MAP

Meaning Meets Us - Foto finale Meaning Meets Us - Foto finale 

ಶಾಂತಿಗಾಗಿ ಒಂದುಗೂಡಿದ ಇಸ್ರಯೇಲ್, ಪ್ಯಾಲಸ್ತೀನ್ ಮತ್ತು ಅಮೇರಿಕದ ಯುವಕರು

ಸ್ಕೋಲಾಸ್ ಅಕರೆಂಟೆಸ್ ಆಯೋಜಿಸಿದ್ದ “ಮೀನಿಂಗ್ ಮೀಟ್ಸ್ ಅಸ್” ಸಭೆಯ ಯುವ ಗುಂಪು ಫೆಬ್ರವರಿ 5ರ ಬುಧವಾರದಂದು ವಿಶ್ವಗುರುಗಳ ಸಾಮಾನ್ಯ ಪ್ರೇಕ್ಷಕರ ಭೇಟಿಯ ಕೊನೆಯಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿ ಮಾಡುತ್ತದೆ. ಅವರೆಲ್ಲರೂ ಸಹಿ ಮಾಡಿದ ಮತ್ತು ಸಂವಾದಕ್ಕೆ ಅವರ ಬದ್ಧತೆಯನ್ನು ಸಂಕೇತಿಸುವ ಪತ್ರವು ಹೀಗಿದೆ: “ನಾವು ಒಮ್ಮತವನ್ನು ಬಯಸುತ್ತಿಲ್ಲ, ಆದರೆ ಪರಸ್ಪರ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬಯಸುತ್ತಿದ್ದೇವೆ.”

ಸೆಬಾಸ್ಟಿಯನ್ ಸ್ಯಾನ್ಸನ್ ಫೆರಾರಿ

“ನನಗೆ ನೆನಪಿರುವವರೆಗೂ, ನಾವು ಪರಸ್ಪರ ಮಾತನಾಡಬಾರದು ಎಂದು ಹೇಳಲಾಗಿತ್ತು. ಇನ್ನೊಂದು ಬದಿಯನ್ನು ಅಮಾನವೀಯಗೊಳಿಸುವ ಬಲವಾದ ಪ್ರವೃತ್ತಿ ಇದೆ. "ವಿಭಿನ್ನ ನಿರೂಪಣೆಗಳನ್ನು ಮಾತನಾಡಲು ಮತ್ತು ಕೇಳಲು ಕಲಿಯುವುದು ಬಹಳ ಮುಖ್ಯ" ಎಂದು ಇಸ್ರಯೇಲ್‌ನ ಅಬಿಗೈಲ್ ಸ್ಜೋರ್ ರವರು ಹೇಳಿದರು, ಮುಸ್ಲಿಂ, ಯೆಹೂದ್ಯ ಮತ್ತು ಕ್ರೈಸ್ತ ಧರ್ಮದ ಯುವಕರನ್ನು ಅಂತರಧರ್ಮೀಯ ಮತ್ತು ಅಂತರಸಾಂಸ್ಕೃತಿಕ ಸಂವಾದಕ್ಕಾಗಿ ಒಟ್ಟುಗೂಡಿಸುವ "ಮೀನಿಂಗ್ ಮೀಟ್ಸ್ ಅಸ್" ನಲ್ಲಿ ಭಾಗವಹಿಸಿದ ಅನುಭವವನ್ನು ಹಂಚಿಕೊಂಡರು, ಶಾಂತಿಯ ಅನ್ವೇಷಣೆಯಲ್ಲಿ ಇತರರನ್ನು ಎದುರಿಸುವ ಮಹತ್ವವನ್ನು ಒತ್ತಿ ಹೇಳಿದರು.

2023ರ ಅಕ್ಟೋಬರ್‌ನಲ್ಲಿ ಇಸ್ರಯೇಲ್ ಮೇಲೆ ಹಮಾಸ್ ದಾಳಿಯ ನಂತರ ಸಂವಾದ ಮತ್ತು ಪರಸ್ಪರ ತಿಳುವಳಿಕೆ ಮತ್ತು ಜಾಗೃತಿಯ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 2 ರಿಂದ 5, 2025ರವರೆಗೆ ವ್ಯಾಟಿಕನ್‌ನಲ್ಲಿ ನಡೆದ "ಮೀನಿಂಗ್ ಮೀಟ್ಸ್ ಅಸ್" ಸಭೆಯನ್ನು ಆಯೋಜಿಸಲಾಗಿತ್ತು.

ಜೆರುಸಲೇಮ್‌ನ ಹೀಬ್ರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವೈವಿಧ್ಯಮಯ ಹಿನ್ನೆಲೆಯ ಯುವಜನರಲ್ಲಿ ತಿಳುವಳಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಮುನ್ನಡೆಸಿದರು, ಆದರೆ ಅಂತರರಾಷ್ಟ್ರೀಯ ಸ್ಕೋಲಾಸ್ ಅಕರೆಂಟೆಸ್ ಸಂಘವು "ಮೀನಿಂಗ್ ಮೀಟ್ಸ್ ಅಸ್" ಕಾರ್ಯಕ್ರಮವನ್ನು ಸಂಯೋಜಿಸಿತು, ವಿಶವ್ಗುರು ಆರನೇ ಪಾಲ್ ರವರ ಹಾಲ್‌ನಲ್ಲಿ ಸಾಮಾನ್ಯ ಪ್ರೇಕ್ಷಕರ ಕೊನೆಯಲ್ಲಿ ವಿಶ್ವಗುರು ಫ್ರಾನ್ಸಿಸ್‌ರವರಿಗೆ ತಮ್ಮ ತೀರ್ಮಾನಗಳನ್ನು ಪ್ರಸ್ತುತಪಡಿಸುವಲ್ಲಿ ಸಭೆ ಕೊನೆಗೊಂಡಿತು.

ವಿಶ್ವಗುರುಗಳೊಂದಿಗಿನ ಸಂಕ್ಷಿಪ್ತ ಭೇಟಿಯ ಸಮಯದಲ್ಲಿ, ಭಾಗವಹಿಸಿದವರು ಅವರಿಗೆ ಒಂದು ಪತ್ರ ಮತ್ತು ಸ್ವೆಟ್‌ಶರ್ಟ್ ನೀಡಿದರು, ಅದಕ್ಕೆ ಅವರು ಸಹಿ ಹಾಕಿದರು. ತಮ್ಮ ಸಂದೇಶದಲ್ಲಿ, ಅವರು ತಾವು ನಡೆಸಿದ ಕಷ್ಟಕರ ಸಂಭಾಷಣೆಗಳನ್ನು ಪ್ರತಿಬಿಂಬಿಸಿದರು, “ಅವರ ಗುರಿ ಒಪ್ಪಂದವಲ್ಲ, ಪರಸ್ಪರ ತಿಳುವಳಿಕೆ” ಎಂದು ಸ್ಪಷ್ಟಪಡಿಸಿದರು.

ವಿಭಜನೆಗಳನ್ನು ನಿವಾರಿಸುವುದು
ಈ ವಿಶಿಷ್ಟ ಜಾಗದಲ್ಲಿ, ಇಸ್ರಯೇಲ್, ಪ್ಯಾಲೆಸ್ತೀನ್ ಮತ್ತು ಅಮೇರಿಕದ ಯುವಕರು "ಸಂಕೀರ್ಣ ಸಂವಾದವನ್ನು ಉಳಿಸಿಕೊಳ್ಳುವ" ಮತ್ತು ಪರಸ್ಪರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಕಲಿಯುವ ಪರವಾಗಿ ವಿಭಜಕ ವಾಕ್ಚಾತುರ್ಯವನ್ನು ಬದಿಗಿಟ್ಟು, ದ್ವೇಷ ಭಾಷಣವನ್ನು ತಿರಸ್ಕರಿಸಲು ಆಯ್ಕೆ ಮಾಡಿಕೊಂಡರು.

ಗಾಜಾದಲ್ಲಿ ಕೊಲ್ಲಲ್ಪಟ್ಟ ಜನರ ಸಂಖ್ಯೆಯನ್ನು ತೋರಿಸುತ್ತಾ, ಅವರ ಟಿ-ಶರ್ಟ್‌ಗೆ ಹೊಲಿಯಲಾದ ಟ್ಯಾಗ್‌ನಲ್ಲಿ ಬರೆಯಲಾದ ಸಂಖ್ಯೆ. "ಈ ಸಂಖ್ಯೆಗಳು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಅಬಿಗೈಲ್ ರವರು ಹೇಳಿದರು. "ಯುದ್ಧ ಮುಂದುವರಿಯುವುದು ನನಗೆ ಇಷ್ಟವಿಲ್ಲ, ಒತ್ತೆಯಾಳುಗಳು ಮನೆಗೆ ಹಿಂತಿರುಗದೆ ಸಾಯುವುದು ನನಗೆ ಇಷ್ಟವಿಲ್ಲ. ಗಾಜಾದಲ್ಲಿ ಹೆಚ್ಚಿನ ರಕ್ತಪಾತ ನನಗೆ ಬೇಡ. ನನಗೆ ಎರಡೂ ಕಡೆಗಳಲ್ಲಿ ಸ್ನೇಹಿತರಿದ್ದಾರೆ, ಅವರನ್ನು ನಾನು ಸಮನಾಗಿ ಪ್ರೀತಿಸುತ್ತೇನೆ ಮತ್ತು ನನಗೆ ಅವರೆಲ್ಲರೂ ಮುಖ್ಯ" ಎಂದು ಅವರು ಹೇಳಿದರು.

ನೊಟ್ರೆ ಡೇಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಇಸಾಬೆಲ್ ಗೊನ್ಜಾಲೆಸ್‌ಗೆ, ಸಭೆಯ ಕೊನೆಯ ದಿನದಂದು ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ವಾಗತಿಸುವ ಅವಕಾಶವು ಅತ್ಯಂತ ಅರ್ಥಪೂರ್ಣವಾಗಿತ್ತು. ಸಮನ್ವಯದ ಪ್ರಯತ್ನಗಳಿಗೆ ಕೊಡುಗೆ ನೀಡುವ, ತಾನು ಕೇಳಿದ ಕಥೆಗಳು, ತಾನು ಬದುಕಿದ ಅನುಭವಗಳು ಮತ್ತು ತಾನು ಕಲಿತ ಪಾಠಗಳನ್ನು ಹಂಚಿಕೊಳ್ಳುವ ಮನೋಭಾವದೊಂದಿಗೆ ನಾನು ಮನೆಗೆ ಮರಳಲು ಆಶಿಸುತೇನೆ. "ನಾವೆಲ್ಲರೂ ಶಾಂತಿಯಿಂದ ಬದುಕಲು ಮತ್ತು ಸಂತೋಷವಾಗಿರಲು ಬಯಸುತ್ತೇವೆ" ಎಂದು ಅವರು ದೃಢಪಡಿಸಿದರು.

ಪ್ಯಾಲೆಸ್ತೀನಿಯದ ಅರಬ್ ನಾಗಿರುವ ಮೇಸನ್ ಮಾಡಿಯವರು, ಈ ಭೇಟಿಯನ್ನು ಅತ್ಯಂತ ಹೃದಯಸ್ಪರ್ಶಿ ಅನುಭವ ಎಂದು ಬಣ್ಣಿಸಿದ್ದಾರೆ. "ನಾನು ಕ್ರೈಸ್ತನಲ್ಲ, ಆದರೂ ಆ ಸ್ಥಳದ ಪವಿತ್ರತೆ ಮತ್ತು ಶ್ರೇಷ್ಠತೆಯನ್ನು ನಾನು ಅನುಭವಿಸಿದೆ. ವಿಶ್ವಗುರು ಫ್ರಾನ್ಸಿಸ್ ರವರ ಮಾತುಗಳು ನಂಬಲಾಗದಷ್ಟು ಶಕ್ತಿಯುತವಾಗಿದ್ದವು. ಅವರ ಹಿನ್ನೆಲೆ ಅಥವಾ ನಂಬಿಕೆಗಳನ್ನು ಲೆಕ್ಕಿಸದೆ ಹಾಜರಿದ್ದ ಪ್ರತಿಯೊಬ್ಬರೂ ಅದೇ ರೀತಿ ಭಾವಿಸಿದ್ದಾರೆಂದು ನಾನು ಭಾವಿಸುತ್ತೇನೆ" ಎಂದು ಅವರು ದೃಢಪಡಿಸಿದರು.

ಸ್ಕೊಲಾಸ್ ಆಕ್ಯುರೆಂಟೆಸ್ ಮತ್ತು ಅಂತರ್ಧರ್ಮೀಯ ಸಂಭಾಷಣೆ
ಸ್ಕೋಲಸ್ ಆಕ್ಯುರೆಂಟೆಸ್ ನ್ನು ಬ್ಯೂನಸ್ ಐರಿಸ್‌ನಲ್ಲಿ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊರವರು ಶೈಕ್ಷಣಿಕ ಉಪಕ್ರಮವಾಗಿ ಸ್ಥಾಪಿಸಿದರು, ಅವರ ಜೊತೆಗೆ ಶಿಕ್ಷಣತಜ್ಞರಾದ ಎನ್ರಿಕ್ ಪಾಲ್ಮೆರೊ ಮತ್ತು ಜೋಸ್ ಮರಿಯಾ ಡೆಲ್ ಕೊರಲ್ ರವರೂ ಕೂಡ ಉಪಸ್ಥಿತರಾಗಿದ್ದರು. ಕಥೊಲಿಕರು, ಯೆಹೂದ್ಯರು ಮತ್ತು ಮುಸ್ಲಿಂ ಧರ್ಮದವರು ಸೇರಿದಂತೆ ವಿವಿಧ ಧರ್ಮಗಳ ಯುವಜನರನ್ನು ಸಂಭಾಷಣೆ ಮತ್ತು ಅಂತರಸಾಂಸ್ಕೃತಿಕ ವಿನಿಮಯದ ಜಾಗದಲ್ಲಿ ಒಟ್ಟುಗೂಡಿಸುವುದು ಇದರ ಧ್ಯೇಯವಾಗಿದೆ. 2017 ರಿಂದ, ಸ್ಕೋಲಾಸ್ ಪರಸ್ಪರ ತಿಳುವಳಿಕೆ ಮತ್ತು ಶಾಂತಿಯನ್ನು ಬೆಳೆಸುವ ಮೂಲಕ ಆರು ಜಾಗತಿಕ ಅಂತರಧರ್ಮೀಯ ಸಭೆಗಳನ್ನು ಆಯೋಜಿಸಿದೆ.

ವಿಶ್ವಗುರು ಫ್ರಾನ್ಸಿಸ್ ರವರ ಬೆಂಬಲದೊಂದಿಗೆ, ಸ್ಕೋಲಾಸ್ ಅಂತರ್ಧರ್ಮೀಯ ಸಂವಾದದಲ್ಲಿ ಜಾಗತಿಕ ನಾಯಕರಾಗಿದ್ದಾರೆ, ವಿವಿಧ ಸಂದರ್ಭಗಳಲ್ಲಿ ಯುವಜನರನ್ನು ಸಂಪರ್ಕಿಸುವ ಕಲಾತ್ಮಕ ಮತ್ತು ಶೈಕ್ಷಣಿಕ ಯೋಜನೆಗಳ ಮೂಲಕ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದಾರೆ.

ವಿಶ್ವಗುರು ಫ್ರಾನ್ಸಿಸ್ ರವರ ಬೆಂಬಲದೊಂದಿಗೆ ಈ ಉಪಕ್ರಮಗಳು, ಕಲೆ, ಶಿಕ್ಷಣ ಮತ್ತು ಅಂತರಧರ್ಮೀಯ ಬದ್ಧತೆಯು ವ್ಯತ್ಯಾಸಗಳನ್ನು, ಶಾಂತಿ ಮತ್ತು ಭರವಸೆಯ ಸೇತುವೆಗಳಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ವಿವರಿಸುತ್ತದೆ.

05 ಫೆಬ್ರವರಿ 2025, 13:01