MAP

VATICAN-RELIGION-POPE-CONSISTORY VATICAN-RELIGION-POPE-CONSISTORY 

ಬೆಳವಣಿಗೆ, ಸುಸ್ಥಿರತೆಯನ್ನು ಒಟ್ಟಾಗಿ ಹುಡುಕಲು ಸುಡಾನ್ ಧರ್ಮಸಭೆಯನ್ನು ಕಾರ್ಡಿನಲ್ ಅಮೆಯುರವರು ಒತ್ತಾಯಿಸುತ್ತಾರೆ

ಸುಡಾನಿನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಸಭೆಯ ಉದ್ಘಾಟನಾ ಸಮಾರಂಭದಲ್ಲಿ, ಕಾರ್ಡಿನಲ್ ಸ್ಟೀಫನ್ ಅಮೆಯು ಮಾರ್ಟಿನ್ ಮುಲ್ಲಾರವರು, ಸುಡಾನಿನಲ್ಲಿ ಉದ್ಭವಾಗುತ್ತಿರುವ ಸವಾಲುಗಳನ್ನು ಒಟ್ಟಾಗಿ ಜಯಿಸಲು ಮತ್ತು ಧರ್ಮಸಭೆಯು ಸಮುದಾಯವಾಗಿ ಬೆಳೆಯಲು ಏಕತೆಗೆ ಬದ್ಧತೆಯ ಅಗತ್ಯವನ್ನು ಒತ್ತಿ ಹೇಳಿದರು.

FSSAನ ಸಿಸ್ಟರ್ ಜೆಸಿಂತರ್ ಆಂಟೊನೆಟ್ ಒಕೋತ್

ಸುಡಾನ್ ಮತ್ತು ದಕ್ಷಿಣ ಸುಡಾನಿನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (SSS-CBC) ಒಂದು ಅಸಾಧಾರಣ ಸಭೆಯಲ್ಲಿ, ಜುಬಾದ ಮಹಾಧರ್ಮಾಧ್ಯಕ್ಷ ಮತ್ತು SSS-CBC ಅಧ್ಯಕ್ಷರಾದ ಕಾರ್ಡಿನಲ್ ಅಮೆಯು, ದೇಶವು ಎದುರಿಸುತ್ತಿರುವ ತುರ್ತು ಸವಾಲುಗಳನ್ನು ನಿಭಾಯಿಸುವಲ್ಲಿ ಧರ್ಮಸಭೆಯ ನಾಯಕರಲ್ಲಿ ಸಹಯೋಗ ಮತ್ತು ಏಕತೆಯ ಅಗತ್ಯವನ್ನು ಒತ್ತಿ ಹೇಳಿದರು.

ಫೆಬ್ರವರಿ 18 ರಂದು ತಮ್ಮ ಸಮ್ಮೇಳನದ ಆರಂಭಿಕ ಭಾಷಣದಲ್ಲಿ, ಕಾರ್ಡಿನಲ್ ರವರು ಸಾಮೂಹಿಕ ಪ್ರಯತ್ನ ಮತ್ತು ಹಂಚಿಕೆಯ ಬದ್ಧತೆಯ ಮೂಲಕ ಮಾತ್ರ, ಪೂರ್ವ ಆಫ್ರಿಕಾ ಪ್ರದೇಶದ ಧರ್ಮಸಭೆಯ, ಈ ಕಷ್ಟದ ಸಮಯದಲ್ಲಿ, ಒತ್ತಡ ನೀಡುತ್ತಿರುವ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಬಹುದು ಮತ್ತು ತನ್ನ ಜನರನ್ನು ಬೆಂಬಲಿಸಬಹುದು ಎಂದು ಒತ್ತಿ ಹೇಳಿದರು.

ನಾವು ಎದುರಿಸುತ್ತಿರುವ ಸವಾಲುಗಳ ಮೂಲಕ ನಮ್ಮ ಸಮುದಾಯಗಳನ್ನು ಪೋಷಿಸುವಲ್ಲಿ ನಾವು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸುವ ಏಕತೆ ಮತ್ತು ಸಹಯೋಗದ ಮನೋಭಾವದಲ್ಲಿ ನಾವು ಒಟ್ಟುಗೂಡುತ್ತೇವೆ ಎಂದು ಅವರು ಹೇಳಿದರು, ಸಭೆಯ ಚರ್ಚೆಗಳು ಸುಡಾನ್ ಮತ್ತು ದಕ್ಷಿಣ ಸುಡಾನ್‌ನಲ್ಲಿ ಧರ್ಮಸಭೆಯ ಬೆಳವಣಿಗೆ ಮತ್ತು ಸುಸ್ಥಿರತೆಗೆ ಅಗತ್ಯವಾದ ಹಲವಾರು ಪ್ರಮುಖ ಉಪಕ್ರಮಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ಒತ್ತಿ ಹೇಳಿದರು.

ಸುಡಾನ್ ಮತ್ತು ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷಗಳು, ಆರ್ಥಿಕ ಸಂಕಷ್ಟಗಳು ಮತ್ತು ಸಾಮಾಜಿಕ ವಿಭಜನೆಗಳಿಗೆ ಧರ್ಮಸಭೆಯ ನಾಯಕರಿಂದ ದೃಢವಾದ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಕಾರ್ಡಿನಲ್ ಅಮೆಯುರವರು ಒಪ್ಪಿಕೊಂಡರು.

"ಧರ್ಮಸಭೆಯು ಕೇವಲ ಆಧ್ಯಾತ್ಮಿಕ ದಾರಿದೀಪವಲ್ಲ, ಆದರೆ ಸಮುದಾಯಗಳ ಸಾಮಾಜಿಕ-ಆರ್ಥಿಕ ಭೂದೃಶ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಪರಿಣಾಮಕಾರಿ ಸೇವೆಗೆ ಬದ್ಧತೆ
ಮಂಗಳವಾರ ಧರ್ಮಾಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಿದ ಜುಬಾದ ಮಹಾಧರ್ಮಾಧ್ಯಕ್ಷರು, ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದಕ್ಷಿಣ ಸುಡಾನ್‌ನೊಂದಿಗಿನ ಸೊಲಿಡಾರಿಟಿಯ ಬೆಂಬಲದಿಂದ ಧರ್ಮಸಭೆಯು ದೀರ್ಘಕಾಲದಿಂದ ಪ್ರಯೋಜನ ಪಡೆದಿದೆ ಎಂದು ಗಮನಸೆಳೆದರು. ಆದ್ದರಿಂದ, ಅಂತಹ ಸಹಯೋಗವನ್ನು ಔಪಚಾರಿಕಗೊಳಿಸುವುದರಿಂದ ಧರ್ಮಸಭೆಯ ನಾಯಕರು ಭಕ್ತವಿಶ್ವಾಸಿಗಳಿಗೆ ಉತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಒತ್ತಡ ನೀಡುತ್ತಿರುವ ಸವಾಲುಗಳನ್ನು ಎದುರಿಸುತ್ತಿರುವ ಸಮುದಾಯಗಳಲ್ಲಿ ಸಾಮಾನ್ಯ ಒಳಿತನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ಸುಡಾನ್‌ನೊಂದಿಗಿನ ಸೊಲಿಡಾರಿಟಿಯು, "ದಕ್ಷಿಣ ಸುಡಾನ್‌ನಲ್ಲಿ ಬಡವರಿಗೆ ಸೇವೆ ಸಲ್ಲಿಸುವಲ್ಲಿ ಧಾರ್ಮಿಕ ಮಹಿಳೆಯರು ಮತ್ತು ಪುರುಷರು ಹಾಗೂ ಶ್ರೀ ಸಾಮಾನ್ಯರ ನಡುವಿನ ಸೇವಾಕಾರ್ಯ ಮತ್ತು ಸಹಯೋಗದ ಹೊಸ ಮಾದರಿಯನ್ನು ಪ್ರತಿನಿಧಿಸುತ್ತದೆ, ದಕ್ಷಿಣ ಸುಡಾನ್‌ನಲ್ಲಿನ ಜನರು ಶಿಕ್ಷಕರು, ಆರೋಗ್ಯ ರಕ್ಷಣಾ ವೃತ್ತಿಪರರು, ಸುಸ್ಥಿರ ರೈತರು ಮತ್ತು ಧರ್ಮಕ್ಷೇತ್ರದ ಯಾಜಕರ ಏಜೆಂಟ್‌ಗಳಾಗುವ ಸಾಮರ್ಥ್ಯವನ್ನು ನಿರ್ಮಿಸುವ ಧ್ಯೇಯದೊಂದಿಗೆ" ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಬಹದು ಎಂದು ಕಾರ್ಡಿನಲ್ ಅಮೆಯು ಹೇಳಿದರು.

ನಮ್ಮ ಮುಂದಿರುವ ಮಹತ್ವದ ಚರ್ಚೆಗಳಲ್ಲಿ, ಒಂದು ಸೊಲಿಡಾರಿಟಿಯೊಂದಿಗೆ ತಿಳುವಳಿಕೆಯ ಜ್ಞಾಪಕ ಪತ್ರದ ಒಪ್ಪಂದಕ್ಕೆ (MoU) ಸಹಿ ಹಾಕುವುದು. ಈ ಪಾಲುದಾರಿಕೆಯು ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ನಮ್ಮ ಸಂಪರ್ಕ ಮತ್ತು ಬೆಂಬಲವನ್ನು ಹೆಚ್ಚಿಸಲು ಒಂದು ಅವಕಾಶವನ್ನು ಪ್ರತಿನಿಧಿಸುತ್ತದೆ, ಎಂದು ಕಾರ್ಡಿನಲ್ ರವರು ಹೇಳಿದರು. "ಸೊಲಿಡಾರಿಟಿಯು ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿನ ಒತ್ತಡದ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಪರಿಹರಿಸಲು ಧರ್ಮಸಭೆಯು ನಿರ್ವಹಿಸುತ್ತಿರುವ ಪಾತ್ರದ ಸಾಬೀತಾದ ದಾಖಲೆಯನ್ನು ಹೊಂದಿದೆ.

ಪ್ರಮುಖ ಗುರುವಿದ್ಯಾಮಂದಿರದಲ್ಲಿ ರಚನೆ
ಧರ್ಮಸಭೆ ಮತ್ತು ಸಮಾಜಕ್ಕೆ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಲು, SSS-CBC ಅಧ್ಯಕ್ಷರು ಭವಿಷ್ಯದ ಯಾಜಕರುಗಳನ್ನು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಪ್ರಾಮುಖ್ಯತೆಯನ್ನು ಗಮನಿಸಿದರು, ಇದರಿಂದಾಗಿ ಧರ್ಮಸಭೆಯ ಪರಿವರ್ತನ ಮತ್ತು ಸುವಾರ್ತಾಪ್ರಸಾರ ಸೇವೆಯ ಧ್ಯೇಯವನ್ನು ಬಲಪಡಿಸುವ ಮೂಲಕ ಯಾಜಕತ್ವ ಸೇವಾಕಾರ್ಯದ ಸರ್ವತೋಮುಖ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಬಹುದು.

ನಮ್ಮ ಭವಿಷ್ಯದ ನಾಯಕರ ರಚನೆಗೆ ನಾವು ಆದ್ಯತೆ ನೀಡಬೇಕಾದದ್ದು ನಮ್ಮ ಪವಿತ್ರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಆದ್ದರಿಂದ ಯಾಜಕರ ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಸುಡಾನ್ ಮತ್ತು ದಕ್ಷಿಣ ಸುಡಾನ್‌ನ ಭವಿಷ್ಯಕ್ಕೆ ಹೂಡಿಕೆ ಮಾಡಿದಂತಾಗುತ್ತದೆ. ನಮ್ಮ ಗುರುವಿದ್ಯಾರ್ಥಿಗಳು, ನಮ್ಮ ಸಮುದಾಯಗಳ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಅಗತ್ಯಗಳನ್ನು ಪೂರೈಸಲು ಚೆನ್ನಾಗಿ ಸಿದ್ಧರಾಗಿದ್ದಾರೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

ಕೊನೆಯಲ್ಲಿ ಕಾರ್ಡಿನಲ್ ಅಮೆಯುರವರು ಸುಡಾನ್‌ನ ಧರ್ಮಾಧ್ಯಕ್ಷರು ಧರ್ಮಸಬೆಯ ಅಭಿವೃದ್ಧಿಯನ್ನು ಮುನ್ನಡೆಸಲು ಒಟ್ಟಾಗಿ ಶ್ರಮಿಸುವಂತೆ ಒತ್ತಾಯಿಸಿದರು.

ಸುಡಾನ್ ಮತ್ತು ದಕ್ಷಿಣ ಸುಡಾನ್‌ನಲ್ಲಿರುವ ನಮ್ಮ ಧರ್ಮಸಭೆಯ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ಕ್ರಮವು ಅತ್ಯಗತ್ಯವಾಗಿದೆ ಮತ್ತು ನಮ್ಮ ಸಮುದಾಯಗಳ ಅಗತ್ಯಗಳಿಗೆ ನಾವು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು, ನಾವು ಒಟ್ಟಾಗಿ ನಮ್ಮ ಹಂಚಿಕೆಯ ಧ್ಯೇಯಕ್ಕೆ ಸಹಯೋಗ ಹಾಗೂ ಬದ್ಧತೆಯ ಮನೋಭಾವವನ್ನು ಬೆಳೆಸಿಕೊಳ್ಳಬಹುದು ಎಂದು ಅವರು ಹೇಳಿದರು.
 

20 ಫೆಬ್ರವರಿ 2025, 12:14