MAP

2024.02.01 Les représentants des personnes consacrées venus du monde entier, pour le lancement du jubilé de la vie consacrée (1-4 février 2024); au cours des travaux à l’Hôtel Pineta Palace (Rome).

ನ್ಯಾಯ ಮತ್ತು ಶಾಂತಿ ಪ್ರವರ್ತಕರು

"JPIC ನ ಧ್ಯೇಯ: ಎಲ್ಲಾ ಸೃಷ್ಟಿಯ ಸಾಮಾನ್ಯ ಒಳಿತಿನ ವ್ಯವಸ್ಥಿತ ಪರಿವರ್ತನೆಗಾಗಿ ಭರವಸೆಯ ಯಾತ್ರಿಕರು" ಎಂಬ ವಿಷಯದ ಮೇಲೆ ಕೇಂದ್ರೀಕರಿಸಲಾಗಿದೆ. ವಿಶ್ವದಾದ್ಯಂತದ ಸಾಮಾನ್ಯ ಜನರು ಮತ್ತು ಧಾರ್ಮಿಕರು ತಮ್ಮ ಜೆಪಿಐಸಿ ಧರ್ಮಪ್ರಚಾರಕರನ್ನು ಹೆಚ್ಚಿಸಲು ಮತ್ತು ಅವರ ಸಭೆಗಳ ಸದಸ್ಯರನ್ನು ತಮ್ಮ ಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಅಗತ್ಯವಾದ ಸಾಧನಗಳನ್ನು ಪಡೆಯುತ್ತಾರೆ.

ಸೆಬಾಸ್ಟಿಯನ್ ಸ್ಯಾಮ್ಸನ್ ಫೆರಾರಿ ಮತ್ತು ಕ್ರಿಸ್ಟೋಫರ್ ವೆಲ್ಸ್

ವಾರ್ಷಿಕ JPIC (Justice, Peace, and Integrity of Creation) ರಚನೆಯ ಕಾರ್ಯಾಗಾರದ ಮುಖ್ಯ ಉದ್ದೇಶಗಳಲ್ಲಿ ಒಂದು "ವಿವಿಧ ಧಾರ್ಮಿಕ ಸಭೆಗಳ ಹೊಸ ಪ್ರವರ್ತಕರನ್ನು ಮತ್ತು ಈಗಾಗಲೇ ಜೆಪಿಐಸಿ ಸೇವಾನಿಯೋಗದ ಪ್ರವರ್ತಕರಾಗಿ ಕೆಲಸ ಮಾಡುತ್ತಿರುವವರನ್ನು ಪ್ರೇರೇಪಿಸುವುದು ಮತ್ತು ಪರಿಚಯಿಸುವುದು" ಎಂದು ಡಿವೈನ್ ವರ್ಡ್ ಮಿಷನರೀಸ್‌ನ-ದೈವವಾಕ್ಯದ ಧರ್ಮಪ್ರಚಾರಕರ ಸಭೆಯ ಯಾಜಕ ರಾಯ್ ಥಾಮಸ್ ರವರು, ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್ (UISG) ಮತ್ತು ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್ (USG) ನ ನ್ಯಾಯ, ಶಾಂತಿ ಮತ್ತು ಸೃಷ್ಟಿಯ ಸಮಗ್ರತೆ (JPIC) ಆಯೋಗದ ಸಹ-ಕಾರ್ಯನಿರ್ವಾಹಕ ಕಾರ್ಯದರ್ಶಿರವರು ಹೇಳುತ್ತಾರೆ.

ಈ ವರ್ಷದ ಕಾರ್ಯಾಗಾರವು ಫೆಬ್ರವರಿ 10ರಿಂದ 14 ರವರೆಗೆ ರೋಮ್‌ನಲ್ಲಿ “ಸೃಷ್ಟಿಯ ಸಾಮಾನ್ಯ ಒಳಿತಿನ ವ್ಯವಸ್ಥಿತ ಪರಿವರ್ತನೆಗಾಗಿ ಭರವಸೆಯ ಯಾತ್ರಿಕರು" ಎಂಬ ವಿಷಯದ ಎಂಬ ಥೀಮ್‌ನೊಂದಿಗೆ ನಡೆಯುತ್ತಿದೆ.

ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ, ವಿವಿಧ ರಾಷ್ಟ್ರಗಳ ಸುಮಾರು 100 ಜನಸಾಮಾನ್ಯರು, ಧಾರ್ಮಿಕರು, ವೈಯಕ್ತಿಕವಾಗಿ ಮತ್ತು ವಾಸ್ತವಿಕವಾಗಿ, ತಮ್ಮ ಸೇವೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಈ ಕಾರ್ಯಕ್ಕೆ ಸಂಬಂಧಿಸಿದಂತೆ ತಮ್ಮ ದೃಷ್ಟಿಕೋನವನ್ನು, ತೀರ್ಪು ಮಾಡುವುದನ್ನು, ವರ್ತಿಸುವ ವಿಧಾನವನ್ನು ಹಾಗೂ ಇತರ ನಾಗರಿಕ ಸಮಾಜ ಮತ್ತು ವಕಾಲತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಮಾಡುವುದರ ಬಗ್ಗೆ ಚರ್ಚಿಸಲಿದ್ದಾರೆ.

ನಾವು ಪರಿಹರಿಸುತ್ತಿರುವ ಇದೇ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತಿರುವ ಇನ್ನೂ ಅನೇಕ ಎನ್‌ಜಿಒಗಳು, ಇತರ ಅನೇಕ ನಾಗರಿಕ ಸಂಸ್ಥೆಗಳೂ ಇವೆ ಎಂದು ಯಾಜಕ ಥಾಮಸ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. "ಆದ್ದರಿಂದ, ನಾವು ನಮ್ಮ ಹೃದಯ ಮತ್ತು ಹಸ್ತಗಳನ್ನು ನಿಜವಾಗಿಯೂ ತೆರೆಯುವ ಸಮಯ, ಪರಸ್ಪರ ಕೈ ಹಿಡಿದು ನಡೆಯುವ ಹಾಗೂ ಜೆಪಿಐಸಿ ಧ್ಯೇಯದ ಕಡೆಗೆ ಸಾಗುವ ಸಮಯವು ಇದಾಗಿದೆ, ಇದರಿಂದಾಗಿ ಸಂಪರ್ಕ, ವಕಾಲತ್ತು ಮತ್ತು ಸಹಯೋಗದ ಕಾರ್ಯವನ್ನು ನಿರ್ವಹಿಸುವ ಸಮಯವು ಇದಾಗಿದೆ. ಇಂದು ನಮಗೆ ಬೇಕಾಗಿರುವುದು ಇದೇ."

ವಿಶ್ವದಾದ್ಯಂತ ಸಂಪರ್ಕಗಳನ್ನು ಬಲಪಡಿಸುವುದು
ಮಿಷನರಿ ಸಿಸ್ಟರ್ ಸರ್ವೆಂಟ್ಸ್ ಆಫ್ ದಿ ಹೋಲಿ ಸ್ಪಿರಿಟ್‌ನ ಮಿಷನ್ ಕಾರ್ಯದರ್ಶಿ ಭಾರತದ ಸಿಸ್ಟರ್ ಗ್ರೆಟ್ಟಾ ಫೆರ್ನಾಂಡಿಸ್ ರವರು, ಪ್ರಸ್ತುತ ತೊಂದರೆಗಳ ನಡುವೆಯೂ ತಾನು ಆಶಾವಾದಿ ಎಂದು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. "ಜೀವನದಲ್ಲಿ ನಾವು ಬಿಟ್ಟುಕೊಡಬಾರದ ಒಂದು ವಿಷಯವೆಂದರೆ ಭರವಸೆ ಎಂದು ನಾನು ಭಾವಿಸುತ್ತೇನೆ, ಮತ್ತು ಒಟ್ಟಿಗೆ ಬರುವುದರಿಂದ, ಒಟ್ಟಿಗೆ ಕೆಲಸ ಮಾಡುವುದರಿಂದ, ಈ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗಗಳಿವೆ ಎಂದು ನಾನು ಭಾವಿಸುತ್ತೇನೆ."

ಅವರು ಏಕತೆಯ ಮಹತ್ವವನ್ನು ಎತ್ತಿ ತೋರಿಸಿದರು: ಈ ಕ್ಷಣದಲ್ಲಿ ಏಕತೆ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ಕಥೋಲಿಕ ಧರ್ಮಸಭೆಗೆ ಮಾತ್ರವಲ್ಲ, ಎಲ್ಲಾ ಸಂಸ್ಥೆಗಳಿಗೂ ಏಕತೆ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ವಿಶ್ವದ ಎಲ್ಲಾ ಜನರು ಒಟ್ಟಾಗಿ ನಿಲ್ಲುವುದು ಮತ್ತು ಈ ಕ್ಷಣದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳಿಗೆ ಭಯಪಡದೆ ಅಥವಾ ಹೃದಯಗುಂದದೆ, ವಿಶೇಷವಾಗಿ ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಪಡೆಯುವವರು ಹಾಗೂ ನಾವೆಲ್ಲರೂ ಒಂದೇ ಮಾನವೀಯತೆಯ ಭಾಗವಾಗಿರುವುದರಿಂದ ಇತರ ಅಗತ್ಯವಿರುವ ಜನರೊಂದಿಗೆ ಒಟ್ಟಾಗಿ ನಿಲ್ಲುವುದು ಬಹಳ ಮುಖ್ಯ ಎಂದು ಹೇಳುತ್ತಾರೆ.

ವಲಸಿಗರು ಮತ್ತು ನಿರಾಶ್ರಿತರಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುವುದು
ಜೆಪಿಐಸಿ ಸಂಸ್ಥೆಗಳಿಂದ ವಲಸಿಗರು ಮತ್ತು ನಿರಾಶ್ರಿತರೊಂದಿಗಿನ ಕೆಲಸದ ಬಗ್ಗೆ, ಸಿಸ್ಟರ್ ಫೆರ್ನಾಂಡಿಸ್ ರವರು ಹೇಳಿದರು, ನಮ್ಮ ವಿವಿಧ ಸಭೆಗಳ ಅನೇಕ ಸದಸ್ಯರು, ವಿಶೇಷವಾಗಿ ಗಡಿಗಳು ಮತ್ತು ಯುದ್ಧ ವಲಯದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ, ವಿಶೇಷವಾಗಿ ಅಮೇರಿಕ ಸರ್ಕಾರದ ಕೆಲವು ನೀತಿಗಳಲ್ಲಿನ ಬದಲಾವಣೆಗಳಿಂದ ನೇರವಾಗಿ ಪರಿಣಾಮ ಬೀರಿದೆ.

ಆದ್ದರಿಂದ, ವಿಶೇಷವಾಗಿ ವಿವಿಧ ದೇಶಗಳ ಗಡಿಗಳಲ್ಲಿ ಅಥವಾ ವಿಭಿನ್ನ ಸ್ಥಳಗಳಲ್ಲಿ ಸಿಕ್ಕಿಬಿದ್ದ ಜನರಿಗೆ, ಪರಸ್ಪರ ಬೆಂಬಲಿಸಲು ನಾವು ಇತರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

ನಿರ್ಣಾಯಕ ಸಂದರ್ಭಗಳಲ್ಲಿ ನಿರಾಶ್ರಿತರೊಂದಿಗೆ ಕೆಲಸ ಮಾಡುವವರ ನಡುವೆ ಧರ್ಮಸಭೆಯು ಜೊತೆಗೆ ನಡೆಯಲಿದೆ ಎಂಬ ಭರವಸೆಯೂ ಇದೆ ಎಂದು ಅವರು ಹೇಳಿದರು.

13 ಫೆಬ್ರವರಿ 2025, 13:43