MAP

Archive Photo of Cardinal Blase J. Cupich Archive Photo of Cardinal Blase J. Cupich   (2024 Getty Images)

ಕಾರ್ಡಿನಲ್ ಕ್ಯುಪಿಚ್: USAIDನ ಸ್ಥಗಿತವು 'ವಾಸ್ತವವಾಗಿ ಸಾವಿಗೆ ಕಾರಣವಾಗಬಹುದು'

ಸಮ್ಮೇಳನಿಂದ ಸ್ವಾಧೀನಪಡಿಸಿಕೊಂಡ ವಿದೇಶಿ ಸಹಾಯವನ್ನು ಸ್ಥಗಿತಗೊಳಿಸುವ ಅಮೇರಿಕದ ಅಧ್ಯಕ್ಷರಾದ ಟ್ರಂಪ್ ರವರ ಕಾರ್ಯಕಾರಿ ಆದೇಶವು ಅಮೇರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ಕೆಲಸವನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿತು. ಚಿಕಾಗೋದ ಮಹಾಧರ್ಮಾಧ್ಯಕ್ಷರು ಈ ನಿರ್ಧಾರದ ಬಗ್ಗೆ ಮತ್ತು ಅದು ಲಕ್ಷಾಂತರ ಜನರಿಗೆ ಒದಗಿಸುತ್ತಿದ್ದ ಅಗತ್ಯ ಸೇವೆಯನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತದೆ ಎಂಬುದರ ಕುರಿತು ಚಿಂತಿಸುತ್ತಾರೆ.

 ಕಾರ್ಡಿನಲ್ ಬ್ಲೇಸ್ ಜೆ. ಕ್ಯುಪಿಚ್

ಕೆಲವೇ ವಾರಗಳ ಅವಧಿಯಲ್ಲಿ, ಹೊಸ ಆಡಳಿತವು ಇದ್ದಕ್ಕಿದ್ದಂತೆ 90 ದಿನಗಳವರೆಗೆ ವಿದೇಶಿ ನೆರವನ್ನು ಸ್ಥಗಿತಗೊಳಿಸಿತು, ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೇರಿಕದ ಏಜೆನ್ಸಿಯಲ್ಲಿ ನಿಧಿ ಮತ್ತು ಸಿಬ್ಬಂದಿಯಲ್ಲಿ ನಾಟಕೀಯ ಕಡಿತವನ್ನು ಮಾಡಿತು. ಇದು ಕಥೋಲಿಕರು ನೀಡುವ ನೆರವು ಸೇರಿದಂತೆ ನಮ್ಮ ಜಾಗತಿಕ ಮಾನವೀಯ ನೆರವನ್ನು ನಿರ್ವಹಿಸುವ ದತ್ತಿ ಸಂಸ್ಥೆಗಳ ಜಾಲವನ್ನು ಅವ್ಯವಸ್ಥೆಗೆ ದೂಡಿದೆ.

ತೆರಿಗೆದಾರರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕು ಮತ್ತು ಕರ್ತವ್ಯ ಸರ್ಕಾರದ್ದಾಗಿದ್ದರೂ, ಅಂತಹ ಯಾವುದೇ ಪರಿಶೀಲನೆಗೆ ಮುಂಚೆಯೇ ಆ ನೆರವನ್ನು ಸ್ಥಗಿತಗೊಳಿಸುವುದು ಹಸಿವಿನಿಂದ ಬಳಲುತ್ತಿರುವ, ನಿರಾಶ್ರಿತರಾಗಿರುವ ಮತ್ತು ರೋಗದಿಂದ ಬಳಲುತ್ತಿರುವ ಜನರ ನೋವನ್ನು ಹೆಚ್ಚಿಸುತ್ತದೆ. ಜೀವರಕ್ಷಕ ನೆರವು ಕಾರ್ಯಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದ್ದರೂ, ಈ ವಿನಾಯಿತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿಲ್ಲ. ದುರ್ಬಲಗೊಂಡ USAID ಈ ಜೀವರಕ್ಷಕ ಕಾರ್ಯಕ್ರಮಗಳಲ್ಲಿ, ಹಿಂದಿನ ಮತ್ತು ಪ್ರಸ್ತುತ ಕೆಲಸಗಳಿಗೆ ಸಕಾಲಿಕ ಪಾವತಿಗಳನ್ನು ಮಾಡುತ್ತಿಲ್ಲ, ಬಹುಶಃ ಜೀವಗಳನ್ನು ಉಳಿಸುವ ಮಾನವೀಯ ನೆರವು ಗುಂಪುಗಳ ಸಾಮರ್ಥ್ಯಕ್ಕೆ ಶಾಶ್ವತ ಹಾನಿಯನ್ನುಂಟುಮಾಡುತ್ತದೆ.

ಫೆಬ್ರವರಿ 18 ರಂದು ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನವು ಆಡಳಿತದ ವಿರುದ್ಧ ಮೊಕದ್ದಮೆ ಹೂಡಲು ಇದು ಒಂದು ಕಾರಣವಾಗಿದೆ. ನಮ್ಮ ದೇಶಕ್ಕೆ ಸ್ವಾಗತಿಸಲ್ಪಟ್ಟ ಮತ್ತು ಕಾನೂನು ಸ್ಥಾನಮಾನವನ್ನು ನೀಡಿದ ನಂತರ ಸರ್ಕಾರದಿಂದ ಯುಎಸ್‌ಎಸ್‌ಬಿಯ ಆರೈಕೆಗೆ ನಿಯೋಜಿಸಲ್ಪಟ್ಟ ಸಾವಿರಾರು ನಿರಾಶ್ರಿತರನ್ನು ನೋಡಿಕೊಳ್ಳುವ ಕೆಲಸವನ್ನು ಸಮ್ಮೇಳನವು ಇದ್ದಕ್ಕಿದ್ದಂತೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಯುಎಸ್‌ಎಸ್‌ಬಿಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ತಿಮೋತಿ ಬ್ರೋಗ್ಲಿಯೊರವರು ವಿವರಿಸಿದರು. ಪ್ರತಿ ವರ್ಷ ನಿರಾಶ್ರಿತರ ಪುನರ್ವಸತಿಗಾಗಿ ಫೆಡರಲ್ ಸರ್ಕಾರದಿಂದ ಪಡೆಯುವ ನಿಧಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವ ಯುಎಸ್‌ಎಸ್‌ಬಿ, ಜನವರಿ 24 ರ ಮೊದಲು ಖರ್ಚುಗಳಿಗಾಗಿ ಸುಮಾರು $13 ಮಿಲಿಯನ್ ಮೊತ್ತದ ಸರ್ಕಾರದಿಂದ ಮರುಪಾವತಿಗಾಗಿ ಇನ್ನೂ ಕಾಯುತ್ತಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

USAIDನ ನಿಧಿಯನ್ನು ಹಠಾತ್ತನೆ ಕಡಿತಗೊಳಿಸುವ ನಿರ್ಧಾರವು ಪವಿತ್ರ ಪೀಠಾಧಿಕಾರ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ತ್ವರಿತ ಪ್ರತಿಕ್ರಿಯೆಗಳನ್ನು ತಂದಿತು.

ಯುಎಸ್‌ಎಐಡಿಯನ್ನು ನಿಲ್ಲಿಸುವುದರಿಂದ ಲಕ್ಷಾಂತರ ಜನರಿಗೆ ನೆರವಿನ ಅಗತ್ಯ ಸೇವೆಗಳು ಅಪಾಯಕ್ಕೆ ಸಿಲುಕುತ್ತವೆ, ಮಾನವೀಯ ಮತ್ತು ಅಭಿವೃದ್ಧಿ ನೆರವಿನಲ್ಲಿ ದಶಕಗಳ ಪ್ರಗತಿಯನ್ನು ಹಾಳುಮಾಡುತ್ತವೆ, ಈ ನಿರ್ಣಾಯಕ ಬೆಂಬಲವನ್ನು ಅವಲಂಬಿಸಿರುವ ಪ್ರದೇಶಗಳನ್ನು ಅಸ್ಥಿರಗೊಳಿಸುತ್ತವೆ ಮತ್ತು ಲಕ್ಷಾಂತರ ಜನರು ಬಡತನ ಅಥವಾ ಸಾವಿಗೆ ಗುರಿಯಾಗುತ್ತಾರೆ ಎಂದು 200ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ 162 ಕಥೋಲಿಕ ಪರಿಹಾರ ಸಂಸ್ಥೆಗಳ ಒಕ್ಕೂಟವಾದ ಅಂತರಾಷ್ಟ್ರೀಯ ಕಾರಿತಾಸ್ ಹೇಳಿಕೆ ತಿಳಿಸಿದೆ.

1943ರಲ್ಲಿ ಸ್ಥಾಪನೆಯಾದ ಯು.ಎಸ್. ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ವಿದೇಶಿ ನೆರವು ಕಾರ್ಯಕ್ರಮವಾದ, ಕ್ಯಾಥೋಲಿಕ್ ರಿಲೀಫ್ ಸರ್ವೀಸಸ್ (ಕಥೋಲಿಕ ಪರಿಹಾರ ಸಂಸ್ಥೆ-CRS) ನಂತಹ ಸಣ್ಣ ಮತ್ತು ದೊಡ್ಡ ದತ್ತಿ ಸಂಸ್ಥೆಗಳಿಗೆ ಈ ಹಣಕಾಸು ಕಡಿತದ ಪರಿಣಾಮವು ದಿಗ್ಭ್ರಮೆಗೊಳಿಸುವಂತಿದೆ.

2012 ರಿಂದ 2016 ರವರೆಗೆ CRSನ್ನು ನಡೆಸುತ್ತಿದ್ದ ಹಾಗೂ ನೊಟ್ರೆ ಡೇಮ್ ವಿಶ್ವವಿದ್ಯಾಲಯದಲ್ಲಿ ಮೆಂಡೋಜಾ ಕಾಲೇಜ್ ಆಫ್ ಬ್ಯುಸಿನೆಸ್‌ನ ಡೀನ್ ಆಗಿ ಸೇವೆ ಸಲ್ಲಿಸಿದ್ದ ಕ್ಯಾರೊಲಿನ್ ವೂರವರು, ವಿದೇಶಿ ನೆರವಿನ ಸ್ಥಗಿತವು, ಈ ರೀತಿಯ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವ ಸ್ಥಳಗಳು, ನಿಜವಾಗಿಯೂ ಜನರ ಆರೋಗ್ಯ, ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಅದು ವಾಸ್ತವವಾಗಿ ಸಾವಿಗೆ ಕಾರಣವಾಗಬಹುದು" ಎಂದು ಭಾನುವಾರದ ನಮ್ಮ ಅತಿಥಿಗಳಿಗೆ ತಿಳಿಸಿದರು.

ಕ್ರೈಸ್ತರಾದ ನಾವು, ಕಷ್ಟವಾದರೂ ಸಹ, ನಮ್ಮಂತೆಯೇ ನಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕೆಂಬ ದೇವರ ಕರೆಯನ್ನು ಅನುಸರಿಸುತ್ತೇವೆ. ಆದರೆ ಪರಿಗಣಿಸಬೇಕಾದ ಆಧ್ಯಾತ್ಮಿಕ ಲೆಕ್ಕಾಚಾರ ಕಡಿಮೆ: ಅಂದರೆ, ಮನೆಯಲ್ಲಿ ಅಥವಾ ವಿದೇಶದಲ್ಲಿ ಸಾಮಾಜಿಕ ಸುರಕ್ಷತಾ ಜಾಲವನ್ನು ದುರ್ಬಲಗೊಳಿಸುವುದು ಅಂತಿಮವಾಗಿ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ನಮ್ಮಲ್ಲಿ ಯಾರೇ ಆಗಲಿ, ಸಂಪತ್ತು ಮತ್ತು ಆರೋಗ್ಯದ, ಎಷ್ಟೇ ಆಶೀರ್ವಾದ ಪಡೆದಿದ್ದರೂ ರೋಗ ಅಥವಾ ದುರದೃಷ್ಟಕ್ಕೆ ಗುರಿಯಾಗದಿರಲು ಸಾಧ್ಯವಿಲ್ಲ. ಈ ಸಂಪರ್ಕಿತ ಜಗತ್ತಿನಲ್ಲಿ ಅಮೇರಿಕವು ತನ್ನ ಶಕ್ತಿಯ ವ್ಯಾಪ್ತಿಯನ್ನು ಅತಿಯಾಗಿ ಮೀರಿಸದಿರುವುದು ಬುದ್ಧಿವಂತಿಕೆಯಾಗಿದೆ. ನಮಗೆ ಯಾವಾಗ ಒಳ್ಳೆಯ ಸಮಾರಿಯದವನ ರೀತಿಯಲ್ಲಿ ಯಾರಿಂದ, ಯಾವ ಸಮಯದಲ್ಲಿ, ಯಾರ ಸಹಾಯ ಬೇಕಾಗುತ್ತದೋ ಎಂಬುದು ನಮ್ಮಲ್ಲಿ ಯಾರಿಗೂ ತಿಳಿಯದು.
 

19 ಫೆಬ್ರವರಿ 2025, 16:44