ಲೆಬನಾನ್‌ನಲ್ಲಿನ ಯೋಜನೆಯು ಯುವಕರಿಗೆ ರಾಜಕೀಯವನ್ನು ಒಳ್ಳೆಯದಕ್ಕಾಗಿ ಪರಿವರ್ತಿಸುವ ವೇದಿಕೆಯಾಗಿದೆ
ಸಾಲ್ವಟೋರ್ ಸೆರ್ನುಜಿಯೊ ಮತ್ತು ಕೀಲ್ಸ್ ಗುಸ್ಸಿ
ಇಸ್ರಯೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಆರ್ಥಿಕ ಬಿಕ್ಕಟ್ಟು ಹಾಗೂ ಉದ್ವಿಗ್ನತೆಯ ನಂತರ 18-29 ವರ್ಷ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಜನರು, ಲೆಬನಾನ್ ತೊರೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮುಂದುವರೆಯುತ್ತಿರುವ ಧಾಳಿಗಳ ಪರಿಸ್ಥಿತಿಯ ಪರಿಣಾಮವಾಗಿ 562,000ಕ್ಕೂ ಹೆಚ್ಚು ಜನರು ಲೆಬನಾನ್ ತೊರೆದು ಸಿರಿಯಾಕ್ಕೆ ವಲಸೆ ಬಂದಿದ್ದಾರೆ.
ಆದರೂ, ಹೊಸ ಯೋಜನೆಯ ರಚನೆಯು ಯುವಜನರಿಗೆ, ವಿಶೇಷವಾಗಿ ಕ್ರೈಸ್ತರಿಗೆ ಒಂದು ಹೊಸ ವಾತಾವರಣವನ್ನು ಬದಲಾಯಿಸುತ್ತಿದೆ. ವ್ಯಾಟಿಕನ್‌ನ ಸಮಗ್ರ ಮಾನವ ಅಭಿವೃದ್ಧಿಗಾಗಿ ಡಿಕಾಸ್ಟರಿಯಿಂದ ಬೆಂಬಲಿತವಾದ ಲೀಡರ್‌ಶಿಪ್ ಅಕಾಡೆಮಿ ಫಾರ್ ಪೀಸ್ (ಶಾಂತಿಗಾಗಿ ನಾಯಕತ್ವದ ಶಿಕ್ಷಣ), ಮಧ್ಯಪ್ರಾಚ್ಯದಲ್ಲಿ 35 ವರ್ಷದೊಳಗಿನ ಕಥೋಲಿಕ ಯುವಜನರೊಂದಿಗೆ ಕೆಲಸ ಮಾಡುತ್ತಿದೆ.
ರಾಜಕೀಯವನ್ನು "ಭ್ರಷ್ಟಾಚಾರದ ಸ್ಥಳದಿಂದ" ಕಥೋಲಿಕ ಸಾಮಾಜಿಕ ಬೋಧನೆಯ ಮೌಲ್ಯಗಳನ್ನು ಉತ್ತೇಜಿಸುವ ವೇದಿಕೆಯಾಗಿ ಪರಿವರ್ತಿಸುವ ಗುರಿಯೊಂದಿಗೆ ಯುವಜನರ ಗುಂಪುಗಳು ಹೆಚ್ಚು ಹೆಚ್ಚು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 19-23 ರವರೆಗೆ ಬೈರುತ್‌ನ ಸೇವಾನಿಯೋಗ ಕಾರ್ಯದಲ್ಲಿರುವ ಕಾರ್ಡಿನಲ್ ಮೈಕೆಲ್ ಕ್ಜೆರ್ನಿರವರು, ಈ ಕೆಲವು ಯುವಕರನ್ನು ಭೇಟಿಯಾದರು. ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಅಂತಿಯೋಕ್ಯದ ಪಿತೃಪ್ರಧಾನ ಸಿರಿಯಾದ ಕಥೋಲಿಕ ಧರ್ಮಾಧ್ಯಕ್ಷರಾದ ಜೂಲ್ಸ್ ಬೌಟ್ರೋಸ್ ರವರು ಈ ಯೋಜನೆಯ ಕೆಲಸವನ್ನು ವಿವರಿಸುತ್ತಾರೆ.
ಬದಲಾವಣೆಯ ಮೂರು ಹಂತಗಳು
ಧರ್ಮಾಧ್ಯಕ್ಷರಾದ ಬೌಟ್ರೋಸ್ ರವರು ಲೀಡರ್‌ಶಿಪ್ ಅಕಾಡೆಮಿ ಫಾರ್ ಪೀಸ್‌ನ ಎಲ್ಲವೂ, "ಲೆಬನಾನ್‌ನಲ್ಲಿ, ಏನಾಗುತ್ತಿದೆ ಎಂಬುದನ್ನು ಗಮನಿಸಿ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬಹುದು?" ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಯಿತು ಎಂದು ವಿವರಿಸುತ್ತಾರೆ, ಲೆಬನಾನ್ ನ್ನು ಮಾತ್ರವಲ್ಲ, ಬದಲಿಗೆ ಇಡೀ ಮಧ್ಯಪ್ರಾಚ್ಯವನ್ನು ಹೇಗೆ ಉತ್ತಮಗೊಳಿಸುವುದು ಎಂಬುದನ್ನು ಅರಿತು, ಅಕಾಡೆಮಿಯನ್ನು "ಮೂರು ಹಂತಗಳಲ್ಲಿ ಧರ್ಮಸಭೆಯ ಬೋಧನೆಗಳನ್ನು ರವಾನಿಸಲು" ಸ್ಥಾಪಿಸಲಾಯಿತು: ಬೈರುತ್ ಬಳಿ ಇರುವ ಮೂರು ಕಥೋಲಿಕ ಶಾಲೆಗಳು, ನಂತರ ಶಿಕ್ಷಕರೊಂದಿಗೆ ಕೆಲಸ ಮಾಡುವುದು ಮತ್ತು ಮೂರನೆಯದಾಗಿ, ಸ್ವತಃ. ಅಕಾಡೆಮಿಯೊಂದಿಗೆ ಕಾರ್ಯನಿರ್ವಹಿಸುವುದು ಎಂದು ಹೇಳಿದರು.
ರಾಜಕೀಯವು ಸಾಮಾನ್ಯ ಒಳಿತಿಗಾಗಿ ಸೇವೆ ಸಲ್ಲಿಸುತ್ತದೆ
ಲೆಬನಾನ್‌ನಲ್ಲಿನ ಹಿಂಸಾಚಾರವು ಯುವಜನರು ರಾಜಕೀಯವನ್ನು ಸಮೀಪಿಸುವ ರೀತಿಯಲ್ಲಿ ಬದಲಾವಣೆಯನ್ನು ಉಂಟುಮಾಡಿತು. ಕೇವಲ ವ್ಯಾಪಾರ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ಇರುವ ಸ್ಥಳಕ್ಕಿಂತ, ಅವರು ಇದನ್ನು "ಒಂದು ಪವಿತ್ರ ವೃತ್ತಿ ಹಾಗೂ ಹಿಂದೆಂದೂ ಯೋಚಿಸದ ಒಂದು ವಿಷಯ"ವಾಗಿ ನೋಡುತ್ತಿದ್ದಾರೆ. ಅವರಿಗೆ, ಧರ್ಮಾಧ್ಯಕ್ಷರಾದ ಬೌಟ್ರೋಸ್ ರವರು ವಿವರಿಸಿದಂತೆ, ರಾಜಕೀಯ ಎಂದರೆ ಸಾಮಾನ್ಯ ಒಳಿತಿಗಾಗಿ ಸೇವೆ ಮಾಡುವುದು ಮತ್ತು "ಶಾಂತಿ, ನ್ಯಾಯ ಮತ್ತು ಭ್ರಾತೃತ್ವದ ನಿರ್ಮಾತೃಗಳಾಗುವುದು.
ಆದರೆ ಈ ಕೆಲಸವು ಧರ್ಮಸಭೆಯ ಕಟ್ಟಡಗಳು ಮತ್ತು ಧರ್ಮಕೇಂದ್ರದ, ಕೇಂದ್ರಗಳನ್ನು ಮೀರಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದರರ್ಥ ಜಗತ್ತಿನಲ್ಲೆಡೆ ಹೋಗಿ ಕ್ರಮ ತೆಗೆದುಕೊಳ್ಳುವುದು. ಸಿರಿಯಾದ ಕಥೋಲಿಕ ಧರ್ಮಾಧ್ಯಕ್ಷ, ಧರ್ಮಸಭೆಯು ಧ್ಯೇಯವು ಬರೀ ದೇವರ ಕೆಲಸವನ್ನು ಘೋಷಿಸುವುದು ಮಾತ್ರವಲ್ಲದೇ, ನ್ಯಾಯಕ್ಕಾಗಿಯೂ ಕೆಲಸ ಮಾಡುವಂತೆ ಸವಾಲು ಹಾಕುತ್ತಾರೆ. ದಾನಕ್ಕಾಗಿ ಕೆಲಸ ಮಾಡುವುದು ಸುಲಭ; ನ್ಯಾಯಕ್ಕಾಗಿ ಕೆಲಸ ಮಾಡುವುದು ತುಂಬಾ ಕಷ್ಟ" ಎಂದು ಅವರು ಒತ್ತಿ ಹೇಳುತ್ತಾರೆ. ನ್ಯಾಯಕ್ಕಾಗಿ ಕೆಲಸ ಮಾಡಲು, ಭ್ರಷ್ಟಾಚಾರವನ್ನು ತಪ್ಪಿಸಲು ಮತ್ತು "ನೆರಳುಗಳಿಗೆ (ಅಂಧತೆ ಇರುವೆಡೆ) ಬೆಳಕು ತರುವ ಬದಲು" ತಮ್ಮನ್ನೇ ತಾವು ಎಲ್ಲಾ ಕಾರ್ಯಗಳಲ್ಲಿ ಒಳಗೊಳ್ಳುವಿಕೆಯ ಅಗತ್ಯವಿದೆ.
ಅಕಾಡೆಮಿಯ ಕೆಲಸ
ರಾಜಕೀಯ ಜಗತ್ತಿನಲ್ಲಿ ಜವಾಬ್ದಾರಿಯನ್ನು ಹೊಂದಿರುವ ಧರ್ಮಸಭೆಗೆ ʼಲೀಡರ್‌ಶಿಪ್ ಅಕಾಡೆಮಿ ಫಾರ್ ಪೀಸ್ʼ ಧರ್ಮಸಭೆಗೆ ಧ್ವನಿ ನೀಡುತ್ತದೆ. ದುರುಪಯೋಗ, ಹಿಂಸೆ ಮತ್ತು ಅಧಿಕಾರದ ಸಮಸ್ಯೆಗಳನ್ನು ಪರಿಹರಿಸಲು ಧರ್ಮಸಭೆಯು, ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಉಪಸ್ಥಿತಿಯನ್ನು ಹೊಂದಿರಬೇಕು ಎಂದು ಧರ್ಮಾಧ್ಯಕ್ಷರಾದ ಬೌಟ್ರೋಸ್ ರವರು ವಾದಿಸುತ್ತಾರೆ. ಅಕಾಡೆಮಿಯಲ್ಲಿ, ವಿದ್ಯಾರ್ಥಿಗಳು "ಬಹಳ ಪ್ರಾಯೋಗಿಕ ಸಾಮಾಜಿಕ ಮತ್ತು ರಾಜಕೀಯ ಬೋಧನೆ"ಯನ್ನು ಅಧ್ಯಯನ ಮಾಡುತ್ತಾರೆ ಮತ್ತು ಅಭಿವೃದ್ಧಿಪಡಿಸುತ್ತಾರೆ ಹಾಗೂ ಅವರು ಕಥೋಲಿಕ ಸಾಮಾಜಿಕ ಬೋಧನೆಯನ್ನು ಬಹಿರಂಗಪಡಿಸುತ್ತಾರೆ ಇದರಿಂದ ಅವರು ಅದನ್ನು ಇತರರೊಂದಿಗೆ ಪರಸ್ಪರ ಹಂಚಿಕೊಳ್ಳಬಹುದು.
ಸಣ್ಣ ಗುಂಪುಗಳಾಗಿ ವಿಂಗಡಿಸಲ್ಪಟ್ಟ ಯುವಕರು ವಿವಿಧ ಮಾನವೀಯ ಕಾರಣಗಳಿಗಾಗಿ ಕೆಲಸ ಮಾಡುತ್ತಾರೆ: ಪರಿತ್ಯಕ್ತ ಜನರು, ನಿರಾಶ್ರಿತರು ಮತ್ತು ಮಾನವ ಹಕ್ಕುಗಳ ರಕ್ಷಣೆ. 2020ರಲ್ಲಿ ಬೈರುತ್ ಬಂದರಿನಲ್ಲಿ ನೂರಾರು ಜನರು ಸಾವನ್ನಪ್ಪಿದ ಮತ್ತು ಸಾವಿರಾರು ಮನೆಗಳನ್ನು ನಾಶಪಡಿಸಿದ ಸ್ಫೋಟದಂತಹ ಪ್ರಕರಣಗಳನ್ನು ಸಹ ಅವರು ಕೈಗೆತ್ತಿಕೊಳ್ಳುತ್ತಾರೆ. ಸಿರಿಯಾದ ಕಥೋಲಿಕ ಧರ್ಮಾಧ್ಯಕ್ಷರು: "ಇಂತಹ ದುರಂತದ ಸಂದರ್ಭದಲ್ಲಿ, ನಾವಲ್ಲದಿದ್ದರೆ ಯಾರು ಈ ಉದ್ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು?" ಈ ಪ್ರಶ್ನೆಯನ್ನು ಮುಂದಿಡುತ್ತಾರೆ.
ಅಕಾಡೆಮಿ ಸದಸ್ಯರು ಯಾವುದೇ ಕಾರ್ಯಗಳನ್ನು ನಿರ್ವಹಿಸದಿದ್ದರೆ, ಈ ಘಟನೆಗಳನ್ನು ಜನರು ಇತಿಹಾಸದಲ್ಲಿ ಮರೆಮಾಡಿಬಿಡುತ್ತಾರೆ ಎಂದು ಅವರು ಎಚ್ಚರಿಸುತ್ತಾರೆ. ತರಗತಿ ಕೋಣೆಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ, ಅಕಾಡೆಮಿ ಕ್ರಮ ಕೈಗೊಳ್ಳುತ್ತದೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಸ್ನೇಹದ ಜಾಲ ಅಥವಾ ಸಂಪರ್ಕಗಳನ್ನು ಸೃಷ್ಟಿಸುತ್ತದೆ.
ಧರ್ಮಾಧ್ಯಕ್ಷರಾದ ಬೌಟ್ರೋಸ್ ರವರು ವಿವರಿಸಿದಂತೆ, “ಅಂತಹ ಸ್ನೇಹದ ಸಂಪರ್ಕಗಳು ಭವಿಷ್ಯದಲ್ಲಿ ಹೆಚ್ಚಿನ ಒಳಿತನ್ನು ತರುತ್ತವೆ ಎಂದು ನಾವು ನಂಬುತ್ತೇವೆ. ಒಂಟಿಯಾಗಿ, ನಾವು ಬಡವರು ಮತ್ತು ದುರ್ಬಲರು, ನಾವು ಸ್ವಲ್ಪ ಪ್ರಮಾಣದ ಒಳಿತನ್ನು ಮಾಡಬಹುದು. ಆದರೆ ಅಕಾಡೆಮಿಯಲ್ಲಿ ಒಟ್ಟಾಗಿ ಒಗ್ಗೂಡಿದರೆ, ಲೆಬನಾನ್ ಮತ್ತು ಜಗತ್ತಿನಲ್ಲಿ ಉತ್ತಮ ಭವಿಷ್ಯಕ್ಕಾಗಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.