MAP

BURKINA-CONFLICT-UNREST-DISPLACED BURKINA-CONFLICT-UNREST-DISPLACED  (AFP or licensors)

ಬುರ್ಕಿನಾ ಫಾಸೊದಲ್ಲಿನ ಕ್ರೈಸ್ತರು ಭಯೋತ್ಪಾದಕ ದಾಳಿ, ಡಕಾಯಿತ ದಾಳಿಯನ್ನು ಎದುರಿಸುತ್ತಿದ್ದಾರೆ

ಪಶ್ಚಿಮ ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಸಾವನ್ನಪ್ಪಿ ದ್ದಾರೆ ಮತ್ತು ಆ ಪ್ರದೇಶದಲ್ಲಿ ಇಬ್ಬರು ಧರ್ಮಬೋಧಕರನ್ನು ಡಕಾಯಿತರು ಕೊಂದು ಹಾಕಿದ್ದಾರೆ, ನೆರವಿನ ಅಗತ್ಯವಿರುವ ಧರ್ಮಸಭೆಗೆ ಸಹಾಯಕ್ಕಾಗಿ ಪ್ರಾರ್ಥನೆಗಳು ನಡೆಯುತ್ತಿವೆ.

ಕ್ರಿಸ್ಟೋಫರ್ ವೆಲ್ಸ್

ಜನವರಿ ಅಂತ್ಯದಲ್ಲಿ ಪಶ್ಚಿಮ ಬುರ್ಕಿನಾ ಫಾಸೊದ ಮೂರು ಹಳ್ಳಿಗಳ ಮೇಲೆ 200ಕ್ಕೂ ಹೆಚ್ಚು ಭಯೋತ್ಪಾದಕರು ದಾಳಿ ಮಾಡಿದರು, ಕನಿಷ್ಠ ಆರು ಕ್ರೈಸ್ತರು ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿದರು. ದಾಳಿಕೋರರು ಮನೆಗಳಿಗೆ ಬೆಂಕಿ ಹಚ್ಚಿದ ಕಾರಣ, ನಿವಾಸಿಗಳು ಪಲಾಯನ ಮಾಡಬೇಕಾಯಿತು. ಒಂದು ವಾರದ ಕಡಿಮೆ ಅವಧಿಯಲ್ಲಿ, ಮತ್ತಷ್ಟು ದಾಳಿಗಳು ಹೆಚ್ಚಿನ ಸಾವುಗಳಿಗೆ ಕಾರಣವಾಯಿತು.

ಭಯೋತ್ಪಾದಕ ದಾಳಿಯ ಸುದ್ದಿಯನ್ನು ಕಥೋಲಿಕ ನೆರವು ಸಂಸ್ಥೆ "ಏಡ್ ಟು ದಿ ಚರ್ಚ್ ಇನ್ ನೀಡ್" ಗೆ ಎಸಿಎನ್ ಯೋಜನೆಯ ಪಾಲುದಾರ ಧರ್ಮಗುರು ಜೀನ್-ಪಿಯರೆ ಕೀಟಾರವರು, ದಾಳಿಯಲ್ಲಿ ತಮ್ಮ ತಂದೆ ಮತ್ತು ಇತರ ಹಲವಾರು ಕುಟುಂಬ ಸದಸ್ಯರನ್ನು ಕಳೆದುಕೊಂಡರು ಎಂದು ವರದಿ ಮಾಡಿದರು.

ಪಶ್ಚಿಮ ಬುರ್ಕಿನಾ ಫಾಸೊದ ಬನ್ವಾ ಪ್ರಾಂತ್ಯದ ಪ್ರಾದೇಶಿಕ ಕೇಂದ್ರವಾದ ತನ್ಸಿಲಾ ಧರ್ಮಕೇಂದ್ರದಲ್ಲಿ ಈ ದಾಳಿಗಳು ನಡೆದಿವೆ. ಈ ಧರ್ಮಕೇಂದ್ರವು 37 ಹಳ್ಳಿಗಳನ್ನು ಒಳಗೊಂಡಿದೆ, ಧರ್ಮಕೇಂದ್ರದ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗ ಕ್ರೈಸ್ತರಾಗಿದ್ದಾರೆ.

ದಯವಿಟ್ಟು ಹೃದಯಗಳ ಪರಿವರ್ತನೆಗಾಗಿ ಪ್ರಾರ್ಥಿಸಿ, ಇದರಿಂದ ಎಲ್ಲರೂ ಶಾಂತಿ ತಯಾರಕರಾಗಬಹುದು ಎಂದು ಧರ್ಮಗುರು ಜೀನ್-ಪಿಯರ್ ರವರು ಪ್ರಾರ್ಥನೆಗೆ ಕರೆ ನೀಡಿದ್ದಾರೆ, ಬುರ್ಕಿನಾ ಫಾಸೊದಲ್ಲಿನ ಸರ್ಕಾರ, ರಕ್ಷಣಾ ಮತ್ತು ಭದ್ರತಾ ಪಡೆಗಳು ಮತ್ತು ಪಿತೃಭೂಮಿಯ ರಕ್ಷಣೆಗಾಗಿ ಸ್ವಯಂಸೇವಕರಿಗಾಗಿ ಪ್ರಾರ್ಥಿಸಿ, ಇದರಿಂದ ಅವರ ದೈನಂದಿನ ಪ್ರಯತ್ನಗಳು ಶಾಂತಿ, ಸಮನ್ವಯ ಮತ್ತು ಸಾಮಾಜಿಕ ಒಗ್ಗಟ್ಟಿಗಾಗಿ ಫಲ ನೀಡುತ್ತವೆ ಎಂದು ಹೇಳಿದರು.

ಭಯೋತ್ಪಾದನೆಯಿಂದ ಬಾಧಿತರಾದ ಎಲ್ಲರನ್ನು ತಮ್ಮ ಮನವಿಯಲ್ಲಿ ಧರ್ಮಗುರು ಜೀನ್-ಪಿಯರ್ ಸ್ಮರಿಸಿಕೊಂಡರು: ವಿಶ್ವಾದ್ಯಂತ ಭಯೋತ್ಪಾದನೆಯ ಸಂತ್ರಸ್ತರೊಂದಿಗೆ ನಮ್ಮ ಪ್ರಾರ್ಥನೆಗಳು ಇವೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ.

ಧರ್ಮಬೋಧಕರ ಹತ್ಯೆ
ಟ್ಯಾನ್ಸಿಲಾದಲ್ಲಿ ಮೊದಲ ದಾಳಿ ನಡೆದ ದಿನವೇ, ಪಶ್ಚಿಮ ಬುರ್ಕಿನಾ ಫಾಸೊ ಪ್ರಾಂತ್ಯದ ಮೌಹೌನ್‌ನಲ್ಲಿರುವ ಹತ್ತಿರದ ಡೆಡೌಗೌನ ಧರ್ಮಕ್ಷೇತ್ರದ ಇಬ್ಬರು ಧರ್ಮಬೋಧಕರು, ಧರ್ಮಬೋಧನಾ ತರಬೇತಿಯ ಅವಧಿಗಳಿಂದ ಹಿಂತಿರುಗುತ್ತಿದ್ದಾಗ ಡಕಾಯಿತರಿಂದ ಕೊಲ್ಲಲ್ಪಟ್ಟರು.

ನೆರವಿನ ಅಗತ್ಯವುಳ್ಳ ಧರ್ಮಸಭೆಗೆ, ನೆರವು ನೀಡುವ ಸಂಸ್ಥೆಯು, ಔಕಾರಾ ಧರ್ಮಕೇಂದ್ರದ ನಾಲ್ವರು ಧರ್ಮಬೋಧಕರು ಎರಡು ಮೋಟಾರ್‌ಸೈಕಲ್‌ಗಳಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಗುಂಪಿನ ಮೇಲೆ ದಾಳಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಮೊದಲ ವಾಹನದಲ್ಲಿದ್ದ ಧರ್ಮಬೋಧಕರು ಕಾಡಿಗೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದರು, ಆದರೆ ಅವರ ಇಬ್ಬರು ಸಹಚರರು ಡಕಾಯಿತರ ಧಾಳಿಗೆ ಸಿಲುಕಿಕೊಂಡು ನಂತರ ಕೊಲೆಯಾಗಿ ಕಂಡುಬಂದರು.

ಬೊಂಡೊಕುಯ್ ಪಟ್ಟಣದ ಸ್ಥಳೀಯ ಪೊಲೀಸ್ ಆಯುಕ್ತರು, ಈ ಪ್ರದೇಶವು ಡಕಾಯಿತರಿಗೆ ಹೆಸರುವಾಸಿಯಾಗಿದೆ, ಅವರು ಸಶಸ್ತ್ರ ದರೋಡೆಗಳನ್ನು ನಡೆಸುವ ನೆಪವಾಗಿ ಭಯೋತ್ಪಾದಕರಂತೆ ನಟಿಸುತ್ತಾರೆ. ಇತ್ತೀಚಿನ ತಿಂಗಳುಗಳಲ್ಲಿ, ಇದು ಧರ್ಮಬೋಧಕರ ಹತ್ಯೆಯ ನಾಲ್ಕನೇ ಘಟನೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನೆರವಿನ ಅಗತ್ಯವುಳ್ಳ ಧರ್ಮಸಭೆಗೆ, ನೆರವು ಸಂಸ್ಥೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ತೀವ್ರ ಹಿಂಸಾಚಾರದ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದೆ ಮತ್ತು ಔಕಾರಾ ಧರ್ಮಕೇಂದ್ರದ ಸಮುದಾಯ, ಸಂತ್ರಸ್ತರ ಕುಟುಂಬಗಳು ಮತ್ತು ಬುರ್ಕಿನಾ ಫಾಸೊದಲ್ಲಿ ಶಾಂತಿಗಾಗಿ ಪ್ರಾರ್ಥನೆಗಳನ್ನು ಕೋರಿದೆ ಎಂದು ಹೇಳಿದೆ, ದೇಶವು ಕ್ರೈಸ್ತ ಸಮುದಾಯಗಳ ವಿರುದ್ಧ ಅಭದ್ರತೆ ಮತ್ತು ಕಿರುಕುಳದಿಂದ ಬಳಲುತ್ತಿದೆ ಎಂದು ಗಮನಿಸಿದೆ.
 

18 ಫೆಬ್ರವರಿ 2025, 11:24