ಮಾನವ ಕಳ್ಳಸಾಗಣೆ: ಭರವಸೆ ಮತ್ತು ಗುಣಪಡಿಸುವಿಕೆಯ ಧ್ವನಿಗಳು ಮತ್ತು ಕಥೆಗಳು
ಫೆಡೆರಿಕೊ ಪಿಯಾನಾ
ಮಾನವ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ಪ್ರಾರ್ಥನೆ ಮತ್ತು ಜಾಗೃತಿ ದಿನವನ್ನು ಉತ್ತೇಜಿಸುವ ಸಂಘಗಳು ಆಯೋಜಿಸಿದ್ದ 'ಭರವಸೆ ಮತ್ತು ಗುಣಪಡಿಸುವಿಕೆಗಾಗಿ ಮನವಿ' ಎಂಬ ಕಾರ್ಯಕ್ರಮದ ಸಂದರ್ಭದಲ್ಲಿ ಫೆಬ್ರವರಿ 6ರ ಮಧ್ಯಾಹ್ನ ಮಾನವ ಕಳ್ಳಸಾಗಣೆಯನ್ನು ಅಳಿಸಿಹಾಕಲು ಪ್ರಯತ್ನಿಸುವ ಧ್ವನಿಗಳು, ಕಥೆಗಳು ಮತ್ತು ಸಾಕ್ಷ್ಯಗಳನ್ನು ಹಂಚಿಕೊಳ್ಳಲಾಯಿತು. ಈ ವಿದ್ಯಮಾನವು ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಫೆಬ್ರವರಿ 8 ರಂದು ಇದನ್ನು ಆಚರಿಸಲಾಗುತ್ತದೆ.
ಒಟ್ಟಾಗಿ ಕೆಲಸ ಮಾಡುವುದು
ರೋಮ್‌ನಲ್ಲಿರುವ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನ ಜಿಯೋವಾನಿ ಪಾವೊಲೊ II ಸಭಾಂಗಣದಲ್ಲಿ, ಮಾನವ ಕಳ್ಳಸಾಗಣೆ ವಿರುದ್ಧದ ಪವಿತ್ರ ಜೀವನದ ಅಂತರರಾಷ್ಟ್ರೀಯ ಜಾಲವಾದ ತಲಿತ ಕುಮ್‌ನ ಅಂತರರಾಷ್ಟ್ರೀಯ ಸಂಯೋಜಕಿ ಸಿಸ್ಟರ್ ಅಬ್ಬಿ ಅವೆಲಿನೊರವರು ಸಭೆಯನ್ನು ಉದ್ಘಾಟಿಸಿದರು - ಇತರರ ಜೀವನವನ್ನು ಶೋಷಿಸುವವರ ವಿರುದ್ಧ ಹೋರಾಡಲು ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು, ಇದು ದುಃಖ ಮತ್ತು ಸಾವಿಗೆ ಕಾರಣವಾಗುತ್ತದೆ: “ವಿವಿಧ ಎನ್‌ಜಿಒಗಳು, ಸಂಘಗಳು ಮತ್ತು ಸಭೆಗಳ ನಡುವೆ ಸಂಪರ್ಕವಿಲ್ಲದೆ, ನಾವು ನಮ್ಮ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಒಟ್ಟಾಗಿ ನಾವು ಬದುಕುಳಿದವರಿಗೆ ಸಹಾಯ ಮಾಡಬೇಕು, ಮೂವರು ಸಂತ್ರಸ್ತರುಗಳಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆದರೆ ಒಳಗೊಂಡಿರುವ ಮಹಿಳೆಯರ ಸಂಖ್ಯೆ ತುಂಬಾ ಹೆಚ್ಚಾಗಿದೆ.”
ಅದೃಶ್ಯ ಜಾಲಗಳ ವಿರುದ್ಧ ಹೋರಾಡುವುದು
ಮಾನವ ಕಳ್ಳಸಾಗಣೆ, ಮಾನವ ಘನತೆಯನ್ನು ವಿರೂಪಗೊಳಿಸುತ್ತದೆ, ದುಃಖ ಮತ್ತು ದಬ್ಬಾಳಿಕೆಯನ್ನು ತರುತ್ತದೆ ಎಂದು ಕಾರ್ಡಿನಲ್ ಮೈಕೆಲ್ ಕ್ಜೆರ್ನಿರವರು ಒತ್ತಿ ಹೇಳಿದರು. ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ತಮ್ಮ ಭಾಷಣಾ-ಸಂದೇಶದಲ್ಲಿ, ಇಂತಹ ಹಾನಿಕಾರಕ ಅಪರಾಧಗಳನ್ನು ಮಾಡುವವರು "ಅದೃಶ್ಯವಾಗಿರುವ ಜಾಲಗಳ ಭಾಗವಾಗಿದ್ದಾರೆ” ಅವುಗಳ ವಿರುದ್ಧ ಹೋರಾಡಲು, ನಾವು ಈ ರೀತಿಯ ಗುಲಾಮಗಿರಿಯನ್ನು ಗುರುತಿಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಈ ಒಳಿತಿನ ಕಾರ್ಯಕ್ಕೆ ಕಾರಣವಾಗುವ ಹಾಗೂ ಈ ಮಾರ್ಗವನ್ನು ಅನುಸರಿಸುವ ಎಲ್ಲರನ್ನು ನಾನು ನಿಜವಾಗಿಯೂ ಹೃದಯದಿಂದ ಆಶೀರ್ವದಿಸುತ್ತೇನೆ.
ಪುನರ್ಜನ್ಮದ ಕಥೆ
ಫೋಗಿಯಾದ ಬಖಿತಾ ಸಾಮಾಜಿಕ-ಶೈಕ್ಷಣಿಕ ಕೇಂದ್ರದ ಕೆಲವು ವಿದ್ಯಾರ್ಥಿಗಳ ಪ್ರದರ್ಶನದೊಂದಿಗೆ, ಇಟಾಲಿಯದ ಪ್ರಜೆಯಾದ ಸುಡಾನ್ ಮಹಿಳೆ ಸಂತ ಜೋಸೆಫೀನ್ ಬಖಿತಾರವರ ಜೀವನದ ದೃಶ್ಯವನ್ನು ಪ್ರಸ್ತುತಪಡಿಸಿದರು, ಇವರು ಅರಬ್ ಗುಲಾಮ ವ್ಯಾಪಾರಿಗಳಿಂದ ಬಾಲ್ಯದಲ್ಲಿ ಅಪಹರಿಸಲ್ಪಟ್ಟು, ನಿಂದಿಸಲ್ಪಟ್ಟರು. ಜನರಲ್ ವರ್ಡೆ ಮತ್ತು ರೋಮ್‌ನ ಏಂಜಲ್ಸ್‌ನ ಗಾನವೃಂದವು ಪ್ರದರ್ಶಿಸಿದ ಹೃದಯಸ್ಪರ್ಶಿ ಹಾಡುಗಳು ಮತ್ತು ಡೇನಿಯಲಾ ಕ್ರೌಸ್ ರವರ ನಿರೂಪಣಾ ನೃತ್ಯದೊಂದಿಗೆ, ಈ ಕಾರ್ಯಕ್ರಮವು, ಹಿಂಸಾಚಾರದಿಂದ ಬದುಕುಳಿದ ಹಲವಾರು ಸಂತ್ರಸ್ತರ ಸಾಕ್ಷ್ಯಗಳೊಂದಿಗೆ ಅದರ ಅಭಿವ್ಯಕ್ತಿಶೀಲ ಉತ್ತುಂಗವನ್ನು ತಲುಪಿತು.
ಪೌಲಿನ್: "ಈಗ ನಾನು ನಿಜವಾಗಿಯೂ ಸ್ವತಂತ್ರಳಾಗಿದ್ದೇನೆ"
"ಹದಿನಾಲ್ಕು ವರ್ಷಗಳ ಹಿಂದೆ, ನಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಮತ್ತು ನನ್ನ ತಂದೆ ನನ್ನನ್ನು ಒಡೆದರು," ಎಂದು ಕೀನ್ಯಾದ ಹುಡುಗಿ ಪೌಲಿನ್ ರವರು ಹೇಳುತ್ತಾರೆ. "ತಲಿತ ಕುಮ್ ಸಹೋದರಿಯರ ಬೆಂಬಲದಿಂದಾಗಿ ನಾನು ಐದು ವರ್ಷಗಳ ಹಿಂದೆ ಪುನರ್ಜನ್ಮ ಪಡೆದೆ, ಮತ್ತು ಈಗ ಅವರೊಂದಿಗೆ, ರಕ್ಷಿಸಬೇಕಾದ ಇತರ ಮಹಿಳೆಯರಿಗೆ ಸಹಾಯ ಮಾಡಲು ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಈ ಒಗ್ಗಟ್ಟಿನ ಜಾಲದ ಭಾಗವಾಗುವುದು ಎಂದರೆ ನಿಜವಾಗಿಯೂ ಸ್ವತಂತ್ರರಾಗಿರುವುದು."
ಕೊಲಂಬಿಯ ಮೂಲದ ಮತ್ತೊಬ್ಬ ಹುಡುಗಿ, ನಾನು ಬದುಕುಳಿದವಳು, ನಾನು ಸೋಲನುಭವಿಸದಿದ್ದರೂ ಅತಿಯಾದ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಒಪ್ಪಿಕೊಂಡಾಗ ಪ್ರೇಕ್ಷಕರ ಹೃದಯಗಳು ಕಂಪಿಸಿದವು. ನಾನು ಅನುಭವಿಸಿದ ದೌರ್ಜನ್ಯದ ನಂತರ, ನ್ಯೂಯಾರ್ಕ್‌ನ ಬೀದಿಗಳಲ್ಲಿ ನನ್ನ ದೇಹವನ್ನು ಮಾರಲು ಒತ್ತಾಯಿಸಲಾಯಿತು, ಆದರೆ ಈಗ ನಾನು ಆ ನೋವನ್ನು ಲೆಕ್ಕಿಸದೆ ನನ್ನ ಜೀವನವನ್ನು ಮರಳಿ ಪಡೆದಿದ್ದೇನೆ. ಆ ಕ್ಷಣದಿಂದ, ಅವರು ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಡಲು ಮಾತ್ರವಲ್ಲದೆ ದೌರ್ಜನ್ಯ ಮತ್ತು ಹಿಂಸೆಯ ಎಲ್ಲಾ ಸಂತ್ರಸ್ತರನ್ನು ಬೆಂಬಲಿಸಲು ನಿರ್ಧರಿಸಿದರು.
ವೂಪಿ ಗೋಲ್ಡ್‌ಬರ್ಗ್: "ಸಹೋದರಿಯರು ಮುಂಚೂಣಿಯಲ್ಲಿದ್ದಾರೆ: ಶಕ್ತಿಯ ಅಸಾಧಾರಣ ಮೂಲ"
ಪ್ರಶಸ್ತಿ ವಿಜೇತ ನಟಿ ವೂಪಿ ಗೋಲ್ಡ್‌ಬರ್ಗ್ ರವರ ಹೃದಯಸ್ಪರ್ಶಿ ದೃಶ್ಯ ಸಂದೇಶವನ್ನು ಸಹ ಹಂಚಿಕೊಳ್ಳಲಾಗಿದೆ, ಈಗ ತಲಿತ ಕುಮ್ ರವರ ಭರವಸೆಯ ರಾಯಭಾರಿಯಾಗಿದ್ದಾರೆ. ಇದರಲ್ಲಿ, ಮಾನವ ಕಳ್ಳಸಾಗಣೆ ವಿಶ್ವಾದ್ಯಂತ 30 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸಿದ್ದಾರೆ, ಅವರಲ್ಲಿ 12 ಮಿಲಿಯನ್ ಮಕ್ಕಳು.