ಫ್ರಾಟೆಲ್ಲಿ ಟುಟ್ಟಿಯ ಉತ್ಸಾಹದಲ್ಲಿ ಸಂವಹನ ನಡೆಸುವ ವಿಶ್ವಾಸದ ಭಾವಚಿತ್ರಗಳು
ಸಿಸ್ಟರ್ ಬರ್ನಾಡೆಟ್ ಎಂ. ರೀಸ್, fsp
ಡೇನಿಯಲ್ ಎಪ್ಸ್ಟೀನ್ ರವರು ಪ್ರಾಕ್ಟರ್ & ಗ್ಯಾಂಬಲ್‌ನಲ್ಲಿ 21 ವರ್ಷಗಳ ಕಾಲ ಮಾರ್ಕೆಟಿಂಗ್ ನಿರ್ದೇಶಕರಾಗಿ ಕೆಲಸ ಮಾಡಿದರು. 36 ನೇ ವಯಸ್ಸಿನಲ್ಲಿ, ಅವರು ತಮ್ಮ ಜೀವನದಲ್ಲಿ ಹಲವಾರು ನೋವಿನ ಸನ್ನಿವೇಶಗಳನ್ನು ಎದುರಿಸುತ್ತಿದ್ದಾಗ, "ಸಹಾಯ ಕೇಳಲು- ಅವರಿಗೆ ತಿಳಿಯದ ದೇವರಲ್ಲಿ ಪ್ರಾರ್ಥಿಸಲು..." ಆಕರ್ಷಿತರಾದರು.
ವಿಶ್ವಾಸದಲ್ಲಿ ಭಾವಚಿತ್ರಗಳು ಹುಟ್ಟಿಕೊಂಡಿವೆ.
ಡೇನಿಯಲ್ ಅವರ ಹತಾಶ ಮನವಿಯು "ಆಧ್ಯಾತ್ಮಿಕ ವ್ಯಾಯಾಮ" ವಾಗಿ ಬದಲಾಯಿತು ಎಂದು ಅವರು ಹೇಳುತ್ತಾರೆ. ವ್ಯವಹಾರದ ನಿಮಿತ್ತ ಪ್ರಪಂಚದಾದ್ಯಂತ ಪ್ರಯಾಣಿಸುವಾಗ, ಡೇನಿಯಲ್ ರವರು ಈ ಆಧ್ಯಾತ್ಮಿಕ ಅನ್ವೇಷಣೆಯನ್ನು ಅನ್ವೇಷಿಸಲು ಹೆಚ್ಚುವರಿ ವೈಯಕ್ತಿಕ ದಿನಗಳನ್ನು ಕಳೆಯುತ್ತಿದ್ದರು. ತನ್ನ ಕ್ಯಾಮೆರಾ ಹಿಡಿದು, ಜೀವನದಲ್ಲಿ ವಿಶ್ವಾಸದ ಪಾತ್ರ ಮತ್ತು ಅವರ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಜನರನ್ನು ಸಂದರ್ಶಿಸಲು ಪ್ರಾರಂಭಿಸಿದರು. ಡೇನಿಯಲ್ ರವರು ಸಂದರ್ಶಿಸಿದ ಈ ಎಲ್ಲಾ ಜನರ ಮೂಲಕ, ಅವರ ಸ್ವಂತ ಹತಾಶತೆ ಮತ್ತು ವಿಶ್ವಾಸದ ಕೊರತೆಯ ಭಾವನೆ ಮಾಯವಾಯಿತು.
ನಂಬಿಕೆಯು 'ಇತರರನ್ನು' ಒಂದುಗೂಡಿಸುತ್ತದೆ
ಡೇನಿಯಲ್ ರವರ ಆಧ್ಯಾತ್ಮಿಕ ಅನ್ವೇಷಣೆಯು, ವಿಶ್ವಗುರು ಫ್ರಾನ್ಸಿಸ್ ರವರ ಹೇಳುವಂತೆ "ನಾವು ದೇವರೊಂದಿಗೆ ನಿಜವಾದ ಮುಕ್ತತೆಯ ಖಾತರಿಯಲ್ಲಿದ್ದಾಗ...ಅದು ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಹೃದಯಗಳನ್ನು ತೆರೆಯಲು ಸಹಾಯ ಮಾಡುವ, ವಿಶ್ವಾಸದ ಅಭ್ಯಾಸ ಮಾಡುವ ಒಂದು ಮಾರ್ಗವಾಗಿದೆ" ಎಂದು ತಮ್ಮ ವಿಶ್ವಪರಿಪತ್ರ ಫ್ರಾಟೆಲ್ಲಿ ಟುಟ್ಟಿಯಲ್ಲಿ ವ್ಯಕ್ತಪಡಿಸಿದ ಅಂತಃಪ್ರಜ್ಞೆಯನ್ನು ದೃಢಪಡಿಸುತ್ತದೆ.
‘ನಾನು ಊಹಿಸಲು ಸಾಧ್ಯವಾಗದಷ್ಟು ದೊಡ್ಡದು’
ತನ್ನ ‘ಪವಿತ್ರ ಕಾರ್ಯ’ವನ್ನು ಹಿಂತಿರುಗಿ ನೋಡುತ್ತಾ, ಡೇನಿಯಲ್ ರವರು ಅದಕ್ಕೆ ತುಂಬಾ ಕೃತಜ್ಞನಾಗಿದ್ದಾನೆ ಎಂದು ಹೇಳುತ್ತಾರೆ.
“ಒಮ್ಮೆ ಒಬ್ಬ ಆಧ್ಯಾತ್ಮಿಕ ಗುರು ನನಗೆ, ‘ಡೇನಿಯಲ್, ನೀನು ಗುಣಮುಖನಾಗಲು ಬಯಸುತ್ತೀಯಾ’ ಎಂದು ಕೇಳಿದ್ದರು. ಅದಕ್ಕೆ ನಾನು, ನಾನು ನನ್ನನ್ನು ಗುಣಪಡಿಸಿಕೊಳ್ಳುವುದೋ ಅಥವಾ ಇತರರನ್ನು ಗುಣಪಡಿಸುವುದೋ?' ಎಂದು ಕೇಳಿದೆ, ಅದಕ್ಕೆ ಅವರು, ನೀನು ನಿನ್ನ ಪ್ರತಿಯೊಂದು ಭಾಗವನ್ನು ಮರಳಿ ಪಡೆಯಲು ಬಯಸುತ್ತೀಯಾ. ಮತ್ತು ಹಾಗೆ ಮಾಡುವುದರಿಂದ, ನೀನು ಇತರರನ್ನು ಗುಣಪಡಿಸದೆ ಇರಲು ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದರು.
"ಈ ಯೋಜನೆಯು ನನಗೆ ಅದನ್ನೇ ಮಾಡಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದಲ್ಲಿ ಒಂದು ಪವಿತ್ರ ಉಪಸ್ಥಿತಿಯ ಬಗ್ಗೆ ಮತ್ತು ಎಲ್ಲವೂ ಚೆನ್ನಾಗಿದೆ ಎಂಬುದರ ಆಶಾವಾದಿಯಾಗಿರಲು ಕಾರಣಗಳಿವೆ ಎಂದು ನನಗೆ ನೆನಪಿಸಬೇಕಾಗಿತ್ತು. ನಾನು ಇತರ ಜನರ ವಿಶ್ವಾಸ ಮತ್ತು ಆಧ್ಯಾತ್ಮಿಕತೆಯ ಕಥೆಗಳಿಂದ ದೂರ ಸರಿದೆ ಮತ್ತು ಹಾಗೆ ಮಾಡುವುದರಿಂದ, ಈಗ ನಾನು ಇತರ ಜನರಿಗೆ ಸಹಾಯಕವಾಗುವ ಈ ಕಥೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅಷ್ಟು ಮಾತ್ರವಲ್ಲದೇ ಅವರಿಗೆ ದೇವರನ್ನು ಪರಿಚಯಿಸುವುದರ ಮೂಲಕ, ನಾನು ಸಹ ಗುಣಮುಖನಾಗುತ್ತೇನೆ ಎಂದು ಭಾವಿಸುತ್ತೇನೆ.”