MAP

Copertina video infos orient 28 febbraio 2025 Copertina video infos orient 28 febbraio 2025 

ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ – ಫೆಬ್ರವರಿ 28, 2025

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿ, L'Œuvre d'Orient ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ: ಇಥಿಯೋಪಿಯದವರು ತಪಸ್ಸುಕಾಲವನ್ನು ಪ್ರಾರಂಭಿಸುತ್ತಾರೆ ಮತ್ತು ಉಕ್ರೇನ್ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಮೂರು ವರ್ಷಗಳ ನಂತರ ಗೌರವಾರ್ಥರಾದ ಸ್ವ್ಯಾಟೋಸ್ಲಾವ್ ಶೆವ್ಚುಕ್ ರವರು ಭಕ್ತವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಪೂರ್ವ ಧರ್ಮಸಭೆಗಳಿಂದ ಈ ವಾರದ ಸುದ್ದಿ ಸಮಾಚಾರಗಳು

ಇಥಿಯೋಪಿಯದವರಿಗೆ ತಪಸ್ಸುಕಾಲ ಆರಂಭ

ಇಥಿಯೋಪಿಯಾ ಮತ್ತು ಎರಿಟ್ರಿಯಾದಲ್ಲಿ ಗೀಜ್ ವಿಧಿಯ ಕ್ರೈಸ್ತರಿಗೆ ಈ ಸೋಮವಾರದಿಂದ ತಪಸ್ಸುಕಾಲ ಪ್ರಾರಂಭವಾಯಿತು. 55 ದಿನಗಳ ಕಾಲ, ಇಲ್ಲಿ ಬಹುತೇಕ ಜನರು ಕ್ರೈಸ್ತ ಧರ್ಮದ ಸಂಪ್ರದಾಯಗಳಿಗಿಂತ ದೀರ್ಘಾವಧಿಯವರೆಗೆ, ಭಕ್ತವಿಶ್ವಾಸಿಗಳು ಮಾಂಸಹಾರಿ ಅಥವಾ ಎಲ್ಲಾ ಪ್ರಾಣಿ ಉತ್ಪನ್ನಗಳಿಂದ ದೂರವಿರುವ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ಪ್ರಾರ್ಥನೆ ಮತ್ತು ಉಪವಾಸದ ತಪಸ್ಸುಕಾಲವು ಫಾಸಿಕಾ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ, ಇದು ಹಬ್ಬದ ಊಟಗಳೊಂದಿಗೆ ಪ್ರಭುಕ್ರಿಸ್ತರ ಪುನರುತ್ಥಾನವನ್ನು ಸ್ಮರಿಸುತ್ತದೆ.

ಉಕ್ರೇನ್‌ನಲ್ಲಿ 3 ವರ್ಷಗಳ ಯುದ್ಧ
ಫೆಬ್ರವರಿ 24ರಂದು ಉಕ್ರೇನ್‌ನ ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಗುರುತಿಸಲು, ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಶ್ರೇಷ್ಠಗುರು ಮಹಾಧರ್ಮಾಧ್ಯಕ್ಷರು, ಗೌರವಾರ್ಥ ಪರಮಪೂಜ್ಯರಾದ ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು ಭಕ್ತವಿಶ್ವಾಸಿಗಳಿಗೆ ಸಂದೇಶವನ್ನು ನೀಡಿದರು.

ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪಾಲನಾ ಭೇಟಿಯನ್ನು ನೀಡಿದಾಗ, ಅವರು ಉಕ್ರೇನಿಯದ ಯಾಜಕರನ್ನು ಹಾಗೂ ಅಮೇರಿಕದ ಧಾರ್ಮಿಕ ನಾಯಕರನ್ನು ಭೇಟಿ ಮಾಡಿದರು. ಉಕ್ರೇನನ್ನು ರಕ್ಷಿಸುತ್ತಿರುವ ಮಿಲಿಟರಿ ಮತ್ತು ನಾಗರಿಕ ಪಡೆಗಳಿಗೆ ಧನ್ಯವಾದ ಹೇಳಲು ಅವರು ಈ ಅವಕಾಶವನ್ನು ಬಳಸಿಕೊಂಡರು ಹಾಗೂ ಜನರು ಭರವಸೆಯನ್ನು ಉಳಿಸಿಕೊಳ್ಳಲು ಕರೆ ನೀಡಿದರು.
 

28 ಫೆಬ್ರವರಿ 2025, 12:26