ಪೂರ್ವ ಧರ್ಮಸಭೆಗಳಿಂದ ಸುದ್ಧಿ-ಸಮಾಚಾರಗಳು– ಫೆಬ್ರವರಿ 14, 2025
ಈ ವಾರದ ಪೂರ್ವ ಧರ್ಮಸಭೆಯ ಸುದ್ಧಿ-ಸಮಾಚಾರಗಳು
ಮೊಸುಲ್‌ನಲ್ಲಿ ಉದ್ಘಾಟನೆ
ಇರಾಕ್‌ನಲ್ಲಿ, ಫೆಬ್ರವರಿ 12ರ ಬುಧವಾರದಂದು, ಮೊಸುಲ್‌ನಲ್ಲಿ ಚರ್ಚ್ ಆಫ್ ಅವರ್ ಲೇಡಿ ಆಫ್ ದಿ ಹವರ್, ಪಕ್ಕದಲ್ಲಿರುವ ಡೊಮಿನಿಕ್ ಸಹೋದರಿಗಳ ಸಭೆಯ ಕಾನ್ವೆಂಟಾಗಿದ್ದ ಡೊಮಿನಿಕನ್ ಹೌಸ್ ಆಫ್ ಪ್ರಾರ್ಥನಾ (ಡೊಮಿನಿಕರ ಪ್ರಾರ್ಥನಾ ನಿಲಯಯ) ಮಂದಿರವನ್ನು ಅದರ ಪುನಃಸ್ಥಾಪನೆಯ ನಂತರ ಉದ್ಘಾಟಿಸಲಾಯಿತು.
ಯುನೆಸ್ಕೋ ನೇತೃತ್ವದಲ್ಲಿ ಮತ್ತು ಅಲಿಫ್ ಫೌಂಡೇಶನ್‌ನಿಂದ ಧನಸಹಾಯ ಪಡೆದ ಈ ಯೋಜನೆಯನ್ನು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ರವರು 2021ರಲ್ಲಿ ಮೊಸುಲ್‌ಗೆ ಭೇಟಿ ನೀಡಿದ ನಂತರ ಪ್ರಾರಂಭಿಸಿದರು.
ಇದು 2017ರಲ್ಲಿ ಐಸಿಸ್ ವಿರುದ್ಧದ ಯುದ್ಧದ ಸಮಯದಲ್ಲಿ ನಾಶವಾದ ಐತಿಹಾಸಿಕ ಮೊಸುಲ್‌ನ ಪುನರ್ನಿರ್ಮಾಣದ ಭಾಗವಾಗಿದೆ.
ಪುನಃಸ್ಥಾಪನೆಯ ಕಾರ್ಯವನ್ನು ಏಪ್ರಿಲ್ 2023 ರಿಂದ ಏಪ್ರಿಲ್ 2024ರವರೆಗೆ ಕೈಗೊಳ್ಳಲಾಯಿತು ಮತ್ತು ಸರಿಸುಮಾರು $1.5 ಮಿಲಿಯನ್ ಬಜೆಟ್ ಹೊಂದಿತ್ತು.
ಅರ್ಮೇನಿಯಾದಲ್ಲಿ ಟ್ರೆಂಡೆಜ್
ಅರ್ಮೇನಿಯದವರು ಗುರುವಾರ ಮತ್ತು ಶುಕ್ರವಾರ ಟ್ರೆಂಡೆಜ್ ಆಚರಿಸುತ್ತಾರೆ. ಅನ್ಯಧರ್ಮಿಗಳ ಸಂಪ್ರದಾಯಗಳಿಂದ ಬಂದ ಈ ಕ್ರೈಸ್ತ ಧರ್ಮದ ಹಬ್ಬವನ್ನು ಮತ್ತು ಕಥೋಲಿಕ ಧರ್ಮಸಭೆಗಳಲ್ಲಿ ಆಚರಿಸಲಾಗುತ್ತದೆ.
ಇದು ಹಳೆಯ ವರ್ಷದ ಸಾಂಕೇತಿಕ ದಹನವನ್ನು ಸೂಚಿಸುತ್ತದೆ. ಬೆಂಕಿಯ ಮೇಲೆ ಹಾರಿ, ದಂಪತಿಗಳು ಯಶಸ್ಸು ಮತ್ತು ಫಲವತ್ತತೆಯ ವರ್ಷವನ್ನು ಖಚಿತಪಡಿಸಿಕೊಳ್ಳುತ್ತಾರೆ.
ಇಥಿಯೋಪಿಯಾದಲ್ಲಿ ಧರ್ಮಾಧ್ಯಕ್ಷೀಯ ದೀಕ್ಷೆ
ಧರ್ಮಾಧ್ಯಕ್ಷರಾದ ಗೊಬೆಜಾಯೆಹು ಗೆಟಾಚೆವ್ ಯಿಲ್ಮಾರವರನ್ನು ದಕ್ಷಿಣ ಇಥಿಯೋಪಿಯಾದ ಹವಾಸ್ಸಾ ಕಥೋಲಿಕ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಫೆಬ್ರವರಿ 9ರ ಭಾನುವಾರದಂದು ಹವಾಸ್ಸಾದ ಕಿಡಾನೆ ಮಿಹ್ರೆಟ್ ಪ್ರಧಾನಾಲಯದಲ್ಲಿ ದೀಕ್ಷೆಯ ಸಾಂಭ್ರಮಿಕ ಆಚರಣೆ ನಡೆಯಿತು.
ಐದು ವರ್ಷಗಳಿಂದ ಧರ್ಮಾಧ್ಯಕ್ಷರಿಲ್ಲದೆ ಇದ್ದ ಭಕ್ತವಿಶ್ವಾಸಿಗಳು ಹೆಚ್ಚು ನಿರೀಕ್ಷಿಸಿದ್ದ ಧರ್ಮಾಧ್ಯಕ್ಷೀಯ ದೀಕ್ಷೆಯನ್ನು ಘೋಷಿಸಲು ನಗರದ ಬೀದಿಗಳಲ್ಲಿ ದೊಡ್ಡ ಮೆರವಣಿಗೆ ನಡೆಸಲಾಯಿತು.
ಅವರ ನೇಮಕಾತಿಗೆ ಮೊದಲು, ಧರ್ಮಾಧ್ಯಕ್ಷರಾದ ಯಿಲ್ಮಾ ಮೆಕಿರವರು ಧರ್ಮಕ್ಷೇತ್ರದಲ್ಲಿ ಒಬ್ಬ ಯಾಜಕರಾಗಿ ಸೇವೆ ಸಲ್ಲಿಸಿದರು, ಯುವ ಸಂಯೋಜಕರಾಗಿ, ಶ್ರೇಷ್ಠಗುರುಗಳ ಪ್ರತಿನಿಧಿಯಾಗಿ ಮತ್ತು ಕಾರಿತಾಸ್ ಮೆಕಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.