ಸಂಪತ್ತು ಮತ್ತು ಬಡತನವನ್ನು ಮೀರಿದ ಭದ್ರತೆಯನ್ನು ಕಂಡುಕೊಳ್ಳುವುದು
ಮರಿಯನ್ ನ್ಗುಯೆನ್, OSB
“ಬಡವರೇ ನೀವು ಭಾಗ್ಯವಂತರು; ದೇವರ ಸಾಮ್ರಾಜ್ಯ ನಿಮ್ಮದು, ಧನಿಕರೇ ನಿಮಗೆ ಧಿಕ್ಕಾರ” ಪ್ರಭುಯೇಸುವಿನ ಈ ಮಾತುಗಳು ನಮ್ಮ ನೈಸರ್ಗಿಕ ಪ್ರವೃತ್ತಿಗೆ ಹೊಂದಿಕೆಯಾಗುವುದಿಲ್ಲ. ನಮ್ಮ ಮಕ್ಕಳಿಗೆ ಊಟ ಮಾಡಲು, ಬಾಡಿಗೆ ಕಟ್ಟಲು ಅಥವಾ ದಿನಸಿ ಸಾಮಾನುಗಳನ್ನು ಪಾವತಿಸಲು ಕಷ್ಟಪಡುವಾಗ, ನಮ್ಮಲ್ಲಿ ಯಾರು, ನಮ್ಮನ್ನು ಧನ್ಯರೆಂದು ಪರಿಗಣಿಸುತ್ತಾರೆ? ನಾವು ಕೊನೆಯ ಬಾರಿಗೆ ದೊಡ್ಡದಾಗಿ, ಅಂದರೆ ಒಂದು ದೊಡ್ಡ ಮೊತ್ತದ ಹಣಕಾಸಿನ ಉಡುಗೊರೆಯನ್ನು ಪಡೆದಾಗ, ತಕ್ಷಣವೇ ಆತಂಕಗೊಂಡದ್ದು ಯಾವಾಗ? ಬಹತೇಕ ಜನರಿಗೆ, ಬಡತನ ಒಂದು ಶಾಪ ಮತ್ತು ಸಂಪತ್ತು ಒಂದು ವರ; ಅದೇ ಸಮಯದಲ್ಲಿ, ಅನೇಕರಿಗೆ ತಮ್ಮ ಗ್ರಹಿಕೆ, ಪ್ರಭುಯೇಸುವಿನ ಬೋಧನೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ತಿಳಿದಿಲ್ಲ. ಈ ವ್ಯತ್ಯಾಸವನ್ನು ನಾವು ಹೇಗೆ ಸಮನ್ವಯಗೊಳಿಸುವುದು?
ಕೆಲವೊಮ್ಮೆ, ನಮಗೆ ತಿಳಿಯದೆಯೇ, ನಾವು ದೇವರನ್ನು ನಮ್ಮ ಕೋರಿಕೆಗಳನ್ನು ನೇರವೇರಿಸುವ ಒಂದು ಸಾಧನವಾಗಿ ಪರಿಗಣಿಸುತ್ತೇವೆ. ನಾವು ಆತನ ಬೋಧನೆಯ ಮೇಲೆ ಹೆಚ್ಚು ಗಮನಹರಿಸುತ್ತೇವೆ, ಅದರಲ್ಲಿಯೂ ಈ ವಾಕ್ಯಗಳು, “ಕೇಳಿರಿ ನಿಮಗೆ ಕೊಡಲಾಗುವುದು, ಹುಡುಕಿರಿ, ನಿಮಗೆ ಸಿಗುವುದ, ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿದ ಪ್ರತಿಯೊಬ್ಬನಿಗೂ ಕೊಡಲಾಗುವುದು” ಆತನು ನಮ್ಮನ್ನು ಕೇಳಲು ಮತ್ತು ತಟ್ಟಲು ಪ್ರೋತ್ಸಾಹಿಸುತ್ತಾನೆ ಏಕೆಂದರೆ ಬಾಗಿಲು ತೆರೆಯಲ್ಪಡುತ್ತದೆ ಮತ್ತು ಪ್ರಾರ್ಥನೆಯಲ್ಲಿ ಕೋರಿಕೊಳ್ಳುವ ಪ್ರತಿಯೊಂದು ವಿನಂತಿಗಳಿಗೆ ಉತ್ತರಿಸಲಾಗುತ್ತದೆ. ಪ್ರಾರ್ಥನೆಯ ಮೂಲಕ ನಮ್ಮ ಅರ್ಜಿಗಳನ್ನು ತಂದೆದೇವರಿಗೆ ತಿಳಿಸಲು ಪ್ರಭುಯೇಸು ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಎಂಬುದು ನಿಜ. ಆದಾಗ್ಯೂ, ನಾವು ಬೆಳವಣಿಗೆಯಲ್ಲಿ "ಹಾಲು" ನಿಂದ "ಗಟ್ಟಿ ಆಹಾರ"ಕ್ಕೆ ಎಂದಿಗೂ ಚಲಿಸದೆ ಇದ್ದು, ಈ ಹಂತದಲ್ಲಿಯೇ ಉಳಿದರೆ ಸಮಸ್ಯೆಗಳು ಉದ್ಭವಿಸುತ್ತವೆ (1 ಕೊರಿಂ. 3:1-3). ನಮ್ಮ ಸ್ನೇಹವು ಇನ್ನೊಬ್ಬರಿಗೆ ಪ್ರಯೋಜನಕಾರಿ ಎಂಬ ಕಾರಣಕ್ಕಾಗಿ ಮಾತ್ರ ಉಳಿಯುವುದಾದರೆ, ಅಂತಹ ಸ್ನೇಹ ಎಷ್ಟು ಕಾಲ ಉಳಿಯುತ್ತದೆ? ಈ ಮನೋಭಾವದ ಅಪಾಯವನ್ನು ಸಂತ ಪೌಲರು ವಿವರಿಸುತ್ತಾನೆ, "ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ, ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ" (1 ಕೊರಿಂಥ 15:19). ಕ್ಲೇರ್ವಾಕ್ಸ್‌ನ ಸಂತ ಬರ್ನಾರ್ಡ್ ರವರು ತಮ್ಮ "ದೇವರ ಮೇಲಿನ ಪ್ರೀತಿ" ಎಂಬ ಗ್ರಂಥದಲ್ಲಿ ಈ ಮನೋಭಾವವನ್ನು ಎರಡನೇ ಹಂತವೆಂದು ಉಲ್ಲೇಖಿಸಿದ್ದಾರೆ: ನನ್ನ ಸ್ವಂತ ಹಿತದೃಷ್ಟಿಯಿಂದ ದೇವರನ್ನು ಪ್ರೀತಿಸುವುದು. ಬರ್ನಾರ್ಡ್ ರವರಿಗೆ, ಈ ಹಂತವನ್ನು ದಾಟುವುದು ಸಹಜ, ಆದರೆ ನಾವು ಈ ಹಂತದಲ್ಲೇ ಸಿಲುಕಿಕೊಂಡರೆ ಅದು ವಿನಾಶಕಾರಿಯಾಗುತ್ತದೆ ಏಕೆಂದರೆ ಅದು ನಮ್ಮ ಅಗತ್ಯತೆಗಳು ಮತ್ತು ಗ್ರಹಿಕೆಗಳಲ್ಲಿ ನಮ್ಮನ್ನು ಪ್ರತ್ಯೇಕವಾಗಿರಿಸುತ್ತದೆ ಎಂದು ಹೇಳುತ್ತಾರೆ.
ಹಾಗಾದರೆ ಯೇಸುವಿನ ಬೋಧನೆಯನ್ನು ಅರ್ಥಪೂರ್ಣಗೊಳಿಸುವ ಮನೋಭಾವ ಯಾವುದು? ಯೆರೆಮೀಯನು ಪ್ರತಿಕ್ರಿಯಿಸುತ್ತಾನೆ, "ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ. ಪ್ರಭುವಿನ ಧರ್ಮಶಾಸ್ತ್ರದಲ್ಲಿ ಹರ್ಷಗೊಳ್ಳುವವನಾರೋ-ಅವನೇ ಧನ್ಯನು! ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ ಧನ್ಯನು! ಎಂಬ ವಾಕ್ಯಗಳು ಕೀರ್ತನೆಗಾರನಿಂದ ದೃಢೀಕರಿಸಲ್ಪಟ್ಟವನು,” (ಯೆರೆಮೀಯ 17:7; ಕೀರ್ತನೆ 1:2). ಈ ವ್ಯಕ್ತಿಯು ತನ್ನ ಜೀವನದ ಎಲ್ಲಾ ಘಟನೆಗಳನ್ನು ದೇವರು ಆತನನ್ನು/ಆಕೆಯನ್ನು ಆಳವಾಗಿ ಪ್ರೀತಿಸುತ್ತಾನೆ ಎಂಬುದಕ್ಕೆ ಪುರಾವೆಯಾಗಿ ಅರ್ಥೈಸುತ್ತಾರೆ. ಸಂಪತ್ತನ್ನು ನೀಡಿದಾಗ, ಅದು ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ಒಬ್ಬರು ಅರ್ಥಮಾಡಿಕೊಳ್ಳುತ್ತಾರೆ. “ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು” (ಲೂಕ 12:48) ಎಂಬ ದೇವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಬಡತನವನ್ನು ಅನುಭವಿಸುವಾಗ, ಅದು ನಂಬಿಕೆ ಮತ್ತು ವಿಶ್ವಾಸದಲ್ಲಿ ಬೆಳೆಯಲು ಒಂದು ಅವಕಾಶವೆಂದು ಅರ್ಥೈಸುತ್ತಾರೆ. ಅಂತಹ ಅಗತ್ಯದ ಕ್ಷಣಗಳಲ್ಲಿ ದೇವರಿಗಾಗಿ ಹಂಬಲವು ಹೆಚ್ಚಾಗುತ್ತದೆ ಮತ್ತು ಕೀರ್ತನೆಗಾರನ ಮಾತುಗಳಿಗೆ ಹತ್ತಿರವಾಗುತ್ತದೆ, "ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ, ದಣಿದೆನ್ನ ಮನ ದೇವಾ, ಜೀವಂತ ದೇವನಿಗಾಗಿ ದಾಹದಿಂದಿದೆ" (ಕೀರ್ತನೆ 42:2). ಅಂತಹ ಮನೋಭಾವವನ್ನು ಬೆಳೆಸಿಕೊಳ್ಳುವ ವ್ಯಕ್ತಿಯು, ತನ್ನ ನಿಯಂತ್ರಣದ ಹೊರಗಿನ ವಿಷಯಗಳಿಂದ ದೂರ ಸರಿದು ಶಾಂತಿಯ ಸ್ಥಳಕ್ಕೆ ಸ್ಥಳಾಂತರಿಸುತ್ತಾನೆ ಮತ್ತು ಅದನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುವ ಹೃದಯಕ್ಕೆ ಹತ್ತಿರ ತರುತ್ತಾನೆ. ಅಂತಹ ವ್ಯಕ್ತಿಯು ಮರಳಿನ ಮೇಲೆ ಅಲ್ಲ, ಬಂಡೆಯ ಮೇಲೆ ಮನೆಯನ್ನು ನಿರ್ಮಿಸುತ್ತಾನೆ. ಹೌದು, ಅಂತಹ ನಂಬಿಕೆಯು ಬಿರುಗಾಳಿಗಳನ್ನು ತಡೆಯುವುದಿಲ್ಲ, ಆದರೆ ನಾವು ನಾಶವಾಗುವುದಿಲ್ಲ ಎಂದು ಅದು ಖಾತರಿ ಮಾಡುತ್ತದೆ, "ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ" ಎಂದು ಹೇಳಿದರು (ಯೋವಾನ್ನ 16:33).