MAP

I vescovi kenioti in una conferenza stampa a Nairobi I vescovi kenioti in una conferenza stampa a Nairobi 

ರಾಷ್ಟ್ರವನ್ನು ಪರಿವರ್ತಿಸುವ ಸಾಮೂಹಿಕ ಜವಾಬ್ದಾರಿಯ ಕುರಿತು ಕೆನ್ಯಾದ ಧರ್ಮಾಧ್ಯಕ್ಷರುಗಳು ಒತ್ತಿ ಹೇಳುತ್ತಾರೆ

ಕೆನ್ಯಾದ ಕಥೋಲಿಕ ಧರ್ಮಾಧ್ಯಕ್ಷರುಗಳು ಕ್ರೈಸ್ತರಿಗೆ ನ್ಯಾಯಯುತ, ಶಾಂತಿಯುತ ಮತ್ತು ಏಕೀಕೃತ ರಾಷ್ಟ್ರವನ್ನು ನಿರ್ಮಿಸುವುದು, ಒಂದು ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ನೆನಪಿಸಿದ್ದಾರೆ, ಆದ ಕಾರಣ ಪ್ರತಿಯೊಬ್ಬ ನಾಗರಿಕನು ತಮ್ಮ ಪಾತ್ರವನ್ನು ನಿರ್ವಹಿಸುವಂತೆ ರಾಷ್ಟ್ರವನ್ನು ಪರಿವರ್ತಿಸಲು ಎಲ್ಲರೂ ಕೆಲಸ ಮಾಡಬೇಕೆಂದು ಕರೆ ನೀಡಿದ್ದಾರೆ.

FSSAನ ಸಿಸ್ಟರ್‌ ಜೆಸಿಂತರ್ ಆಂಟೊನೆಟ್ ಒಕೋತ್

ಮಾರ್ಚ್ 5 ರಿಂದ ಪ್ರಾರಂಭವಾಗುವ 2025 ರ ತಪಸ್ಸು ಕಾಲದ ಮುಂಚಿತವಾಗಿ, ಪೂರ್ವ ಆಫ್ರಿಕಾ ರಾಷ್ಟ್ರದ ಕಥೋಲಿಕ ಧರ್ಮಾಧ್ಯಕ್ಷರುಗಳು, ಕ್ರೈಸ್ತರಾದ ನಾವು, ಪರಸ್ಪರರ ಹೊರೆಗಳನ್ನು ಹೊತ್ತು ಮತ್ತು ಸಮಾಜದಲ್ಲಿ ಪರಿವರ್ತನೆಯನ್ನು ಪ್ರಚೋದಿಸುವ ಸಾಧನಗಳಾಗಿ ಒಟ್ಟಿಗೆ ಪ್ರಯಾಣಿಸಲು ಭಕ್ತವಿಶ್ವಾಸಿಗಳಿಗೆ ನೆನಪಿಸುತ್ತಿದ್ದಾರೆ.

ಪವಿತ್ರ ಗ್ರಂಥದ ಸುವರ್ಣ ಸೂತ್ರದಂತೆ, ನಾವು ಬಯಸುವ ಕೆನ್ಯಾದ ಬಗ್ಗೆ ಯೋಚಿಸುವಾಗ, ನಾವು ನಮಗಾಗಿ ಏನು ಬಯಸುತ್ತೇವೆ ಎಂಬುದನ್ನು ಮಾತ್ರವಲ್ಲದೆ ಇತರರಿಗೂ ಏನು ಬಯಸುತ್ತೇವೆ ಎಂಬುದನ್ನು ಸಹ ಪರಿಗಣಿಸಲು ಕರೆಯಲ್ಪಡುತ್ತದೆ. ನಾವು ಎಲ್ಲಾ ಜನರ ಹಿನ್ನೆಲೆ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಅವರ ಒಳಿತನ್ನು ಬಯಸಲು ಕರೆಯಲ್ಪಟ್ಟಿದ್ದೇವೆ ಎಂದು ಕೆನ್ಯಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದಲ್ಲಿ (KCCB) ಕಥೋಲಿಕ ನ್ಯಾಯ ಮತ್ತು ಶಾಂತಿ ವಿಭಾಗದ (CJPD) ಅಧ್ಯಕ್ಷರಾದ ಧರ್ಮಾಧ್ಯಕ್ಷ ಸೈಮನ್ ಪೀಟರ್ ಕಮೋಮೊಯ್ ರವರು ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕ್ರೈಸ್ತರಾದ ನಾವು, ಇತರರು ಬಳಲುತ್ತಿರುವಾಗ ಕೇವಲ ವೈಯಕ್ತಿಕ ಆಶೀರ್ವಾದಗಳಿಂದ ತೃಪ್ತರಾಗಲು ಸಾಧ್ಯವಿಲ್ಲ. ಸಾಮೂಹಿಕ ಒಳಿತೇ ನಮ್ಮ ಜವಾಬ್ದಾರಿಯಾಗಿದೆ, ಮತ್ತು ನಾವು ಸಮಾನತೆ, ನ್ಯಾಯ ಮತ್ತು ಸಹಾನುಭೂತಿಯನ್ನು ಬೆಳೆಸುವ ಸಮಾಜವನ್ನು ಬಯಸಬೇಕು ಎಂದು ಧರ್ಮಾಧ್ಯಕ್ಷರು ಹೇಳಿದರು.

ಬದಲಾವಣೆಯ ಕಾರ್ಯಕರ್ತರು
ಜಗತ್ತನ್ನು ಪರಿವರ್ತಿಸುವ ಕ್ರಿಸ್ತನ ಕರೆಗೆ ಪ್ರತಿಯೊಬ್ಬ ವ್ಯಕ್ತಿಯು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಎಲ್ಲಾ ಜನರ ಘನತೆಯನ್ನು ಪ್ರತಿಪಾದಿಸಬೇಕು ಎಂದು ಬಯಸುತ್ತದೆ, ಇದು ಕುಟುಂಬಗಳು, ಸಮುದಾಯಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ಸಕ್ರಿಯವಾಗಿ ಕೆಲಸ ಮಾಡುವಾಗ ಭ್ರಷ್ಟಾಚಾರ, ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ನಿಲ್ಲುವ ಧೈರ್ಯವನ್ನು ಬಯಸುತ್ತದೆ.

ಸವಾಲು ಕೇವಲ ಪರಿವರ್ತನೆಗಾಗಿ, ಆಧ್ಯಾತ್ಮಿಕ ಬಯಕೆಯ ಬಗ್ಗೆ ಮಾತ್ರವಲ್ಲ, ಬದಲಿಗೆ, ಕ್ರಿಯೆಗೆ ಪ್ರಾಯೋಗಿಕ ಬದ್ಧತೆಯಾಗಿದೆ ಎಂದು ಧರ್ಮಾಧ್ಯಕ್ಷರುಗಳು ಹೇಳಿದರು. "ಕೆನ್ಯಾದ ನಾಗರಿಕರಾಗಿ, ಅಪೇಕ್ಷಿತ ದೇಶವನ್ನು ಸೃಷ್ಟಿಸುವಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಪಾತ್ರವಿದೆ. ಕೆಲಸದ ಸ್ಥಳ, ರಾಜಕೀಯ, ಸಮುದಾಯ ಮತ್ತು ಮನೆಗಳಲ್ಲಿ, ನಾವು ಸಮಗ್ರತೆ, ಪ್ರೀತಿ ಮತ್ತು ನ್ಯಾಯದ ಸದ್ಗುಣಗಳನ್ನು ಸಾಕಾರಗೊಳಿಸಬೇಕು.

ಒಂದೇ ರಾಷ್ಟ್ರವಾಗಿ, ನ್ಯಾಯ, ಶಾಂತಿ ಮತ್ತು ಏಕತೆ ಸೇರಿದಂತೆ ನೈತಿಕ ಮೌಲ್ಯಗಳು ಜೀವಂತ ವಾಸ್ತವಗಳಾಗಿರಬೇಕು ಮತ್ತು ಪ್ರತಿಯೊಬ್ಬ ನಾಗರಿಕನು, ಹಿನ್ನೆಲೆ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ, ಬೆಳೆಯಲು ಸಮಾನ ಅವಕಾಶಗಳನ್ನು ಹೊಂದಿರಬೇಕು.

ನಮ್ಮ ಆಸೆಗಳನ್ನು ಶುದ್ಧೀಕರಿಸಿಕೊಳ್ಳಬೇಕು
ಎಲ್ಲಾ ಕ್ರೈಸ್ತರು ಪ್ರಾರ್ಥನೆ, ಪಶ್ಚಾತ್ತಾಪ, ದಾನ ಮತ್ತು ಸ್ವಯಂ ತ್ಯಾಗದ ಮೂಲಕ ತಮ್ಮನ್ನೇ ತಾವು ಪರೀಕ್ಷಿಸಿಕೊಳ್ಳಲು ಈ ತಪ್ಪಸ್ಸುಕಾಲವು ಕರೆ ನೀಡುತ್ತಿದೆ ಎಂದು ಧರ್ಮಾಧ್ಯಕ್ಷರುಗಳು ಹೇಳಿದರು.

ಕೆನ್ಯಾದ ರಾಜಕೀಯ ಅಸ್ಥಿರತೆ, ಆರ್ಥಿಕ ಸಂಕಷ್ಟ ಅಥವಾ ಸಾಮಾಜಿಕ ಅನ್ಯಾಯ ಸೇರಿದಂತೆ ಸವಾಲುಗಳ ಸಂದರ್ಭದಲ್ಲಿ, ಧರ್ಮಾಧ್ಯಕ್ಷರುಗಳು, "ನಾವು ದೇಶಕ್ಕೆ ಒಳ್ಳೆಯದನ್ನು ಬಯಸಲು, ಗುಣಪಡಿಸುವಿಕೆ ಮತ್ತು ಏಕತೆಗಾಗಿ ಪ್ರಾರ್ಥಿಸಲು ಹಾಗೂ ಈ ಆಸೆಗಳನ್ನು ಪ್ರತಿಬಿಂಬಿಸುವ ಕ್ರಿಯೆಗಳಿಗೆ ನಮ್ಮನ್ನು ಬದ್ಧರಾಗಿಸಿಕೊಳ್ಳಲು ಕರೆಯಲ್ಪಟ್ಟಿದ್ದೇವೆ ಎಂದು ಹೇಳಿದರು.

ಆದ್ದರಿಂದ, ಕ್ರೈಸ್ತರ ಕರೆ ಕೆನ್ಯಾಕ್ಕಾಗಿ ಪ್ರಾರ್ಥಿಸುವುದು ಮಾತ್ರವಲ್ಲ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರದ ಕಲ್ಯಾಣವನ್ನು ಸಕ್ರಿಯವಾಗಿ ಹುಡುಕುವುದು ಎಂದು ಧರ್ಮಾಧ್ಯಕ್ಷರುಗಳು ಹೇಳಿದರು. "ನಾಗರಿಕರಾಗಿ, ಕ್ರಿಸ್ತನು ತನ್ನ ಎಲ್ಲಾ ಜನರಿಗೆ ಬಯಸುವ ನ್ಯಾಯ ಮತ್ತು ಶಾಂತಿಯನ್ನು ಪ್ರತಿಬಿಂಬಿಸುವ ರಾಷ್ಟ್ರದ ಕಡೆಗೆ ನಾವು ಶ್ರಮಿಸಲು ಸಿದ್ಧರಿರಬೇಕು" ಎಂದು ಅವರು ತೀರ್ಮಾನಿಸಿದರು.

ಧರ್ಮಾಧ್ಯಕ್ಷರುಗಳು ಕೆನ್ಯಾದ ಕಥೋಲಿಕರನ್ನು ಐದು ವಾರಗಳ ತಪ್ಪಸ್ಸು ಕಾಲವನ್ನು, ಐದು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿ ಧ್ಯಾನಿಸಲು ಆಹ್ವಾನಿಸಿದರು: ಕುಟುಂಬದ ಐಕ್ಯತೆ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸುವಲ್ಲಿ, ಅದರ ಪಾತ್ರ; ಭ್ರಷ್ಟಾಚಾರ ಮತ್ತು ಹೊಣೆಗಾರಿಕೆಯ ಅಗತ್ಯ; ನಮ್ಮ ರಾಷ್ಟ್ರದಲ್ಲಿ ಇನ್ನೂ ಬಳಕೆಯಾಗದ ಸಂಪನ್ಮೂಲವಾಗಿರುವ ಯುವಕರು ಮತ್ತು ಅವರ ಸಾಮರ್ಥ್ಯ; ಸಮಗ್ರ ಶಿಕ್ಷಣ; ಮತ್ತು ನಮ್ಮ ಸಾಮಾನ್ಯ ಮನೆಯನ್ನು ನೋಡಿಕೊಳ್ಳುವುದು.
 

19 ಫೆಬ್ರವರಿ 2025, 16:34