MAP

BROTHER JACK CURRAN, FSC, VICE-PRESIDENT BETHLEHEM UNIVERSITY BROTHER JACK CURRAN, FSC, VICE-PRESIDENT BETHLEHEM UNIVERSITY 

ಪಶ್ಚಿಮ ದಂಡೆಯ ಮೇಲಿನ ನಿರ್ಬಂಧಗಳ ನಡುವೆ ಬೆತ್ಲೆಹೇಮ್ ವಿಶ್ವವಿದ್ಯಾಲಯವು ಸವಾಲುಗಳನ್ನು ಎದುರಿಸುತ್ತಿದೆ

ಪ್ಯಾಲಸ್ತೀನಿನ ಏಕೈಕ ಕಥೋಲಿಕ ವಿಶ್ವವಿದ್ಯಾಲಯದ ಪ್ರಗತಿಗಾಗಿ ಉಪಾಧ್ಯಕ್ಷರು, ಪಶ್ಚಿಮ ದಂಡೆಯಲ್ಲಿ ಹೊಸ ಭದ್ರತಾ ಕ್ರಮಗಳ ಹಿನ್ನೆಲೆಯಲ್ಲಿ ತನ್ನ ವಿದ್ಯಾರ್ಥಿಗಳು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ವ್ಯಾಟಿಕನ್ ಸುದ್ಧಿಗೆ ತಿಳಿಸಿದ್ದಾರೆ.

ಯಾಜಕ ಆಡ್ರಿಯನ್ ಡಾಂಕಾ

1973ರಲ್ಲಿ ಸ್ಥಾಪನೆಯಾದ ಬೆತ್ಲಹೇಮ್ ವಿಶ್ವವಿದ್ಯಾಲಯವು ಪ್ಯಾಲಸ್ತೀನಿನ ಏಕೈಕ ಕಥೋಲಿಕ ವಿಶ್ವವಿದ್ಯಾಲಯವಾಗಿದ್ದು, ಸುಮಾರು 3,000 ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ.

ಇತ್ತೀಚೆಗೆ, ಅದರ ಪ್ರಗತಿ ವಿಭಾಗದ ಉಪಾಧ್ಯಕ್ಷ ಸಹೋದರ ಜ್ಯಾಕ್ ಕರನ್ ರವರು, FSC, ವ್ಯಾಟಿಕನ್ ಸುದ್ಧಿಯವರ ಜೊತೆ ವೆಸ್ಟ್ ಬ್ಯಾಂಕ್‌ನಲ್ಲಿನ (ಪಶ್ಚಿಮ ದಂಡೆ) ಪರಿಸ್ಥಿತಿ ಮತ್ತು ಇಸ್ರಯೇಲ್ ಹಾಗೂ ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ನಂತರ ಅದು ಬದಲಾಗಿದೆಯೇ ಎಂಬುದರ ಕುರಿತು ಮಾತನಾಡಿದರು.

ಕದನ ವಿರಾಮವು ಸಮಾಧಾನಕರ ಭಾವನೆಯನ್ನು ತಂದಿದ್ದರೂ, ಈ ಪ್ರದೇಶದಲ್ಲಿ ವಿಧಿಸಲಾದ ಹೊಸ ನಿರ್ಬಂಧಗಳು ಪ್ಯಾಲಸ್ತೀನಿಯರ ಜೀವನವನ್ನು ಅತ್ಯಂತ ಕಷ್ಟಕರವಾಗಿಸಿದೆ ಎಂದು ಅವರು ಹೇಳಿದರು. ಗಾಜಾದಲ್ಲಿ ಕದನ ವಿರಾಮ ಜಾರಿಗೆ ಬಂದ ದಿನದಂದು, ಬೆತ್ಲಹೇಮ್ ನಗರದ ಸುತ್ತಲೂ 90 ಹೆಚ್ಚುವರಿ ತಡೆಗೋಡೆಗಳನ್ನು ಹಾಕಲಾಗಿದೆ ಎಂದು ಅವರು ಹೇಳಿದರು.

ಪ್ಯಾಲಸ್ತೀನಿನ ರಾಜ್ಯ ಮತ್ತು ಅದರ ಹೋರಾಟಗಳ ಅಂತರರಾಷ್ಟ್ರೀಯ ಮನ್ನಣೆಯ ನಿರಂತರ ಕೊರತೆಯೇ, ಶಾಂತಿಗೆ ಅತ್ಯಂತ ಮಹತ್ವದ ಅಡಚಣೆಯಾಗಿದೆ ಎಂದು ಸಹೋದರ ಕರನ್‌ ರವರು ವಿವರಿಸಿದರು. ವಿಶ್ವಸಂಸ್ಥೆ, ವ್ಯಾಟಿಕನ್ ಮತ್ತು ಇತರ ಕೆಲವು ದೇಶಗಳು ಪ್ಯಾಲಸ್ತೀನಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ್ದರೂ, ಅನೇಕ ದೇಶಗಳು ಇನ್ನೂ ಪ್ಯಾಲಸ್ತೀನಿನ ಜನರ ಹಕ್ಕುಗಳು ಮತ್ತು ಘನತೆಯನ್ನು ಗುರುತಿಸಿಲ್ಲ ಎಂದು ಅವರು ಒತ್ತಿ ಹೇಳಿದರು. ಈ ಮನ್ನಣೆಯ ಕೊರತೆಯು, ಕದನ ವಿರಾಮದ ನಂತರವೂ ಅಸ್ಥಿರತೆಯನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು.

ಬೆತ್ಲಹೇಮ್ ವಿಶ್ವವಿದ್ಯಾನಿಲಯಕ್ಕೆ ಸವಾಲುಗಳು
ಬೆತ್ಲಹೇಮ್ ವಿಶ್ವವಿದ್ಯಾನಿಲಯಕ್ಕೆ, ವಿದ್ಯಾರ್ಥಿಗಳಿಗೆ ಉದ್ಯೋಗವು, ವಿಶೇಷವಾಗಿ ಪೂರ್ವ ಜೆರುಸಲೇಮ್ ನಿಂದ ಪ್ರಯಾಣಿಸುವ 40% ಜನರು ದೈನಂದಿನ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರಯಾಣ ನಿರ್ಬಂಧಗಳನ್ನು ಹೆಚ್ಚಿಸಿರುವುದರಿಂದ ವಿದ್ಯಾರ್ಥಿಗಳು ಅನಿರೀಕ್ಷಿತ ವಿಳಂಬಗಳನ್ನು ಎದುರಿಸಬೇಕಾಗುತ್ತದೆ, ಕೆಲವೊಮ್ಮೆ ಪರೀಕ್ಷೆಗಳ ಸಮಯದಲ್ಲಿ ಕಾರ್ಯತಂತ್ರದ ಸಮಯಕ್ಕೆ ತಕ್ಕಂತೆ ವಿಳಂಬವಾಗುತ್ತದೆ. "ಇದು ಅವಮಾನಕರ ಅಭ್ಯಾಸ," ಎಂದು ಸಹೋದರ ಕರನ್ ರವರು ಹೇಳಿದರು, ಇದು ಅವರ ಕಲಿಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಪವಿತ್ರ ನಾಡಿನ ಜನರಿಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸುವ ಮನವಿಯೊಂದಿಗೆ ಸಹೋದರ ಕರನ್ ರವರು ತಮ್ಮ ಸಂದರ್ಶನವನ್ನು ಮುಕ್ತಾಯಗೊಳಿಸಿದರು. ನಾವು ಪ್ರಾರ್ಥನೆಗಿರುವ ಶಕ್ತಿಯನ್ನು ವಿಶ್ವಾಸಿಸುತ್ತೇವೆ, ಪ್ರಾರ್ಥನೆಯು ವ್ಯತ್ಯಾಸವನ್ನುಂಟು ಮಾಡುತ್ತದೆ, ವಿಶ್ವಾಸ ಮತ್ತು ಭರವಸೆಯಲ್ಲಿ ನಮ್ಮೊಂದಿಗೆ ನಿಂತಿರುವವರ ಒಗ್ಗಟ್ಟಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.

18 ಫೆಬ್ರವರಿ 2025, 10:12