MAP

GREECE-VATICAN-RELIGION-POPE GREECE-VATICAN-RELIGION-POPE 

'ದೇವರ ಪ್ರೀತಿಯ ಶ್ರೇಷ್ಠ ಸಾಕ್ಷಿಗಳಾಗಿ' ಕರೆಯಲ್ಪಟ್ಟ ಅಭ್ಯಂಗಿತ ವ್ಯಕ್ತಿಗಳು

ವಿಶ್ವದಾದ್ಯಂತದ ಅಭ್ಯಂಗಿತ ಜೀವನವನ್ನು ಜೀವಿಸುತ್ತಿರುವ ಪುರುಷರು ಮತ್ತು ಮಹಿಳೆಯರು ಕ್ರಿಸ್ತನ ಪ್ರತಿಬಿಂಬಗಳಾಗಿ ಮತ್ತು ಆತನನ್ನು ಜಗತ್ತಿಗೆ ಗೋಚರಿಸುವಂತೆ ಮಾಡುವ ಮೂಲಕ ದೇವರ ಪ್ರೀತಿಯ ನಿಜವಾದ ಸಾಕ್ಷಿಗಳಾಗಬೇಕೆಂದು ಡಾಟರ್ಸ್‌ ಆಫ್‌ ದ ಚರ್ಚ್‌ ಸಭೆಯ ಪ್ರಧಾನ ಶ್ರೇಷ್ಠ ಅಧಿಕಾರಿಯವರು ನೆನಪಿಸಿದ್ದಾರೆ.

FSSA ನ ಸಿಸ್ಟರ್‌. ಜೆಸಿಂತರ್ ಆಂಟೊನೆಟ್ ಒಕೋತ್

29 ನೇ ವಿಶ್ವ ಅಭ್ಯಂಗಿತ ಜೀವನ ದಿನದ ಮುನ್ನಾದಿನದಂದು ಪ್ರಥಮ ಸಂದ್ಯಾ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಸಂದೇಶವನ್ನು ಪ್ರತಿಬಿಂಬಿಸುತ್ತಾ, ಅಭ್ಯಂಗಿತ ವ್ಯಕ್ತಿಗಳು ತಮ್ಮ ಜೀವನದ ಮೂಲಕ ದೇವರ ಪ್ರೀತಿಯನ್ನು ಅತ್ಯಂತ ಮೂಲಭೂತ ಮಾರ್ಗದರ್ಶಿ ತತ್ವವಾಗಿ ಸಾಕ್ಷಿ ಹೇಳುವ ಅಗತ್ಯವನ್ನು ಸಿಸ್ಟರ್ ಥೆರೆಸಾ ಪುರೈದತಿಲ್ ರವರು ಒತ್ತಿ ಹೇಳಿದರು.

"ಇಂದು ಜಗತ್ತಿನಲ್ಲಿ ಬಹಳಷ್ಟು ಕತ್ತಲೆ ಕವಿದಿದೆ" ಎಂದು ಡಾಟರ್ಸ್‌ ಆಫ್‌ ದ ಚರ್ಚ್‌ ಸಭೆಯ ಪ್ರಧಾನ ಶ್ರೇಷ್ಠ ಅಧಿಕಾರಿಯವರು ಹೇಳಿದರು. "ಧಾರ್ಮಿಕ ವ್ಯಕ್ತಿಗಳಾಗಿ, ನಾವು ಪ್ರಭುಕ್ರಿಸ್ತನ ಪ್ರೀತಿಯನ್ನು ಹೊತ್ತುಕೊಳ್ಳಲು ಮತ್ತು ನಮ್ಮ ಸ್ವಂತ ಜೀವನದಲ್ಲಿ ಹಾಗೂ ನಮ್ಮ ಸಮುದಾಯಗಳ ಜೀವನದಲ್ಲಿ ಬೆಳಕನ್ನು ಹೊರುವವರಾಗಿರಲು ಕರೆಯಲ್ಪಟ್ಟಿದ್ದೇವೆ."

ಬೆಳಕಾಗಿರುವುದು ಎಂದರೆ ಒಬ್ಬರ ನಡವಳಿಕೆಯ ಮೂಲಕ ಜನರಿಗೆ ಸಂತೋಷವನ್ನು ತರುವುದು ಎಂದು ಸಿಸ್ಟರ್ ಪುರೈದತಿಲ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. "ನಾವು ಪ್ರಭುವಿನೊಂದಿಗೆ ಸಂಪರ್ಕ ಸಾಧಿಸಿದ ಕ್ಷಣ, ಕತ್ತಲೆ ಮಾಯವಾಗುತ್ತದೆ ಮತ್ತು ಆತನ ಬೆಳಕು ಮೇಲುಗೈ ಸಾಧಿಸುತ್ತದೆ."
ಬೆಳಕನ್ನು ಹೊತ್ತವರು.

ಒಂದು ದಶಕಕ್ಕೂ ಹೆಚ್ಚು ಕಾಲ ಸಭೆಯ ಚುಕ್ಕಾಣಿ ಹಿಡಿದಿರುವ ಭಾರತೀಯ ಸನ್ಯಾಸಿನಿ, ಪ್ರಭುವಿನ ಸಮರ್ಪಣೆಯ ಹಬ್ಬದಂದು ವಿಶ್ವ ಅಭ್ಯಂಗಿತ ಜೀವನ ದಿನವನ್ನು ಆಚರಿಸುವುದು ಗಮನಾರ್ಹವಾಗಿದೆ ಎಂದು ಒತ್ತಿ ಹೇಳಿದರು, ಏಕೆಂದರೆ ಧರ್ಮಸಭೆಯು ಯೇಸುವಿನ ಧ್ಯೇಯವನ್ನು ಮೋಕ್ಷದ ಬೆಳಕಾಗಿ ಆಚರಿಸುತ್ತದೆ.

"ಪ್ರಭುವಿನ ಸಮರ್ಪಣೆಗೆ ಸಂಬಂಧಿಸಿದಂತೆ, ನಾವು ಕ್ರಿಸ್ತರನ್ನು ರಾಷ್ಟ್ರದ ಬೆಳಕು ಎಂದು ಆಚರಿಸುತ್ತೇವೆ. ಆದ್ದರಿಂದ, ಅಭ್ಯಂಗಿತ ವ್ಯಕ್ತಿಗಳಾಗಿ ನಾವು ನಮ್ಮ ಜೀವನವನ್ನು ಕ್ರಿಸ್ತನಿಗೆ ಮುಡಿಪಾಗಿಟ್ಟಿದ್ದೇವೆ ಮತ್ತು ನಾವು ಆ ಬೆಳಕನ್ನು ಜನರೊಂದಿಗೆ ಹಂಚಿಕೊಳ್ಳಬೇಕು" ಎಂದು ಅವರು ಹೇಳಿದರು.

ಬಡತನ, ಪರಿಶುದ್ಧತೆ ಮತ್ತು ವಿಧೇಯತೆಯ ಸುವಾರ್ತಾ ಮಂಡಳಿಗಳ ಮೂಲಕ ಅಭ್ಯಂಗಿತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೆಳಕಾಗಬಹುದು ಎಂಬುದನ್ನು ಸಿಸ್ಟರ್ ಪುರೈದತಿಲ್ ರವರು ಮತ್ತಷ್ಟು ವಿವರಿಸಿದರು.

ಸುವಾರ್ತಾಬೋಧನಾ ಸಲಹೆಗಳ ಮೂಲಕ ಸಾಕ್ಷಿಗಳು
ಅಭ್ಯಂಗಿತ ವ್ಯಕ್ತಿಗಳನ್ನು ಮಾರ್ಗದರ್ಶಿಸುವ ಮೂರು ಆಧ್ಯಾತ್ಮಿಕ ತತ್ವಗಳಾದ ಪರಿಶುದ್ಧತೆ, ಬಡತನ ಮತ್ತು ವಿಧೇಯತೆ, ವಿಶ್ವಾಸಭರಿತ ಮತ್ತು ಕ್ರಿಸ್ತ-ಕೇಂದ್ರಿತ ಜೀವನವನ್ನು ನಡೆಸಲು ಪ್ರಮುಖವಾಗಿವೆ. ಪರಿಶುದ್ಧತೆಯ ಬೆಳಕನ್ನು ಹೊರುವವರಾಗಲು ಧಾರ್ಮಿಕ ಸಹೋದರಿ ಹೇಳಿದರು, "ನಾವು ದೇವರ ಪ್ರೀತಿಯ ಪ್ರಾಮುಖ್ಯತೆಗೆ ಸಾಕ್ಷಿಗಳಾಗಿರಬೇಕು."

"ಪ್ರಸ್ತುತವಾಗಿ ಜನರು ತಕ್ಷಣದ ತೃಪ್ತಿಯನ್ನು ಹುಡುಕಿ ಹೋಗುತ್ತಿದ್ದಾರೆ, ಇದನ್ನು ನಾವು ಅನೇಕ ಜನರ ಜೀವನದಲ್ಲಿ, ದಂಪತಿಗಳಲ್ಲಿಯೂ ಸಹ ನೋಡುತ್ತೇವೆ" ಎಂದು ಸಿಸ್ಟರ್ ಪುರೈದತಿಲ್ ರವರು ಹೇಳಿದರು. "ನಾವು ಅಭ್ಯಂಗಿತ ವ್ಯಕ್ತಿಗಳಾಗಿ ನಿಜವಾದ ಭೇಟಿಯ ಶಾಶ್ವತ ಸಂತೋಷಕ್ಕೆ ಸಾಕ್ಷಿಗಳಾಗಿದ್ದೇವೆ ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ, ನಾವು ಪ್ರಬುದ್ಧರಾಗಿರಬೇಕು ಮತ್ತು ಅವಿಭಜಿತ ಹೃದಯದಿಂದ ಕ್ರಿಸ್ತನ ಪ್ರೀತಿಗೆ ಸಮರ್ಪಿತರಾಗಿರಬೇಕು.

ಅಭ್ಯಂಗಿತ ವ್ಯಕ್ತಿಗಳು ಸರಳತೆಯ ಜೀವನವನ್ನು ಸ್ವೀಕರಿಸಿದಂತೆ, ಅನಗತ್ಯ ಸಂಗ್ರಹಣೆಯಿಂದಾಗಿ ಬಡತನದ ಬೆಳಕು ಮಂಕಾಗಿರುವವರಿಗೆ ಸಹೋದರಿ ಎಚ್ಚರಿಕೆ ನೀಡಿದರು.

"ಧಾರ್ಮಿಕರು ದೇವರ ಕೆಲಸಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ ಮತ್ತು ಸರಳತೆಯ ಜೀವನವನ್ನು ಸ್ವೀಕರಿಸಿದ್ದಾರೆ, ಸ್ವಾರ್ಥ, ದುರಾಸೆ ಮತ್ತು ನಿಮಗೆ ಅಗತ್ಯವಿಲ್ಲದದ್ದನ್ನು ಸಂಗ್ರಹಿಸುವ ಬಯಕೆಯಲ್ಲದಿದ್ದರೆ ನಿಮ್ಮ ಔದಾರ್ಯವನ್ನು ಬೇರೆ ಏನು ಮರೆಮಾಡಬಹುದು?" ಎಂದು ಅವರು ಕೇಳಿದರು.

ವಿಧೇಯತೆಯ ಬೆಳಕನ್ನು ಹೊತ್ತವರಾಗುವ ಅಗತ್ಯವನ್ನು ತಿಳಿಸಿದ ಸಿಸ್ಟರ್ ಪುರೈದತಿಲ್ ರವರು, ಪ್ರಭುಯೇಸು ತಂದೆ ದೇವರ ಚಿತ್ತಕ್ಕೆ ವಿಧೇಯರಾಗಿ ದೇವರ ಯೋಜನೆಯನ್ನು ನೆರವೇರಿಸಿದರು, ಈ ವಿಧೇಯತೆಯು ಅವರನ್ನು ಶಿಲುಬೆಯ ಮರಣಕ್ಕೆ ಕಾರಣವಾಯಿತು ಎಂದು ಹೇಳಿದರು.

"ವಿಧೇಯತೆಯಿಂದ, ನಾವು ದೇವರ ಕರೆಯನ್ನು ಕೇಳುತ್ತೇವೆ, ಆತನು ಏನು ಹೇಳುತ್ತಾನೆ ಎಂಬುದನ್ನು ಗಮನಿಸುತ್ತೇವೆ ಮತ್ತು ಪ್ರಭುಯೇಸು ತನ್ನ ಜೀವನದಲ್ಲಿ ನೆರವೇರಿಸಿದ ಆತನ ಚಿತ್ತವನ್ನು ಪೂರೈಸುತ್ತೇವೆ" ಎಂದು ಅವರು ವಿವರಿಸಿದರು. "ಈ ರೀತಿಯಾಗಿ ಅಭ್ಯಂಗಿತ ವ್ಯಕ್ತಿಗಳಾಗಿ, ನಾವು ಕ್ರಿಸ್ತನಂತೆ ಬದುಕಬೇಕು ಮತ್ತು ಈ ಸಮಾಜಕ್ಕೆ ಮತ್ತು ಧರ್ಮಸಭೆಗಾಗಿ ದೇವರ ಚಿತ್ತದ ಯೋಜನೆಯನ್ನು ಪೂರೈಸಬೇಕು."

ಸಾರ್ವತ್ರಿಕ ಮತ್ತು ಭ್ರಾತೃತ್ವದ ಅನುಭವ
ಶನಿವಾರ ವಿಶ್ವಗುರುವಿನೊಂದಿಗೆ ಸಂತ ಪೇತ್ರರ ಮಹಾದೇವಾಲಯದಲ್ಲಿ ಸಂದ್ಯಾ ಪ್ರಾರ್ಥನೆಯನ್ನು ಹೇಳುವ ಮೂಲಕ ಸಿಸ್ಟರ್. ಪುರೈದತಿಲ್‌ ರವರು ಮುಕ್ತಾಯಗೊಳಿಸಿದರು.

ಧಾರ್ಮಿಕ ಪುರುಷರು ಮತ್ತು ಮಹಿಳೆಯರ ಒಗ್ಗೂಡುವಿಕೆಯು ಧರ್ಮಸಭೆಯ ಸಾರ್ವತ್ರಿಕ ಅನುಭವವನ್ನು ಹೊಂದಿದ್ದು, ಪವಿತ್ರ ತಂದೆಯು ಅನೇಕ ಕಾರ್ಡಿನಲ್‌ಗಳು, ಧರ್ಮಾಧ್ಯಕ್ಷರುಗಳು, ಸಾವಿರಾರು ಧಾರ್ಮಿಕ ಮಹಿಳೆಯರು ಮತ್ತು ಪುರುಷರ ಸಮ್ಮುಖದಲ್ಲಿ ಸಂದ್ಯಾ ಪ್ರಾರ್ಥನೆಯ ಮುಂದಾಳತ್ವವ ವಹಿಸಿದರು ಎಂದು ಅವರು ಹೇಳಿದರು.
 

03 ಫೆಬ್ರವರಿ 2025, 12:37