MAP

Archivio privato di suor Alina Petrauskajte Archivio privato di suor Alina Petrauskajte 

ಉಕ್ರೇನ್‌ನಲ್ಲಿ ಬಳಲುತ್ತಿರುವ ಧರ್ಮಸಭೆಗೆ ಧ್ವನಿಯಾಗಿರುವುದು

ಯುದ್ಧ ಪ್ರಾರಂಭವಾದಾಗಿನಿಂದ, ಕಥೋಲಿಕ ಮಾಧ್ಯಮ ಕೇಂದ್ರವು ಉಕ್ರೇನ್‌ನಲ್ಲಿ ಧರ್ಮಸಭೆಯ ಚಟುವಟಿಕೆಗಳ ಬಗ್ಗೆ ವರದಿ ಮಾಡಿದೆ ಮತ್ತು ಯುದ್ಧದ ದುರಂತವನ್ನು ಅನುಭವಿಸುತ್ತಿರುವ ಜನರಿಗೆ ಆಧ್ಯಾತ್ಮಿಕ ಸಹಾಯವನ್ನು ನೀಡಿದೆ. ಕೇಂದ್ರದ ಪೋರ್ಟಲ್‌ನ ನಿರ್ದೇಶಕಿ ಸಿಸ್ಟರ್ ಅಲೀನಾ ಪೆಟ್ರಾಸ್ಕೈಟ್ರವರು, ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಂತಹ, ತಾಯಂದಿರು ಮತ್ತು ಹೆಂಡತಿಯರ ದುಃಖವನ್ನು ನಿವಾರಿಸಲು ಮತ್ತು ಧರ್ಮಸಭೆಗೆ ಮರಳಲು ಬಯಸುವವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಕುರಿತು ಮಾತನಾಡುತ್ತಾರೆ.

ವೊಜ್ಸಿಕ್ ರೋಗಾಸಿನ್ ಅವರಿಂದ

ಸಿಸ್ಟರ್ ಅಲೀನಾ ಅಲೀನಾ ಪೆಟ್ರಾಸ್ಕೈಟ್ ರವರು ಮಾತೆಮೇರಿಯ ಪವಿತ್ರ ಹೃದಯದ ಲಿಟಲ್ ಸಿಸ್ಟರ್ಸ್ ಸಭೆಗೆ (ಹೊನೊರಾಟ್ಕಿ) ಸೇರಿದವರು. ಅವರು 2014 ರಿಂದ ಕಥೋಲಿಕ ಮಾಧ್ಯಮದ ಕೇಂದ್ರದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಕಳೆದ 5 ವರ್ಷಗಳಿಂದ ಉಕ್ರೇನ್‌ನಲ್ಲಿರುವ ರೋಮನ್ ಕಥೋಲಿಕ ಧರ್ಮಸಭೆಗಾಗಿ rkc.org.ua ವೆಬ್ ಪೋರ್ಟಲ್ ಮತ್ತು ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತಿದ್ದಾರೆ.

ನಿಷ್ಠಾವಂತರಿಗೆ ಮಾಹಿತಿ ಮತ್ತು ನೆರವು
ಪೂರ್ಣ ಪ್ರಮಾಣದ ಯುದ್ಧದ ಸಮಯದಲ್ಲಿ, ಉಕ್ರೇನ್ ಕಳೆದ ಮೂರು ವರ್ಷಗಳಿಂದ ಬಳಲುತ್ತಿದೆ, ಯುದ್ಧದ ಸಮಯದಲ್ಲಿ ಈ ಪೋರ್ಟಲ್ ಭಕ್ತವಿಶ್ವಾಸಿಗಳನ್ನು ತಲುಪಲು ಬಹಳ ಮುಖ್ಯವಾದ ಸಾಧನವಾಗಿದೆ.

"ನಮ್ಮ ಧರ್ಮಸಭೆಯ ಧರ್ಮಾಧ್ಯಕ್ಷರುಗಳ ಧ್ವನಿಯನ್ನು ರವಾನಿಸಲು ನಾವು ಬಯಸುತ್ತೇವೆ, ಜೊತೆಗೆ ಶುಭಸಂದೇಶವನ್ನು ಸಾರಲು ಮತ್ತು ನೆರವಿನ ಅಗತ್ಯವಿರುವವರನ್ನು ತಲುಪಲು ಬಯಸುತ್ತೇವೆ" ಎಂದು ಸಿಸ್ಟರ್ ಅಲೀನಾರವರು ಹೇಳಿದರು.

ಸಿಸ್ಟರ್ ಅಲೀನಾರವರ ಜೊತೆಗೆ, ಪೋರ್ಟಲ್‌ನ ಮಾಹಿತಿ ಸೇವೆಗೆ ಸಹಾಯ ಮಾಡುವ ಇಬ್ಬರು ಸಹಯೋಗಿಗಳಿದ್ದಾರೆ: ಮಾತೆಮೇರಿಯ ಪ್ರಸಿದ್ಧ ಪುಣ್ಯಕ್ಷೇತ್ರವಿರುವ ಸ್ಥಳವಾದ ಬರ್ಡಿಚಿವ್‌ನ ಸಂಪಾದಕ ಮ್ಯಾಕ್ಸಿಮ್ ಝೆಲೆಜ್ನಿಟ್ಸ್ಕಿರವರು ಮತ್ತು ವಿಶೇಷವಾಗಿ ಟ್ರಾನ್ಸ್‌ಕಾರ್ಪಥಿಯ ಬಗ್ಗೆ ಮಾಹಿತಿಯನ್ನು ಒದಗಿಸುವ ಟೆಟಿಯಾನಾ ರೆಶೆಟರ್ ರವರು.

ಈ ಪೋರ್ಟಲ್ ವಾರದ ಏಳು ದಿನಗಳು ಕಾರ್ಯನಿರ್ವಹಿಸುತ್ತದೆ. ದಿನವಿಡೀ ಒಂಬತ್ತು ಸುದ್ದಿಗಳನ್ನು ಪ್ರಕಟಿಸಲಾಗುತ್ತದೆ, ಸಾಮಾಜಿಕ ಮಾಧ್ಯಮದಲ್ಲಿಯೂ ಸಹ. ಚಂದಾದಾರರು ಸಾಮಾಜಿಕ ಮಾಧ್ಯಮ ಜಾಲಗಳ ಮೂಲಕ ದೈನಂದಿನ ಲೇಖನಗಳನ್ನು ಸ್ವೀಕರಿಸುತ್ತಾರೆ.

ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ನಿವಾರಿಸುವುದು
ವೆಬ್ ಪೋರ್ಟಲ್ ಗಾಯಾಳುಗಳಿಗೆ ಬೆಂಬಲವನ್ನು ನೀಡುತ್ತದೆ. ನಾವು ಯುದ್ಧಭೂಮಿಯಲ್ಲಿ ಮಡಿದ ಸೈನಿಕರ ತಾಯಂದಿರು ಮತ್ತು ವಿಧವೆಯರಿಗಾಗಿ, ಭೇಟಿಯಾಗುವ ಮಾಹಿತಿಯನ್ನು ಒದಗಿಸುತ್ತೇವೆ. ಅವರ ಸಾಕ್ಷಿಯನ್ನು ಹಂಚಿಕೊಳ್ಳಲು ನಾವು ಸಭೆಗಳಲ್ಲಿ ಭಾಗವಹಿಸುವವರನ್ನು ಸಂದರ್ಶಿಸುತ್ತೇವೆ. "ಈ ಭೇಟಿಗಳು ಯುದ್ಧದಿಂದ ಜನರಿಗೆ ಉಂಟಾಗುವ ಅಥವಾ ಒಡ್ಡಿದ ದೊಡ್ಡ ನಷ್ಟದ ದುಃಖವನ್ನು ನಿವಾರಿಸಲು ಸಹಾಯ ಮಾಡುತ್ತವೆ, ಏಕೆಂದರೆ ಅವರಿಗೆ ಬೆಂಬಲ ನೀಡುವ ಸಮುದಾಯದ ಉಪಸ್ಥಿತಿ ಅವರೊಂದಿಗಿದೆ ಎಂದು ಅವರಿಗೆ ಅರಿವಾಗಿದೆ. ದುಃಖದಿಂದ ಬಳಲುತ್ತಿರುವ ಜನರಿಗೆ ನಾವು ಸಹಾಯ ಮಾಡುವ ವಿಧಾನಗಳಲ್ಲಿ ಇದು ಒಂದಾಗಿದೆ" ಎಂದು ಸಿಸ್ಟರ್ ಅಲೀನಾರವರು ವಿವರಿಸಿದರು.

ಸಂಪಾದಕರು ಯುದ್ಧದಲ್ಲಿರುವ ಸೈನಿಕರು ಮತ್ತು ಧರ್ಮಗುರುಗಳಿಂದ ಸಾಕ್ಷ್ಯಗಳನ್ನು ಕೇಳುತ್ತಾರೆ, ತೀವ್ರ ಸಂದರ್ಭಗಳಲ್ಲಿ, ಯುದ್ಧದಲ್ಲಿ ಅದ್ಭುತವಾಗಿ ಬದುಕುಳಿದ ಜನರ ಅನೇಕ ಖಾತೆಗಳಿವೆ, ಅವರು ದೈವಿಕ ಪರಾಮರಿಕೆಯ ಕ್ರಿಯೆಯನ್ನು ಅನುಭವಿಸುತ್ತಾರೆ ಎಂಬುದನ್ನು ಕಾಣಬಹುದಾಗಿದೆ. ನಮ್ಮ ವಿಶ್ವಾಸವನ್ನು ಬಲಪಡಿಸಲು ಮತ್ತು ದೇವರು ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತೋರಿಸಲು ನಾವು ಈ ಸಾಕ್ಷ್ಯಗಳನ್ನು ಒದಗಿಸುತ್ತೇವೆ" ಎಂದು ಸಿಸ್ಟರ್ ಅಲೀನಾರವರು ಹೇಳಿದರು.

ಯುದ್ಧದ ಸಮಯದಲ್ಲಿ ನಾನು ದೇವರನ್ನು ಹೆಚ್ಚು ನಂಬಿದ್ದೆ
ಎಲ್ಲಾ ಉಕ್ರೇನಿಯನ್ನರಂತೆ, ಸಿಸ್ಟರ್ ಅಲೀನಾರವರ ಜೀವವು ನಿರಂತರವಾಗಿ ಅಪಾಯದಲ್ಲಿದೆ. ರಷ್ಯಾದ ಬಾಂಬ್‌ಗಳು ಪ್ರತಿದಿನ ದೇಶದ ವಿವಿಧ ಭಾಗಗಳಲ್ಲಿ ಸಾವು ಮತ್ತು ವಿನಾಶದ ಬೀಜಗಳನ್ನು ಬಿತ್ತುತ್ತಿವೆ.

ಯುದ್ಧವು ತನ್ನ ಸ್ವಂತ ಜೀವನದ ಬಗ್ಗೆ ತನ್ನ ತಿಳುವಳಿಕೆಯನ್ನು ಬದಲಾಯಿಸಿದೆ ಎಂದು ಸಿಸ್ಟರ್ ಅಲೀನಾರವರು ಒಪ್ಪಿಕೊಂಡಿದ್ದಾರೆ.

"ಯುದ್ಧದ ಆರಂಭದಲ್ಲಿ ನಾನು ದೇವಾಲಯಕ್ಕೆ ಹೋಗಿ ಪರಮಪ್ರಸಾದವನ್ನು ಸ್ವೀಕರಿಸಲು ಸಾಧ್ಯವಾಗದ ಒಂದು ಸಮಯ ನನಗೆ ನೆನಪಿದೆ," ಎಂದು ಅವರು ಹೇಳಿದರು. "ನಾನು ಪವಿತ್ರ ದಿವ್ಯಬಲಿಪೂಜೆಯ ಪ್ರಸಾರವನ್ನು ವೀಕ್ಷಿಸುತ್ತಿದ್ದಾಗ, ಪವಿತ್ರ ದಿವ್ಯಬಲಿಪೂಜೆಯ ಪರಮಪ್ರಸಾದ ರೂಪಾಂತರದ ಸಮಯದಲ್ಲಿ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಫೋಟಗಳ ಶಬ್ದ ಕೇಳಿಸಿತು ಆ ಕ್ಷಣದಲ್ಲಿ, ಬಹುಶಃ ಇದೇ, ನನ್ನ ಕೊನೆಯ ದಿವ್ಯ-ಬಲಿಪೂಜೆಯಾಗಿರಬಹುದು ಎಂದು ನಾನು ಭಾವಿಸಿದೆ. ಒಂದು ಕ್ಷಿಪಣಿ ಈ ಮನೆಯನ್ನು ಮಾತ್ರ ಅಪ್ಪಳಿಸಬಹುದು. ಅದಾದ ನಂತರ ಎಲ್ಲವೂ ದೇವರ ಕೈಯಲ್ಲಿದೆ ಎಂದು ನನಗೆ ಅನಿಸಿತು, ಅಂದಿನಿಂದ ನಾನು ಇನ್ನು ಮುಂದೆ ಸಾವಿಗೆ ಹೆದರುವುದಿಲ್ಲ. ಆದಾಗ್ಯೂ, ದೇವರು ನಾನು ಈ ಲೋಕದಲ್ಲಿ ತನ್ನ ಸೇವೆ ಮಾಡಲು ಇರಬೇಕೆಂದು ಬಯಸುತ್ತಾನೆ ಎಂಬುದು ಸ್ಪಷ್ಟ ಪಡಿಸಿದ್ದಾರೆ. ಆ ಘಟನೆಯು ದೇವರಲ್ಲಿ ನನಗೆ ಹೆಚ್ಚಿನ ನಂಬಿಕೆಯನ್ನು ಮೂಡಿಸಿತು.

ಧರ್ಮಸಭೆಯ ಬಾಗಿಲು ತೆರೆಯುವುದು
ಕಥೋಲಿಕ ಮಾಧ್ಯಮ ಕೇಂದ್ರದ ಚಟುವಟಿಕೆಗಳು ಕಥೋಲಿಕ ಧರ್ಮಸಭೆಗಳನ್ನು ಸಮೀಪಿಸಲು ಬಯಸುವ ಜನರಿಗೆ ಒಂದು ದ್ವಾರದಂತೆ ಕಾರ್ಯನಿರ್ವಹಿಸುತ್ತವೆ.

"ನಾವು ಸಂಸ್ಕಾರಗಳನ್ನು ಸ್ವೀಕರಿಸಲು ಬಯಸುವ ಜನರಿಂದ ಮಾಹಿತಿ ಮತ್ತು ಪಠ್ಯ ಸಂದೇಶಗಳನ್ನು ಸ್ವೀಕರಿಸುತ್ತೇವೆ, ಉದಾಹರಣೆಗೆ, ದೀಕ್ಷಾಸ್ನಾನದ ನಂತರ ದೇವಾಲಯಕ್ಕೆ ಹೋಗದವರು ಮತ್ತು ಈಗ ದೇವರೊಂದಿಗೆ ಸಮನ್ವಯಗೊಳ್ಳಲು ಹಿಂತಿರುಗಲು ಬಯಸುವವರು. "ಇತರರು ದೀಕ್ಷಾಸ್ನಾನ ಸ್ವೀಕರಿಸಲು ತಾವು, ಎಲ್ಲಿ ಮತ್ತು ಹೇಗೆ ತಯಾರಿ ನಡೆಸಬಹುದು ಎಂದು ಕೇಳುತ್ತಾರೆ. ನಾವು ಅವರನ್ನು ಧರ್ಮಕೇಂದ್ರಗಳು ಮತ್ತು ಧರ್ಮಗುರುಗಳೊಂದಿಗೆ ಸಂಪರ್ಕಿಸುತ್ತೇವೆ," ಎಂದು ಸಿಸ್ಟರ್ ಅಲೀನಾರವರು ಹೇಳಿದರು.
 

11 ಫೆಬ್ರವರಿ 2025, 14:26