MAP

Protest marking the fourth anniversary of Myanmar's 2021 military coup, in Chiang Mai, Thailand Protest marking the fourth anniversary of Myanmar's 2021 military coup, in Chiang Mai, Thailand 

ಮ್ಯಾನ್ಮಾರ್: “ಮರೆತುಹೋದ ಸಂಘರ್ಷ” ಕ್ಕಾಗಿ ಜಾಗತಿಕ ಪ್ರಾರ್ಥನಾ ದಿನ

ಜಗತ್ತಿನಾದ್ಯಂತ, ನೆರವಿನ ಅಗತ್ಯವುಳ್ಳ ಧರ್ಮಸಭೆಯ ನೆರವು(ಏಯ್ಡ್ ಟು ದಿ ಚರ್ಚ್ ಇನ್ ನೀಡ್) ನೇತೃತ್ವದಲ್ಲಿ 24 ಗಂಟೆಗಳ ಜಾಗತಿಕ ಶಾಂತಿ ಪ್ರಾರ್ಥನಾ ದಿನದ ಭಾಗವಾಗಿ ಮ್ಯಾನ್ಮಾರ್‌ನಲ್ಲಿ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಜನರು ತಮ್ಮ ಸಮಯವನ್ನು ಮೀಸಲಿಡುತ್ತಿದ್ದಾರೆ.

ಕೀಲ್ಸ್ ಗುಸ್ಸಿ

ಮ್ಯಾನ್ಮಾರ್‌ನಲ್ಲಿ 4 ವರ್ಷಗಳ ಸಂಘರ್ಷದ ನಂತರ, 20 ಮಿಲಿಯನ್ ಜನರಿಗೆ ಮೂಲಭೂತ ಮಾನವೀಯ ನೆರವು ಬೇಕಾಗಿದೆ, 15 ಮಿಲಿಯನ್ ಜನರಿಗೆ ಆಹಾರದ ಅಗತ್ಯವಿದೆ ಮತ್ತು 3.5 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಆದರೂ, ಮ್ಯಾನ್ಮಾರ್‌ನಲ್ಲಿ ಮುಂದುವರೆಯುತ್ತಿರುವ ಅಂತರ್ಯುದ್ಧವನ್ನು ಹೆಚ್ಚಾಗಿ ಮರೆತುಬಿಡಲಾಗಿದೆ.

"ಇದು ಮರೆತುಹೋಗಿರುವ ಸಂಘರ್ಷ ಎಂಬ ಭಾವನೆ ನಮಗಿದೆ, ಮ್ಯಾನ್ಮಾರ್‌ನಲ್ಲಿ ಈ ಭಯಾನಕ ಅಂತರ್ಯುದ್ಧ ಮುಂದುವರೆಯುತ್ತಿದೆ ಎಂದು ಬಹುಶಃ ಜನರಿಗೆ ಆರಂಭದಲ್ಲಿ ತಿಳಿದಿರಲಿಲ್ಲವೇನೋ ಅಥವಾ ಈ ಭಯಾನಕ ಅಂತರ್ಯುದ್ಧದ ಬಗ್ಗೆ ಅರಿವೇ ಇಲ್ಲದಿರಬಹುದೋ" ಎಂದು ಏಡ್ ಟು ದಿ ಚರ್ಚ್ ಇನ್ ನೀಡ್ ಇಂಟರ್‌ನ್ಯಾಷನಲ್‌ (ಅಂತರಾಷ್ಟ್ರೀಯ ನೆರವಿನ ಅಗತ್ಯವುಳ್ಳ ಧರ್ಮಸಭೆಯ) ಕಾರ್ಯನಿರ್ವಾಹಕ ಅಧ್ಯಕ್ಷೆ ರೆಜಿನಾ ಲಿಂಚ್ ರವರು ವಿವರಿಸುತ್ತಾರೆ.

ಈ ಸಂಘರ್ಷ ಮತ್ತು ಅದರ ಪರಿಣಾಮಗಳನ್ನು ಎದುರಿಸಿ ಜೀವಿಸುತ್ತಿರುವ ಜನರನ್ನು ಮರೆಯಬಾರದು ಎಂದು ಖಚಿತಪಡಿಸಿಕೊಳ್ಳಲು, ಫೆಬ್ರವರಿ 1 ರಂದು, ವಿಶ್ವದಾದ್ಯಂತ ಜನರು ಶಾಂತಿಗಾಗಿ ಪ್ರಾರ್ಥನೆ ಮಾಡಲು ಸಮಯವನ್ನು ಮೀಸಲಿಡಲು ಏಯ್ಡ್ ಟು ದಿ ಚರ್ಚ್ ಇನ್ ನೀಡ್ (ACN) ಜೊತೆಗೆ ಒಂದುಗೂಡುತ್ತಿದ್ದಾರೆ.

ಶಾಂತಿಗಾಗಿ ಪ್ರಾರ್ಥನೆಗಳು
ದೇಶದಲ್ಲಿ ಪ್ರಸ್ತುತ ಅಂತರ್ಯುದ್ಧ ಪ್ರಾರಂಭವಾದ ಈ ನಾಲ್ಕನೇ ವಾರ್ಷಿಕೋತ್ಸವವನ್ನು ಗುರುತಿಸಲು ಆಯ್ಕೆ ಮಾಡಲಾದ ಈ ಜಾಗತಿಕ ಪ್ರಾರ್ಥನಾ ದಿನವು 24 ಗಂಟೆಗಳ ಪರಮಪ್ರಸಾದ ಆರಾಧನೆಯನ್ನು ಒಳಗೊಂಡಿದೆ - ಇದು ಜರ್ಮನಿಯಲ್ಲಿರುವ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ಪ್ರಾರಂಭವಾಗಿ ಮತ್ತು ವಿಶ್ವದಾದ್ಯಂತ 23 ACN ಕಚೇರಿಗಳೊಂದಿಗೆ ಮುಂದುವರಿಯುತ್ತದೆ.

ಹಿಂಸಾಚಾರದಿಂದ ಪ್ರಭಾವಿತರಾದ ಸಂತ್ರಸ್ತರು, ಯುವಕರು, ಕುಟುಂಬಗಳು ಮತ್ತು ಯಾಜಕರು ಹಾಗೂ ಧಾರ್ಮಿಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಜಪಿಸಲು, ಈ ಜಾಗರಣೆಯ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಆಹ್ವಾನವಿದೆ ಎಂದು ಶ್ರೀಮತಿ ಲಿಂಚ್ ರವರು ಹೇಳುತ್ತಾರೆ.

ಈ ಕಾರ್ಯಾಚರಣೆ ಮುಂದುವರಿಯುತ್ತದೆ
ಹಿಂಸಾಚಾರದ ತೀವ್ರತೆಯ ನಡುವೆಯೂ, ಮ್ಯಾನ್ಮಾರ್‌ನಲ್ಲಿರುವ ಯಾಜಕರು, ಧಾರ್ಮಿಕರು ಮತ್ತು ಸಾಮಾನ್ಯ ಧರ್ಮೋಪದೇಶಕರು ದೇಶಾದ್ಯಂತ ಪ್ರಯಾಣಿಸುವುದನ್ನು ಮುಂದುವರೆಸಿದ್ದಾರೆ, ಸ್ಥಳಾಂತರಗೊಂಡ ಜನರಲ್ಲಿಗೆ ಸಂಸ್ಕಾರಗಳನ್ನು ತೆಗೆದೊಯ್ಯುತ್ತಿದ್ದಾರೆ.

ಶ್ರೀಮತಿ ಲಿಂಚ್ ರವರು ಹೇಗೆ ಯಾಜಕರು ಮತ್ತು ಧಾರ್ಮಿಕರು "ಜನರಿಗೆ ಸಾಂತ್ವನ ನೀಡಲು - ಆಧ್ಯಾತ್ಮಿಕ ಸಾಂತ್ವನ ನೀಡಲು ಮತ್ತು ಅವರಿಗೆ ಎದುರಾಗುವ ದೊಡ್ಡ ಅಪಾಯವಿದ್ದರೂ ಸಂಸ್ಕಾರಗಳನ್ನು ಜನರಲ್ಲಿಗೆ ತರಲು, ಅವರು ಗಂಟೆಗಟ್ಟಲೆ ಕಾಡುಗಳ ಮೂಲಕ, ಪರ್ವತಗಳ ಮೇಲೆ ಹೇಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾರೆ" ಎಂದು ವಿವರಿಸುತ್ತಾರೆ.

ಈ ಯಾಜಕರು, ಧಾರ್ಮಿಕರು ಮತ್ತು ಧರ್ಮೋಪದೇಶಕರ ಸಾಕ್ಷ್ಯಾ-ಜೀವನವು ಅಗತ್ಯವಿರುವ ಧರ್ಮಸಭೆಗೆ, ಒಟ್ಟಾರೆಯಾಗಿ ನೆರವಿನ ಅಗತ್ಯವುಳ್ಳ ಧರ್ಮಸಭೆಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ಧರ್ಮಕೇಂದ್ರದಲ್ಲಿ ಸುರಕ್ಷಿತವಾಗಿರುವುದನ್ನು ಬಿಟ್ಟು ಅಥವಾ ಸಂಘರ್ಷ ಪ್ರಾರಂಭವಾದಾಗ ಜನರೆಡೆಗೆ ಹೊರಡುವ ಬದಲು, "ಧರ್ಮಸಭೆಯು ಜನರೊಂದಿಗೆ ಇರುತ್ತದೆ ಎಂಬುದನ್ನು ಅವರ ಸೇವೆಯ ಮುಖಾಂತರ ತೋರ್ಪಡಿಸುತ್ತದೆ."

ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ
ನಡೆಯುತ್ತಿರುವ ಸಂಘರ್ಷಗಳೊಂದಿಗೆ ಬದುಕುತ್ತಿರುವ ಮ್ಯಾನ್ಮಾರ್‌ನಂತಹ ದೇಶಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂದು ಶ್ರೀಮತಿ ಲಿಂಚ್ ರವರು ಗಮನಿಸುತ್ತಾರೆ.

"ಈ ಸಂಘರ್ಷದಿಂದ ಎಷ್ಟು ಸಂತ್ರಸ್ತರಾಗಿದ್ದಾರೆ, ಎಷ್ಟು ಜನರು ಸಾಯುತ್ತಿದ್ದಾರೆ, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಎಂಬುದರ ಬಗ್ಗೆ ಜಗತ್ತಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳುತ್ತಾರೆ, ಹಿಂಸಾಚಾರಕ್ಕೆ ಅಂತ್ಯದ ನಾಂದಿ ಹಾಡಲು ಮ್ಯಾನ್ಮಾರ್ ಮತ್ತು ಜಗತ್ತಿಗೆ ಶಾಂತಿಯ ಯುಗದ ಆರಂಭಕ್ಕಾಗಿ ಆಶಿಸುವುದನ್ನು ಮತ್ತು ಪ್ರಾರ್ಥಿಸುವುದನ್ನು ಮುಂದುವರಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ.

01 ಫೆಬ್ರವರಿ 2025, 14:46