MAP

copertina infos orient 07 febbraio 2025 copertina infos orient 07 febbraio 2025 

ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ – ಫೆಬ್ರವರಿ 7, 2025

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿ, L'Œuvre d'Orient ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ: ಫ್ರೆಂಚ್ ಭಾಷೆಯ ಕಥೋಲಿಕ ಶಾಲೆಗಳು ಕೈರೋದಲ್ಲಿ ಸಭೆ ನಡೆಸುತ್ತವೆ, ಯುರೋಪಿನ ಅರ್ಮೇನಿಯಾದಲ್ಲಿ ತನ್ನ ವೀಕ್ಷಕ ಕಾರ್ಯಾಚರಣೆಯನ್ನು ವಿಸ್ತರಿಸುತ್ತದೆ ಮತ್ತು ಇಥಿಯೋಪಿಯಾದ ಕಥೋಲಿಕ ಸಮುದಾಯವು ತನ್ನ ಹೊಸ ಧರ್ಮಾಧ್ಯಕ್ಷರನ್ನು ಸ್ವಾಗತಿಸುತ್ತಿದೆ.

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ – ಫೆಬ್ರವರಿ 7


ಫ್ರಾಂಕೋಫೋನ್ ಕಥೋಲಿಕ ಶಾಲೆಗಳು ಕೈರೋದಲ್ಲಿ ಸಭೆ ಸೇರುತ್ತವೆ
ಫೆಬ್ರವರಿ 6 ಮತ್ತು 7ರಂದು, ಕೈರೋ ಮಧ್ಯಪ್ರಾಚ್ಯದಲ್ಲಿ 5ನೇ ಫ್ರಾಂಕೋಫೋನ್ ಶಾಲೆಗಳ ಕೊಲೊಕ್ವಿಯಂ ಅನ್ನು ಆಯೋಜಿಸುತ್ತಿದೆ, ಇದನ್ನು ಕ್ಯಾಥೋಲಿಕ್ ಚಾರಿಟಿ ಎಲ್'ಯುವ್ರೆ ಡಿ'ಓರಿಯಂಟ್ ಆಯೋಜಿಸಿದೆ.

ಈ ಸಭೆಯಲ್ಲಿ 350 ಕಥೋಲಿಕ ಶಿಕ್ಷಣ ವೃತ್ತಿಪರರು ಒಟ್ಟಾಗಿ ಸೇರಿ ಪ್ರಾದೇಶಿಕ ಸವಾಲುಗಳ ನಡುವೆಯೂ ತಮ್ಮ ಧ್ಯೇಯದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅತಿಥಿಗಳಲ್ಲಿ ಕಾಪ್ಟಿಕ್ ಕಥೋಲಿಕ ಧರ್ಮಸಭೆಯ ಕುಲಸಚಿವ ಇಬ್ರಾಹಿಂ ಐಸಾಕ್ ಸಿದ್ರಾಕ್ ರವರು ಮತ್ತು ಫ್ರಾಂಕೊ-ಈಜಿಪ್ಟಿನ ಪತ್ರಕರ್ತ ರಾಬರ್ಟ್ ಸೋಲೆರವರು ಸೇರಿದ್ದಾರೆ.

ಮಧ್ಯಪ್ರಾಚ್ಯದಲ್ಲಿರುವ ಫ್ರಾಂಕೋಫೋನ್ ಶಾಲೆಗಳು 400,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ, ಫ್ರೆಂಚ್ ಭಾಷೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ ಮತ್ತು ಪ್ರಾದೇಶಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಯುವಜನರಿಗೆ ಶೈಕ್ಷಣಿಕ ಸ್ಥಿರತೆ ಮತ್ತು ವೃತ್ತಿಪರ ನಿರೀಕ್ಷೆಗಳನ್ನು ಖಾತ್ರಿಪಡಿಸುತ್ತವೆ.

ಅರ್ಮೇನಿಯಾದಲ್ಲಿ ಯುರೋಪ್‌ ವೀಕ್ಷಣಾ ಕಾರ್ಯಾಚರಣೆಯನ್ನು ವಿಸ್ತರಿಸುತ್ತದೆ
ಅರ್ಮೇನಿಯಾದಲ್ಲಿ ಯುರೋಪ್ ಒಕ್ಕೂಟದ ನಾಗರಿಕ ವೀಕ್ಷಣಾ ಕಾರ್ಯಾಚರಣೆಯನ್ನು ಫೆಬ್ರವರಿ 19, 2027 ರವರೆಗೆ ವಿಸ್ತರಿಸಲಾಗಿದೆ.

ಫೆಬ್ರವರಿ 2023 ರಿಂದ ನಿಯೋಜಿಸಲಾದ ಈ ಕಾರ್ಯಾಚರಣೆಯು 165 ಅಂತರರಾಷ್ಟ್ರೀಯ ವೀಕ್ಷಕರು ಮತ್ತು 44 ಅರ್ಮೇನಿಯನದ ಸಿಬ್ಬಂದಿಯನ್ನು ಒಳಗೊಂಡಿದೆ. ಶಾಂತಿ ಮತ್ತು ಸ್ಥಿರತೆಗಾಗಿ ಯುರೋಪಿನ ಪ್ರಯತ್ನಗಳಿಗೆ ಇದು ಅತ್ಯಗತ್ಯ ಮತ್ತು ಈ ಪ್ರದೇಶದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಸ್ಥಳೀಯ ಜನಸಂಖ್ಯೆಯ ಭದ್ರತೆಗೆ ಕೊಡುಗೆ ನೀಡುತ್ತದೆ.

ಈ ಕಾರ್ಯಾಚರಣೆಯು ಸಂಪೂರ್ಣ ಅರ್ಮೇನಿಯದ-ಅಜೆರ್ಬೈಜಾನಿ ಗಡಿಯನ್ನು ಹಾಗೂ ಟರ್ಕಿಯ ಗಡಿಯನ್ನು ಒಳಗೊಂಡಿದೆ.

ಇಥಿಯೋಪಿಯಾದಲ್ಲಿ ಧರ್ಮಾಧ್ಯಕ್ಷೀಯ ದೀಕ್ಷಾ ವಿಧಿ
ಟೆಸ್ಫೇಯ್ ಟಡೆಸ್ಸೆ ಗೆಬ್ರೆಸಿಲಾಸಿ ರವರು ಅಡಿಸ್ ಅಬಾಬಾದ ಕಥೋಲಿಕ ಮಹಾಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಫೆಬ್ರವರಿ 2 ರಂದು ನಡೆದ ಸಮಾರಂಭದಲ್ಲಿ ಇಥಿಯೋಪಿಯದ ಕಥೋಲಿಕ ಧರ್ಮಸಭೆಯ ಮುಖ್ಯಸ್ಥ ಕಾರ್ಡಿನಲ್ ಬೆರ್ಹನೇಸಸ್ ರವರು ಅಧ್ಯಕ್ಷತೆ ವಹಿಸಿದ್ದರು ಮತ್ತು ದೇಶದ ಬಹುತೇಕ, ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮುಖದಲ್ಲಿ ಪೂಜ್ಯಕನ್ಯಾ ಮರಿಯಳ ಜನನದ ಪ್ರಧಾನಾಲಯದಲ್ಲಿ (ವರ್ಜಿನ್ ಮೇರಿಯ ನೇಟಿವಿಟಿ ಕ್ಯಾಥೆಡ್ರಲ್‌) ನಡೆಯಿತು.

2015 ರಿಂದ ಕಾಂಬೋನಿ ಧರ್ಮಪ್ರಚಾರಕರ ಮಾಜಿ ಪ್ರಧಾನ ಶ್ರೇಷ್ಠಗುರು ಧರ್ಮಾಧ್ಯಕ್ಷರಾದ ಗೆಬ್ರೆಸಿಲಾಸಿರವರು ಧರ್ಮಾಧ್ಯಕ್ಷರ ಚಿಹ್ನೆ: ಧರ್ಮದಂಡ (ಕ್ರೋಸಿಯರ್) ಉಂಗುರ ಮತ್ತು ಶಿರಸ್ತ್ರಾಣ (ಮೈಟರ್)ವನ್ನು ಸ್ವೀಕರಿಸಿದರು.
 

07 ಫೆಬ್ರವರಿ 2025, 13:29