MAP

IFFAsia dialogue Tagaytay Philippines IFFAsia dialogue Tagaytay Philippines  (Mark Saludes - LiCAS News)

ಯುವ ರಚನೆಯನ್ನು ಬಲಪಡಿಸುವ ಕುರಿತು IFFAsia ಪ್ರಾದೇಶಿಕ ಸಂವಾದ

ಇನ್ಸ್ಟಿಟ್ಯೂಟ್ ಆಫ್ ಫಾರ್ಮೇಷನ್ ಫೊಂಡಾಸಿಯೊ ಏಷ್ಯಾ (IFFasia) ಈ ಪ್ರದೇಶದಲ್ಲಿ ಯುವ ರಚನೆಗೆ "ಬಲವಾದ ಭವಿಷ್ಯವನ್ನು ರೂಪಿಸಲು" ಪಾಲುದಾರಿಕೆ ಮತ್ತು ಸಹಯೋಗವನ್ನು ಪೋಷಿಸುವ ಗುರಿಯನ್ನು ಹೊಂದಿರುವ ಸಂವಾದಕ್ಕಾಗಿ ಪಾಲುದಾರರನ್ನು ಒಟ್ಟುಗೂಡಿಸಿದೆ.

ಮಾರ್ಕ್ ಸಲೂಡೆಸ್ - ಫಿಲಿಪೈನ್ಸ್, ಲಿಕಾಸ್‌ ಸುದ್ಧಿ

ಇಂದು ನಾವು ವ್ಯಕ್ತಿಗಳಾಗಿ ಅಲ್ಲ, ಆದರೆ ಏಷ್ಯಾದಲ್ಲಿ ಯುವಜನರ ರಚನೆಗೆ ಆಳವಾಗಿ ಬದ್ಧರಾಗಿರುವ ಸಮುದಾಯವಾಗಿ ಒಟ್ಟಿಗೆ ಸೇರುತ್ತೇವೆ, ಅವರು ಜೀವನ, ವಿಶ್ವಾಸ ಮತ್ತು ಉದ್ದೇಶವನ್ನು ನ್ಯಾವಿಗೇಟ್ ಮಾಡುವಾಗ ಅವರೊಂದಿಗೆ ನಡೆಯುತ್ತೇವೆ ಎಂದು ಉದ್ಘಾಟನಾ ಕಾರ್ಯಕ್ರಮದಲ್ಲಿ IFFAsia ನಿರ್ದೇಶಕಿ ಫ್ಲಾರೆನ್ಸ್ ಅಲೆಕ್ಸಿಯಸ್ ರವರು ಹೇಳಿದರು.

ಫೆಬ್ರವರಿ 9 ರಿಂದ 11 ರವರೆಗೆ ಫಿಲಿಪೈನ್ಸ್‌ನ ಟಗೈಟೆ ನಗರದಲ್ಲಿ ನಡೆಯುವ ಸಂವಾದದಲ್ಲಿ 10 ಏಷ್ಯಾದ ದೇಶಗಳ ವಿವಿಧ ಧರ್ಮಸಭೆಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಗುಂಪುಗಳ ಸುಮಾರು 57 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಯುವಜನರಿಗೆ ಅವರ ಸಾಮಾನ್ಯ ಜೀವನದಲ್ಲಿ ಸಿನೊಡಲ್ ಧರ್ಮಸಭೆಯಾಗುವ ಮಾರ್ಗಗಳನ್ನು, ಸಂಸ್ಥೆಗಳು ಮತ್ತು ಸಂಘಟನೆಗಳು ಏಷ್ಯಾದ ಸ್ಥಳೀಯ ಧರ್ಮಸಭೆಗೆ ಮತ್ತು ಸಮುದಾಯಗಳಿಗೆ ಪ್ರಸ್ತುತ ಪೀಳಿಗೆಯನ್ನು ಸಕ್ರಿಯಗೊಳಿಸಲು ಮತ್ತು ಸಕ್ರಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹೇಗೆ ಸಹಾಯಕವಾಗಿವೆ ಎಂಬುದನ್ನು ಅನ್ವೇಷಿಸಲು ಈ ಸಂವಾದವು ಆಶಿಸುತ್ತದೆ ಎಂದು ಶ್ರೀಮತಿ ಅಲೆಕ್ಸಿಯಸ್ ಹೇಳಿದರು.

"ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುವಾಗ ಇದು ನಮ್ಮ ಮಾರ್ಗದರ್ಶಿ ಉದ್ದೇಶವಾಗಿತ್ತು. ಇಲ್ಲಿರುವ ಪ್ರತಿಯೊಬ್ಬರೂ ಈ ಪ್ರಯಾಣದಲ್ಲಿ ತಮ್ಮನ್ನು ಸಹಯೋಗಿಗಳಾಗಿ ನೋಡುತ್ತಾರೆಂದು ನಾವು ನಿಜವಾಗಿಯೂ ಭಾವಿಸುತ್ತೇವೆ," ಎಂದು ಅವರು ಹೇಳಿದರು.

ಸಂವಾದ ಪ್ರಕ್ರಿಯೆಯು ಸಿನೊಡಾಲಿಟಿಯ ತತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತದೆ – ಕ್ರೈಸ್ತ ಧರ್ಮದ ಮಾರ್ಗವಾದ 'ಒಟ್ಟಿಗೆ ನಡೆಯುವುದು', ಇದು ಆಲಿಸುವಿಕೆ, ವಿವೇಚನೆ ಮತ್ತು ಭಾಗವಹಿಸುವಿಕೆಯ ಬಗ್ಗೆ ಒತ್ತಿಹೇಳುತ್ತದೆ.

ಇನ್ಸ್ಟಿಟ್ಯೂಟ್ ಆಫ್ ಫಾರ್ಮೇಷನ್ ಫೊಂಡಾಸಿಯೊ ಏಷ್ಯಾವು (IFFAsia), ಏಷ್ಯಾದ ಯುವ ವಯಸ್ಕರು ಮತ್ತು ಸಾಮಾನ್ಯ ಜನರಿಗೆ ಶಿಷ್ಯತ್ವ ಮತ್ತು ಧರ್ಮಪ್ರಚಾರ ಅಥವಾ ಸೇವಾನಿಯೋಗದ ಶಾಲೆಯಾಗಿದೆ. ಕಥೋಲಿಕ ಸಾಮಾನ್ಯ ಸಂಘ ಫೊಂಡಾಸಿಯೊದೊಳಗೆ ಮಲೇಷ್ಯಾ ಮತ್ತು ಫಿಲಿಪೈನ್ಸ್‌ನ ಸಾಮಾನ್ಯ ಜನರಿಂದ ಸ್ಥಾಪಿಸಲ್ಪಟ್ಟ ಇದು ಯುವ ಸಾಮಾನ್ಯರನ್ನು ಸಾಮಾಜಿಕ ಮತ್ತು ಪಾಲನಾ ಸೇವೆಯ ಕೆಲಸಕ್ಕಾಗಿ ಸಜ್ಜುಗೊಳಿಸುವ ರಚನೆಯ ಕಾರ್ಯಕ್ರಮಗಳ ಅಗತ್ಯವನ್ನು ತಿಳಿಸುತ್ತದೆ.

IFFAsia ದ ಅಧ್ಯಕ್ಷರಾದ ಕ್ಯಾಸೆರೆಸ್‌ನ ಮಹಾಧರ್ಮಾಧ್ಯಕ್ಷರಾದ ರೆಕ್ಸ್ ಆಂಡ್ರ್ಯೂ ಅಲಾರ್ಕಾನ್ ರವರು, ಈ ಸಂವಾದವು, ಸಿನೊಡಲ್ ಉದ್ದೇಶವನ್ನು ಕಾರ್ಯಗತಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆಗಳಲ್ಲಿ ಒಂದಾಗಿದೆ, ಬಹುಶಃ ಅಧಿಕೃತವಾಗಿಲ್ಲದಿದ್ದರೂ, ಆದರೆ ಕಾರ್ಯಗತಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆಗಳಾಗಿವೆ ಎಂದು ಹೇಳಿದರು.

ನಾವು ಹತ್ತು ವಿಭಿನ್ನ ದೇಶಗಳಿಂದ ಬಂದಿದ್ದೇವೆ, ಎಲ್ಲರೂ ಯುವಜನರಿಗಾಗಿ ಕೆಲಸ ಮಾಡುತ್ತಿದ್ದೇವೆ, ಪವಿತ್ರ ತಂದೆಯು ಸಿನೊಡಲಿಟಿಯ ಕಡೆಗೆ ಆ ಹೆಜ್ಜೆ ಇಡುವಂತೆ ನಮ್ಮನ್ನು ಒತ್ತಾಯಿಸಿದಂತೆ ಈ ಪುಟ್ಟ ಹೆಜ್ಜೆಯನ್ನು ಮುಂದಿಡುತ್ತಿದ್ದೇವೆ. ಅದು ಸುಂದರ ಮತ್ತು ಅದ್ಭುತವಲ್ಲವೇ? ಎಂದು ಧರ್ಮಗುರುಗಳು ಹೇಳಿದರು.

ಸಂಘರ್ಷ ಪೀಡಿತ ದೇಶಗಳಲ್ಲಿ ಯುವಕರ ಪರಿಸ್ಥಿತಿಯ ಕುರಿತು ನಡೆದ ಚರ್ಚೆಯಲ್ಲಿ, ಮಹಾಧರ್ಮಾಧ್ಯಕ್ಷರಾದ ಅಲಾರ್ಕಾನ್ ರವರು, ಚಾಲ್ತಿಯಲ್ಲಿರುವ ಭಯದ ಸಂಸ್ಕೃತಿಯನ್ನು "ಭರವಸೆ, ಧೈರ್ಯ ಮತ್ತು ಪ್ರೀತಿ" ಯಿಂದ ಎದುರಿಸಬೇಕು ಎಂದು ಹೇಳಿದರು.

ಸಂವಾದದಲ್ಲಿ ಭಾಗವಹಿಸುವವರು ಯುವ ರಚನೆಯ ಸವಾಲುಗಳಿಗೆ ಪ್ರತಿಕ್ರಿಯೆಗಳನ್ನು ಗುರುತಿಸುವ ಮತ್ತು ಏಷ್ಯಾದಲ್ಲಿ ಯುವಜನರನ್ನು ರೂಪಿಸುವಲ್ಲಿ ಸಹಕಾರ ಮತ್ತು ಸಹಯೋಗಕ್ಕಾಗಿ ದೃಢವಾದ ಕ್ರಮಗಳನ್ನು ವಿವರಿಸುವ ಅಂತಿಮ ಹೇಳಿಕೆಯನ್ನು ರಚಿಸುವ ನಿರೀಕ್ಷೆಯಿದೆ.
 

11 ಫೆಬ್ರವರಿ 2025, 14:21