರ ಆ ಕ್ಷಣದ ಅಗತ್ಯಗಳನ್ನು ಪೂರೈಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ" ಎಂದು ಸಿಸ್ಟರ್ ಜೆಸಿಂತಾರವರು ವಿವರಿಸಿದರು. ರೋಗಿಗಳು, ಅಸಹಾಯಕರು, ವೃದ್ಧರು, ಒಂಟಿತನ ಹೊಂದಿರುವವರು ಮತ್ತು ಅಂಗವಿಕಲರಿಗಾಗಿ ಇದನ್ನು ತೆರೆಯಲಾಗಿದೆ, ಇದರಿಂದ ಅವರು ಬದುಕುವುದನ್ನು ಮುಂದುವರಿಸಲು ಧೈರ್ಯವನ್ನು ಕಂಡುಕೊಳ್ಳಬಹುದು.
ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕ್ರೈಸ್ತ ಭರವಸೆ
ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡಿದ ಸಿಸ್ಟರ್ ಜೆಸಿಂತಾರವರು, ಕೇಂದ್ರವು ತನ್ನ ರೋಗಿಗಳಿಗೆ ಸಹಾಯ ಮಾಡುವ ವಿವಿಧ ವಿಧಾನಗಳನ್ನು ಗಮನಸೆಳೆದರು: ನಡಿಗೆಗಳು, ಮನರಂಜನಾ ಚಟುವಟಿಕೆಗಳು, ಸಮಾಲೋಚನೆ, ಶುಶ್ರೂಷೆಯ ಆರೈಕೆ, ಪ್ರಾರ್ಥನೆ ಮತ್ತು ಇನ್ನೂ ಹೆಚ್ಚಿನವು. ರೋಗಿಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಿದ ನಂತರ, ಅವರಲ್ಲಿ ಕೆಲವರು ತಮ್ಮ ಮನೆಗಳಿಗೆ ಮರಳುತ್ತಾರೆ, ಇನ್ನಿತರರು ಚಿಕಿತ್ಸಾಲಯದಲ್ಲಿಯೇ ಇರುತ್ತಾರೆ.
ಮೂರು ವರ್ಷಗಳ ನಂತರ, ಇಟಲಿಯಲ್ಲಿ ವಾಸಿಸುತ್ತಿದ್ದ ಅಲೋಶಿಯಾಳ ಮಗಳು ತನ್ನ ತಾಯಿಯನ್ನು ಮತ್ತೆ ನೋಡಿದಾಗ, ಅವಳು ದೇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ನಿಲ್ಲಿಸಲಾಗಲಿಲ್ಲ. ಆಕೆಯ ತಾಯಿ ದುರ್ಬಲಳಾಗಿದ್ದರೂ, ಆಕೆಯ ನಗುತ್ತಿರುವ ಮುಖದಲ್ಲಿ ಪ್ರಶಾಂತವಾದ ಭಾವವಿತ್ತು ಮತ್ತು ಯಾವುದೇ ದೂರುಗಳಿರಲಿಲ್ಲ.
ನಿಸ್ವಾರ್ಥವಾಗಿ ತನಗೆ ಸೇವೆ ಸಲ್ಲಿಸಿದವರಿಗೆ ಏನನ್ನಾದರೂ ನೀಡುವ ಮೂಲಕ ಆಕೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದಳು: ಆಕೆಯು ತನ್ನ ಹಾಸಿಗೆಯ ಮೇಲೆ ಮಲಗಿ, ಅಸಹಾಯಕಳಾಗಿದ್ದಳು, ಆದರೆ ಆಕೆಯ ದುರ್ಬಲ ತುಟಿಗಳೊಂದಿಗೆ ನಿರಂತರ ಪ್ರಾರ್ಥನೆಯಲ್ಲಿ ತೊಡಗಿದ್ದಳು. ಇದು ಕ್ರೈಸ್ತ ಭರವಸೆಯ ಫಲವಾಗಿತ್ತು. ಅಲೋಶಿಯಾರವರು ತನ್ನ ಜೀವನದ ಶ್ರೇಷ್ಠ-ನಿಧಿಯಾದ ಕ್ರಿಸ್ತರನ್ನು ಕಂಡುಕೊಳ್ಳಲು ಕಾರಣವಾದ ಭರವಸೆಯನ್ನು ಕಂಡುಕೊಂಡಿದ್ದಳು.
ಭರವಸೆಯ ತೀರ್ಥಯಾತ್ರೆ
ಈ ಭರವಸೆಯನ್ನು ಕಂಡುಕೊಂಡು ಶಾಂತಿಯುತವಾಗಿ ಈ ಲೋಕವನ್ನು ತೊರೆದ ವೃದ್ಧರಿಗೆ ಸಂತ ಅನ್ನಮ್ಮನವರ ಮನೆಯಲ್ಲಿ ಅಲೋಶಿಯಾರವರು ಮಾತ್ರ ಅಲ್ಲ. ಇಂದು, ಈ ಶಾಂತಿಯುತ ಸ್ಥಳದಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆಯಲು ಬಯಸುವ ಅನೇಕ ಜನರಿದ್ದಾರೆ.
ಈ ಮನೆಯು ವೃದ್ಧರಿಗೆ, ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮತ್ತು ಒಂಟಿತನದಿಂದ ಎದೆಗುಂದಿರುವವರಿಗೆ ಮೀಸಲಾಗಿದೆ. ನಿವಾಸಿಗಳಿಗೆ ಹೊಸ ಭರವಸೆಯನ್ನು ನೀಡುವುದು ಮತ್ತು ಅವರು ಭರವಸೆಯ ತೀರ್ಥಯಾತ್ರೆಯಲ್ಲಿ ಮುಂದುವರಿಯಲು ಸಹಾಯ ಮಾಡುವುದು ಇದರ ಗುರಿಯಾಗಿದೆ.
ಸಂತ ಅನ್ನಮ್ಮನವರ ವೃದ್ಧರ ಮನೆಯನ್ನು 2016ರಲ್ಲಿ ರಾಂಚಿಯ ಸಂತ ಅನ್ನಮ್ಮನವರ ಪುತ್ರಿಯರ ಸಭೆಯು ಸ್ಥಾಪಿಸಿತು. ಅಂದಿನಿಂದ, ಈ ಸಭೆಯ ಸಹೋದರಿಯರು ಅಗತ್ಯವಿರುವ ಜನರಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಒದಗಿಸುತ್ತಿದ್ದಾರೆ.