MAP

Sunday Gospel Reflections Sunday Gospel Reflections 

ಪ್ರಭುವಿನ ದಿನದ ಚಿಂತನೆ

ಧರ್ಮಸಭೆಯು ಈ ವಾರ ಸಾಧಾರಣ ಕಾಲದ ಐದನೇ ಭಾನುವಾರವನ್ನು ಆಚರಿಸುತ್ತಿರುವಾಗ, ಧರ್ಮಗುರು ಎಡ್ಮಂಡ್ ಪವರ್ ರವರು ಸಂತ ಪೇತ್ರರವರ ಕರೆಯ ಮೇಲೆ ಕೇಂದ್ರೀಕರಿಸಿ, ಈ ದಿನದ ದೈವಾರಾಧನಾ ವಿಧಿಯ ವಾಚನಗಳ ಕುರಿತು ತಮ್ಮ ಚಿಂತನೆಗಳನ್ನು ನೀಡುತ್ತಾರೆ.

ಯಾಜಕ ಎಡ್ಮಂಡ್ ಪವರ್ ಒಎಸ್ ಬಿ

ಪ್ರಾಮಾಣಿಕ, ಉದಾರತೆ, ಪ್ರೇರಿಸುವ ಮತ್ತು ಅಸುರಕ್ಷಿತ ವ್ಯಕ್ತಿಯಾದ ಪೇತ್ರನನ್ನು ಪರಿಗಣಿಸೋಣ, ಅವರ ಮೇಲೆ ಎಂದಿಗೂ ಅಹಂಕಾರ ಅಥವಾ ದುರಹಂಕಾರದ ಆರೋಪ ಹೊರಿಸಲಾಗುವುದಿಲ್ಲ. ಇಂದು ನಾವು ಲೂಕರ ಶುಭಸಂದೇಶದಲ್ಲಿ ಎರಡನೇ ಬಾರಿಗೆ ಅವರನ್ನು ಭೇಟಿಯಾಗುತ್ತೇವೆ. ಮೊದಲನೆಯದಾಗಿ, ಯೇಸು ಪೇತ್ರನ ಅತ್ತೆಯನ್ನು ಗುಣಪಡಿಸಿದಾಗ, ಆದರೆ ಆ ಸಂದರ್ಭದಲ್ಲಿ ಅವರ ನಡುವೆ ಯಾವುದೇ ಮಾತುಗಳ ವಿನಿಮಯವಾಗಲಿಲ್ಲ.

ಜನಸಂದಣಿಯ ಆ ಗದ್ದಲದಲ್ಲಿ, ದೋಣಿಗಳ ಬದಿಗೆ, ಅಲೆಗಳ ಬಡಿಯುವಿಕೆ, ಜೊತೆಗಿರುವವರು ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿರುವುದರ ಕಡೆ ಮಾತ್ರ ಗಮನ ಹರಿಸುವುದನ್ನು ಬಿಟ್ಟು, ನಾವು ಇಂದಿನ ಶುಭಸಂದೇಶದ ಅಳವಾದ ಅರ್ಥದ ಕಡೆ ಗಮನ ಹರಿಸೋಣ. ಲೂಕರು ತಮ್ಮ ಸ್ವಂತ ಮಾರ್ಗವನ್ನು ಅನುಸರಿಸಿ, ಈ ವಾಕ್ಯಗಳು ಆಳವಾದ ಕಥೆಯನ್ನು ಹೇಳುತ್ತದೆ ಆದ್ದರಿಂದ ಈ ವಾಕ್ಯಗಳನ್ನು ಬಹಳ ಶ್ರದ್ಧೆಯಿಂದ ಓದಿ ಎಂದು ಹೇಳುತ್ತಾರೆ. ಮೀನು ಹಿಡಿಯುವುದರಲ್ಲಿ ಒಬ್ಬ ಪ್ರವಾದಿಯ ಸಂಕೇತವನ್ನು ಗುರುತಿಸಲು ಸ್ವತಃ ಯೇಸುವೇ ನಮ್ಮನ್ನು ಆಹ್ವಾನಿಸುತ್ತಾರೆ:” ಪೇತ್ರನೇ ಇನ್ನೂ ಮುಂದೆ ನೀನು ಮನುಷ್ಯರನ್ನು ಹಿಡಿಯುವಿ”. ಮೀನುಗಾರನ ವ್ಯಾಪಾರವು ಅಪೊಸ್ತಲರ ಭವಿಷ್ಯದ ಧ್ಯೇಯದ ಸಂಕೇತವಾಗುತ್ತದೆ.

ಈ ಶುಭಸಂದೇಶವು ಬೇರೆ ಇನ್ಯಾವ ರೀತಿಯಲ್ಲಿ ನಮಗೆ ಆಳವಾದ ಒಳನೋಟವನ್ನು ನೀಡುತ್ತದೆ? ಪೇತ್ರನು ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ಜೀವನದ ಪ್ರಯಾಣ ಮಾರ್ಗವನ್ನು ನಾವು ಇದರಲ್ಲಿ ನೋಡಬಹುದೇ? ನಾವು ನಮ್ಮ ಪೂರ್ಣ ಗಮನವನ್ನು ಬೇರೆ ವಿಷಯಗಳ ಮೇಲೆ ಇಡುವ ಬದಲು ದೀನದಲಿತರು, ಬಲೆಗಳನ್ನು ತೊಳೆಯಲು ಪ್ರಾರಂಭಿಸುವುದರ ಕಡೆ ಕೊಡೋಣ. ಬಹುಶಃ ಅತ್ತೆಯನ್ನು ಸೌಖ್ಯಪಡಿಸುವ ಸನ್ನಿವೇಶದಿಂದಲೇ ನಮ್ಮ ಮನಗಳು ಸ್ಪರ್ಶಿಸಲ್ಪಟ್ಟಿರಬಹುದು. ಆದಾಗ್ಯೂ, ಈಗ ಸ್ಪಷ್ಟವಾದ ಉಪಕ್ರಮವನ್ನು ತೆಗೆದುಕೊಂಡದ್ದು, ಯೇಸುವು ಪೇತ್ರನ ಸಹಾಯವನ್ನು ಪಡೆದ ನಂತರ ಆತನಿಗೆ ಬಲೆಗಳನ್ನು ಆಳಕ್ಕೆ ಹಾಕಲು ಹೇಳುತ್ತಾರೆ. ಮೀನುಗಳು ಹೇಗೆ ಚಲಿಸುತ್ತಿವೆ ಎಂಬುದರ ಕುರಿತು ಪೇತ್ರನ ವೃತ್ತಿಪರ ಜ್ಞಾನಕ್ಕೆ ಈ ಬಲವಾದ ಆಹ್ವಾನವು ಸಂಪೂರ್ಣವಾಗಿ ವಿರುದ್ಧವಾಗಿದೆ. ಬಲೆಗಳು ಮನಸ್ಸಿನ ಸಾಮರ್ಥ್ಯವನ್ನು ಸಂಕೇತಿಸಬಹುದಾದರೆ, ಅದು ಆ ನಿಗೂಢತೆಯನ್ನು ಗ್ರಹಿಸಬಹುದಾದರೆ, ಅವರ ಬಲೆಗಳು ಮುರಿಯುತ್ತಿವೆ ಎಂಬ ಹೇಳಿಕೆಯಲ್ಲಿ ಮಾನವ ಮಿತಿಗಳನ್ನು ಸ್ಪಷ್ಟಪಡಿಸಲಾಗಿದೆ. ಭಾಗಶಃ, ಮೀನುಗಳ ಅದ್ಭುತವಾದ ಒತ್ತಡವನ್ನು ಅನುಮತಿಸಲು ಮತ್ತು ವೀಕ್ಷಿಸಲು, ಪೇತ್ರನು ತನ್ನ ಮಾನವ ವಿವೇಚನೆಯನ್ನು ತ್ಯಜಿಸಬೇಕಾಗುತ್ತದೆ. ಪ್ರವಾದಿಯ ಸಂಕೇತವು, ಅವನನ್ನು ಅನರ್ಹತೆಯಿಂದ ಯೇಸುವಿನ ಮುಂದೆ ಮೊಣಕಾಲುಗಳ ಮೇಲೆ ಬೀಳಿಸುತ್ತದೆ. ಇಂದಿನ ಮೊದಲ ವಾಚನದಲ್ಲಿ, ಬಹಳ ವಿಭಿನ್ನವಾದ ಸಂದರ್ಭ ಮತ್ತು ಸನ್ನಿವೇಶದಲ್ಲಿ, ಪ್ರವಾದಿಯಾದ ಯೆಶಾಯನು ಇದೇ ರೀತಿಯದ್ದನ್ನು ಅನುಭವಿಸುತ್ತಾನೆ.

ಆದ್ದರಿಂದ ಭಯ ಮತ್ತು ಆರಾಧನೆಯಿಂದ (ಆತನು ಯೇಸುವಿನ ಮೊಣಕಾಲುಗಳಿಗೆ ಬಿದ್ದನು), ನಮ್ರತೆ ಮತ್ತು ತನ್ನ ಪಾಪಪ್ರಜ್ಞೆಯ ಅರಿವಿನಿಂದ, ಬಹುಶಃ ಕಾನೂನಿನ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಲು ಒಬ್ಬ ಮೀನುಗಾರನಾಗಿ ಕಷ್ಟವಾಗುತ್ತದೆ ಎಂದು ಊಹಿಸಿ, ಪೇತ್ರನು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ದೇವರು, ಮಾನವ ಸಿದ್ಧತೆ ಅಥವಾ ಅರ್ಹತೆಯನ್ನು ಲೆಕ್ಕಿಸದೆ, ತನಗೆ ಬೇಕಾದವರನ್ನು ಕರೆಯುತ್ತಾರೆ. ದೇವರ ಅನುಗ್ರಹದಿಂದ ನಾನು ಏನಾಗಿದ್ದೇನೋ, ಅದು ಅವರಿಂದ, ಮತ್ತು ನನ್ನ ಕಡೆಗೆ ಅವರ ಕೃಪೆಯು ವ್ಯರ್ಥವಾಗಲಿಲ್ಲ ಎಂದು ಪೌಲರು ಇಂದಿನ ಎರಡನೇ ವಾಚನದಲ್ಲಿ ನಮಗೆ ಹೇಳುತ್ತಾರೆ.

ಪೇತ್ರನು ಹಾಗೂ ಪೌಲರು, ರೋಮ್ ಮತ್ತು ಸಾರ್ವತ್ರಿಕ ಧರ್ಮಸಭೆಯ ಪೋಷಕರಾದರು. ಅವರನ್ನು ದೇವರ ಕಾರ್ಯಕ್ಕಾಗಿ, ದೇವರ ಕೃಪೆಯಿಂದ ಕರೆಯಲಾಯಿತು ಮತ್ತು ಅರ್ಹರನ್ನಾಗಿ ಮಾಡಲಾಯಿತು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಯಾವಾಗಲೂ ಭರವಸೆ ಇದೆ ಎಂಬುದರ ಸಂಕೇತವಾಗಿ ಈ ಮಾತುಗಳು ಆಧಾರವಾಗಿ ನಿಲ್ಲುತ್ತವೆ. ಪ್ರಭುವು ನಮ್ಮನ್ನು ಕರೆಯುತ್ತಾನೆ; ಆತನು ನಮ್ಮನ್ನು ತನ್ನ ಪವಿತ್ರೀಕರಣದ ಹಾದಿಯಲ್ಲಿ, ಆಗಾಗ್ಗೆ ಅಗ್ರಾಹ್ಯವಾಗಿ ಮಾರ್ಗದರ್ಶನ ಮಾಡುತ್ತಾರೆ; ಕೃಪೆಯಿಂದ ಸ್ಪರ್ಶಿಸಲ್ಪಟ್ಟ ಜೀವನದ ಗುಣಮಟ್ಟದ ಮೂಲಕ ಆತನ ಸೇವೆಯಲ್ಲಿ ಭಾಗವಹಿಸಲು ಆತನು ನಮ್ಮೆಲ್ಲರನ್ನು ಆಹ್ವಾನಿಸುತ್ತಾರೆ.

08 ಫೆಬ್ರವರಿ 2025, 14:22