MAP

ARGENTINA-RELIGION-POPE-MASS ARGENTINA-RELIGION-POPE-MASS  (AFP or licensors)

ವಿಶ್ವಗುರುಗಳ ಚೇತರಿಕೆಗಾಗಿ ಬ್ಯೂನಸ್ ಏರ್ಸ್‌ ಪ್ರಾರ್ಥಿಸುತ್ತದೆ

ಪ್ಲಾಜಾ ಕಾನ್ಸ್ಟಿಟ್ಯೂಷಿಯನ್‌ನಲ್ಲಿ ಮಹಾಧರ್ಮಾಧ್ಯಕ್ಷರಾದ ಗಾರ್ಸಿಯಾ ಕುರ್ವಾರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ದೈವಾರಾಧನ ವಿಧಿಯಲ್ಲಿ ಸಾವಿರಾರು ಅರ್ಜೆಂಟೀನಾದ ಜನರು ಭಾಗವಹಿಸಿದ್ದರು. ಆಗ ಮಹಾಧರ್ಮಾಧ್ಯಕ್ಷರಾದ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊರವರು ಅನೇಕ ಭಾಷಣಗಳು ಮತ್ತು ಪ್ರಬೋಧನೆಗಳಲ್ಲಿ ಭ್ರಷ್ಟಾಚಾರ ಮತ್ತು ದೇಶದ ಹೋರಾಟಗಳನ್ನು ಖಂಡಿಸಿದರು.

ಸಿಲ್ವಿನಾ ಆರೆಂಜಸ್ - ಬ್ಯೂನಸ್ ಏರ್ಸ್

ಸೋಮವಾರ ಮಧ್ಯಾಹ್ನ ಬ್ಯೂನಸ್ ಏರ್ಸ್‌ನಲ್ಲಿನ ಪ್ಲಾಜಾ ಕಾನ್ಸ್ಟಿಟ್ಯೂಷಿಯನ್‌ನಲ್ಲಿ ನಡೆದ ದೈವ್ಯಾರಾಧನ ವಿಧಿಯಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಹಲವಾರು ಭಕ್ತವಿಶ್ವಾಸಿಗಳು ಒಟ್ಟುಗೂಡಿದರು, ಅಲ್ಲಿ ಜಾರ್ಜ್ ಬರ್ಗೊಗ್ಲಿಯೊರವರು ಬ್ಯೂನಸ್ ಏರ್ಸ್‌ನ ಮಹಾಧರ್ಮಾಧ್ಯಕ್ಷರಾಗಿದ್ದಾಗ ಆಚರಣೆಗಳ ಅಧ್ಯಕ್ಷತೆ ವಹಿಸಿದ್ದರು.

ನೀವು ಪ್ರಾರ್ಥನೆ ಮಾಡಲು ತಡ ಮಾಡಬೇಡಿ, ವಿಶ್ವಗುರು ಫ್ರಾನ್ಸಿಸ್ ರವರ ಶ್ವಾಸಕೋಶಗಳಿಗೆ ಅಗತ್ಯವಿರುವ ಗಾಳಿಯ ಉಸಿರು ನಮ್ಮ ಪ್ರಾರ್ಥನೆಯಾಗಿರಲಿ. ಆದ್ದರಿಂದ ನೀವು ಪ್ರಾರ್ಥಿಸಲು ನಿಧಾನಗೊಳಿಸಬೇಡಿ. ನಮಗೆ, ನಿಮ್ಮ ಪ್ರಾರ್ಥನೆಯ ಅವಶ್ಯಕತೆ ತುಂಬಾ ಇದೆ ಎಂದು ಬ್ಯೂನಸ್ ಏರ್ಸ್‌ನ ಮಹಾಧರ್ಮಾಧ್ಯಕ್ಷರಾದ ಜಾರ್ಜ್ ಇಗ್ನಾಸಿಯೊ ಗಾರ್ಸಿಯಾ ಕುರ್ವಾರವರು, ಒಂದು ದಿನದ ಭಾರೀ ಮಳೆಯ ನಂತರ ಸ್ಪಷ್ಟ ಆಕಾಶದ ಅಡಿಯಲ್ಲಿ ನಡೆದ ಹೊರಾಂಗಣದಲ್ಲಿ ನಡೆದ ದೈವಾರಾಧನಾ ವಿಧಿಯ ಪ್ರಬೋಧನೆಯ ಸಮಯದಲ್ಲಿ ಹೇಳಿದರು.

ಸಾಂಕೇತಿಕ ಸ್ಥಳದಲ್ಲಿ ಆಚರಣೆ
ದಿವ್ಯಬಲಿಪೂಜೆಯನ್ನು ಬ್ಯೂನಸ್ ಏರ್ಸ್‌ನ ಸಹಾಯಕ ಧರ್ಮಾಧ್ಯಕ್ಷರುಗಳಾದ, ಲಾ ಪ್ಲಾಟಾದ ಮಹಾಧರ್ಮಾಧ್ಯಕ್ಷರು, ಶ್ರೇಷ್ಠಗುರು (ಮಾನ್ಸಿಗ್ನರ್) ಗುಸ್ಟಾವೊ ಕ್ಯಾರಾರಾರವರು, ಧರ್ಮಾಧ್ಯಕ್ಷೀಯ ಮಾಜಿ ಮುಖ್ಯಸ್ಥ ಶ್ರೇಷ್ಠಗುರು ಆಸ್ಕರ್ ಓಜಿಯಾರವರು, ಕಾರ್ಡಿನಲ್ ಮತ್ತು ಬ್ಯೂನಸ್ ಏರ್ಸ್‌ನ ಪರಮಪೂಜ್ಯ ಮಹಾಧರ್ಮಾಧ್ಯಕ್ಷ, ಮಾರಿಯೋ ಪೋಲಿರವರು ಮತ್ತು ಬ್ಯೂನಸ್‌ನಲ್ಲಿ ಬರ್ಗೊಗ್ಲಿಯೊರವರ ಮಾಜಿ ವಕ್ತಾರ ಗಿಲ್ಲೆರ್ಮೊ ಮಾರ್ಕೊರವರು ಸೇರಿದಂತೆ ಡಜನ್ಗಟ್ಟಲೆ ಯಾಜಕರು ದಿವ್ಯಬಲಿಪೂಜೆಯನ್ನು ಅರ್ಪಿಸಿದರು.

ಭದ್ರತಾ ಸಚಿವ ವಾಲ್ಡೋ ವೋಲ್ಫ್ ರವರಂತಹ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವಾರು ಅರ್ಜೆಂಟೀನಾದ ರಾಜಕೀಯ ಮತ್ತು ಸಾಮಾಜಿಕ ವ್ಯಕ್ತಿಗಳು ಉಪಸ್ಥಿತರಿದ್ದರು.

ಪ್ಲಾಜಾ ಕಾನ್ಸ್ಟಿಟ್ಯೂಷಿಯನ್ ಬ್ಯೂನಸ್ ಏರ್ಸ್‌ನಲ್ಲಿ ಒಂದು ಸಾಂಕೇತಿಕ ಸ್ಥಳವಾಗಿದ್ದು, ಬ್ಯೂನಸ್ ಏರ್ಸ್ ಪ್ರಾಂತ್ಯದ ಲಕ್ಷಾಂತರ ಕಾರ್ಮಿಕರು ಪ್ರತಿದಿನ ಪ್ರಯಾಣಿಸುತ್ತಾರೆ.

ಜಾರ್ಜ್ ಮಾರಿಯೋ ಬರ್ಗೊಗ್ಲಿಯೊರವರು ನಗರದ ಮಹಾಧರ್ಮಾಧ್ಯಕ್ಷರಾಗಿದ್ದ ವರ್ಷಗಳಲ್ಲಿ ದೈವಾರಾಧನಾ ವಿಧಿಗಳನ್ನು ಆಚರಿಸಲು ಮತ್ತು ಭ್ರಷ್ಟಾಚಾರ, ಮಾನವ ಕಳ್ಳಸಾಗಣೆ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ಖಂಡಿಸಲು ಆಯ್ಕೆ ಮಾಡಿಕೊಂಡ ಸ್ಥಳವೂ ಇದಾಗಿತ್ತು.

ಜನದಟ್ಟಣೆಯ ಸಭಾಂಗಣ
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ಗಮನಾರ್ಹ ಉಪಸ್ಥಿತಿಯೊಂದಿಗೆ, ವ್ಯಸನದಿಂದ ಯುವಕರನ್ನು ಪುನರ್ವಸತಿ ಮಾಡುವ ಗುರಿಯನ್ನು ಹೊಂದಿರುವ "ಕಾಸಾಸ್ ಡಿ ಕ್ರಿಸ್ಟೋ" (ಕ್ರಿಸ್ತರ ನಿವಾಸಗಳು) ಯೋಜನೆಯಿಂದ ಯುವಕರು ಸಹ ಭಾಗವಹಿಸಿದರು.

ಅವರ ಪಕ್ಕದಲ್ಲಿ ತಮ್ಮ ಕಾರ್ಯನಿರ್ವಹಿಸುವ ಅವಧಿಯವನ್ನು ಮುಗಿಸುತ್ತಿದ್ದ ಕಾರ್ಮಿಕರು, ಕುಟುಂಬಗಳು, ವಿವಿಧ ಸಭೆಗಳ ಸನ್ಯಾಸಿಗಳು ಮತ್ತು "ಯೂನಿಯನ್ ಡಿ ಟ್ರಬಜಡೋರ್ಸ್ ಡಿ ಲಾ ಎಕನಾಮಿಯಾ ಪಾಪ್ಯುಲರ್" (ಯುಟಿಇಪಿ)ಯ ನಿಯೋಗವಿತ್ತು, ಅವರು "ಧರೆ, ಛಾವಣಿ, ಕೆಲಸ" ಎಂದು ಓದುವ ಬ್ಯಾನರ್‌ಗಳನ್ನು ಹಿಡಿದಿದ್ದರು, ವಿಶ್ವಗುರು ಫ್ರಾನ್ಸಿಸ್ ರವರು ವಿಶ್ವಾದಾದ್ಯಂತ ಬಡವರಿಗಾಗಿ ಪ್ರತಿಪಾದಿಸಿದ ವಿಷಯಗಳಿವು.

ಸ್ಯಾನ್ ಟೆಲ್ಮೊ ಮತ್ತು ಫ್ಲೋರ್ಸ್ ಜಿಲ್ಲೆಗಳಿಂದ ಸ್ವಯಂಸೇವಕ ಅಗ್ನಿಶಾಮಕ ದಳದವರೂ ಸಹ ಹಾಜರಿದ್ದರು, ತಮ್ಮ ಅಗ್ನಿಶಾಮಕ ಟ್ರಕ್‌ಗಳೊಂದಿಗೆ ಆಗಮಿಸಿ ಆಚರಣೆಯ ಕೊನೆಯಲ್ಲಿ ತಮ್ಮ ಸೈರನ್‌ಗಳನ್ನು ಮೊಳಗಿಸಿದರು, ಆದರೆ ಭಕ್ತರು ಮಾತ್ರ "ವಿಶ್ವಗುರು ದೀರ್ಘಾಯುಷ್ಯವನ್ನು ಪಡೆಯಲಿ" ಎಂದು ಕೂಗಿದರು.

ಅನ್ಯಾಯ ಮತ್ತು ಬಹಿಷ್ಕಾರದ ಸಂತ್ರಸ್ತರ ಕೂಗನ್ನು ಕೇಳಲು ನಿರಾಕರಿಸಿ, ಅನೇಕರು ಕಿವಿಗೊಡುವುದಿಲ್ಲ ಎಂದು ಬರ್ಗೋಗ್ಲಿಯೊರವರು ಒಂದಕ್ಕಿಂತ ಹೆಚ್ಚು ಬಾರಿ ಹೇಳಿರುವ ಅವರು, ಅಂತಹವರಿಗಾಗಿ ಈ ಸಭಾಂಗಣದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಮಾನವ ಕಳ್ಳಸಾಗಣೆ ಮತ್ತು ಮಾದಕವಸ್ತು ಸಂಬಂಧಿತ ಸಂಸ್ಥೆಗಳು ಇದನ್ನು ಗುಲಾಮರ ಕಾರ್ಖಾನೆಯಾಗಿ, ಮಾಂಸ ಬೀಸುವ ಯಂತ್ರವಾಗಿ ಪರಿವರ್ತಿಸುತ್ತಿವೆ ಎಂಬ ಬರ್ಗೋಗ್ಲಿಯೊರವರ ಹಿಂದಿನ ಮಾತುಗಳನ್ನು ಅವರು ಭಾವಾನುವಾದ ಮಾಡಿದರು.

ವಿಶ್ವಗುರುಗಳ ಜೊತೆಗಿದ್ದೇವೆ
ತಮ್ಮ ಪ್ರಬೋಧನೆಯ ಇನ್ನೊಂದು ಭಾಗದಲ್ಲಿ, ಬ್ಯೂನಸ್ ಏರ್ಸ್‌ನ ಮಹಾಧರ್ಮಾಧ್ಯಕ್ಷರು, ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಜಗದ್ಗುರುವಿನ ಅಧಿಕಾರ ಅವಧಿಯಲ್ಲಿ ಅನುಭವಿಸಿದ "ಸುಳ್ಳುಗಳು ಮತ್ತು ಅಪಪ್ರಚಾರ" ವನ್ನು ಉಲ್ಲೇಖಿಸಿದರು ಮತ್ತು "ನಾವು ಅವರ ಗೌರವವನ್ನು ಆರೋಪಿಸಿ ಮತ್ತು ಕಳಂಕಿತಗೊಳಿಸಿದ" ಸಮಯಕ್ಕಾಗಿ ದೇವರನ್ನು ಕ್ಷಮೆ ಕೇಳಲು ಸಭೆಯನ್ನು ಆಹ್ವಾನಿಸಿದರು.

ಅರ್ಜೆಂಟೀನಾದ ಧ್ವಜಗಳು, ಚಿತ್ರಗಳು ಮತ್ತು ಲುಜಾನ್ ಕನ್ಯೆಯ ಪ್ರಾರ್ಥನಾ ಕಾರ್ಡ್‌ಗಳು, ಬೆಳಗಿದ ಮೇಣದಬತ್ತಿಗಳೊಂದಿಗೆ, ಜನಸಮೂಹದ ನಡುವೆ, ಅವರು "ವಿಶ್ವಗುರು ದೀರ್ಘಾಯುಷ್ಯರಾಗಲಿ" ಎಂದು ಜಪಿಸುತ್ತಲೇ ಇದ್ದರು, ಅವರ ಧ್ವನಿಗಳು ರೋಮ್ ನ್ನು ತಲುಪುತ್ತವೆ ಎಂದು ಆಶಿಸಿದರು, ಅರ್ಜೆಂಟೀನಾದ ವಿಶ್ವಗುರು ಈಗ ಜೆಮೆಲ್ಲಿ ಆಸ್ಪತ್ರೆಯಲ್ಲಿ ಹನ್ನೆರಡನೇ ದಿನದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 

25 ಫೆಬ್ರವರಿ 2025, 13:17