MAP

MEXICO-US-SECURITY-BORDER MEXICO-US-SECURITY-BORDER  (AFP or licensors)

ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ವಲಸಿಗರ ಬೆಂಬಲಕ್ಕೆ ನಿಂತ ಧರ್ಮಸಭೆ

ವ್ಯಾಟಿಕನ್ ಸುದ್ಧಿಯ ಜೊತೆ ಮಾತನಾಡಿದ ಸಿಯುಡಾಡ್ ಜುವಾರೆಜ್‌ನ ಧರ್ಮಾಧ್ಯಕ್ಷ ಜೋಸ್ ಗ್ವಾಡಾಲುಪೆ ಟೊರೆಸ್ ಕ್ಯಾಂಪೋಸ್ ರವರು, ಅಧ್ಯಕ್ಷ ಟ್ರಂಪ್ ರವರ ವಲಸೆ ವಿರೋಧಿ ನೀತಿಗಳು ಭಯ ಮತ್ತು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸಿವೆ ಹಾಗೂ ಧರ್ಮಸಭೆಯು ಭರವಸೆಯನ್ನು ಉತ್ತೇಜಿಸುವ ತನ್ನ ಧ್ಯೇಯದಲ್ಲಿ ದೃಢವಾಗಿ ಉಳಿದಿದೆ ಎಂದು ಹೇಳುತ್ತಾರೆ.

ಗಿಯೋರ್ಡಾನೊ ಕಾಂಟು ಮತ್ತು ಲಿಸಾ ಝೆಂಗಾರಿನಿ

ಪರಿಸ್ಥಿತಿ ತುಲನಾತ್ಮಕವಾಗಿ ಶಾಂತವಾಗಿದೆ, ಆದರೆ ಮೆಕ್ಸಿಕೋ ಮತ್ತು ಅಮೇರಿಕದ ನಡುವಿನ ಗಡಿಯಲ್ಲಿ ವಲಸಿಗರಲ್ಲಿ ವಾತಾವರಣವು ಉದ್ವಿಗ್ನವಾಗಿದೆ.

ಅಮೆರಿಕಕ್ಕೆ ವಲಸೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿರುವ ಡೊನಾಲ್ಡ್ ಟ್ರಂಪ್ ರವರ ವಾಕ್ಚಾತುರ್ಯ ಮತ್ತು ಕಾರ್ಯಕಾರಿ ಆದೇಶಗಳ ಹೊರತಾಗಿಯೂ, ಜನವರಿ 20, 2025 ರಂದು ಅವರು ಅಮೇರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಯಾವುದೇ ಪ್ರಮುಖ ಬದಲಾವಣೆಗಳು ಇನ್ನೂ ಕಂಡುಬಂದಿಲ್ಲ ಎಂದು ಮೆಕ್ಸಿಕೋ ಧರ್ಮಕ್ಷೇತ್ರದ ಸಿಯುಡಾಡ್ ಜುವಾರೆಜ್‌ನ ಧರ್ಮಾಧ್ಯಕ್ಷರಾದ ಜೋಸ್ ಹೇಳಿದ್ದಾರೆ.

ಬದಲಾಗುತ್ತಿರುವ ವಾಸ್ತವ
ಅಮೇರಿಕದ ಗಡಿ ಗಸ್ತು ಪಡೆಯ ಇತ್ತೀಚಿನ ದತ್ತಾಂಶವು "2024ರ ಕೊನೆಯ ಆರು ತಿಂಗಳಲ್ಲಿ, ನೈಋತ್ಯ ಗಡಿಯಲ್ಲಿ ಬಂಧನಗಳು 2023 ರ ಅದೇ ಅವಧಿಗೆ ಹೋಲಿಸಿದರೆ 70% ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ತೋರಿಸುತ್ತದೆ.

ಆದಾಗ್ಯೂ, ಈ ಇಳಿಕೆ, ಆಶ್ರಯ ಅರ್ಜಿ ನೇಮಕಾತಿಗಳ ರದ್ದತಿಯೊಂದಿಗೆ ಹೊಂದಿಕೆಯಾಗುತ್ತದೆ. ಆದ್ದರಿಂದ, ತುರ್ತು ಪರಿಸ್ಥಿತಿಗಿಂತ ಹೆಚ್ಚಾಗಿ, ನಾವು ಪರಿಹರಿಸಬೇಕಾದ ಹೊಸ ವಾಸ್ತವವನ್ನು ನಾವು ಎದುರಿಸುತ್ತಿದ್ದೇವೆ ಎಂದು ಸಿಯುಡಾಡ್ ಜುವಾರೆಜ್‌ನ ಧರ್ಮಾಧ್ಯಕ್ಷರಾದ ಜೋಸ್ ಗ್ವಾಡಾಲುಪೆ ಟೊರೆಸ್ ಕ್ಯಾಂಪೋಸ್ ರವರು ಹೇಳುತ್ತಾರೆ.

ಹಲವು ವರ್ಷಗಳಿಂದ, ಈ ಮೆಕ್ಸಿಕೋ ಗಡಿಯ ಧರ್ಮಕ್ಷೇತ್ರವು ಅಮೆರಿಕದಲ್ಲಿ ಉತ್ತಮ ಭವಿಷ್ಯವನ್ನು ಬಯಸುವ ವಲಸಿಗರು ಮತ್ತು ಆಶ್ರಯ ಪಡೆಯುವವರಿಗೆ ಸಹಾಯ ಹಾಗೂ ಬೆಂಬಲ ನೀಡುವಲ್ಲಿ ಮುಂಚೂಣಿಯಲ್ಲಿದೆ.

ಈಗ ನಾವು ವಲಸೆ ಹರಿವಿನಲ್ಲಿ ಭಾಗಿಯಾಗಿರುವ, ಅಮೇರಿಕದಲ್ಲಿ ರಾಜಕೀಯ ಆಶ್ರಯ ಪಡೆಯುವವರು ಮತ್ತು ಮುಂಬರುವ ತಿಂಗಳುಗಳು ಮತ್ತು ಮುಂದಿನ ವರ್ಷಗಳಲ್ಲಿ ಹೊರಹಾಕಲ್ಪಟ್ಟು ಸ್ವದೇಶಕ್ಕೆ ಕಳುಹಿಸಲ್ಪಡುವವರು, ಎರಡೂ ಜನಸಂಖ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಎಂದು ಧರ್ಮಾಧ್ಯಕ್ಷರಾದ ಟೊರೆಸ್ ಕ್ಯಾಂಪೋಸ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು.

"ನಿಸ್ಸಂದೇಹವಾಗಿ," ಅಧ್ಯಕ್ಷ ಟ್ರಂಪ್ ರವರ ಹೇಳಿಕೆಗಳು ಮತ್ತು ಕಾರ್ಯಕಾರಿ ಆದೇಶಗಳು ಭಯ ಮತ್ತು ಹತಾಶೆಯ ವಾತಾವರಣವನ್ನು ಸೃಷ್ಟಿಸಿವೆ. ಆದಾಗ್ಯೂ, ಒಂದು ಧರ್ಮಸಭೆಯಾಗಿ, ಸ್ಥಳೀಯ, ರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಕ್ರಮಗಳ ಮೂಲಕ, ಎಲ್ಲರಿಗೂ ಪ್ರಯೋಜನವಾಗುವ ಕ್ರಿಯಾ ಯೋಜನೆಗಳನ್ನು ರೂಪಿಸಲು ಮತ್ತು ಬಲಪಡಿಸಲು ವಲಸಿಗರು ಮತ್ತು ಒಟ್ಟಾರೆಯಾಗಿ ಸಮಾಜದಲ್ಲಿ ಶಾಂತಿ ಮತ್ತು ಭರವಸೆಯನ್ನು ಕಾಪಾಡಿಕೊಳ್ಳುವತ್ತ ನಾವು ಗಮನಹರಿಸುತ್ತೇವೆ ಎಂದು ಅವರು ಹೇಳುತ್ತಾರೆ.

ಧರ್ಮಸಭೆಯು ವಲಸಿಗರಿಗೆ ಭರವಸೆಯ ದಾರಿದೀಪವಾಗಿ ಮುಂದುವರಿಯುತ್ತದೆ
ಇಂದು, ಎಂದಿಗಿಂತಲೂ ಹೆಚ್ಚಾಗಿ, ಶಾಂತಿ ಮತ್ತು ಯೇಸುವಿನ ಶಾಶ್ವತ ಉಪಸ್ಥಿತಿಯ ನಿಶ್ಚಿತತೆಯು, ಎಲ್ಲಾ ಹಿಂಸೆ, ಕಷ್ಟಗಳನ್ನು ಸಹಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ವಲಸೆ ಸಹೋದರರು ತಮ್ಮ ಕಷ್ಟದಲ್ಲಿ ಒಂಟಿಯಾಗಿಲ್ಲ, "ಅವರು ಬಯಸುವುದು ಸಂತೋಷ ಮತ್ತು ಉತ್ತಮ ಜೀವನ" ಎಂದು ಭಾವಿಸುವಂತೆ ಮಾಡುತ್ತದೆ ಎಂದು ಧರ್ಮಾಧ್ಯಕ್ಷರಾದ ಟೊರೆಸ್ ಕ್ಯಾಂಪೋಸ್ ರವರು ಹೇಳಿದರು.

ಸುವಾರ್ತೆಯು ಮಾನವೀಯತೆಯ ಕರಾಳ ಕ್ಷಣಗಳನ್ನು ಹೇಗೆ ಬೆಳಗಿಸುತ್ತದೆ ಎಂದು ಕೇಳಿದಾಗ, ಧ್ರಮಾಧ್ಯಕ್ಷರು ಶುಭಸಂದೇಶಕಾರ ಸಂತ ಮತ್ತಾಯರ ವಾಕ್ಯಗಳನ್ನು ಉಲ್ಲೇಖಿಸಿದರು: 'ಖಂಡಿತವಾಗಿಯೂ ನಾನು ಯುಗದ ಕೊನೆಯವರೆಗೂ ಯಾವಾಗಲೂ ನಿಮ್ಮೊಂದಿಗಿದ್ದೇನೆ' (ಮತ್ತಾಯ 28:20). ಇವು ಭರವಸೆಯ ಮಾತುಗಳು ಮತ್ತು ಪುನರುತ್ಥಾನಗೊಂಡ ಕ್ರಿಸ್ತರ ಸಾನ್ನಿಧ್ಯ, ತನ್ನ ಶಿಷ್ಯರಿಗೆ ಕಾಣಿಸಿಕೊಂಡಾಗ ಅವರನ್ನು ಸ್ವಾಗತಿಸುವ ಅದೇ ಕ್ರಿಸ್ತರು," "ನಿಮಗೆ ಶಾಂತಿ ಸಿಗಲಿ" ಎಂದು ನುಡಿಯುವುದನ್ನು ಗಮನಿಸಬೇಕಾಗಿದೆ.

ಅಮೆರಿಕದಿಂದ ಗಡೀಪಾರು ಮಾಡಲಾದವರನ್ನು ಸ್ವೀಕರಿಸಲು ಮೆಕ್ಸಿಕೋ ಸಜ್ಜುಗೊಂಡಿದೆ.
ಅಮೇರಿಕದ ಹೊಸ ವಲಸೆ ನೀತಿಯು ಮೆಕ್ಸಿಕೋವನ್ನು ತನ್ನ ನಾಗರಿಕರು ಮತ್ತು ಅಮೆರಿಕದಿಂದ ಗಡೀಪಾರು ಮಾಡಲಾದ ಅಥವಾ ಗಡೀಪಾರು ಮಾಡಲಾದ ವಿದೇಶಿಯರಿಗೆ ಸೂಕ್ತವಾದ ಸ್ವಾಗತ ಯೋಜನೆಯನ್ನು ಸಿದ್ಧಪಡಿಸುವಂತೆ ಒತ್ತಾಯಿಸಿದೆ.

ಒಂದು ಧರ್ಮಸಭೆಯಾಗಿ, ನಾವು ಸಾರಬಹುದಾದ ಅತ್ಯುತ್ತಮ ವಿಷಯವೆಂದರೆ ಪುನರುತ್ಥಾನಗೊಂಡ ಯೇಸುವಿನ ಶಾಂತಿ, ಕಷ್ಟಕರ ಪರಿಣಾಮಗಳಿಗೆ ಕಾರಣವಾಗುವ ಮತ್ತಷ್ಟು ಅವ್ಯವಸ್ಥೆಯನ್ನು ತಪ್ಪಿಸುವುದು ಎಂದು ಧರ್ಮಾಧ್ಯಕ್ಷರಾದ ಟೊರೆಸ್ ಕ್ಯಾಂಪೋಸ್ ರವರು ಹೇಳಿದರು. ಸಕಾರಾತ್ಮಕ ಅಂಶವೆಂದರೆ, ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ನಂಬಿಕೆ ಸಮುದಾಯಗಳ ನಡುವಿನ ಸಹಯೋಗ ಹೆಚ್ಚಾಗಿದೆ ಮತ್ತು ಲತೀನ್ ಅಮೇರಿಕದ ಧರ್ಮಸಭೆಯು, ಇತರ ಉದಯೋನ್ಮುಖ ಸನ್ನಿವೇಶಗಳಿಗೆ ತಕ್ಷಣದ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ಒದಗಿಸಲು ಸಹಕಾರವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

07 ಫೆಬ್ರವರಿ 2025, 13:10