MAP

Chiusura del V Congresso Eucaristico Nazionale-Tanzania Chiusura del V Congresso Eucaristico Nazionale-Tanzania 

ತಾಂಜಾನಿಯಾದಲ್ಲಿ ಧಾರ್ಮಿಕ ಶ್ರೇಷ್ಟಾಧಿಕಾರಿಗಳು ಸಭೆ ಸೇರಿ ಸುರಕ್ಷತಾ ಪ್ರಯತ್ನಗಳನ್ನು ನವೀಕರಿಸಿದರು

ತಾಂಜಾನಿಯಾದ ಡಾರ್ ಎಸ್ ಸಲಾಮ್‌ನಲ್ಲಿ 90ಕ್ಕೂ ಹೆಚ್ಚು ಧಾರ್ಮಿಕ ಸಭೆಗಳ ಪ್ರಮುಖ ಮೇಲಾಧಿಕಾರಿಗಳು ಸಭೆ ಸೇರಿ, ದುರ್ಬಲ ವಯಸ್ಕರು ಮತ್ತು ಮಕ್ಕಳನ್ನು ರಕ್ಷಿಸುವಲ್ಲಿ ಅವರು ಜಾರಿಗೆ ತರಬಹುದಾದ ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತಾರೆ. ಅವರ ಧಾರ್ಮಿಕ ಸಮುದಾಯಗಳಲ್ಲಿ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಮಾರ್ಗಗಳನ್ನು ಅನ್ವೇಷಿಸುತ್ತಾರೆ.

ಸಿಸ್ಟರ್ ಜೆಸಿಂತರ್ ಆಂಟೊನೆಟ್ ಒಕೋತ್ FSSA

ಧರ್ಮಸಭೆಯಲ್ಲಿ ಸುರಕ್ಷತೆ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈತಿಕ ನಾಯಕತ್ವದ ಸ್ಥಳವಾಗಿರಬೇಕೆಂದು ನಿರೀಕ್ಷಿಸಲಾಗಿರುವುದರಿಂದ, ನಿಂದನೆ, ದುರ್ನಡತೆ ಮತ್ತು ಮಾನವ ಘನತೆಯ ಉಲ್ಲಂಘನೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ, ಮಕ್ಕಳು ಮತ್ತು ದುರ್ಬಲ ವಯಸ್ಕರ ರಕ್ಷಣೆ ಧರ್ಮಸಭೆಯಲ್ಲಿ ನಿರ್ಣಾಯಕ ವಿಷಯವಾಗಿದೆ.

ತಾಂಜಾನಿಯಾದಲ್ಲಿ 84 ವಿವಿಧ ಸಭೆಗಳಿಂದ 92 ಪ್ರಮುಖ ಮೇಲಾಧಿಕಾರಿಗಳನ್ನು ಒಟ್ಟುಗೂಡಿಸಿದ ನಾಲ್ಕು ದಿನಗಳ ಸಮ್ಮೇಳನದಲ್ಲಿ, ಧಾರ್ಮಿಕ ಮಹಿಳೆಯರು ತಮ್ಮ ಛತ್ರಿಯಾಕಾರದ ಸಂಸ್ಥೆಯಾದ ತಾಂಜಾನಿಯಾ ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸಿಸ್ಟರ್ಸ್ (ತಾಂಜಾನಿಯಾದ ಕಥೋಲಿಕ ಸಹೋದರಿಯರ ಸಂಘ-TCAS) ಅಡಿಯಲ್ಲಿ "ಮಕ್ಕಳು ಮತ್ತು ದುರ್ಬಲ ವಯಸ್ಕರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು: ಕಥೋಲಿಕ ಧರ್ಮಸಭೆಯ ದೃಷ್ಟಿಕೋನ" ಎಂಬ ವಿಷಯದ ಅಡಿಯಲ್ಲಿ ಭೇಟಿಯಾದರು.

ಕೆನ್ಯಾದ ತಂಗಾಜಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಚೆನ್‌ನೊಂದಿಗೆ ಸುರಕ್ಷತಾ ಉಪಕ್ರಮ ಯೋಜನೆಯ ಯೋಜನಾ ನಾಯಕಿ ಸಿಸ್ಟರ್ ಜೆಸಿಂತಾ ಒಂಡೆಂಗ್ ರವರ ಪ್ರಕಾರ, ಈ ತರಬೇತಿಯು "ಸ್ಪಷ್ಟ ನೀತಿಗಳು, ಧಾರ್ಮಿಕ ಸಂಸ್ಥೆಗಳಲ್ಲಿ ಸುರಕ್ಷಿತ ನೇಮಕಾತಿಯ ಪ್ರಕ್ರಿಯೆಗಳು ಮತ್ತು ಪರಿಣಾಮಕಾರಿ ವರದಿ ಮಾಡುವ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ" ಧಾರ್ಮಿಕ ಸಂಸ್ಥೆಗಳಲ್ಲಿ ಸುರಕ್ಷಿತ ವಾತಾವರಣವನ್ನು ಸ್ಥಾಪಿಸಲು ಮೇಲಾಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೆನ್ಯಾದ ಸನ್ಯಾಸಿನಿಯ ಪ್ರಕಾರ, ಸುರಕ್ಷತಾ ಪದ್ಧತಿಗಳನ್ನು "ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ, ಧಾರ್ಮಿಕ ಸಂಸ್ಥೆಗಳ ದೈನಂದಿನ ಕಾರ್ಯಾಚರಣೆಗಳು ಮತ್ತು ನೀತಿಗಳಲ್ಲಿ ಸಂಪೂರ್ಣವಾಗಿ ಸಂಯೋಜಿಸಬೇಕು, ಇದರಿಂದಾಗಿ ಹೊಣೆಗಾರಿಕೆ, ಸಹಾನುಭೂತಿ ಮತ್ತು ಗೌರವದ ಸಂಸ್ಕೃತಿಯನ್ನು ಬೆಳೆಸಬಹುದು, ಅಲ್ಲಿ ಎಲ್ಲಾ ಸದಸ್ಯರು ಸಂಭಾವ್ಯ ಅಥವಾ ಭವಿಷ್ಯದ ಅಪಾಯಗಳನ್ನು ಗುರುತಿಸಲು ಮತ್ತು ಪರಿಹರಿಸಲು ಅಧಿಕಾರ ಹೊಂದಿರುತ್ತಾರೆ" ಎಂದು ಹೇಳಿದರು.

ಫೆಬ್ರವರಿ 24-27 ರಂದು ದಾರ್ ಎಸ್ ಸಲಾಮ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಧರ್ಮಸಭೆಯ ಸೇವಾಕಾರ್ಯವಾಗಿ ರಕ್ಷಣೆ, ದೌರ್ಜನ್ಯದ ಚಿಹ್ನೆಗಳು, ಮಹಿಳೆಯರಿಗೆ ಧಾರ್ಮಿಕ ರಕ್ಷಣೆ, ಕಾನೂನು ಚೌಕಟ್ಟುಗಳು, ದೌರ್ಜನ್ಯದ ಸಂತ್ರಸ್ತರೊಂದಿಗೆ ಕೆಲಸ ಮಾಡುವುದು, ಧರ್ಮಸಭೆಯ ಕಾನೂನುಗಳು ಮತ್ತು ದೌರ್ಜನ್ಯದ ಪರಿಣಾಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಧಾರ್ಮಿಕರು ಭರವಸೆಯ ದಾರಿದೀಪಗಳು
ಸೇವೆ, ಪ್ರಾರ್ಥನೆ ಮತ್ತು ನ್ಯಾಯಕ್ಕೆ ಪವಿತ್ರ ಅಭ್ಯಂಗಿತ ವ್ಯಕ್ತಿಗಳ ಬದ್ಧತೆಯ ಮೂಲಕ, ಧಾರ್ಮಿಕರು ಪರಿಶ್ರಮ ಮತ್ತು ಅನುಗ್ರಹದ ಸಂಕೇತಗಳಾಗಿ ನಿಲ್ಲುತ್ತಾರೆ ಮತ್ತು ಭರವಸೆ ಹಾಗೂ ಆಧ್ಯಾತ್ಮಿಕ ನವೀಕರಣದಲ್ಲಿ ಬೇರೂರಿರುವ ಭವಿಷ್ಯದ ಕಡೆಗೆ ಭಕ್ತವಿಶ್ವಾಸಿಗಳನ್ನು ಮಾರ್ಗದರ್ಶನ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಮುಂದುವರೆಯುತ್ತಿರುವ ತರಬೇತಿ ಅಧಿವೇಶನಗಳು
ಸಹೋದರಿಯರು ತಮ್ಮ ಸುರಕ್ಷತೆಯ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ನಾಲ್ಕು ದಿನಗಳ ತರಬೇತಿಯನ್ನು ಪಡೆದಿದ್ದರೂ ಸಹ, ಶ್ರೇಷ್ಠಾಧಿಕಾರಿಗಳು ನವೀಕೃತವಾಗಿರಲು ಮತ್ತು ಯಾವುದೇ ಹೊಸ ಉತ್ತಮ ಅಭ್ಯಾಸಗಳನ್ನು ಪರಿಚಯಿಸಲು ಸುರಕ್ಷತಾ ತತ್ವಗಳನ್ನು ಬಲಪಡಿಸಲು ಸಹಾಯ ಮಾಡಲು ರಿಫ್ರೆಶರ್ ಕೋರ್ಸ್‌ಗಳು/ಚೈತನ್ಯದಾಯಿ ತರಬೇತಿಳು ಅಥವಾ ಕಾರ್ಯಾಗಾರಗಳಂತಹ ನಡೆಯುತ್ತಿರುವ ತರಬೇತಿ ಅವಧಿಗಳನ್ನು ಸಿಸ್ಟರ್ ಒಂಡೆಂಗ್ ರವರು ಶಿಫಾರಸು ಮಾಡುತ್ತಾರೆ.
 

28 ಫೆಬ್ರವರಿ 2025, 12:37