ಉಕ್ರೇನ್‌ಗೆ ಪ್ರೇಷಿತ ರಾಯಭಾರಿ: ʻಎಲ್ಲಾ ಭರವಸೆಯ ವಿರುದ್ಧ ದೇವರು ಮಾತ್ರ ಭರವಸೆಯನ್ನು ತರಬಲ್ಲ'
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
"ಸರ್ವಶಕ್ತನಾದ ಸರ್ವೇಶ್ವರ ಪ್ರಭುದೇವರು ಮಾತ್ರ ಎಲ್ಲಾ ಭರವಸೆಯ ವಿರುದ್ಧ ಭರವಸೆಯನ್ನು ತರಬಲ್ಲನು..."
ಉಕ್ರೇನ್‌ನ ಪ್ರೇಷಿತ ರಾಯಭಾರಿ, ಮಹಾಧರ್ಮಾಧ್ಯಕ್ಷರಾದ ವಿಶ್ವಲ್ದಾಸ್ ಕುಲ್ಬೊಕಾಸ್ ರವರು, 2022ರಲ್ಲಿ ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಲ್ಲಿನ ಯುದ್ಧದ ಮೂರನೇ ವರ್ಷದ ವಾರ್ಷಿಕೋತ್ಸವವಾದ ಫೆಬ್ರವರಿ 24, 2025 ರಂದು ವ್ಯಾಟಿಕನ್ ಮಾಧ್ಯಮಕ್ಕೆ ಈ ಅವಲೋಕನವನ್ನು ಮಾಡಿದರು.
ವಿಶೇಷವಾಗಿ ಈ ಜೂಬಿಲಿ ವರ್ಷದಲ್ಲಿ, ಪ್ರಾರ್ಥನೆಯು ಉಕ್ರೇನಿಯನ್ನರಿಗೆ ಒಂದು ಅಮೂಲ್ಯವಾದ ಕೊಡುಗೆಯಾಗಿದೆ. ಈ ಪ್ರಾರ್ಥನೆಯನ್ನು ಉಕ್ರೇನಿಯನ್ನರು ಹೇಗೆ ಅಮೂಲ್ಯವಾಗಿ ಪರಿಗಣಿಸುತ್ತಾರೆ ಮತ್ತು ಅನುಸರಿಸುತ್ತಾರೆ ಎಂಬುದನ್ನು ಒತ್ತಿ ಹೇಳುವ ಮೂಲಕ ಪ್ರೇಷಿತ ರಾಯಭಾರಿಯು ತಮ್ಮ ಹೇಳಿಕೆಗಳನ್ನು ಪ್ರಾರಂಭಿಸಿದರು.
"ವಾಸ್ತವವಾಗಿ ಯುದ್ಧ ಎಂದರೇನು" ಎಂಬುದರ ಕುರಿತು ಚಿಂತಿಸುತ್ತಾ, ಮಿಲಿಟರಿ ಕಾರ್ಯಾಚರಣೆಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ 60 ವರ್ಷದ ನಾಗರಿಕ ಮಹಿಳೆಯೊಬ್ಬರು ರಷ್ಯಾದಲ್ಲಿ ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದ ಆಕೆಯನ್ನು ನೆನಪಿಸಿಕೊಂಡರು. "ನಾನು ಏನು ಮಾಡಿದ್ದೇನೆ, ನಾನು ಏನು ಮಾಡಿಲ್ಲ, ಯಾವುದು ನಿಜ ಮತ್ತು ಯಾವುದು ಕಲ್ಪನೆ ಅಥವಾ ಭ್ರಮೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ಏನು ಹೇಳಿಕೆ ನೀಡಿದ್ದೇನೆ, ಏನು ಹೇಳಿದ್ದೇನೆ ಅಥವಾ ಏನೆಂದು ಸಹಿ ಮಾಡಿದ್ದೇನೆ ಎಂಬುದು ನನಗೆ ಇನ್ನೂ ನೆನಪಿಲ್ಲ" ಎಂದು ಆಕೆಯು ಹೇಳಿದ್ದು ಅವರಿಗೆ ನೆನಪಾಯಿತು.
"ಇದು ಸಾವಿರಾರು ಜನರ ಸ್ಥಿತಿ ಮತ್ತು ಇಲ್ಲಿಯವರೆಗೆ, ಅವರಿಗೆ ಸಹಾಯ ಮಾಡಲು ಒಂದೇ ಒಂದು ಪರಿಣಾಮಕಾರಿ ವಾಹಿಣಿಯು ಕೆಲಸ ಮಾಡುವುದನ್ನು ನಾನು ವೈಯಕ್ತಿಕವಾಗಿ ನೋಡಿಲ್ಲ" ಎಂದು ಅವರು ವಿಷಾದಿಸಿದರು.
ಈ ಕಠೋರ ವಾಸ್ತವದ ನಡುವೆ, ಮಹಾಧರ್ಮಾಧ್ಯಕ್ಷರಾದ ವಿಶ್ವಲ್ದಾಸ್ ಕುಲ್ಬೊಕಾಸ್ ರವರು, ಮತ್ತೊಮ್ಮೆ ಭರವಸೆ ನೀಡಿ, "ಈ ಸಾವಿರಾರು ಕೈದಿಗಳ, ಅವರ ಭರವಸೆಯಿಲ್ಲದ, ಪರಿಸ್ಥಿತಿಯನ್ನು ಎಲ್ಲವನ್ನು ಪ್ರಾರ್ಥನೆಯಲ್ಲಿ ಒಪ್ಪಿಸುತ್ತಾರೆ" ಎಂದು ಹೇಳಿದರು.
"ಏಕೆಂದರೆ ಸರ್ವಶಕ್ತನಾದ ಶರ್ವೇಶ್ವರ ಪ್ರಭುದೇವರು ಮಾತ್ರ ಎಲ್ಲಾ ಭರವಸೆಯ ವಿರುದ್ಧ ಭರವಸೆಯನ್ನು ತರಬಲ್ಲನು, ಪವಿತ್ರ ತಂದೆಯು ಜೂಬಿಲಿಗಾಗಿ ವಿಶ್ವಗುರುಗಳ ಆಜ್ಞಾಪತ್ರದಲ್ಲಿ ಒತ್ತಿಹೇಳಿದಂತೆ," ಇದು ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳುತ್ತದೆ, ಏಕೆಂದರೆ ನಿಜವಾಗಿಯೂ ಮಾನವ ದೃಷ್ಟಿಕೋನದಿಂದ ಯಾವುದೇ ಪರಿಹಾರದ ಮಾರ್ಗವಿಲ್ಲ ಎಂಬುದರ ಬಗ್ಗೆ ಎರಿವು ನೀಡಿದರು.
ವಿಶ್ವಗುರು ಫ್ರಾನ್ಸಿಸ್‌ರವರಿಗಾಗಿ ಪ್ರಾರ್ಥನೆಯಲ್ಲಿರುವ ಉಕ್ರೇನ್
ಈ ದಿನಗಳಲ್ಲಿ ಪವಿತ್ರ ತಂದೆಯ ಆರೋಗ್ಯದ ತೊಂದರೆಗಳನ್ನು ಪ್ರೇಷಿತ ರಾಯಭಾರಿ ಒಪ್ಪಿಕೊಂಡರು, ಯಾರೂ ನಿರೀಕ್ಷಿಸದ ಹಾಗೆ, ದೇಶದ ಮೇಲೆ ಯುದ್ಧ ನಡೆದರೂ ಸಹ, ಪವಿತ್ರ ತಂದೆಯ ಆರೋಗ್ಯದ ತೊಂದರೆಯು ಪ್ರಮುಖ ಸುದ್ದಿಯಾಗಿದೆ. "ಈ ದಿನಗಳಲ್ಲಿ, ಕಥೋಲಿಕರು ಅಥವಾ ಧರ್ಮಾಧ್ಯಕ್ಷರಿಂದ ಮಾತ್ರವಲ್ಲದೆ ಇತರ ಧರ್ಮಸಭೆಗಳ ನಾಯಕರು ಮತ್ತು ಉಕ್ರೇನ್ ಅಧ್ಯಕ್ಷರ ಕಚೇರಿಯಿಂದಲೂ ಪವಿತ್ರ ತಂದೆಯ ಆರೋಗ್ಯದ ಬಗ್ಗೆ ಪ್ರಾಮಾಣಿಕ ಕಳವಳ ವ್ಯಕ್ತಪಡಿಸುವ ಅನೇಕ ಒಗ್ಗಟ್ಟಿನ ಸಂದೇಶಗಳನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದರು.
"ಇದು ನನಗೂ ಆಶ್ಚರ್ಯಕರವಾಗಿತ್ತು," ಏಕೆಂದರೆ ಯುದ್ಧವು ಎಲ್ಲರ ಮನಸ್ಸು ಮತ್ತು ಸ್ಥಳವನ್ನು ಸ್ಪಷ್ಟವಾಗಿ ಆಕ್ರಮಿಸಿಕೊಂಡಿದೆ. ಆದರೂ, "ವಿಶ್ವಗುರುಗಳ ಆರೋಗ್ಯದ ವಿಷಯವು, ರಾಜ್ಯ ಅಧಿಕಾರಿಗಳು ಮತ್ತು ವಿವಿಧ ಪಂಗಡಗಳ ಸಭಾಪಾಲಕರ ಹೃದಯಗಳನ್ನು ಹೇಗೆ ಸ್ಪರ್ಶಿಸುತ್ತದೆ ಎಂಬುದನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು ಎಂದು ಅವರು ಗಮನಿಸಿದರು. "ಇದು ಉಕ್ರೇನ್‌ನಲ್ಲಿನ ಮಾಹಿತಿ ಭೂದೃಶ್ಯವು ಇತರ ದೇಶಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಅವರು ಗಮನಸೆಳೆದರು.
ಎಲ್ಲಾ ಮಾನವೀಯತೆಗೆ ಒಂದು ಸವಾಲು
ಈ ಯುದ್ಧವು, ಮಹಾಧರ್ಮಾಧ್ಯಕ್ಷರಾದ ಕುಲ್ಬೊಕಾಸ್ ರವರು ತಮ್ಮ ಹೇಳಿಕೆಗಳನ್ನು ಮುಗಿಸುವ ಮೊದಲು, ಎಲ್ಲಾ ಮಾನವೀಯತೆಗೆ ಒಂದು ಸವಾಲು ಹಾಕುತ್ತಾರೆ ಎಂದು ಹೇಳಿದರು.
ಅನೇಕ ರಂಗಗಳಲ್ಲಿ, ಶಾಂತಿಯನ್ನು ಪುನಃಸ್ಥಾಪಿಸಲು, ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒತ್ತಾಯಿಸಲು ಕ್ರಮಗಳು ಕೈಗೊಳ್ಳುವುದು ಅಗತ್ಯವಾಗಿದೆ, ಆದ್ದರಿಂದ, "ನಾವೆಲ್ಲರೂ ಆಧ್ಯಾತ್ಮಿಕವಾಗಿ ಬೆಳೆಯಬೇಕು ಮತ್ತು ಭರವಸೆಗೆ ಸಾಕ್ಷಿಯಾಗಬೇಕು" ಎಂದು ಹೇಳಿದರು.