ಮೇ ತಿಂಗಳಲ್ಲಿ ಎಸ್ಟೋನಿಯನ್ ಮಹಾಧರ್ಮಾಧ್ಯಕ್ಷ ಪ್ರಾಫಿಟ್ಲಿಚ್ ರವರ ಪುನೀತ ಪದಪ್ರದಾನ
ಮಾರ್ಗ್-ಮೇರಿ ಪಾಸ್ - ಟ್ಯಾಲಿನ್
ಡಿಸೆಂಬರ್ 18, 2024 ರಂದು, ವಿಶ್ವಗುರು ಫ್ರಾನ್ಸಿಸ್ ರವರು ಮಹಾಧರ್ಮಾಧ್ಯಕ್ಷ ಎಡ್ವರ್ಡ್ ಪ್ರಾಫಿಟ್ಲಿಚ್, ಎಸ್‌ಜೆ (1890-1942) ರವರ ಪುನೀತ ಪದಪ್ರದಾನವನ್ನು ಅನುಮೋದಿಸಿದರು ಮತ್ತು ಈ ಪುನೀತ ಪದಪ್ರದಾನವನ್ನು ಮೇ 17, 2025 ರಂದು ಟ್ಯಾಲಿನ್‌ನ ಓಲ್ಡ್ ಟೌನ್ ಸ್ಕ್ವೇರ್‌ನಲ್ಲಿ ನಡೆಯಲಿದೆ ಎಂದು ಎಸ್ಟೋನಿಯಾದ ಟ್ಯಾಲಿನ್ ಧರ್ಮಕ್ಷೇತ್ರವು ಮಂಗಳವಾರ ಘೋಷಿಸಿತು.
ವಿಶ್ವಗುರುಗಳ ಪ್ರತಿನಿಧಿ ಕಾರ್ಡಿನಲ್ ಕ್ರಿಸ್ಟೋಫ್ ಸ್ಕೋನ್‌ಬಾರ್ನ್ ರವರು, O.P., ಪುನೀತ ಪದಪ್ರದಾನ- ಪವಿತ್ರೀಕರಣಕ್ಕಾಗಿ ಟ್ಯಾಲಿನ್‌ಗೆ ಬರಲಿದ್ದಾರೆ ಮತ್ತು ಈ ಸಮಯದಲ್ಲಿ ಪುನೀತ ಪದಪ್ರದಾನದ ಕ್ರಿಯೆಯನ್ನು ಪವಿತ್ರ ದೈವಾರಾಧನೆಯ ವಿಧಿಯನ್ನು ಮುನ್ನಡೆಸಲಿದ್ದಾರೆ.
ಇದು ಎಸ್ಟೋನಿಯಾ ಮತ್ತು ಎಸ್ಟೋನಿಯನ್ ಜನರಿಗೆ ಒಂದು ಐತಿಹಾಸಿಕ ಘಟನೆಯಾಗಿದೆ. ಮಹಾಧರ್ಮಾಧ್ಯಕ್ಷರಾದ ಪ್ರಾಫಿಟ್ಲಿಚ್ ರವರು, ವಿಶ್ವಗುರು ಹನ್ನೆರಡನೇಯ ಪಯಸ್ ರವರ ಸಲಹೆಯನ್ನು ಅನುಸರಿಸಿ, ತನಗೆ ಮತ್ತು ದೇವರಿಗೆ ನಿಷ್ಠರಾಗಿ, ಸೋವಿಯತ್ ಎಸ್ಟೋನಿಯಾ ಆಕ್ರಮಣದ ನಂತರದ ಅವಧಿಯಲ್ಲಿ ಅನೇಕ ಎಸ್ಟೋನಿಯನ್ನರ ಸಾಮಾನ್ಯ ಭವಿಷ್ಯವನ್ನು ಹಂಚಿಕೊಳ್ಳಲು ನಿರ್ಧರಿಸಿದರು.
ಎಸ್ಟೋನಿಯಾದ ಪ್ರೇಷಿತ ಆಡಳಿತಾಧಿಕಾರಿಯು, ತನ್ನ ಸ್ಥಳೀಯ ಜರ್ಮನಿಗೆ ತೆರಳುವ ಅವಕಾಶ ಸಿಕ್ಕಿದ್ದರೂ, ತಾನು ತುಂಬಾ ಪ್ರೀತಿಸುತ್ತಿದ್ದ ಜನರು ಮತ್ತು ಧರ್ಮಸಭೆಯ ಜೊತೆಗೆ ಆ ದೇಶದಲ್ಲಿಯೇ ಇದ್ದರು. ಅವರು ಕೊನೆಯವರೆಗೂ ತಮ್ಮ ದೈವಕರೆಗೆ ಮತ್ತು ದೇವರಿಗೆ ನಂಬಿಗಸ್ತರಾಗಿದ್ದರು. ಆದಾಗ್ಯೂ, ಫೆಬ್ರವರಿ 22, 1942 ರಂದು ಸೋವಿಯತ್ ರಷ್ಯಾದ ಕಿರೋವ್ ಜೈಲಿನಲ್ಲಿ ಅವರ ಹುತಾತ್ಮತೆಗೆ ಕಾರಣವಾಯಿತು.
ಪುನೀತ ಪದಪ್ರದಾನ ಪ್ರಾಪ್ತಿಯ ಬಗ್ಗೆ ಮಾತನಾಡಿದ ಟ್ಯಾಲಿನ್‌ನ ಧರ್ಮಾಧ್ಯಕ್ಷ ಫಿಲಿಪ್ ಜೋರ್ಡನ್ ರವರು, ತಮ್ಮ ಪೂರ್ವಾಧಿಕಾರಿಯ ನಂಬಿಕೆಯ ವೀರೋಚಿತ ಸಾಕ್ಷಿಯನ್ನು ನೀಡುತ್ತಾರೆ ಎಂದು ಹೇಳಿದರು.
ಇದು ಎಸ್ಟೋನಿಯನ್ ಕಥೋಲಿಕ ಧರ್ಮಸಭೆಯ ಇತಿಹಾಸದಲ್ಲಿ ಮೊದಲನೆಯದು ಮತ್ತು 16ನೇ ಶತಮಾನದ ನಂತರದ ನಾರ್ಡಿಕ್ ದೇಶಗಳಲ್ಲಿ ಇದು ಮೊದಲನೆಯದು.
ವಿಶ್ವಗುರುಗಳ ಈ ನಿರ್ಧಾರವು ಇಡೀ ಎಸ್ಟೋನಿಯಾಗೆ ಮಹತ್ವದ ಅರ್ಥವನ್ನು ಹೊಂದಿದೆ. ಮಹಾಧರ್ಮಾಧ್ಯಕ್ಷ ಪ್ರಾಫಿಟ್ಲಿಚ್ ರವರ ಧರ್ಮಾಧ್ಯಕ್ಷ ಧ್ಯೇಯವಾಕ್ಯ 'ನಂಬಿಕೆ ಮತ್ತು ಶಾಂತಿ' ಯಾಗಿತ್ತು, ಮತ್ತು ಅವರು ಅತ್ಯಂತ ಸವಾಲಿನ ಸಮಯದಲ್ಲೂ ಸಹ ನಮ್ಮ ಹೃದಯಗಳಲ್ಲಿ ಯಾವಾಗಲೂ ವಿಶ್ವಾಸ ಮತ್ತು ಶಾಂತಿಯನ್ನು ಇಟ್ಟುಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು.
ಸಾರ್ವತ್ರಿಕ ಕಥೋಲಿಕ ಧರ್ಮಸಭೆ 2025ರ ಜ್ಯೂಬಿಲಿ ವರ್ಷದಲ್ಲಿ ಪವಿತ್ರ ಪದಪ್ರದಾನ ನಡೆಯಲಿದೆ, ಇದು 1300ರ ವರ್ಷದಿಂದ ವಿಶ್ವಗುರು ಎಂಟನೇ ಬೋನಿಫೇಸ್ ರವರು ಎಲ್ಲಾ ಭಕ್ತವಿಶ್ವಾಸಿಗಳನ್ನು ಧರ್ಮಸಭೆಯೊಂದಿಗೆ ಮೊದಲ ಜ್ಯೂಬಿಲಿಯನ್ನು ಆಚರಿಸಲು ಆಹ್ವಾನಿಸಿದಾಗಿನಿಂದ ಬಂದ ಸಂಪ್ರದಾಯವಾಗಿದೆ.
ದೇವರ ಸೇವೆಯ ಜೀವನ
ಎಡ್ವರ್ಡ್ ಪ್ರಾಫಿಟ್ಲಿಚ್ ರವರು ಜರ್ಮನಿಯ ಬಿರೆಸ್‌ಡಾರ್ಫ್‌ನಲ್ಲಿ ಜನಿಸಿದರು. ವಾಲ್ಕೆನ್‌ಬರ್ಗ್‌ನಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರವನ್ನು ಅಧ್ಯಯನ ಮಾಡಿದ ನಂತರ, ಪ್ರಾಫಿಟ್ಲಿಚ್ ರವರು 1922 ರಲ್ಲಿ ಪೋಲೆಂಡ್‌ಗೆ ತೆರಳಿದರು, ಅಲ್ಲಿ ಅವರು ಡಾಕ್ಟರೇಟ್ ಮಟ್ಟದಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಅವರು ಪೋಲೆಂಡ್ ಮತ್ತು ಜರ್ಮನಿಯಲ್ಲಿ ಧರ್ಮಕೇಂದ್ರದ ಧರ್ಮಗುರುವಾಗಿ ಸೇವೆ ಮಾಡಿದರು.
1930 ರಲ್ಲಿ, ಅವರನ್ನು ಎಸ್ಟೋನಿಯಾದಲ್ಲಿ ಕಥೋಲಿಕ ಧರ್ಮಸಭೆಯನ್ನು ನಿರ್ಮಿಸಲು ಮತ್ತು ಅಲ್ಲಿನ ಭಕ್ತವಿಶ್ವಾಸಿಗಳಿಗೆ ಸೇವೆ ಸಲ್ಲಿಸಲು ಎಸ್ಟೋನಿಯಾಗೆ ಕಳುಹಿಸಲಾಯಿತು. ಅವರನ್ನು 1931ರಲ್ಲಿ ಎಸ್ಟೋನಿಯಾದ ಪ್ರೇಷಿತ ಆಡಳಿತಗಾರರನ್ನಾಗಿ ನೇಮಿಸಲಾಯಿತು ಮತ್ತು ನಂತರ 1936ರಲ್ಲಿ ವಿಶ್ವಗುರು ಎಂಟನೇ ಪಯಸ್ ರವರಿಂದ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡರು.
ಎಡ್ವರ್ಡ್ ಪ್ರಾಫಿಟ್ಲಿಚ್ ಎಸ್ಟೋನಿಯನದ ಪೌರತ್ವವನ್ನು ಪಡೆದರು ಮತ್ತು ಅವರು ಎಸ್ಟೋನಿಯನ್ ಭಾಷೆಯನ್ನು ಚೆನ್ನಾಗಿ ಕಲಿತರು, ಎಸ್ಟೋನಿಯನ್ ಸಂಸ್ಕೃತಿ ಮತ್ತು ಜನರ ದೇಶಭಕ್ತರಾದರು.
ಮಹಾಧರ್ಮಾಧ್ಯಕ್ಷರಾಗದ ಪ್ರಾಫಿಟ್ಲಿಚ್ ರವರ ಸಮರ್ಪಣೆಗೆ ಹೆಚ್ಚಿನ ಧನ್ಯವಾದಗಳು, ಎಸ್ಟೋನಿಯಾದಲ್ಲಿ ಕಥೋಲಿಕ ಧರ್ಮಸಭೆಯ ಧರ್ಮಗುರುವಿನ ಪಾಲನಾ ಸೇವೆಯು ಹೊಸ ಮಟ್ಟವನ್ನು ತಲುಪಿದೆ.
ಸೋವಿಯತ್ ಅಧಿಕಾರಿಗಳು ಜೂನ್ 1941 ರಲ್ಲಿ ಪ್ರಾಫಿಟ್ಲಿಚ್ ರವರನ್ನು ಬಂಧಿಸಿ ಸೈಬೀರಿಯಾದ ಕಿರೋವ್ ಜೈಲಿಗೆ ಕಳುಹಿಸಿದರು, ಅಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು.
ಮಹಾಧರ್ಮಾಧ್ಯಕ್ಷ ಪ್ರಾಫಿಟ್ಲಿಚ್ ರವರ ಶಿಕ್ಷೆಯನ್ನು ಜಾರಿಗೊಳಿಸುವ ಮೊದಲೇ ಫೆಬ್ರವರಿ 22, 1942 ರಂದು ಕಿರೋವ್‌ನಲ್ಲಿ ನಿಧನರಾದರು.