MAP

TOPSHOT-LEBANON-ISRAEL-PALESTINIAN-CONFLICT TOPSHOT-LEBANON-ISRAEL-PALESTINIAN-CONFLICT 

ಅವಶೇಷಗಳ ನಡುವೆ ಭರವಸೆ: ನೆರವಿನ ಅಗತ್ಯವಿರುವ ಧರ್ಮಸಭೆಗಳಿಗೆ ಸೇವೆ ಸಲ್ಲಿಸಿದ ಮೂರು ದಶಕಗಳ ಚಿಂತನೆಗಳು

ನೆರವಿನ ಅಗತ್ಯತೆಯುಳ್ಳ ʻಯುಕೆಯ ಏಡ್ ಟು ದಿ ಚರ್ಚ್‌ನʼ ಮಾಜಿ ನಿರ್ದೇಶಕರು, ವಿಶ್ವಾದ್ಯಂತ ಕಿರುಕುಳಕ್ಕೊಳಗಾದ ಕ್ರೈಸ್ತರಿಗೆ ಮೂರು ದಶಕಗಳ ಸೇವೆಯಲ್ಲಿ ಅವರು ಎದುರಿಸಿದ ಭರವಸೆಯ ಕಥೆಗಳನ್ನು ವಿವರಿಸುತ್ತಾರೆ.

ನೆವಿಲ್ಲೆ ಕಿರ್ಕೆ-ಸ್ಮಿತ್

ಈ ಭರವಸೆಯ ಜೂಬಿಲಿ ವರ್ಷದಲ್ಲಿ, ಕ್ರೈಸ್ತರ ಭರವಸೆ ಏನು ಮತ್ತು ಅದನ್ನು ಎಲ್ಲಿ ಕಂಡುಹಿಡಿಯಬಹುದು ಎಂದು ನಾವು ಆಶ್ಚರ್ಯ ಪಡಬಹುದು. ಇಂದಿನ ಜಗತ್ತಿನಲ್ಲಿ ಘರ್ಷಣೆಗಳು ಮತ್ತು ಸಂಕಟಗಳ ಬಗ್ಗೆ ಯೋಚಿಸುವಾಗ, ಭರವಸೆಯು ಹೆಚ್ಚಾಗಿ ತ್ಯಜಿಸಲ್ಪಟ್ಟ ಮತ್ತು ಶೂನ್ಯವೆಂದು ತೋರುವ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ ಎಂದು ಹೇಳುವುದು ಬಹುತೇಕ ವಿರುದ್ಧವಾಗಿದೆ.

30 ವರ್ಷಗಳಿಗೂ ಹೆಚ್ಚು ಕಾಲ, ನಾನು ನೆರವಿನ ಅಗತ್ಯವುಳ್ಳ ಯುಕೆಯಲ್ಲಿರುವ ಧರ್ಮಸಭೆಗೆ, ನೆರವಿನ ರಾಷ್ಟ್ರೀಯ ನಿರ್ದೇಶಕನಾಗಿದ್ದೆ ಮತ್ತು ಕಿರುಕುಳಕ್ಕೊಳಗಾದ, ತುಳಿತಕ್ಕೊಳಗಾದ ಮತ್ತು ನಿರ್ಗತಿಕ ಕ್ರೈಸ್ತರಿಗೆ ಸಹಾಯ ಮಾಡುವ ಈ ಅಂತರರಾಷ್ಟ್ರೀಯ ಕಥೋಲಿಕ ದತ್ತಿ ಸಂಸ್ಥೆಯಲ್ಲಿನ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಕ್ರೈಸ್ತರು ತಮ್ಮ ವಿಶ್ವಾಸಕ್ಕಾಗಿ ಬಳಲುತ್ತಿದ್ದ ಅಥವಾ ನರಳುತ್ತಿದ್ದ ಅನೇಕ ಸ್ಥಳಗಳಿಗೆ ಪ್ರಯಾಣಿಸುವ ಸೌಭಾಗ್ಯ ಮತ್ತು ಸವಾಲು ನನಗೆ ಸಿಕ್ಕಿತು.

ಕಿರುಕುಳ ಮತ್ತು ದಬ್ಬಾಳಿಕೆ ಇನ್ನೂ ಹೋಗಿಲ್ಲ. ನಿಜಕ್ಕೂ, ನೀವು ಉತ್ತರ ನೈಜೀರಿಯಾದಂತಹ ಸ್ಥಳವನ್ನು ನೋಡಬೇಕು. ಪ್ರಪಂಚದ ಬೇರೆಡೆಗಿಂತ ಅಲ್ಲಿನ ಕ್ರೈಸ್ತರ ಮೇಲೆ ಹೆಚ್ಚಿನ ಕಿರುಕುಳ ನಡೆಯುತ್ತಿದೆ. ಕೇವಲ 12 ವರ್ಷಗಳಲ್ಲಿ, 43,000 ಕ್ರೈಸ್ತರನ್ನು ಮತಾಂಧ ಭಯೋತ್ಪಾದಕರು ಕೊಂದಿದ್ದಾರೆ. ಇತರ ಸಮುದಾಯಗಳು ಸಹ ಬಳಲುತ್ತಿದ್ದರೂ, ಕ್ರೈಸ್ತರನ್ನು ಮಾತ್ರ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ, 17,500ಕ್ಕೂ ಹೆಚ್ಚು ಧರ್ಮಸಭೆಗಳ ಮೇಲೆ ದಾಳಿ ಮಾಡಲಾಗಿದೆ. 2,000ಕ್ಕೂ ಹೆಚ್ಚು ಕ್ರೈಸ್ತ ಧರ್ಮದ ಶಾಲೆಗಳ ಮೇಲೆ ದಾಳಿ ಮಾಡಲಾಗಿದೆ ಮತ್ತು 4 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.

ಆದರೂ, ಆಗಾಗ್ಗೆ ನಿರಾಶ್ರಿತರಲ್ಲಿ ದುಃಖ ಮತ್ತು ಹಿಂಸೆಯ ಅವಶೇಷಗಳಲ್ಲಿ, ಆ ಭರವಸೆ ಕಂಡುಬರುತ್ತದೆ; ನಂಬಿಗಸ್ತರಲ್ಲಿ ಮತ್ತು ಕ್ರೈಸ್ತರು ಹಾಗೂ ಇತರರು ಒದಗಿಸುವ ದಾನದಲ್ಲಿ. ಆಗಾಗ್ಗೆ, ಯಾತನೆಯ ಸಮಯದ ನಂತರ ಯಾಜಕತ್ವದ ಮತ್ತು ಧಾರ್ಮಿಕ ಜೀವನಕ್ಕೆ ದೈವಕರೆಗಳು ಉದ್ಭವಿಸುತ್ತವೆ.

14 ಫೆಬ್ರವರಿ 2025, 13:11