ಕ್ರಿಯೆಯಲ್ಲಿ ವಿಶ್ವಾಸ: ಅಮೆರಿಕದ ನೆರವು ಕಡಿತದ ನಡುವೆಯೂ ನಿರಾಶ್ರಿತರೊಂದಿಗೆ ಜೆಆರ್‌ಎಸ್
ಲಿಂಡಾ ಬೋರ್ಡೋನಿ
"ಇಂದು ಒಂದು ಗುಂಪಿನಿಂದ ಘನತೆಯನ್ನು ಹಿಂತೆಗೆದುಕೊಳ್ಳುವುದು, ನಾಳೆ ನಮ್ಮೆಲ್ಲರಿಗೂ ಅದೇ ರೀತಿಯ ಕ್ರಿಯೆಯು ಉದ್ಭವಾಗಲು ಕಾರಣವಾಗಬಹುದು" ಎಂಬುದು ವ್ಯಾಟಿಕನ್ ಆಕಾಶವಾಣಿ ನೀಡಿದ ಸಂದರ್ಶನದಲ್ಲಿ ಸಹೋದರ ಮೈಕೆಲ್ ಶಾಫ್‌ರವರ ಅಭಿಪ್ರಾಯಗಳಲ್ಲಿ ಒಂದಾಗಿದೆ. ಹೊಸ ಅಧ್ಯಕ್ಷರ ಅಧಿಕಾರ ಸ್ವೀಕಾರದ ನಂತರ ಅಮೆರಿಕ ಸರ್ಕಾರದ ವಿದೇಶಿ ನೆರವು ನಿಧಿಯನ್ನು ಹಠಾತ್ತನೆ ಮತ್ತು ತಕ್ಷಣ ನಿಲ್ಲಿಸುವುದರ ಕುರಿತು ಹಾಗೂ ಈ ನಿರ್ಧಾರವು ಬಹುಪಕ್ಷೀಯ ಸಹಕಾರದಿಂದ ನಾಟಕೀಯ ಬದಲಾವಣೆಯನ್ನು ಹೇಗೆ ಎತ್ತಿ ತೋರಿಸುತ್ತದೆ, ಮೌಲ್ಯಾಧಾರಿತ ವಿಶ್ವ ಕ್ರಮದ ಸವೆತದ ಬಗ್ಗೆ ಕಳವಳ ವ್ಯಕ್ತಪಡಿಸುವ ಬಗ್ಗೆ ಜೆಸ್ವಿಟ್ ನಿರಾಶ್ರಿತರ ಸೇವೆಯ (ಜೆಆರ್‌ಎಸ್) ಅಂತರರಾಷ್ಟ್ರೀಯ ನಿರ್ದೇಶಕರು ಪ್ರತಿಕ್ರಿಯಿಸುತ್ತಿದ್ದರು.
ಎಲ್ಲಾ ವಿದೇಶಿ ನೆರವು ನಿಧಿಯನ್ನು ಸ್ಥಗಿತಗೊಳಿಸುವ ಅಮೆರಿಕ ಸರ್ಕಾರದ ನಿರ್ಧಾರವನ್ನು "ಬಹಳ ಹಠಾತ್ ತೊಂದರೆ" ಎಂದು ವಿವರಿಸಿದ ಶಾಫ್, ಚಾಡ್, ಇಥಿಯೋಪಿಯಾ, ಇರಾಕ್, ದಕ್ಷಿಣ ಸುಡಾನ್ ಸೇರಿದಂತೆ ಒಂಬತ್ತು ದೇಶಗಳಲ್ಲಿ ದುರ್ಬಲ ಜನರ ಯೋಜನೆಗಳ ಮೇಲೆ ಇದು ತಕ್ಷಣವೇ ಪರಿಣಾಮ ಬೀರಿತು ಎಂದು ಹೇಳಿದರು. ಒಟ್ಟು ವಾರ್ಷಿಕ $18 ಮಿಲಿಯನ್ ಬಜೆಟ್ ಹೊಂದಿರುವ ಯೋಜನೆಗಳು 100,000ಕ್ಕೂ ಹೆಚ್ಚು ನಿರಾಶ್ರಿತರನ್ನು, ಪ್ರಾಥಮಿಕವಾಗಿ ಶಿಕ್ಷಣ, ಮಾನಸಿಕ ಆರೋಗ್ಯ ಮತ್ತು ತುರ್ತು ಸಹಾಯವನ್ನು ಬೆಂಬಲಿಸಿವೆ ಎಂದು ಅವರು ವಿವರಿಸಿದರು.
ಜನವರಿ 24 ರಂದು ನಮಗೆ ಅಮೇರಿಕ ಸರ್ಕಾರದಿಂದ ಪತ್ರ ಬಂದಿದ್ದು, ನಮ್ಮ ಎಲ್ಲಾ ಯೋಜನೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ ಎಂದು ಸಹೋದರ ಶಾಫ್ ರವರು ಬಹಿರಂಗಪಡಿಸಿದರು. ಈ ನಿರ್ಧಾರದ ಹಠಾತ್ ಪರಿಣಾಮವು, ನಮಗೆ ಪರಿವರ್ತನೆಗೊಳ್ಳಲು ಯಾವುದೇ ಅವಕಾಶವನ್ನು ನೀಡಲಿಲ್ಲ, ಇದನ್ನು ನಾವು ಜೊತೆಯಲ್ಲಿರುವ ನಿರಾಶ್ರಿತರಿಗೆ ವಿವರಿಸುವುದು ತುಂಬಾ ಕಷ್ಟಕರವಾಗಿದೆ.
ಪೂರ್ವ ಚಾಡ್‌ನಲ್ಲಿ "ತುಂಬಾ ಅಸ್ಥಿರ ಪ್ರದೇಶ" ದಲ್ಲಿ ನಡೆಯುತ್ತಿರುವ ವ್ಯಾಪಕ ಶಿಕ್ಷಣ ಉಪಕ್ರಮವು ಅತ್ಯಂತ ಕಠಿಣ ಪರಿಣಾಮ ಎದುರಿಸುತ್ತಿರುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಅಲ್ಲಿ JRS 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣವನ್ನು ಒದಗಿಸುತ್ತದೆ ಮತ್ತು 450 ಶಿಕ್ಷಕರನ್ನು ನೇಮಿಸಿಕೊಂಡಿದೆ. ಸೋಮವಾರದಿಂದ ನೀವು ಶಾಲೆಗೆ ಹಿಂತಿರುಗಿದಾಗಿನಿಂದ ಆ ಶಿಕ್ಷಣ ಕಾರ್ಯಕ್ರಮವನ್ನು ಮುಂದುವರಿಸಲು ಹಣವಿಲ್ಲ ಎಂದು ಶಾಪ್ಫ್ ರವರು ಗಮನಿಸಿದರು.
ಹಣಕಾಸಿನ ಕೊರತೆಯಿಂದಾಗಿ ಈ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಅಲ್ಲದಿದ್ದರೂ, ಒಂದು ದೊಡ್ಡ ಪ್ರಮಾಣದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ನೀವು ಖಚಿತವಾಗಿ ಹೇಳಬಹುದು, ಇದು ಅವರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ. ಏಕೆಂದರೆ ಅವರಿಗೆ ದಿನವಿಡೀ ಮಾಡಲು ಯಾವುದೇ ಕೆಲಸ ಇರುವುದಿಲ್ಲ, ಅವರು ಕಳ್ಳಸಾಗಣೆದಾರರಿಗೆ ಸುಲಭವಾಗಿ ಬೇಟೆಯಾಗುವ ಸನ್ನಿವೇಶ ಉಂಟಾಗುತ್ತಿದೆ.
ಈ ಕಡಿತವು 500 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲ ಮತ್ತು ಕುಟುಂಬಗಳಿಗೆ ಸಮುದಾಯ ಆಧಾರಿತ ಆದಾಯ ಗಳಿಸುವ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.
ಹೀಗಾಗಿ, "ಈ ಹೊಸ ನೀತಿಯ ವಿಶಿಷ್ಟ ಪರಿಣಾಮವೆಂದರೆ ಜೀವನವನ್ನು ಪುನರ್ನಿರ್ಮಿಸುವ ಸಾಧ್ಯತೆಯಿಲ್ಲದೆ, ಉದ್ವಿಗ್ನತೆಗಳು ಹೆಚ್ಚಾಗುತ್ತವೆ ಮತ್ತು ನಿರಾಶ್ರಿತರು ಮತ್ತು ನಿರಾಶ್ರಿತ ಸಮುದಾಯಗಳ ನಡುವೆ, ನಿರಾಶ್ರಿತ ಸಮುದಾಯಗಳ ವಿವಿಧ ಭಾಗಗಳ ನಡುವೆ ಶಾಂತಿ ಅಪಾಯದಲ್ಲಿದೆ" ಎಂದು ಶಾಪ್ಫ್ ರವರು ಹೇಳಿದರು.
ಕ್ರಮಕ್ಕಾಗಿ ಕರೆ
ವಾಸ್ತವವು ಏನೇ ಇರಲಿ, ನಿರಾಶ್ರಿತರೊಂದಿಗೆ ಹೋಗಲು ಮತ್ತು ಸಾಧ್ಯವಾದಲ್ಲೆಲ್ಲಾ ನೆರವು ನೀಡಲು JRS ಬದ್ಧವಾಗಿದೆ.
ನಾವು ಕೇವಲ ಸೇವಾ ಪೂರೈಕೆದಾರರಲ್ಲ - ನಾವು ನಿರಾಶ್ರಿತರೊಂದಿಗೆ ನಡೆಯುವ ಸಂಸ್ಥೆ ಎಂದು ಸಹೋದರ ಶಾಫ್ ರವರು ದೃಢಪಡಿಸಿದರು. ಬಿಕ್ಕಟ್ಟಿನ ಸಮಯದಲ್ಲಿ, ಪಲಾಯನ ಮಾಡಲು ಒತ್ತಾಯಿಸಲ್ಪಟ್ಟವರೊಂದಿಗೆ ನಾವು ಅಚಲವಾದ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ.
ಹೊಸ ಸನ್ನಿವೇಶವು ಜೆಆರ್‌ಎಸ್ ನ್ನು ಹೇಗೆ ನಿರಾಶ್ರಿತರನ್ನು ಹೆಚ್ಚು ಹೆಚ್ಚಾಗಿ ದುರ್ಬಲತೆಯನ್ನು ಅನುಭವಿಸುವ ಪರಿಸ್ಥಿತಿಯಲ್ಲಿ ಇರಿಸುತ್ತದೆ ಎಂಬುದನ್ನು ಅವರು ಪ್ರತಿಬಿಂಬಿಸಿದರು.
ನಮಗೆ, ಅವರೊಂದಿಗೆ ಈ ದುರ್ಬಲತೆಯನ್ನು ಒಪ್ಪಿಕೊಳ್ಳುವುದು ಅವಶ್ಯವಾಗಿದೆ ಎಂದು ಅವರು ಹೇಳಿದರು, ಇದು ವಾಸ್ತವವಾಗಿ ಕ್ರಿಸ್‌ಮಸ್‌ನ ಅನುಭವವಾಗಿದೆ ಎಂದು ಹೇಳಿದರು.
ಕ್ರಿಸ್‌ಮಸ್‌ನ ಕಥೆಯು ದೇವರು ಉದ್ದೇಶಪೂರ್ವಕವಾಗಿ ಮಾನವನಾಗಲು, ಅತ್ಯಂತ ಅನಿಶ್ಚಿತ ಸಂದರ್ಭಗಳಲ್ಲಿ ಅವರೊಂದಿಗೆ ಗುರುತಿಸಿಕೊಳ್ಳಲು ಆರಿಸಿಕೊಳ್ಳುತ್ತಾನೆ ಎಂದು ಹೇಳುತ್ತದೆ. ಜೆಸ್ವಿಟ್ ಸಂಸ್ಥೆಯ ನಿರಾಶ್ರಿತರ ಸೇವೆಯ ಸದಸ್ಯರಾಗಿ, ಇಂತಹ ನಿರಾಶ್ರಿತರಿಗೆ ಸೇವೆ ಸಲ್ಲಿಸಲು ನಾವು ಕರೆಯಲ್ಪಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ದೃಢಪಡಿಸಿದರು.
ತುರ್ತು ಮನವಿ
ಜೆಸ್ವಿಟ್ ನಿರಾಶ್ರಿತರ ಸೇವೆಯು, ತನ್ನ ದಾನಿಗಳಿಗೆ ತುರ್ತು ಮನವಿಯನ್ನು ಪ್ರಾರಂಭಿಸಿದೆ, ಮುಂದಿನ ಎರಡು ತಿಂಗಳಿನವರೆಗೆ ತಕ್ಷಣದ ಹಣಕಾಸಿನ ಅಂತರವನ್ನು ತುಂಬಲು $1.5 ರಿಂದ $2 ಮಿಲಿಯನ್ ಸಂಗ್ರಹಿಸುವ ಆಶಯವನ್ನು ಹೊಂದಿದೆ. ಆದಾಗ್ಯೂ, ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ ಮತ್ತು ಬಹುಪಕ್ಷೀಯ ಸಹಕಾರವು ಒಮ್ಮೆ ಒದಗಿಸಿದ ರಚನಾತ್ಮಕ ಬೆಂಬಲವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಹೋದರ ಶಾಪ್ಫ್ ರವರು ಒಪ್ಪಿಕೊಂಡರು.
ತಾವು ಹೇಗೆ ಸಹಾಯ ಮಾಡಬಹುದು ಎಂದು ಆಶ್ಚರ್ಯ ಪಡುತ್ತಿರುವವರಿಗೆ ಅಥವಾ ಯೋಚಿಸುತ್ತಿರುವವರಿಗೆ, ಜೆಸ್ವಿಟ್ ನಿರಾಶ್ರಿತರ ಸೇವೆಯು, ತಮ್ಮ ವೆಬ್‌ಸೈಟ್ ಮೂಲಕ ನೇರ ದೇಣಿಗೆಗಳನ್ನು ಅಥವಾ ಇತರ ಬಾಧಿತ ದತ್ತಿ ಸಂಸ್ಥೆಗಳಿಗೆ ನಿರಂತರ ಬೆಂಬಲವನ್ನು ಪ್ರೋತ್ಸಾಹಿಸುತ್ತದೆ.
ಹಣಕಾಸಿನ ಕೊಡುಗೆಗಳನ್ನು ಮೀರಿ ಮತ್ತು ಅತ್ಯಂತ ನಿರ್ಣಾಯಕ, ಜಾಗತಿಕ ನೀತಿಗಳಲ್ಲಿ ಮಾನವ ಘನತೆಯ ಸಂರಕ್ಷಣೆಗಾಗಿ ಪ್ರತಿಪಾದಿಸುವ ಪ್ರಾಮುಖ್ಯತೆಯನ್ನು ಸಹೋದರ ಸ್ಕೋಪ್ಫ್ ರವರು ಒತ್ತಿ ಹೇಳಿದರು.
ಇದುವೇ ಆ ಕ್ರಿಯಾಶೀಲರಾಗುವ ಸಮಯ" ಎಂದು ಅವರು ಒತ್ತಾಯಿಸಿದರು. ನಾವು ರಾಜಕೀಯ ಅಧಿಕಾರದಲ್ಲಿ ಇರುವವರೊಂದಿಗೆ ಮಾತನಾಡಬೇಕು ಅಥವಾ ಚರ್ಚಿಸಬೇಕು, ಇಂದು ಒಂದು ಗುಂಪಿನಿಂದ ಘನತೆಯನ್ನು ಹಿಂತೆಗೆದುಕೊಳ್ಳುವುದು, ನಾಳೆ ನಮಗೆಲ್ಲರಿಗೂ ಅದೇ ರೀತಿಯಲ್ಲಾಗಲು ಕಾರಣವಾಗಬಹುದು ಎಂಬುದನ್ನು ನಮ್ಮ ರಾಜಕೀಯ ನಾಯಕರಿಗೆ ನೆನಪಿಸಬೇಕು ಎಂದು ಹೇಳುತ್ತಾರೆ