ಪೂರ್ವ ಧರ್ಮಸಭೆಗಳ ಸುದ್ದಿಸಮಾಚಾರ - ಫೆಬ್ರವರಿ 21, 2025
ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಸಮಾಚಾರ - ಫೆಬ್ರವರಿ 21, 2025
ಪೂರ್ವ ಧರ್ಮಸಭೆಗಳಿಂದ ಈ ವಾರದ ಸುದ್ದಿಸಮಾಚಾರ, L'Ouvre d'Orient ಸಹಯೋಗದೊಂದಿಗೆ ನಿರ್ಮಿಸಲಾಗಿದೆ:
ಲಂಡನ್‌ನಲ್ಲಿರುವ ಅಸ್ಸಿರಿಯಾದ ಸಂತ ಮರಿಯಳ ನೂತನ ಪ್ರಧಾನಾಲಯದ ಉದ್ಘಾಟನೆ
ಫೆಬ್ರವರಿ 16ರ ಭಾನುವಾರ, ಪೂರ್ವದ ಅಸ್ಸಿರಿಯಾದ ಧರ್ಮಸಭೆಯ ಪಿತೃಪ್ರಧಾನರಾದ ಪರಮಪೂಜ್ಯರಾದ ಮೂರನೇ ಮಾರ್ ಅವಾರವರು ಮತ್ತು ಧರ್ಮಾಧ್ಯಕ್ಷರಾದ ಮಾರ್ ಅವ್ರಹಾಮ್ ಯೂಖಾನಿಸ್ ರವರು ಲಂಡನ್‌ನಲ್ಲಿ, ಸಂತ ಮರಿಯಳ ನೂತನ ಪ್ರಧಾನಾಲಯವನ್ನು ಉದ್ಘಾಟಿಸಿದರು. ಈಗ ಪ್ರಧಾನಾಲಯವು ಯುರೋಪಿನ ಧರ್ಮಕ್ಷೇತ್ರದ ಪೀಠಾಧಿಕಾರದ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಯುಕೆ, ಫ್ರಾನ್ಸ್, ಬೆಲ್ಜಿಯಂ, ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್ ಮತ್ತು ಗ್ರೀಸ್‌ನಲ್ಲಿರುವ ಧರ್ಮಕೇಂದ್ರಗಳು ಸೇರಿವೆ. ಹಿಂದೆ ಸಂತ ಯಾಕೋಬರ ಆಂಗ್ಲಿಕನ್ ದೇವಾಲಯವಾಗಿದ್ದ ಈ ಕಟ್ಟಡವನ್ನು ರಚನಾತ್ಮಕ ಅಸ್ಥಿರತೆಯಿಂದಾಗಿ 2018ರಲ್ಲಿ ಮುಚ್ಚಲಾಯಿತು. ಅಸಿರಿಯಾದ ಸ್ಥಳೀಯ ಸಮುದಾಯ ಮತ್ತು ವಲಸೆ ಬಂದವರ ದೇಣಿಗೆಗಳಿಗೆ ಧನ್ಯವಾದಗಳು, ಇದನ್ನು ಖರೀದಿಸಿ ನವೀಕರಿಸಲಾಯಿತು. ಯುಕೆಯಲ್ಲಿರುವ ಅಸಿರಿಯಾದ ಸಮುದಾಯವು ಸುಮಾರು 7,000 ಜನರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಅರ್ಮೇನಿಯಾದಲ್ಲಿ ಸಂತ ಸರ್ಗಿಸ್ ರವರ ಹಬ್ಬದ ಆಚರಣೆ
ಫೆಬ್ರವರಿ 15ರ ಶನಿವಾರ, ಅರ್ಮೇನಿಯಾದ ಪ್ರೇಷಿತ ಮತ್ತು ಕಥೋಲಿಕ ಭಕ್ತವಿಶ್ವಾಸಿಗಳು, ಎರಡನೇ ಎಟ್ಚ್ಮಿಯಾಡ್ಜಿನ್‌ನ ಕ್ಯಾಥೊಲಿಕೋಸ್ ಕರೇಕಿನ್ ರವರಿಂದ ಯುವಜನತೆಯ ಆಶೀರ್ವಾದ ದಿನವೆಂದು ಗೊತ್ತುಪಡಿಸಿದ ಸಂತ ಸರ್ಗಿಸ್ ರವರ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ, ಅರ್ಮೇನಿಯಾದಾದ್ಯಂತದ ವಿವಿಧ ಧರ್ಮಕ್ಷೇತ್ರದ ಯುವಕರು ಎಟ್ಚ್ಮಿಯಾಡ್ಜಿನ್‌ನ ತವರು ಪ್ರಧಾನಾಲಯದಲ್ಲಿ ಒಟ್ಟುಗೂಡಿದರು. 4ನೇ ಶತಮಾನದ ರಕ್ತಸಾಕ್ಷಿ ಮತ್ತು ಮಾಜಿ ಬೈಜಾಂಟೈನ್ ಪ್ರಧಾನರಾಗಿದ್ದ ಸಂತ ಸರ್ಗಿಸ್ ರವರನ್ನು ಯುವಕರ ರಕ್ಷಕ ಎಂದು ಪೂಜಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಯುವಕರು ಮಲಗುವ ಮುನ್ನ ಅಘಾಬ್ಲಿಟ್ ಎಂದು ಕರೆಯಲ್ಪಡುವ ಉಪ್ಪುಸಹಿತ ಬಿಸ್ಕತ್ತುಗಳನ್ನು ತಿನ್ನುತ್ತಾರೆ, ಈ ಕ್ರಿಯೆಯು ತಮ್ಮ ಕನಸುಗಳು ತಮ್ಮ ಭವಿಷ್ಯದ ಪ್ರಿಯತಮೆಯನ್ನು ಬಹಿರಂಗಪಡಿಸುತ್ತವೆ ಎಂದು ಆಶಿಸುತ್ತಾರೆ ಎಂಬ ಸಂಪ್ರದಾಯವನ್ನು ಸೂಚಿಸುತ್ತದೆ.
ಪವಿತ್ರ ನಾಡಿನ ಪರಂಪರೆಯ ಕುರಿತಾದ ಸಮ್ಮೇಳನ
ಫೆಬ್ರವರಿ 14 ಮತ್ತು 15 ರಂದು, ಮುಸ್ಲಿಮರು ಮತ್ತು ಕ್ರೈಸ್ತರಿಗಾಗಿ ಅರಬ್ ಪರಂಪರೆಯ ಕುರಿತಾದ ಸಮ್ಮೇಳನದ 30ನೇ ಆವೃತ್ತಿಯನ್ನು ಬೆತ್ಲೆಹೇಮ್‌ನಲ್ಲಿ ʻಅಲ್-ಲಿಕಾ ಧಾರ್ಮಿಕ ಕೇಂದ್ರ, ಹೆರಿಟೇಜ್ ಮತ್ತು ಕಲ್ಚರಲ್ ಸ್ಟಡೀಸ್ ಇನ್ ದಿ ಹೋಲಿ ಲ್ಯಾಂಡ್ʼ ಆಯೋಜಿಸಿತ್ತು. ಈ ವರ್ಷದ "ನ್ಯಾಯವೇ ಶಾಂತಿಯ ಮಾರ್ಗ" ಎಂಬ ಧ್ಯೇಯವಾಕ್ಯವು ಯಾಜಕರನ್ನು, ಬುದ್ಧಿವಂತರನ್ನು ಮತ್ತು ವಿದ್ವಾಂಸರನ್ನು ಒಟ್ಟುಗೂಡಿಸಿತು. ಪ್ರವಾಸೋದ್ಯಮ ಆದಾಯದಲ್ಲಿ ದೈನಂದಿನ $2.5 ಮಿಲಿಯನ್ ನಷ್ಟ ಮತ್ತು ಬೆತ್ಲೆಹೇಮ್‌ನಲ್ಲಿ 36% ನಿರುದ್ಯೋಗ ದರ ಸೇರಿದಂತೆ ನಡೆಯುತ್ತಿರುವ ಯುದ್ಧದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮದ ಕುರಿತು ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಕ್ರೈಸ್ತ ಸಂಸ್ಥೆಗಳ ಮೇಲಿನ ಆರ್ಥಿಕ ಒತ್ತಡ ಮತ್ತು ಅನೇಕ ಪ್ಯಾಲಸ್ತೀನಿಯದವರ ವಲಸೆ ಕೂಡ ಚರ್ಚೆಯ ಪ್ರಮುಖ ವಿಷಯಗಳಾಗಿವೆ.