MAP

DRCONGO-UNREST DRCONGO-UNREST  (AFP or licensors)

ಡಿಆರ್‌ಸಿ ಬಿಕ್ಕಟ್ಟಿನ ನಡುವೆ ಧರ್ಮಾಧ್ಯಕ್ಷರುಗಳು ಸಂವಾದಕ್ಕೆ ಒತ್ತಾಯಿಸುತ್ತಿದ್ದಂತೆ ಸಿಎಎಫ್‌ಒಡಿ ಜೀವಸೆಲೆಯನ್ನು ಒದಗಿಸುತ್ತದೆ

ಡಿಆರ್ ಕಾಂಗೋದ ಉತ್ತರ ಮತ್ತು ದಕ್ಷಿಣ ಕಿವು ಪ್ರಾಂತ್ಯಗಳಲ್ಲಿ ರುವಾಂಡಾ ಬೆಂಬಲಿತ M23 ಬಂಡುಕೋರರ ಹೊಸ ಆಕ್ರಮಣದ ನಂತರದ ಬಿಕ್ಕಟ್ಟನ್ನು ಶಮನಗೊಳಿಸಲು ತಂಜಾನಿಯಾದಲ್ಲಿ ಆಫ್ರಿಕಾ ನಾಯಕರ ಜಂಟಿ ತುರ್ತು ಶೃಂಗಸಭೆಯ ನಂತರ, ಧರ್ಮಾಧ್ಯಕ್ಷರುಗಳು ಮತ್ತು ಧರ್ಮಸಭೆಯು ಸಂವಾದವನ್ನು ಉತ್ತೇಜಿಸುವಲ್ಲಿ ಮತ್ತು ಮಾನವೀಯ ನೆರವು ನೀಡುವಲ್ಲಿ ಮುಂಚೂಣಿಯಲ್ಲಿವೆ.

ಲಿಂಡಾ ಬೋರ್ಡೋನಿ

ಕಥೋಲಿಕ ಧರ್ಮಸಭೆಯ ಬಹಳ ಹಿಂದಿನಿಂದಲೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಮಾನವೀಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ, ಬಿಕ್ಕಟ್ಟುಗಳಿಗೂ ಮೊದಲು, ಬಿಕ್ಕಟ್ಟುಗಳ ಸಮಯದಲ್ಲಿಯೂ ಮತ್ತು ಅದರ ನಂತರವೂ ನೆರವಿನ ವಕಾಲತ್ತು ವಹಿಸುತ್ತಿದೆ.

ಡಿಆರ್‌ಸಿಯಲ್ಲಿ ಸಿಎಎಫ್‌ಒಡಿಯ ದೇಶದ ನಿರ್ದೇಶಕ ಬರ್ನಾರ್ಡ್ ಬಾಲಿಬುನೊರವರು, ಬಿಕ್ಕಟ್ಟಿನ ಗಂಭೀರತೆಯನ್ನು ಎತ್ತಿ ತೋರಿಸಿದರು. ಯುದ್ಧಕ್ಕೂ ಮೊದಲೇ, ಗೋಮಾ ಸುತ್ತಮುತ್ತಲಿನ ಶಿಬಿರಗಳಲ್ಲಿ 400,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದರು ಎಂದು ಅವರು ವಿವರಿಸಿದರು.

"ಬಂಡುಕೋರರು ತಮ್ಮ ಆಕ್ರಮಣವನ್ನು ಮುಂದುವರೆಸಿದಂತೆ, ಈ ಶಿಬಿರಗಳನ್ನು ಕಿತ್ತುಹಾಕಲಾಯಿತು, ಮತ್ತು ಈಗ ಕನಿಷ್ಠ 600,000 ಜನರು ಭೀಕರ ಪರಿಸ್ಥಿತಿಯಲ್ಲಿ ಸ್ಥಳಾಂತರಗೊಂಡಿದ್ದಾರೆ ಎಂದು ನಾವು ಅಂದಾಜಿಸುತ್ತೇವೆ" ಎಂದು ಅವರು ಹೇಳಿದರು.

ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿರುವುದರಿಂದ ಪರಿಸ್ಥಿತಿ ಹೆಚ್ಚು ಭೀಕರವಾಗಿದೆ, ಇದು ಮಳೆಗಾಲ, ಮತ್ತು ಅನೇಕ ಸ್ಥಳಾಂತರಗೊಂಡ ಜನರು ಸರಿಯಾದ ವಸತಿ ಇಲ್ಲದೆ ಇದ್ದಾರೆ. ಸಾಮಾನ್ಯವಾಗಿ, ಅವರನ್ನು ಕುಟುಂಬಗಳು ಆಶ್ರಯಿಸುತ್ತವೆ, ಆದರೆ ಈಗ ಆ ಕುಟುಂಬಗಳು ಸಹ ತಮ್ಮ ಸುರಕ್ಷತೆಗಾಗಿ ಪಲಾಯನ ಮಾಡಬೇಕಾಯಿತು ಎಂದು ಬಲಿಬುನೊರವರು ಹೇಳಿದರು.

ವೈದ್ಯಕೀಯ ಮತ್ತು ಮಾನವೀಯ ಅಗತ್ಯಗಳು
ವೈದ್ಯಕೀಯ ಸೌಲಭ್ಯಗಳು ಅಪಾರ ಒತ್ತಡದಲ್ಲಿವೆ, ಆಸ್ಪತ್ರೆಗಳು ಗಾಯಗೊಂಡ ನಾಗರಿಕರ ಒಳಹರಿವಿನಿಂದ ತುಂಬಿ ತುಳುಕುತ್ತಿವೆ ಮತ್ತು ಅಗತ್ಯ ವೈದ್ಯಕೀಯ ಸರಬರಾಜುಗಳು ಖಾಲಿಯಾಗುತ್ತಿವೆ. "ಶವಾಗಾರ ಕೂಡ ಶವಗಳಿಂದ ತುಂಬಿದೆ" ಎಂದು ಬಾಲಿಬುನೊರವರು ವರದಿ ಮಾಡಿದೆ.

ಕಾಲರಾದಂತಹ ರೋಗಗಳು ಹರಡುವ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ, ಇದು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಅವರು ಹೇಳಿದರು.

ಈ ಸವಾಲುಗಳ ಹೊರತಾಗಿಯೂ, CAFOD ಮತ್ತು ಅದರ ಪಾಲುದಾರರಾದ ಕಾರಿತಾಸ್ ಗೋಮಾ ಮತ್ತು ಆಂಗ್ಲಿಕನ್ ಧರ್ಮಸಭೆ, ಆಹಾರ, ಆಹಾರೇತರ ವಸ್ತುಗಳು ಮತ್ತು ತುರ್ತು ಸಹಾಯವನ್ನು ಅಲ್ಲಿನ ಜನರಿಗೆ ಒದಗಿಸುವ ಕಾರ್ಯವನ್ನು ಮುಂದುವರೆಸಿದೆ.

"ನಾವು CAFOD ಇಂಗ್ಲೆಂಡ್‌ನಿಂದ ತುರ್ತು ನಿಧಿಯನ್ನು ಪಡೆದುಕೊಂಡಿದ್ದೇವೆ, ಇದು ಗೋಮಾದಲ್ಲಿ ಇಂಟರ್ನೆಟ್ ಪುನಃಸ್ಥಾಪನೆಯಾಗುವ ಮೊದಲೇ ಪ್ರತಿಕ್ರಿಯಿಸಲು ನಮಗೆ ಅವಕಾಶ ಮಾಡಿಕೊಟ್ಟಿತು.

ಧರ್ಮಸಭೆಯ ನೇತೃತ್ವದ ಶಾಂತಿ ಉಪಕ್ರಮಗಳು
ಮಾನವೀಯ ನೆರವಿನ ಹೊರತಾಗಿ, ಡಿಆರ್‌ಸಿಯಲ್ಲಿನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನವು ಶಾಂತಿಗಾಗಿ ಮತ್ತು ಪಕ್ಷಗಳ ನಡುವೆ ಸಂವಾದವನ್ನು ಪ್ರಾರಂಭಿಸಲು ಕರೆ ನೀಡುತ್ತದೆ.

"ಹಿಂಸಾಚಾರವನ್ನು ಕೊನೆಗೊಳಿಸಲು, ವಿಶ್ವಗುರು ಫ್ರಾನ್ಸಿಸ್ ರವರ ಮನವಿಗಳನ್ನು ಧರ್ಮಾಧ್ಯಕ್ಷರುಗಳ ಸಮ್ಮೇಳನವು ವರ್ಧಿಸಿದೆ" ಎಂದು ಬಾಲಿಬುನೊರವರು ಹೇಳಿದರು, "ಅವರು ಸರ್ಕಾರದೊಂದಿಗೆ, ಬಂಡಾಯ ಗುಂಪುಗಳ ನಡುವೆ ಚರ್ಚೆಗಳನ್ನು ಪ್ರಾರಂಭಿಸುವಷ್ಟು ದೂರ ಹೋಗಿದ್ದಾರೆ ಮತ್ತು ಈ ಸಮಾಲೋಚನೆಗಳ ಕಾರ್ಯಗಳು ನಡೆಯುತ್ತಿವೆ" ಎಂದು ವಿವರಿಸಿದರು.

ಜನವರಿ ಅಂತ್ಯದಲ್ಲಿ ಗೋಮಾ ನಗರವನ್ನು ಬಂಡುಕೋರರು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಆಡಳಿತವು ಸಹಾಯದ ವಿತರಣೆ ಮತ್ತು ವಿತರಣೆಗೆ ಅವಕಾಶ ನೀಡುತ್ತದೆ, ಆದರೆ ಅವರ ಪ್ರಯತ್ನಗಳಲ್ಲಿ ತಟಸ್ಥತೆಯ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.

"ನಾವು ತಟಸ್ಥವಾಗಿ ಕೆಲಸ ಮಾಡುತ್ತಿದ್ದೇವೆ. ಬಂಡುಕೋರರು ಮತ್ತು ಸರ್ಕಾರಿ ಪಡೆಗಳು ಧರ್ಮಸಭೆಯ ಮಾನವೀಯ ಪಾತ್ರವನ್ನು ಗುರುತಿಸುತ್ತಿವೆ, ಹಾಗೆಯೇ, ಇದು ನಮಗೆ ಅನೇಕ ಪ್ರದೇಶಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ, ಆದರೂ ಭದ್ರತಾ ಪಡೆಗಳು, ನಾವು ಯಾವ ಪ್ರದೇಶಗಳಿಗೆ ಹೋಗಬೇಕು ಅಥವಾ ಹೋಗಬಹುದು ಎಂಬ ನಿರ್ಣಯದ ಮೇಲೆ ನಮ್ಮ ಪ್ರವೇಶವನ್ನು ಮಿತಿಗೊಳಿಸುತ್ತಿವೆ" ಎಂದು ಅವರು ಹೇಳಿದರು.

10 ಫೆಬ್ರವರಿ 2025, 16:09