MAP

HEALTH-CORONAVIRUS/IRELAND HEALTH-CORONAVIRUS/IRELAND 

ಐರಿಶ್ ಧರ್ಮಾಧ್ಯಕ್ಷರುಗಳು:ಆರೋಗ್ಯ ರಕ್ಷಣೆಯಲ್ಲಿ ಮಾನವ ಘನತೆ

ಆರೋಗ್ಯ ರಕ್ಷಣೆಯಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವುದು ಅತ್ಯಗತ್ಯ ಎಂದು ಐರಿಶ್ ಧರ್ಮಾಧ್ಯಕ್ಷರುಗಳ ಸಮ್ಮೇಳನ ಮಂಡಳಿಯ ಅಧ್ಯಕ್ಷರು ವಿಶ್ವ ವ್ಯಾಧಿಸ್ತರ ದಿನದ ಹೇಳಿಕೆಯಲ್ಲಿ ಹೇಳಿದ್ದಾರೆ ಮತ್ತು ಐರ್ಲೆಂಡ್‌ನಲ್ಲಿ ನೆರವಿನ ಆತ್ಮಹತ್ಯೆಯ ಕುರಿತು ಹೆಚ್ಚುತ್ತಿರುವ ಚರ್ಚೆಗಳ ವಿರುದ್ಧ ಎಚ್ಚರಿಸಿದ್ದಾರೆ.

ಲಿಸಾ ಝೆಂಗಾರಿನಿ

ಫೆಬ್ರವರಿ 11 ರಂದು ಧರ್ಮಸಭೆಯು 33 ನೇ ವಿಶ್ವ ವ್ಯಾಧಿಸ್ತರ ದಿನವನ್ನು ಆಚರಿಸುತ್ತಿರುವಾಗ, ಐರಿಶ್ ಧರ್ಮಾಧ್ಯಕ್ಷರುಗಳ ಸಮ್ಮೇಳನ ಮಂಡಳಿಯ ಆರೋಗ್ಯ ರಕ್ಷಣೆಯ ಅಧ್ಯಕ್ಷರು ಮಾನವ ಘನತೆಯು ಆರೋಗ್ಯ ಪದ್ಧತಿಗಳ ಮೂಲದಲ್ಲಿಯೇ ಉಳಿಯಬೇಕು ಎಂದು ಪುನರುಚ್ಚರಿಸಿದ್ದಾರೆ.

ಆರೋಗ್ಯ ರಕ್ಷಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿಯುವುದು ಅತ್ಯಗತ್ಯ ಎಂದು ಧರ್ಮಾಧ್ಯಕ್ಷರಾದ ಮೈಕೆಲ್ ರೂಟರ್ ರವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದುಃಖವು ಒಂದು ಪ್ರತ್ಯೇಕ ಪ್ರಯಾಣವಲ್ಲ
ಈ ದಿನದ ಆಚರಣೆಗಾಗಿ ವಿಶ್ವಗುರು ಫ್ರಾನ್ಸಿಸ್ ರವರ ಇತ್ತೀಚಿನ ಸಂದೇಶವನ್ನು ಸ್ವಾಗತಿಸುತ್ತಾ, ಅರ್ಮಾಗ್‌ನ ಸಹಾಯಕ ಧರ್ಮಾಧ್ಯಕ್ಷರು, ದುಃಖದ ಸಮಯದಲ್ಲಿ ಪೋಷಕ ಶಕ್ತಿಯಾಗಿರುವ ಜ್ಯೂಬಿಲಿಯ ಭರವಸೆಯ ವಿಷಯವನ್ನು ಎತ್ತಿ ತೋರಿಸುತ್ತಾರೆ.

ವಿಶ್ವಗುರು ಫ್ರಾನ್ಸಿಸ್ ರವರು - ಅನಾರೋಗ್ಯವನ್ನು, ಜೀವನದ ಒಂದು ಪ್ರತ್ಯೇಕ ಹೋರಾಟವಾಗಿ ಸ್ವೀಕರಿಸದೆ "ಅದು, ದೇವರನ್ನು ಮುಖಾಮುಖಿಯಾಗಿ ಎದುರುಗೊಳ್ಳಲು, ಆತನ ಉಡುಗೊರೆಗಳನ್ನು ಸ್ವೀಕರಿಸಲು ಮತ್ತು ಆತನ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ನೀಡಿರುವ ಒಂದು ಅವಕಾಶವಾಗಿ ಸ್ವೀಕರಿಸಲು, ಅನಾರೋಗ್ಯದ ಬಗ್ಗೆ ನವೀಕೃತ ದೃಷ್ಟಿಕೋನಕ್ಕೆ ಕರೆ ನೀಡುತ್ತಾರೆ."

ಆರೈಕೆದಾರರು, ವೈದ್ಯಕೀಯ ವೃತ್ತಿಪರರು, ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಉಪಸ್ಥಿತಿಯು ಆ ಪ್ರೀತಿಯ ಸ್ಪಷ್ಟ ಅಭಿವ್ಯಕ್ತಿಯಾಗಿದ್ದು, "ಬಳಲುವುದು, ಜೀವನದ ಒಂದು ಪ್ರತ್ಯೇಕ ಪ್ರಯಾಣವಲ್ಲ, ಆದರೆ ವಿಶ್ವಾಸ, ಪ್ರೀತಿ ಮತ್ತು ಒಗ್ಗಟ್ಟಿನಲ್ಲಿ ನಮ್ಮನ್ನು ದೇವರಲ್ಲಿ ಒಂದುಗೂಡಿಸುವ ಸಾಧನಗಳು" ಎಂದು ತೋರಿಸುತ್ತದೆ ಎಂಬುದಾಗಿ ಧರ್ಮಾಧ್ಯಕ್ಷರು ರೂಟರ್ ಹೇಳುತ್ತಾರೆ.

ವಿಶ್ವ ವ್ಯಾಧಿಸ್ತರ ದಿನ
ಪ್ರತಿ ವರ್ಷ ಫೆಬ್ರವರಿ 11 ರಂದು ವಿಶ್ವ ವ್ಯಾಧಿಸ್ತರ ದಿನವನ್ನಾಗಿ ಆಚರಿಸಲಾಗುತ್ತದೆ, ಇದು ಲೂರ್ದು ನಗರದ ಪೂಜ್ಯ ಕನ್ಯಾ ಮೇರಿಮಾತೆಯ ದೈವಾರಾಧನೆಯ ಸ್ಮರಣೆಯಾಗಿದೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತೆಮರಿಯಳ ಪುಣ್ಯಕ್ಷೇತ್ರದ ದೇವಾಲಯದಲ್ಲಿ ವಿಶೇಷವಾದ ಸಾಂಭ್ರಮಿಕ ವಿಧಗಳಿಂದ ಈ ಆಚರಣೆ ನಡೆಯುತ್ತದೆ.

ಆದಾಗ್ಯೂ, ಜ್ಯೂಬಿಲಿ ವರ್ಷದ ದೃಷ್ಟಿಯಿಂದ, ವಿಶ್ವಗುರು ಫ್ರಾನ್ಸಿಸ್ ರವರು 2025ರಲ್ಲಿ ಸಾಮಾನ್ಯವಾಗಿ ನಡೆಯುತ್ತಿದ್ದ ಸಾಂಭ್ರಮಿಕ ಆಚರಣೆಯನ್ನು ಒಂದು ವರ್ಷದವರೆಗೆ ವಿಳಂಬಗೊಳಿಸಲು ಆಯ್ಕೆ ಮಾಡಿದ್ದಾರೆ. ವಿಶ್ವ ವ್ಯಾಧಿಸ್ತರ ದಿನದ ಸಾಂಭ್ರಮಿಕ ಸ್ಮರಣೆಯು ಈಗ 2026 ರಲ್ಲಿ ಪೆರುವಿನ ಅರೆಕ್ವಿಪಾದ ಚಾಪಿಯದಲ್ಲಿ ಪೂಜ್ಯ ಕನ್ಯಾ ಮೇರಿಮಾತೆಯ ಅಭಯಧಾಮದಲ್ಲಿ ನಡೆಯಲಿದೆ.
 

11 ಫೆಬ್ರವರಿ 2025, 14:54