MAP

SSUDAN-VATICAN-DIPLOMACY-RELIGION-POPE SSUDAN-VATICAN-DIPLOMACY-RELIGION-POPE  (AFP or licensors)

ದಕ್ಷಿಣ ಸುಡಾನ್‌ನ ಧರ್ಮಸಭೆಗಳು: ಭರವಸೆಯನ್ನು ಉತ್ತೇಜಿಸಲು, ಅಹಿಂಸೆ ಕುರಿತು ಒಂದು ಕಿರುಪುಸ್ತಕ

ದಕ್ಷಿಣ ಸುಡಾನ್‌ನಲ್ಲಿ ಸಂಘರ್ಷಗಳು ಮತ್ತು ಜನಾಂಗೀಯ ಉದ್ವಿಗ್ನತೆಗಳ ಇತಿಹಾಸದ ನಡುವೆಯೂ ಶಾಂತಿಯನ್ನು ಬೆಳೆಸುವ ಆಶಯದೊಂದಿಗೆ, ದಕ್ಷಿಣ ಸುಡಾನಿನ ಧರ್ಮಸಭೆಗಳ ಮಂಡಳಿಯು(SSCC) ಸಮುದಾಯಗಳಲ್ಲಿ ಸಮನ್ವಯ, ಭರವಸೆ ಮತ್ತು ಪರಿವರ್ತನೆಯನ್ನು ಉತ್ತೇಜಿಸುವ ಸಾಧನವಾಗಿ ಕಾರ್ಯನಿರ್ವಹಿಸಲು ಅಹಿಂಸೆಯ ಕುರಿತು ಒಂದು ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ.

FSSA ನ ಸಿಸ್ಟರ್. ಜೆಸಿಂತರ್ ಆಂಟೊನೆಟ್ ಒಕೋತ್

ದಕ್ಷಿಣ ಸುಡಾನ್ ಕೌನ್ಸಿಲ್ ಆಫ್ ಚರ್ಚಸ್ ನ (ದಕ್ಷಿಣ ಸುಡಾನಿನ ಧರ್ಮಸಭೆಗಳ ಮಂಡಳಿಯು-SSCC) ಸದಸ್ಯರು ವಿಶ್ವದ ಅತ್ಯಂತ ಕಿರಿಯ ರಾಷ್ಟ್ರವಾದ ದಕ್ಷಿಣ ಸುಡಾನ್‌ನಲ್ಲಿ ಅಹಿಂಸೆಯ ಕುರಿತು ಬರೆದಿರುವ ಒಂದು ಕಿರುಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ, ಇದು ಧರ್ಮಸಭೆಯ ನಾಯಕರು ಮತ್ತು ಇಡೀ ಸಮುದಾಯವು, ದೇಶದಲ್ಲಿ ಭರವಸೆ ಮತ್ತು ಪರಿವರ್ತನೆಗಾಗಿ ಪ್ರತಿಪಾದಿಸಲು ಪ್ರೋತ್ಸಾಹಿಸುತ್ತದೆ.

ಯುದ್ಧದ ಹಿಂಸಾಚಾರದಿಂದ ನಾಗರಿಕರನ್ನು ರಕ್ಷಿಸಲು, ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ನಿರ್ಮಿಸಲು ಸೇವೆ ಸಲ್ಲಿಸುವ ನೆದರ್‌ಲ್ಯಾಂಡ್ ನ ಅತಿದೊಡ್ಡ ಶಾಂತಿ ಸಂಘಟನೆಯಾದ PAX ಸಹಯೋಗದೊಂದಿಗೆ ಈ ಕಿರುಪುಸ್ತಕವನ್ನು ಆಯೋಜಿಸಲಾಗಿದೆ ಮತ್ತು ವಿಶೇಷವಾಗಿ ಧರ್ಮಸಭೆಯ ನಾಯಕರು, ತಮ್ಮ ಪದಗಳನ್ನು ಮೀರಿ, ತಮ್ಮನ್ನು ಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ಬಿಡುಗಡೆಯ ದಿನ, ತಮ್ಮ ಮಾತಿನಲ್ಲಿ ಮಾತ್ರವಲ್ಲದೆ ತಮ್ಮ ಕಾರ್ಯಗಳಲ್ಲಿಯೂ ಸಹ ಅಹಿಂಸೆಯನ್ನು ಮಾದರಿಯಾಗಿಟ್ಟುಕೊಳ್ಳುವ ನಮ್ಮ ಧ್ಯೇಯದ ಬದ್ಧತೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿ ಎಂದು SSCCಯ ಪ್ರಧಾನ ಕಾರ್ಯದರ್ಶಿ ರೆವರೆಂಡ್ ಟುಟ್ ಕೋನಿ ನ್ಯಾಂಗ್ ಕಾನ್ ರವರು ಬಿಡುಗಡೆಯ ದಿನದಂದು ತಮ್ಮ ಸಂದೇಶದಲ್ಲಿ ಹೇಳಿದರು.

ದೇವಾಲಯಗಳು ಭರವಸೆ ಮತ್ತು ಪರಿವರ್ತನೆಯ ಪವಿತ್ರ ಸ್ಥಳಗಳಾಗಬೇಕು, ಸಂಘರ್ಷಗಳು ಮತ್ತು ಅನ್ಯಾಯಗಳನ್ನು, ಧೈರ್ಯ ಮತ್ತು ಅನುಗ್ರಹದಿಂದ ಜಯಿಸಲು ಸಮುದಾಯಗಳನ್ನು ಸಜ್ಜುಗೊಳಿಸಬೇಕು ಎಂದು ಅವರು ಹೇಳಿದರು.

ಧರ್ಮಸಭೆಯ ನಾಯಕರನ್ನು ಉದ್ದೇಶಿಸಿ "ಸಕ್ರಿಯ ಅಹಿಂಸೆ" ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಉಲ್ಲೇಖಿಸುತ್ತಾ, SSCC ಅಧಿಕಾರಿಯು, ನಾಯಕರು ಹೃದಯಗಳು ಮತ್ತು ಮನಸ್ಸುಗಳನ್ನು ರೂಪಿಸುವಲ್ಲಿ, ಸಮನ್ವಯ, ನ್ಯಾಯ ಮತ್ತು ಏಕತೆಯ ಕಡೆಗೆ ಸಮುದಾಯಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಹೇಳಿದರು.

ಈ ಕಿರುಪುಸ್ತಕವು ಅಹಿಂಸೆಯನ್ನು ದೈವಿಕ ಆದೇಶ ಮತ್ತು ಪ್ರಾಯೋಗಿಕ ಜೀವನ ವಿಧಾನ ಎಂಬ ನಮ್ಮ ತಿಳುವಳಿಕೆಯನ್ನು ಆಳಗೊಳಿಸಲು ಒಂದು ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ಇದು ಪ್ರೀತಿ, ಕ್ಷಮೆ ಮತ್ತು ಸಂಭಾಷಣೆಯನ್ನು ನಿಜವಾದ ಮತ್ತು ಶಾಶ್ವತ ಶಾಂತಿಯ ಮಾರ್ಗವಾಗಿ ಅಳವಡಿಸಿಕೊಳ್ಳುವ ಬದಲು ದ್ವೇಷ, ಸೇಡು ಮತ್ತು ವಿಭಜನೆಯನ್ನು ತಿರಸ್ಕರಿಸಲು ನಮಗೆ ಸವಾಲು ಹಾಕುತ್ತದೆ.

ಅಹಿಂಸೆಗಾಗಿ ಅಭಿಯಾನಗಳು
ಶಾಂತಿ, ನ್ಯಾಯ ಮತ್ತು ಸಮನ್ವಯವನ್ನು ಉತ್ತೇಜಿಸುವಲ್ಲಿ ಅಹಿಂಸೆ ಅಭಿಯಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಂದೇಶವು ಗಮನಿಸಿದೆ, ದಕ್ಷಿಣ ಸುಡಾನ್‌ನಲ್ಲಿ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಜನರು ಶಿಕ್ಷಣ, ವಕಾಲತ್ತು ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೇಲೆ ಗಮನಹರಿಸಬೇಕೆಂದು ಕರೆ ನೀಡಿದೆ.

ಧರ್ಮಸಭೆಯ ನಾಯಕರೆ, ಧರ್ಮಸಭೆಯ ಪ್ರತಿಯೊಬ್ಬ ಸದಸ್ಯರನ್ನು ನಿಮ್ಮ ಸಭೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಾನು ಪ್ರೋತ್ಸಾಹಿಸುತ್ತಿದ್ದೇನೆ, ನಿಮ್ಮ, ಆಯಾ ಪ್ರವಚನ ಪೀಠಗಳ ಮೂಲಕ ಪ್ರಬೋಧನೆ ಮಾಡುವಾಗ, ಬೈಬಲ್ ಅಧ್ಯಯನ ಕೂಟಗಳಲ್ಲಿ ಬೋಧಿಸುವಾಗ, ಅಹಿಂಸೆಯ ಬಗ್ಗೆ ಹಂಚಿಕೊಳ್ಳಲು ಐದು ನಿಮಿಷಗಳನ್ನು ಕಳೆಯಲು ಸುವಾರ್ತಾಬೋಧನಾ ಅಭಿಯಾನಗಳಿಗೆ ಈ ಅವಕಾಶಗಳನ್ನು ಬಳಸಿಕೊಳ್ಳಲು ನಾನು ಪ್ರೋತ್ಸಾಹಿಸುತ್ತಿದ್ದೇನೆ ಎಂದು ರೆವರೆಂಡ್ ನ್ಯಾಂಗ್ ರವರು ಹೇಳಿದರು.
 

06 ಫೆಬ್ರವರಿ 2025, 11:23