MAP

Refugees flee eastern Congo into Burundi as fighting rages in South Kivu Refugees flee eastern Congo into Burundi as fighting rages in South Kivu 

ಡಿಆರ್‌ಸಿಯಲ್ಲಿ ಎಡಿಎಫ್ ಪಡೆಗಳು 70 ನಾಗರಿಕರನ್ನು ಕ್ರೂರವಾಗಿ ಕೊಂದಿರುವುದನ್ನು ಎಸಿಎನ್ ದೃಢಪಡಿಸಿದೆ

ರುವಾಂಡಾ ಬೆಂಬಲಿತ M23 ಬಂಡಾಯ ಗುಂಪು, ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಸಾವು ಮತ್ತು ವಿನಾಶವನ್ನು ಮುಂದುವರೆಸುತ್ತಿದ್ದಂತೆ, ವಿಶ್ವಗುರುಗಳ ಫೌಂಡೇಶನ್ ಏಯ್ಡ್ ಟು ದಿ ಚರ್ಚ್ ಇನ್ ನೀಡ್‌ನ ಸ್ಥಳೀಯ ಮೂಲಗಳು ಇತ್ತೀಚಿನ ದಿನಗಳಲ್ಲಿ ಉತ್ತರ ಕಿವುವಿನ ಹಳ್ಳಿಯಲ್ಲಿ, ಇಸ್ಲಾಂ ಧರ್ಮದ ಮಿತ್ರಪಕ್ಷಗಳ ಪ್ರಜಾಪ್ರಭುತ್ವ ಪಡೆಗಳು (ADF) ನಡೆಸಿದ ಧಾಳಿಯಲ್ಲಿ 70 ನಾಗರಿಕರ ಕ್ರೂರ ಹತ್ಯೆಯನ್ನು ದೃಢಪಡಿಸುತ್ತವೆ.

ಲಿಸಾ ಝೆಂಗಾರಿನಿ

ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ರುವಾಂಡಾ ಬೆಂಬಲಿತ M23 ಬಂಡಾಯ ಗುಂಪಿನಿಂದ ನಡೆಯುತ್ತಿರುವ ಮಾರಕ ದಾಳಿಯ ನಡುವೆ, ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡುವಂತೆ ಒತ್ತಾಯಿಸಲಾಗುತ್ತಿದೆ, ಖನಿಜ-ಸಮೃದ್ಧ ಪ್ರದೇಶದ ನಿಯಂತ್ರಣಕ್ಕಾಗಿ ಸ್ಪರ್ಧಿಸುತ್ತಿರುವ ಇತರ ಸಶಸ್ತ್ರ ಗುಂಪುಗಳಿಂದ ದೌರ್ಜನ್ಯಗಳು ಮುಂದುವರೆದಿವೆ.

ದೇವಾಲಯದಲ್ಲಿ 70 ಶವಗಳು ಪತ್ತೆ
ಉತ್ತರ ಕಿವುವಿನ ಲುಬೆರೊ ಬಳಿಯ ಹಳ್ಳಿಯಲ್ಲಿ ಇತ್ತೀಚಿನ ಮತ್ತು ಭಯಾನಕ ಘಟನೆಗಳಲ್ಲಿ, ಇನ್ನೊಂದು ಘಟನೆ ಸಂಭವಿಸಿದೆ, ಅದೇನೆಂದರೆ, ಇತ್ತೀಚೆಗೆ ಪ್ರೊಟೆಸ್ಟಂಟ್ ದೇವಾಲಯದಲ್ಲಿ 70ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ ಎಂದು ಅಂತರರಾಷ್ಟ್ರೀಯ ಕಥೋಲಿಕ ಚಾರಿಟಿ ಏಡ್ ಟು ದಿ ಚರ್ಚ್ ಇನ್ ನೀಡ್ (ACN) ಮತ್ತು ಫೈಡ್ಸ್ ಕಥೋಲಿಕ ಸುದ್ದಿ ಸಂಸ್ಥೆಯು ದೃಢಪಡಿಸಿವೆ.

ಕಳೆದ ವಾರ ಸಂಪರ್ಕಿಸಿದ ಸ್ಥಳೀಯ ಮೂಲದ ಪ್ರಕಾರ, ಈ ದಾಳಿಯನ್ನು ಉಗಾಂಡಾ ಮೂಲದ ಇಸ್ಲಾಂ ರಾಜ್ಯದ ಸಂಯೋಜಿತ ಗುಂಪಾದ, ಮಿತ್ರಪಕ್ಷಗಳ ಪ್ರಜಾಪ್ರಭುತ್ವ ಪಡೆಗಳು (ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ ADF) ನಡೆಸಿದೆ, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಉಗಾಂಡಾ ಮತ್ತು DRC ಎರಡರಲ್ಲೂ ಕಾರ್ಯನಿರ್ವಹಿಸುತ್ತಿದೆ.

ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಒಳಗೊಂಡ ಸಂತ್ರಸ್ತರನ್ನು ಇಸ್ಲಾಂ ಧರ್ಮದ ಗುಂಪು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕ್ರೂರವಾಗಿ ಕೊಲ್ಲಲಾಯಿತು ಎಂದು ವರದಿಯಾಗಿದೆ. ಕೆಲವರನ್ನು ಬಂಧಿಸಲಾಗಿತ್ತು, ಇನ್ನೂ ಕೆಲವರನ್ನು ಶಿರಚ್ಛೇದ ಮಾಡಲಾಗಿತ್ತು. ಇದು ಸ್ಥಳೀಯ ಜನಸಂಖ್ಯೆಯ ಮೇಲೆ ಭಯ ಹುಟ್ಟಿಸುವ ಮತ್ತು ನಿಯಂತ್ರಣ ಸಾಧಿಸುವ ಉದ್ದೇಶದಿಂದ ನಡೆಸಲಾದ ಹತ್ಯಾಕಾಂಡವನ್ನು ಸೂಚಿಸುತ್ತದೆ.

ADF ಇಸ್ಲಾಂ ಧರ್ಮದ ಗುಂಪಿನ ಒತ್ತೆಯಾಳುಗಳು
ADF ತನ್ನ ಹಿಂಸಾತ್ಮಕ ತಂತ್ರಗಳಿಗೆ ಕುಖ್ಯಾತವಾಗಿದೆ, ಇದರಲ್ಲಿ ಹೆಚ್ಚಾಗಿ ಒತ್ತೆಯಾಳುಗಳನ್ನು ತೆಗೆದುಕೊಂಡು, ಒತ್ತೆಯಾಳುಗಳನ್ನು ಯುದ್ಧದ ಪ್ರಯತ್ನಕ್ಕಾಗಿ ಬಲವಂತದ ಕಾರ್ಮಿಕರಾಗಿ ಅವರೊಂದಿಗೆ ಪ್ರಯಾಣಿಸಲು ಒತ್ತಾಯಿಸಲಾಗುತ್ತದೆ. ಇದರ ಪ್ರಕಾರ, ಬಲವಂತದ ಪ್ರಯಾಣವನ್ನು ಒಪ್ಪಿಕೊಳ್ಳದ ಅಥವಾ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ 70 ಸಂತ್ರಸ್ತರು ಸಾವನ್ನಪ್ಪಿರುವ ಸಾಧ್ಯತೆಯಿದೆ.

ಉತ್ತರ ಕಿವು ಮತ್ತು ದಕ್ಷಿಣ ಕಿವು ಪ್ರಾಂತ್ಯಗಳಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದರೆ, ಪೂರ್ವ ಡಿಆರ್‌ಸಿಗೆ ಈ ಹತ್ಯಾಕಾಂಡವು ಒಂದು ನಿರ್ಣಾಯಕ ಕ್ಷಣವಾಗಿದೆ, ಅಲ್ಲಿ M23 ಬಂಡುಕೋರರು ಕಾಂಗೋಲೀಸ್ ಸಶಸ್ತ್ರ ಪಡೆಗಳು ಮತ್ತು ಅವರ ಮಿತ್ರರಾಷ್ಟ್ರಗಳ ವಿರುದ್ಧ ತಮ್ಮ ಮಿಂಚಿನ ದಾಳಿಯನ್ನು ಮುಂದುವರೆಸಿದ್ದಾರೆ.

ಡಿಆರ್‌ಸಿಯಲ್ಲಿ ಮುಂದುವರೆಯುತ್ತಿರುವ M23 ದಾಳಿಯ ನಡುವೆ ಭಯ ಮತ್ತು ಅನಿಶ್ಚಿತತೆ
ಎಡಿಎಫ್‌ನ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದರ ಜೊತೆಗೆ, ಮುಂದಿನ ಕೆಲವು ದಿನಗಳಲ್ಲಿ ರುವಾಂಡಾ ಬೆಂಬಲಿತ ಗುಂಪು ಉತ್ತರ ಕಿವುವಿನ ಎರಡನೇ ಅತಿದೊಡ್ಡ ನಗರವಾದ ಬುಟೆಂಬೊವನ್ನು ವಶಪಡಿಸಿಕೊಳ್ಳುತ್ತದೆ ಎಂಬ ಭಯವನ್ನು ಎಸಿಎನ್‌ನ ಸ್ಥಳೀಯ ಮೂಲಗಳು ವ್ಯಕ್ತಪಡಿಸಿವೆ, ಒಂದು ವಾರದ ಹಿಂದೆ ಪ್ರಾಂತೀಯ ರಾಜಧಾನಿ ಗೋಮಾ ಮತ್ತು ದಕ್ಷಿಣ ಕಿವುವಿನ ರಾಜಧಾನಿ ಬುಕಾವುವನ್ನು ವಶಪಡಿಸಿಕೊಂಡಂತೆ. "ಬುಟೆಂಬೊದಲ್ಲಿ ಬಹಳಷ್ಟು ಜನರು ಮಾನಸಿಕ ಯಾತನೆ ಅನುಭವಿಸುತ್ತದ್ದಾರೆ, ಏಕೆಂದರೆ ಯುದ್ಧವು ಅಕ್ಷರಶಃ ನಮ್ಮ ಬಾಗಿಲಲ್ಲೇ ಇದೆ" ಎಂದು ಮೂಲಗಳು ತಿಳಿಸಿವೆ. "ಇತರ ಪ್ರದೇಶಗಳು ಅವ್ಯವಸ್ಥೆಯಿಂದ ಹೇಗೆ ಮುಳುಗಿವೆ ಎಂಬುದನ್ನು ನಾವು ನೋಡಿದ್ದೇವೆ ಮತ್ತು ಈಗ ನಮ್ಮ ಸರದಿ ಎಂದು ತೋರುತ್ತದೆ."

ಮುಂದುವರೆಯುತ್ತಿರುವ ಸಂಘರ್ಷವು ಭಯ ಮತ್ತು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸಿದೆ ಎಂದು ಮೂಲಗಳು ವಿವರಿಸಿದ್ದು, ಈ ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡುವ ಆಂತರಿಕ ಸಹಯೋಗಿಗಳ ಉಪಸ್ಥಿತಿಯು ಅಭದ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಾರ್ಥನೆಗಾಗಿ ಕರೆಯೊಂದಿಗೆ ಮೂಲವು ಮುಕ್ತಾಯಗೊಳಿಸಿದೆ: ನಾವು ಬದುಕುತ್ತಿರುವ ಈ ಪರಿಸ್ಥಿತಿಯ ನಡುವೆ ಪ್ರಾರ್ಥನೆಯು ನಮ್ಮ ಭರವಸೆಯನ್ನು ಜೀವಂತವಾಗಿರಿಸುತ್ತದೆ.

ಭರವಸೆ
ಕಷ್ಟಕರ ಪರಿಸ್ಥಿತಿಗಳ ಹೊರತಾಗಿಯೂ, ಸ್ಥಳೀಯ ಕಥೊಲಿಕ ಸಮುದಾಯಗಳು ಭರವಸೆಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಬುಟೆಂಬೊ-ಬೆನಿಯ ಧರ್ಮಾಧ್ಯಕ್ಷರಾದ ಮೆಲ್ಚಿಸೆಡೆಕ್ ಸಿಕುಲಿ ಪಲುಕುರವರು ಎಂದು ವ್ಯಾಟಿಕನ್ ಸುದ್ಧಿಗೆ ಹೇಳುತ್ತಾರೆ. ಭಯ ಮತ್ತು ಅಸ್ಥಿರತೆ ಮುಂದುವರಿದಿದ್ದರೂ, ವ್ಯಾಟಿಕನ್ ಸುದ್ಧಿಯ ಫೆಡೆರಿಕೊ ಪಿಯಾನಾರವರೊಂದಿಗಿನ ಸಂದರ್ಶನದಲ್ಲಿ ಅವರು, ಧರ್ಮಸಭೆಯು ತನ್ನ ಧ್ಯೇಯವನ್ನು ಧೈರ್ಯದಿಂದ ಮುಂದುವರೆಸಿದೆ, ದೈವಾರಾಧನಾ ವಿಧಿ ಆಚರಣೆಗಳನ್ನು ಅರ್ಪಿಸುತ್ತದೆ, ಧರ್ಮಾಧಿಕಾರಿ ದೀಕ್ಷೆಗಳನ್ನು ಯೋಜಿಸುತ್ತದೆ ಮತ್ತು ಶಾಂತಿ ನಿರ್ಮಾಣ ಪ್ರಯತ್ನಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ರುವಾಂಡಾ M23 ಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ ನೀಡಿದೆ
ಫೆಬ್ರವರಿ 21ರ ಶುಕ್ರವಾರದಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರುವಾಂಡಾದ ಮಿಲಿಟರಿಗೆ ಪೂರ್ವ ಕಾಂಗೋದಲ್ಲಿ ಕಾರ್ಯನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳಲ್ಲಿ ಅತ್ಯಂತ ಪ್ರಮುಖವಾದ M23 ಬಂಡಾಯ ಗುಂಪನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಮತ್ತು "ಪೂರ್ವಭಾವಿ ಷರತ್ತುಗಳಿಲ್ಲದೆ" ಕಾಂಗೋಲೀಸ್ ಪ್ರದೇಶದಿಂದ ಎಲ್ಲಾ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕರೆ ನೀಡಿದೆ.

24 ಫೆಬ್ರವರಿ 2025, 14:39