MAP

VATICAN-POPE-MASS VATICAN-POPE-MASS 

ಸಮ್ಮೇಳನವು ಉತ್ತರ ಮತ್ತು ದಕ್ಷಿಣ ಅಮೆರಿಕಾ ನಡುವೆ ಸೇತುವೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ

"ಎಕ್ಲೆಸಿಯಾ ಇನ್ ಅಮೇರಿಕಾ ನೆಟ್‌ವರ್ಕ್" ಅಮೇರಿಕದಲ್ಲಿ ಸಿನೊಡಾಲಿಟಿ ಕುರಿತು ದೈವಶಾಸ್ತ್ರದ ಸಮ್ಮೇಳನವನ್ನು ಆಯೋಜಿಸುತ್ತದೆ, ಇದು ಮಾನವ ಚಲನಶೀಲತೆ, ಸಂವಾದ ಮತ್ತು ಹೊಸ ಸನ್ನಿವೇಶಗಳು ಎಂಬ ವಿಷಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ವ್ಯಾಟಿಕನ್ ಸುದ್ಧಿ

"ಎಕ್ಲೆಸಿಯಾ ಇನ್ ಅಮೇರಿಕಾ ನೆಟ್‌ವರ್ಕ್" ಅಮೇರಿಕದಲ್ಲಿ ಸಿನೊಡಲಿಟಿ ಕುರಿತು ದೈವಶಾಸ್ತ್ರದ ಸಮ್ಮೇಳನವನ್ನು ಆಯೋಜಿಸಿದೆ, ಇದು ಮಾನವ ಚಲನಶೀಲತೆ; ಸರ್ವಕ್ರೈಸ್ತತರ ಏಕತೆ (ಎಕ್ಯುಮೆನಿಸಂ), ಅಂತರಧರ್ಮೀಯ ಸಂವಾದ ಮತ್ತು ಹೊಸ ದೈವಶಾಸ್ತ್ರದ ಸನ್ನಿವೇಶಗಳ ವಿಷಯಗಳ ಕುರಿತು ಸಂವಾದವನ್ನು ಉತ್ತೇಜಿಸುವತ್ತ ಗಮನಹರಿಸಿದೆ.

ಉತ್ತರ ಮತ್ತು ದಕ್ಷಿಣ ಅಮೆರಿಕಾ ನಡುವಿನ ಸಹಯೋಗವನ್ನು ಹೆಚ್ಚಿಸುವ ವಿಶ್ವಗುರು ಫ್ರಾನ್ಸಿಸ್ ರವರ ಬಯಕೆಗೆ ಸ್ಪಂದಿಸುವ ಸಂಪರ್ಕಗಳ ಪ್ರಯತ್ನಗಳ ಭಾಗವಾಗಿ ಸಮ್ಮೇಳನ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನ ಪ್ರಕಾರ, "ನಾವು ಲತೀನ್ ಅಮೇರಿಕದವರು ಮತ್ತು 'ಲತಿನೋ' ದೈವಶಾಸ್ತ್ರಜ್ಞರ ಜಾಲ. ಈ ಜಾಲವು ಅಮೆರಿಕದಾದ್ಯಂತದ ದೈವಶಾಸ್ತ್ರಜ್ಞರ ನಡುವೆ ಸಂಪರ್ಕ ಸಾಧಿಸಲು ಮತ್ತು ಸಂವಾದವನ್ನು ಉತ್ತೇಜಿಸಲು, ಅಮೆರಿಕದಲ್ಲಿ ಒಂದು ನೈಜ ಧರ್ಮಸಭೆಯನ್ನು ನಿರ್ಮಿಸಲು ಬಯಸುತ್ತದೆ.

ಫೆಬ್ರವರಿ 6-9 ರವರೆಗೆ ಅಮೆರಿಕದ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನದಲ್ಲಿ, ವ್ಯಾಪಕ ಶ್ರೇಣಿಯ ಪ್ರಸ್ತುತ ಸಮಸ್ಯೆಗಳನ್ನು ಎತ್ತಿ ತೋರಿಸಲಾಯಿತು.

ಲತೀನ್ ಅಮೇರಿಕದ ಧಾರ್ಮಿಕ ಪುರುಷರು ಮತ್ತು ಮಹಿಳೆಯರ ಒಕ್ಕೂಟದ (CLAR) ಅಧ್ಯಕ್ಷರಾದ ಸಿಸ್ಟರ್ ಲಿಲಿಯಾನಾ ಫ್ರಾಂಕೊರವರು, "ಉಸಿರುಗಟ್ಟಿಸುವ ರಚನೆಗಳು ಮತ್ತು ಮಾನವನನ್ನು ನಿರಾಕರಿಸುವ ಕಾರ್ಯವಿಧಾನಗಳಿರುವ" ವಿಶ್ವದಲ್ಲಿ, ಸಮ್ಮೇಳನದ ವಿಷಯಗಳ ಕುರಿತ ಚಿಂತನೆಗಳು ಅಗತ್ಯವಾಗಿದೆ ಎಂದು ಹೇಳಿದರು. "ಸೈದ್ಧಾಂತಿಕ ಕುಶಲತೆಯ ಹಾನಿಕಾರಕ ಸೂಕ್ಷ್ಮ ವ್ಯತ್ಯಾಸವನ್ನು ಸ್ಥಾಪಿಸಲಾಗಿದೆ ಮತ್ತು ಇವುಗಳನ್ನು ಅಧಿಕಾರ ನಿಯಂತ್ರಿಸಲು, ಕುಟಿಲಗೊಳಿಸಲು, ಕಳಂಕಿತಗೊಳಿಸಲು ಮತ್ತು ಹೊರಚ್ಚಲು ಬಳಸಲಾಗುತ್ತಿದೆ ಎಂದು ಅವರು ಖಂಡಿಸಿದರು. "ಬಡವರಿಗಾಗಿ, ಅವರ ಕಷ್ಟಗಳಿಗಾಗಿ ಮತ್ತು ಅವರ ಸಮಸ್ಯೆಗಳಿಗಾಗಿ ಒಂದು ಆಯ್ಕೆ"ಯನ್ನು ಉತ್ತೇಜಿಸುವ "ದೈವಶಾಸ್ತ್ರಜ್ಞರ" ಅಗತ್ಯವನ್ನು ಅವರು ಒತ್ತಿ ಹೇಳಿದರು, ಇದು "ಬಡತನದ ಆಳದ ರಚನಾತ್ಮಕ ಬೇರುಗಳಿಗೆ ಹೋಗಿ ಸಮಗ್ರ ಅಭಿವೃದ್ಧಿಗಾಗಿ ನಿಜವಾದ ಅವಕಾಶಗಳನ್ನು ಉತ್ತೇಜಿಸುವ" ಬೇಡಿಕೆಯನ್ನು ಹೊಂದಿದೆ ಎಂಬ ವಿಷಯಗಳ ಅಗತ್ಯತೆಯ ಬಗ್ಗೆ ಮಾತನಾಡಿದರು.

ಬ್ರೆಜಿಲ್‌ನ ಮನೌಸ್‌ನ ಮಹಾಧರ್ಮಾಧ್ಯಕ್ಷರಾದ, OFM, ಕಾರ್ಡಿನಲ್ ಲಿಯೊನಾರ್ಡೊ ಉಲ್ರಿಚ್ ಸ್ಟೈನರ್ ರವರು, ಧರ್ಮಪ್ರಚಾರಕರ ಚಟುವಟಿಕೆಯಲ್ಲಿ ಧರ್ಮಸಭೆಯ ಧ್ಯೇಯದ ಸಿನೊಡಾಲಿಟಿ ವ್ಯಕ್ತವಾಗುತ್ತದೆ ಎಂದು ಹೇಳಿದರು. ಸಿನೊಡಲ್ ಪ್ರಕ್ರಿಯೆಯು ಇನ್ನೂ ಕೊನೆಗೊಂಡಿಲ್ಲ, ಬದಲಿಗೆ ಭಕ್ತವಿಶ್ವಾಸಿಗಳೆಲ್ಲರ ಭಾಗವಹಿಸುವಿಕೆಯೊಂದಿಗೆ, ಪ್ರವಾದಿಯ ವರ್ತನೆಗಳಿಗೆ ಕಾರಣವಾಗುವ ದೈವ ಕೂಗುಗಳನ್ನು ಆಲಿಸುವುದು ಮತ್ತು ಮುಕ್ತವಾದ ಸಂಭಾಷಣೆ. ಧರ್ಮಸಭೆಯು ನೀಡಿರುವ ಈ ವಿಧಾನವನ್ನು ಸತತವಾಗಿ ಪ್ರಯತ್ನಿಸಲು ಮತ್ತು ಅದನ್ನು ಆಳಗೊಳಿಸಲು ಕರೆ ನೀಡಿದ್ದಾರೆ ಎಂದು ಅವರು ಹೇಳಿದರು.

ವ್ಯಾಟಿಕನ್‌ನಿಂದ ಹಾಜರಿದ್ದವರಲ್ಲಿ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿ (IHD) ಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕೆಲ್ ಕ್ಜೆರ್ನಿರವರು ಕೂಡ ಇದ್ದರು. ಅಮೇರಿಕದಲ್ಲಿ ವಲಸಿಗರ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡಿದ ಕಾರ್ಡಿನಲ್ ರವರು, ಜನರನ್ನು ಅಪರಾಧಿಗಳೆಂದು ಪರಿಗಣಿಸಿದಾಗ, ಧರ್ಮಸಭೆಯು ಅದಕ್ಕೆ ಮಣಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಕಥೋಲಿಕ ಸಂಸ್ಥೆಗಳು ಸೇರಿದಂತೆ ಜನರು ವಲಸೆ ಹೋಗಲು ಸಹಾಯ ಮಾಡುವವರನ್ನು ಅಪರಾಧಿಗಳೆಂದು ಪರಿಗಣಿಸುವ ಚಳುವಳಿಗಳ ಪ್ರತಿಕ್ರಿಯೆಯು, ಈ ಪ್ರದೇಶದಲ್ಲಿ ನಡೆಯುತ್ತಿರುವುದು ಕಳವಳಕಾರಿ ಎಂದು ಅವರು ವಿಷಾದಿಸಿದರು. ಅಂತಹ ಚಳುವಳಿಗಳು, ವಲಸಿಗರೆಡೆಗೆ ನಾವು ತೋರ್ಪಡಿಸುವ ನಮ್ಮ ಬೆಂಬಲಕ್ಕೆ ಭಯವನ್ನುಂಟು ಮಾಡಲಾಗುವುದಿಲ್ಲ.. ಒಳ್ಳೆಯ ಸಮಾರಿಯದವನ "ಪಾಲನಾ ದೈವಕರೆ"ಯನ್ನು ಸಂಯೋಜಿಸುವಲ್ಲಿ ಧರ್ಮಸಭೆಯ ಮೂಲಭೂತ ಪಾತ್ರವನ್ನು ಅವರು ಒತ್ತಿ ಹೇಳಿದರು, ಅಪರಾಧಿಗಳೆಂದು ಪರಿಗಣಿಸುವ ಚಳುವಳಿಗಳ ನೀತಿಗಳನ್ನು ಕೊನೆಗೊಳಿಸಲು ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಲತೀನ್ ಅಮೆರಿಕದ ವಿಶ್ವಗುರುಗಳ ಆಯೋಗದ ಕಾರ್ಯದರ್ಶಿ ಎಮಿಲ್ಸ್ ಕುಡಾರವರು, ಸಮುದಾಯಗಳಲ್ಲಿ "ಸಂಘಟಿತ ಭರವಸೆ"ಗೆ ಕರೆ ನೀಡಿದರು. ಅಷ್ಟು ಮಾತ್ರವಲ್ಲದೇ, ಎಲ್ಲರಿಗೂ ಸಾಮಾಜಿಕ ಸುಧಾರಣೆಗಳನ್ನು ಖಾತರಿಪಡಿಸುವ" ಸಮಗ್ರ ನೀತಿಗಳ ವಿಸ್ತರಣೆಗೆ ಕಾರಣವಾಗುವ ಸಂವಾದವನ್ನು ಮುಂದಿನ ದಾರಿಯಾಗಿ ಅವರು ಸೂಚಿಸಿದರು.

ಒಟ್ಟಾರೆಯಾಗಿ, ಅಮೇರಿಕವನ್ನು ಒಂದೇ ಖಂಡವೆಂದು ಪರಿಗಣಿಸುವ ವ್ಯಾಟಿಕನ್ ಪದ್ಧತಿಯನ್ನು ಅನುಸರಿಸಿ, ಖಂಡದಲ್ಲಿ ದೇವರ ಜನರ ಪ್ರಯಾಣದಿಂದ ಉದ್ಭವಿಸುವ ಒಮ್ಮುಖಗಳು, ಪ್ರಶ್ನೆಗಳು ಮತ್ತು ಪ್ರಸ್ತಾಪಗಳನ್ನು ಪರಿಹರಿಸುವ ಭೂಖಂಡದ ದೈವಶಾಸ್ತ್ರದ ಸಂಭಾಷಣೆಯನ್ನು ಸಮ್ಮೇಳನವು ಉತ್ತೇಜಿಸಲು ಸಾಧ್ಯವಾಯಿತು ಎಂದು DPHID ಫೇಸ್‌ಬುಕ್ ಪುಟ ತಿಳಿಸಿದೆ.

12 ಫೆಬ್ರವರಿ 2025, 15:14