MAP

DRCONGO-UNREST DRCONGO-UNREST  (AFP or licensors)

ಡಿಆರ್‌ಸಿ ಧರ್ಮಾಧ್ಯಕ್ಷರುಗಳಿಂದ ಸಂಘರ್ಷ- ಭಾಷೆ ಆಧಾರಿತ ತಾರತಮ್ಯ ಖಂಡಿಸಿ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಧರ್ಮಾಧ್ಯಕ್ಷರುಗಳು ಭಾಷೆಯ ಆಧಾರದ ಮೇಲೆ ತಾರತಮ್ಯವನ್ನು ಖಂಡಿಸಿದ್ದಾರೆ, ವಿಶೇಷವಾಗಿ ಕಾಂಗೋಲೀಸ್ ಸ್ವಾಹಿಲಿ ಭಾಷಿಕರ ವಿರುದ್ಧ, ಮತ್ತು ದೇಶದ ಪೂರ್ವ ಪ್ರದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ವಿಭಜನೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಸಿಸ್ಟರ್ ಜೆಸಿಂತರ್ ಆಂಟೊನೆಟ್ ಒಕೊತ್, FSSA

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು (DRC) ಹೆಚ್ಚುತ್ತಿರುವ ಹಿಂಸಾಚಾರವನ್ನು ಎದುರಿಸುತ್ತಲೇ ಇದೆ, ಖನಿಜ-ಸಮೃದ್ಧ ಪೂರ್ವ ಪ್ರಾಂತ್ಯಗಳಲ್ಲಿ M23 ಬಂಡಾಯ ಗುಂಪಿನ ತ್ವರಿತ ಮುನ್ನಡೆಯ ನಂತರ 2025ರ ಆರಂಭದಲ್ಲಿ ಉದ್ವಿಗ್ನತೆಗಳು ಹೊಸ ಎತ್ತರವನ್ನು ತಲುಪಿವೆ.

ಸಂಘರ್ಷ ಹರಡಿ ಸಮುದಾಯಗಳಲ್ಲಿ ಭಯ ಆವರಿಸುತ್ತಿರುವುದರಿಂದ, ದೇಶದ ಕಥೋಲಿಕ ಧರ್ಮಾಧ್ಯಕ್ಷರುಗಳು ಭಾಷಾ ವ್ಯತ್ಯಾಸಗಳ ಆಧಾರದ ಮೇಲೆ ಬೆಳೆಯುತ್ತಿರುವ ತಾರತಮ್ಯ ಮತ್ತು ವಿಭಜನೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಏಕತೆ ನಿರ್ಣಾಯಕವಾಗಿರುವ ಸಮಯದಲ್ಲಿ ಭಾಷಾ ವಿಭಜನೆಗಳು ಸಾಮಾಜಿಕ ಬಿರುಕುಗಳನ್ನು ಆಳಗೊಳಿಸುವ ಅಪಾಯವನ್ನು ಹೊಂದಿವೆ ಎಂದು ಕಾಂಗೋ ರಾಷ್ಟ್ರೀಯ ಧರ್ಮಾಧ್ಯಕ್ಷರುಗಳ ಸಮ್ಮೇಳನದ (CENCO) ಸದಸ್ಯರು ಎಚ್ಚರಿಸಿದ್ದಾರೆ.

ನಮ್ಮ ದೇಶದ ಪೂರ್ವ ಭಾಗದಲ್ಲಿ ವಾಸಿಸುವ ನಮ್ಮ ಸಹೋದರ ಸಹೋದರಿಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಕಿವು ಪ್ರಾಂತ್ಯಗಳಲ್ಲಿ, ಯುದ್ಧದ ಭೀಕರತೆಯಿಂದ ಬಳಲುತ್ತಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ಇತರ ಭಾಗಗಳಲ್ಲಿ ಭಾಷಾ ಅಭಿವ್ಯಕ್ತಿಯ ಆಧಾರದ ಮೇಲೆ ಹಿಂಸಾಚಾರದ ಘರ್ಷಣೆಯು ಪುನರುಜ್ಜೀವ ಹೊಂದಿರುವುದನ್ನು ನಾವು ನೋಡಿದ್ದೇವೆ" ಎಂದು ಕಾಂಗೋಲೀಸ್ ಧರ್ಮಾಧ್ಯಕ್ಷರುಗಳು ಫೆಬ್ರವರಿ 22 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ನಾಲ್ಕು ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ಸ್ವಾಹಿಲಿ ಭಾಷೆಯನ್ನು ಮಾತನಾಡುವ ಮತ್ತು ಹಲವಾರು ಸ್ಥಳೀಯ ಉಪಭಾಷೆಗಳ ಜೊತೆಗೆ, ಕೆಲವು ಕಾಂಗೋಲೀಸ್ ಜನರು ತಮ್ಮ ಸಹ ನಾಗರಿಕರನ್ನು ಕಳಂಕಿತಗೊಳಿಸುತ್ತಿದ್ದಾರೆ ಎಂದು ಧರ್ಮಸಭೆಯ ನಾಯಕರು ವಿಷಾದಿಸುತ್ತಾರೆ. ಅವರು ಈ ಪರಿಸ್ಥಿತಿಯನ್ನು "ಸ್ವಾಹಿಲಿ ಭಾಷಿಕರಿಗಾಗಿ ಬೇಟೆ" ಎಂದು ವಿವರಿಸುತ್ತಾರೆ.

ಧಾರ್ಮಿಕ ವೇದಿಕೆಗಳ ದುರುಪಯೋಗ
ಧರ್ಮಾಧ್ಯಕ್ಷರುಗಳ ಪ್ರಕಾರ, ಕೆಲವು “ಸಭಾಪಾಲಕರು” ವಿಭಜನೆಯನ್ನು ಹರಡಲು ದೇವಾಲಯದ ಬೋಧನಾ ಪೀಠಗಳನ್ನು ಅಥವಾ ವೇದಿಕೆಗಳನ್ನು ಮತ್ತು ಇತರ ಧಾರ್ಮಿಕ ಕೂಟಗಳನ್ನು ಬಳಸುತ್ತಿದ್ದಾರೆ, ಇದರಿಂದಾಗಿ ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತಿದ್ದಾರೆ. ಏಕತೆ, ಶಾಂತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಬೇಕಾದ ವಿಶ್ವಾಸದ ಮೂಲಭೂತ ತತ್ವಗಳಿಗೆ ದ್ರೋಹ ಮಾಡುತ್ತಿದ್ದಾರೆ.

ಕೆಲವು 'ಸಭಾಪಾಲಕರು' ತಮ್ಮ ದೇವಾಲಯಗಳ ವೇದಿಕೆಗಳನ್ನು ಮತ್ತು ಇತರ ಬೋಧನಾ ಸ್ಥಳಗಳನ್ನು ಬಳಸಿಕೊಂಡು, ಇತರ ಕಾಂಗೋಲೀಸ್ ಪುರುಷರು ಮತ್ತು ಮಹಿಳೆಯರ ವಿರುದ್ಧ-ಅವರ ಮೂಲ, ಭಾಷೆ ಅಥವಾ ರೂಪವಿಜ್ಞಾನದ ಕಾರಣದಿಂದಾಗಿ ತಾರತಮ್ಯ, ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳನ್ನು ನಡೆಸುತ್ತಿರುವುದನ್ನು ನೋಡಿ CENCO ಇನ್ನಷ್ಟು ಕೋಪಗೊಂಡಿದೆ.

ನಮ್ಮ ಸಾಮಾಜಿಕ ಏಕತೆಯೆಡೆಗೆ ಹಿಂತಿರುಗೋಣ
ಡಿಆರ್‌ಸಿ ದಶಕಗಳಿಂದ ಹಿಂಸಾಚಾರ, ರಾಜಕೀಯ ಅಸ್ಥಿರತೆ ಮತ್ತು ಜನಾಂಗೀಯ ಉದ್ವಿಗ್ನತೆಗಳನ್ನು ಎದುರಿಸಿದ್ದರೂ ಸಹ, ಕಾಂಗೋಲೀಸ್ ನಾಗರಿಕರು ವಿವಿಧ ಪ್ರದೇಶಗಳಿಂದ ನಾಯಕರನ್ನು ಆಯ್ಕೆ ಮಾಡುವ ಮೂಲಕ ಏಕತೆಯನ್ನು ಪ್ರದರ್ಶಿಸಿದ ಹಿಂದಿನ ನಿದರ್ಶನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಧರ್ಮಾಧ್ಯಕ್ಷರುಗಳು ಗಮನಸೆಳೆದಿದ್ದಾರೆ.

ಕಾಂಗೋ ಕೇಂದ್ರದ ಸ್ಥಳೀಯರೊಬ್ಬರು ಗೋಮಾದ ಗವರ್ನರ್ ಮತ್ತು ರಾಷ್ಟ್ರೀಯ ಉಪನಾಯಕರಾಗಿ ಬೃಹತ್ ಪ್ರಮಾಣದಲ್ಲಿ ಆಯ್ಕೆಯಾದ ಸಮಯವನ್ನು ಅವರು ನೆನಪಿಸಿಕೊಂಡರು. ಅದೇ ಸಮಯದಲ್ಲಿ, ಪಶ್ಚಿಮ ಮತ್ತು ಪೂರ್ವದಿಂದ ಗಣರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳು ಎರಡೂ ಕಡೆಯಿಂದ ನಿಜವಾಗಿಯೂ ಆಯ್ಕೆಯಾದರು ಎಂಬುದನ್ನು ನೆನಪಿಸಿಕೊಂಡರು.

"ಇಂದು, ದುರದೃಷ್ಟವಶಾತ್, ನಾವು ಹಿಂಜರಿತವನ್ನು ಅನುಭವಿಸುತ್ತಿದ್ದೇವೆ, ಅದು ನಮ್ಮನ್ನು ಚಿಂತಿತರನ್ನಾಗಿ ಮಾಡದೆ ಇರಲು ಸಾಧ್ಯವಿಲ್ಲ" ಎಂದು ಅವರು ಖಂಡಿಸುತ್ತಾರೆ.

ಪ್ರಬುದ್ಧತೆ ಮತ್ತು ಒಗ್ಗಟ್ಟು
ಎಲ್ಲಾ ನಾಗರಿಕರು ಪ್ರಬುದ್ಧತೆ ಮತ್ತು ಒಗ್ಗಟ್ಟಿನಿಂದ ಇರಬೇಕು ಎಂದು ಧರ್ಮಾಧ್ಯಕ್ಷರುಗಳು ಕರೆ ನೀಡಿದರು ಮತ್ತು ದೇಶಭಕ್ತಿಯ ಸೋಗಿನಲ್ಲಿ ತಾರತಮ್ಯವನ್ನು ಉತ್ತೇಜಿಸುವುದು ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ ಹಾಗೂ ಶಾಶ್ವತ ಶಾಂತಿಯ ಅನ್ವೇಷಣೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದರು. ಆದ್ದರಿಂದ ಅವರು ಯುದ್ಧ ಮತ್ತು ಅಭದ್ರತೆಯಿಂದ ಸ್ಥಳಾಂತರಗೊಂಡವರ ಕಡೆಗೆ ಒಗ್ಗಟ್ಟಿನಿಂದ ಇರಬೇಕು ಎಂದು ಮನವಿ ಮಾಡಿದರು.

"ನಮ್ಮ ದೇಶಕ್ಕೆ ದೇಶಭಕ್ತಿ ಮತ್ತು ಶಾಂತಿಯ ಮಾರ್ಗಗಳ ಅಭಿವ್ಯಕ್ತಿಯಾಗಿ ಸ್ವಾಹಿಲಿ ಭಾಷೆ ಮಾತನಾಡುವವರು, ಪೂರ್ವದ ಸ್ಥಳೀಯರು ಅಥವಾ ವಿದೇಶಿಯರನ್ನು ವಿಭಜಿಸುವುದು ಮತ್ತು ಅವರನ್ನು ಗುರಿಯಾಗಿಸಿಕೊಂಡು ಬೇಟೆಯಾಡುವಂತೆ ಮಾಡುತ್ತಿರುವ ಬೋಧನಕಾರರಿಂದ ದಾರಿ ತಪ್ಪಬೇಡಿ" ಎಂದು ಧರ್ಮಾಧ್ಯಕ್ಷರುಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ. ಯುದ್ಧ ಮತ್ತು ಅಭದ್ರತೆಯಿಂದ ತಮ್ಮ ಭೂಮಿ ಹಾಗೂ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲ್ಪಟ್ಟ ಸಹೋದರ ಸಹೋದರಿಯರ ಬಗ್ಗೆ ನಾವು ಸಹಾನುಭೂತಿ ಮತ್ತು ಒಗ್ಗಟ್ಟನ್ನು ಆಹ್ವಾನಿಸುತ್ತೇವೆ. ಅವರಿಗೆ ನಮ್ಮ ಕುಟುಂಬಗಳಲ್ಲಿ ಮತ್ತು ನಮ್ಮ ಸುರಕ್ಷಿತ ಸ್ಥಳಗಳಲ್ಲಿ ಆತಿಥ್ಯವನ್ನು ನೀಡೋಣ.

ಕಾಂಗೋಲೀಸ್ ಜನಸಂಖ್ಯೆಯ ಎಲ್ಲಾ ವಲಯಗಳನ್ನು ರಕ್ಷಿಸಲಾಗಿದೆ ಮತ್ತು ಡಿಆರ್‌ಸಿಯಲ್ಲಿ ಎಲ್ಲಾ ಜನಾಂಗಗಳು ಹಾಗೂ ಜನಾಂಗೀಯ ಗುಂಪುಗಳಿಗೆ ಸಾಮಾಜಿಕ ಒಗ್ಗಟ್ಟು, ಉತ್ತಮ ಜೀವನವಿದೆ ಎಂದು ಖಚಿತಪಡಿಸಿಕೊಳ್ಳಲು ಧರ್ಮಾಧ್ಯಕ್ಷರುಗಳು ಸರ್ಕಾರವನ್ನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
 

26 ಫೆಬ್ರವರಿ 2025, 12:35