MAP

 SPECIAL REPORT DOLLAR SPECIAL REPORT DOLLAR 

G - 20 ಸಾಲ ಪರಿಹಾರ ಮನವಿಯನ್ನು ಕಾರಿತಾಸ್ ಮತ್ತು ಧಾರ್ಮಿಕ ಮುಖಂಡರು ಸಲ್ಲಿಸುತ್ತಾರೆ

ಅಂತರಾಷ್ಟ್ರೀಯ ಕಾರಿತಾಸ್ ಗೆ ಬಿಡುಗಡೆ ಮಾಡಿದ ಪತ್ರದಲ್ಲಿ, ಪ್ರಪಂಚದಾದ್ಯಂತದ 100ಕ್ಕೂ ಹೆಚ್ಚು ಧಾರ್ಮಿಕ ನಾಯಕರು ಜೂಬಿಲಿ ವರ್ಷದಲ್ಲಿ ಬಡ-ದೇಶಗಳು ಆರೋಗ್ಯ ಮತ್ತು ಶಿಕ್ಷಣಕ್ಕಿಂತ ಸಾಲ ಮರುಪಾವತಿಗೆ ಹೆಚ್ಚು ಖರ್ಚು ಮಾಡುವ ಹಗರಣವನ್ನು ಕೊನೆಗೊಳಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ 20 ದೊಡ್ಡ ಆರ್ಥಿಕತೆಗಳ ಗುಂಪಿನ ಹಣಕಾಸು ಮಂತ್ರಿಗಳಿಗೆ ಕರೆ ನೀಡಿದ್ದಾರೆ.

ಲಿಸಾ ಝೆಂಗಾರಿನಿ

ಬಡತನವನ್ನು ನಿಭಾಯಿಸುವ ಪ್ರಯತ್ನಗಳು ಮತ್ತು ಹವಾಮಾನದ ಮೇಲಿನ ಕ್ರಮವನ್ನು ಕುಂಠಿತಗೊಳಿಸುತ್ತಿರುವ ಜಾಗತಿಕ ಸಾಲದ ಬಿಕ್ಕಟ್ಟನ್ನು ಪರಿಹರಿಸಲು 20 ಶ್ರೀಮಂತ ರಾಷ್ಟ್ರಗಳ ಗುಂಪಿಗೆ (G20) ಒತ್ತಾಯಪೂರ್ವಕ ಮನವಿಯನ್ನು ನೀಡುವ ಮೂಲಕ ಜಗತ್ತಿನಾದ್ಯಂತ 124 ಧಾರ್ಮಿಕ ನಾಯಕರು ಜೂಬಿಲಿ ವರ್ಷವನ್ನು ಆಚರಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ G-20 ವಾರ್ಷಿಕ ಶೃಂಗಸಭೆಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಈ ವಾರ ಭೇಟಿಯಾದ G-20 ಹಣಕಾಸು ಮಂತ್ರಿಗಳನ್ನು ಉದ್ದೇಶಿಸಿ ಈ ಮನವಿಯನ್ನು ಬರೆಯಲಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಿನ ಸಾಲ ಮರುಪಾವತಿಯ ಅಸಮಾನ ಹೊರೆಯನ್ನು ಇದು ಒತ್ತಿಹೇಳುತ್ತದೆ. ಇದು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದಂತಹ ನಿರ್ಣಾಯಕ ಕ್ಷೇತ್ರಗಳಿಂದ ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತದೆ.

ಬಡ ರಾಷ್ಟ್ರಗಳ ಮೇಲೆ ಪ್ರಸ್ತುತ ಸಾಲದ ಬಿಕ್ಕಟ್ಟಿನ ವಿನಾಶಕಾರಿ ಪರಿಣಾಮ
ವಿಶ್ವಾಸದ ನಾಯಕರಾಗಿ, ಈ ಪ್ರಸ್ತುತ ಸಾಲದ ಬಿಕ್ಕಟ್ಟು ಪ್ರಪಂಚದಾದ್ಯಂತದ ಬಡವರು ಮತ್ತು ಅತ್ಯಂತ ದುರ್ಬಲರ ಜೀವನದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ನಾವು ತೀವ್ರವಾಗಿ ಚಿಂತಿತರಾಗಿದ್ದೇವೆ ಎಂದು ಪತ್ರವು ಹೇಳುತ್ತದೆ, ಇಂದು ಕ್ರಮದ ಅಗತ್ಯವು 2000ದಲ್ಲಿ ಆ ವರ್ಷದ ಮಹಾ ಮಹೋತ್ಸವದ ಸಂದರ್ಭದಲ್ಲಿ ಮೊದಲ ಜಾಗತಿಕ ಸಾಲ ಅಭಿಯಾನವನ್ನು ಪ್ರಾರಂಭಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ಉಲ್ಲೇಖಿಸುತ್ತದೆ. 3.3 ಶತಕೋಟಿ ಜನರು - ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟು - ಈಗ ಆರೋಗ್ಯ, ಶಿಕ್ಷಣ ಅಥವಾ ಜೀವ ಉಳಿಸುವ ಹವಾಮಾನ ಕ್ರಮಗಳಿಗಿಂತ ಸಾಲ ಪಾವತಿಗಳಿಗೆ ಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಬರೆಯುತ್ತಾರೆ.

ಜಾಗತಿಕ ಹಣಕಾಸು ವ್ಯವಸ್ಥೆಗಳಲ್ಲಿ, ವಿಶೇಷವಾಗಿ ಜೂಬಿಲಿಯ ಭರವಸೆಯ ಸಂದರ್ಭದಲ್ಲಿ, ನ್ಯಾಯಕ್ಕಾಗಿ ವಿಶ್ವಗುರು ಫ್ರಾನ್ಸಿಸ್ ರವರ ವಿಶಾಲ ಕರೆಗೆ ಪ್ರತಿಕ್ರಿಯೆಯಾಗಿ ಅಂತರಾಷ್ಟ್ರೀಯ ಕಾರಿತಾಸ್‌ ಈ ಉಪಕ್ರಮವನ್ನು ಮುನ್ನಡೆಸಿದೆ.

ಈ ಪತ್ರಕ್ಕೆ ಮೊದಲು ಸಹಿ ಹಾಕಿದ ಕೇಪ್ ಟೌನ್ ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಸ್ಟೀಫನ್ ಬ್ರಿಸ್ಲಿನ್ ರವರು, ದಕ್ಷಿಣ ಆಫ್ರಿಕಾದ ಕಥೋಲಿಕ ಧರ್ಮಾಧ್ಯಕ್ಷರರುಗಳ ಸಮ್ಮೇಳನ (SACBC) ವನ್ನು ಮಾತ್ರವಲ್ಲದೆ, ಈ ವರ್ಷ G-20ಯ ಆವರ್ತನ ಅಧ್ಯಕ್ಷತೆಯನ್ನು ಹೊಂದಿರುವ ದೇಶವನ್ನೂ ಪ್ರತಿನಿಧಿಸುತ್ತಾರೆ, ಇದು ಸಂದೇಶಕ್ಕೆ ಹೆಚ್ಚಿನ ಬಲವನ್ನು ನೀಡುತ್ತದೆ.

ವಿಶ್ವಸಂಸ್ಥೆಯ ಸಾಲ ಸಮಾವೇಶದ ಸ್ಥಾಪನೆಗೆ ಬೆಂಬಲ
ಅಂತಿಮವಾಗಿ, ಜವಾಬ್ದಾರಿಯುತ ಸಾಲ ಮತ್ತು ಸಾಲ ಪಡೆಯುವ ಅಭ್ಯಾಸಗಳನ್ನು ಜಾರಿಗೊಳಿಸುವ, ಪಾರದರ್ಶಕ ನಿಯಮಗಳನ್ನು ರಚಿಸುವ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಜಾಗತಿಕ ಸಾಲ ನೋಂದಣಿಯನ್ನು ಪರಿಚಯಿಸುವ ವಿಶ್ವಸಂಸ್ಥೆಯ ಸಾಲ ಸಮಾವೇಶದ ಸ್ಥಾಪನೆಯನ್ನು ಪತ್ರವು ಬೆಂಬಲಿಸುತ್ತದೆ.

ಈ ಬದಲಾವಣೆಗಳನ್ನು ಜಾರಿಗೆ ತರುವುದರಿಂದ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸುವುದಲ್ಲದೆ, ನ್ಯಾಯಯುತ ಮತ್ತು ಹೆಚ್ಚು ಸುಸ್ಥಿರ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಬೆಳೆಸಲು ಸಹಾಯವಾಗುತ್ತದೆ ಎಂದು ಸಹಿದಾರರು ಒತ್ತಿ ಹೇಳುತ್ತಾರೆ. "ವಿಶ್ವಾಸದ ನಾಯಕರಾಗಿ," ಅವರು ಈ ಜೂಬಿಲಿ ವರ್ಷದಲ್ಲಿ ಧೈರ್ಯ, ಒಗ್ಗಟ್ಟು ಮತ್ತು ಸಹಾನುಭೂತಿಯಿಂದ ವರ್ತಿಸುವ ಭರವಸೆಯ ಯಾತ್ರಿಕರಾಗಿರಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ತೀರ್ಮಾನಿಸುತ್ತಾರೆ.
 

28 ಫೆಬ್ರವರಿ 2025, 12:56