ಅಮೇರಿಕದ ಸಾಮಾಜಿಕ ಸೇವಾಕಾರ್ಯದ ನಾಯಕರು - "ಭರವಸೆಯ ಧರ್ಮಪ್ರಚಾರಕರು"
ಕ್ರಿಸ್ಟೋಫರ್ ವೆಲ್ಸ್
2025ರ ಕಥೋಲಿಕ ಸಾಮಾಜಿಕ ಸೇವಾಕಾರ್ಯದ ಸಭೆಗಾಗಿ ಈ ವಾರ ಅಮೇರಿಕದ ಕಥೋಲಿಕ ಸಾಮಾಜಿಕ ಸೇವಾಕಾರ್ಯದ ನಾಯಕರು ರಾಷ್ಟ್ರದ ರಾಜಧಾನಿಯಲ್ಲಿ ಸಭೆ ಸೇರುತ್ತಿದ್ದಾರೆ, ಇದು "ನಮ್ಮ ಮನೆ ಮತ್ತು ವಿಶ್ವದಾದ್ಯಂತದ ಅತ್ಯಂತ ದುರ್ಬಲ ಸಹೋದರ ಸಹೋದರಿಯರ ಮೇಲೆ ಪರಿಣಾಮ ಬೀರುವ ಪ್ರಸ್ತುತ ದೇಶೀಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಅವರ ವಿಶ್ವಾಸವನ್ನು ಪ್ರೇರೇಪಿಸುವ ನೂರಾರು ಭಾಗವಹಿಸುವಂತಹ ವ್ಯಕ್ತಿಗಳನ್ನು" ಒಟ್ಟುಗೂಡಿಸುವ ಗುರಿಯನ್ನು ಹೊಂದಿರುವ ವಾರ್ಷಿಕ ಕಾರ್ಯಕ್ರಮವಾಗಿದೆ.
ಈ ವರ್ಷದ ಸಭೆಯು " ಭರವಸೆಯ ಧರ್ಮಪ್ರಚಾರಕರು ಮತ್ತು ನ್ಯಾಯದ ಪ್ರತಿಪಾದಕರು" ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ.
‘ನಮ್ಮ ಪ್ರವಾದಿಗಳ ದೈವಕರೆಯನ್ನು ಅನುಸರಿಸಿ’
ಶನಿವಾರ ನಡೆದ ಸಭೆಯ ಉದ್ಘಾಟನಾ ಸಮಗ್ರ ಅಧಿವೇಶನದಲ್ಲಿ ತಮ್ಮ ಮುಖ್ಯ ಭಾಷಣದಲ್ಲಿ, ಅಮೇರಿಕದ ಪ್ರೇಷಿತ ರಾಯಭಾರಿ ಕಾರ್ಡಿನಲ್ ಕ್ರಿಸ್ಟೋಫ್ ಪಿಯರೆರವರು, ಈ ಸಭೆಯು "ಒಬ್ಬರನ್ನೊಬ್ಬರು ಆಲಿಸಲು, ಸಂವಾದ ನಡೆಸಲು, ಸಾಮಾನ್ಯ ಒಳಿತಿಗಾಗಿ ಮತ್ತು ಜನರ ಮಾನವ ಘನತೆಯ ಪ್ರಚಾರಕ್ಕಾಗಿ ನಮ್ಮ ಧ್ಯೇಯದಲ್ಲಿ, ಆತ್ಮವು ನಾವು ಏನು ಮಾಡಬೇಕೆಂದು ಬಯಸುತ್ತದೆ ಎಂಬುದನ್ನು ಗ್ರಹಿಸಲು ಅತ್ಯುತ್ತಮ ಅವಕಾಶವಾಗಿದೆ" ಎಂದು ಹೇಳಿದರು.
ಅವರ ಹೇಳಿಕೆಗಳು "ನಮ್ಮ ಪ್ರವಾದಿಗಳ ದೈವಕರೆಯನ್ನು ಅನುಸರಿಸಿ, ನಮ್ಮ ಕಾರ್ಯಗಳು ಮತ್ತು ನುಡಿಗಳ ಮೂಲಕ ಸಮಾಜವನ್ನು ಪರಿವರ್ತಿಸುವ ಸತ್ಯವನ್ನು ಘೋಷಿಸುವುದು: ಅಂದರೆ, ದೇವರು ತನ್ನ ಜನರನ್ನು ಪ್ರೀತಿಸುತ್ತಾರೆ ಮತ್ತು ಎಲ್ಲಾ ಜನರು ಮಕ್ಕಳಂತೆ ತಮ್ಮ ಘನತೆಯನ್ನು ಅನುಭವಿಸಬೇಕೆಂದು ಬಯಸುತ್ತಾರೆ, ಜೊತೆಗೆ ಮಾನವ ಎಂಬ ಕುಟುಂಬದಲ್ಲಿ ಸಹೋದರ ಸಹೋದರಿಯರಾಗಿ ಪರಸ್ಪರ ಒಗ್ಗಟ್ಟನಿಂದ ಜೀವಿಸಬೇಕೆಂದು ಅವರು ಬಯಸುತ್ತಾರೆ" ಎಂದು ಹೇಳಿದರು.
"ಸರಳೀಕೃತ ಮತ್ತು ಧ್ರುವೀಕರಣ ಪರಿಹಾರಗಳನ್ನು" ಪ್ರಸ್ತಾಪಿಸುವ "ರಾಜಕೀಯ ರಕ್ಷಕರನ್ನು" ತಿರಸ್ಕರಿಸಿದ ಕಾರ್ಡಿನಲ್ ಪಿಯರೆರವರು, ಕಥೋಲಿಕ ಸೇವಾಕಾರ್ಯದ ಸೇವೆಯು ವಿಭಿನ್ನವಾಗಿರಬೇಕು, ಸಾಮಾನ್ಯ ಒಳಿತನ್ನು ಅನುಸರಿಸಲು ಎಲ್ಲರೂ ಒಗ್ಗೂಡಬೇಕು, ಮೊದಲನೆಯದಾಗಿ ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಸಾಮಾನ್ಯ ಒಳಿತನ್ನು ಅನುಸರಿಸಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.
ನ್ಯಾಯ ವಂಚಿತರಿಗೆ ಸಹಾಯ ಮಾಡುವ ಮೂಲಕ ಜನರಿಗೆ ಭರವಸೆ ನೀಡುವ ಪ್ರಾಮುಖ್ಯತೆಯನ್ನು ಅವರು ಒತ್ತಾಯಿಸಿದರು ಮತ್ತು ಕಥೋಲಿಕ ಸಾಮಾಜಿಕ ಸೇವಾಕಾರ್ಯವು "ಮಹತ್ವದ ನ್ಯಾಯವನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ" ಮೂರು ನಿರ್ದಿಷ್ಟ ಕ್ಷೇತ್ರಗಳನ್ನು ಸೂಚಿಸಿದರು: ಅವುಗಳೆಂದರೆ "ಮರಣದಂಡನೆಯನ್ನು ರದ್ದುಗೊಳಿಸುವುದು, ವಿಶ್ವ ಶಾಂತಿಗಾಗಿ ವಕಾಲತ್ತು ವಹಿಸುವುದು ಹಾಗೂ ವಲಸಿಗರು ಮತ್ತು ನಿರಾಶ್ರಿತರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುವುದು."
ʻಭರವಸೆಯನ್ನು ಸಂಘಟಿಸುವ ಮೂಲಕ ಸೇತುವೆಗಳನ್ನು ನಿರ್ಮಿಸುವುದುʼ
ಮರುದಿನ ಬೆಳಿಗ್ಗೆ ನಡೆದ ಸಮಗ್ರ ಅಧಿವೇಶನವು “ಭರವಸೆಯನ್ನು ಸಂಘಟಿಸುವ ಮೂಲಕ ಸೇತುವೆಗಳನ್ನು ನಿರ್ಮಿಸುವುದು” ಎಂಬ ವಿಷಯಕ್ಕೆ ಮೀಸಲಾಗಿತ್ತು, ಇದರಲ್ಲಿ ಲತೀನ್ ಅಮೇರಿಕದ ವಿಶ್ವಗುರುಗಳ ಆಯೋಗದ ಕಾರ್ಯದರ್ಶಿಯಾದ ಡಾ. ಎಮಿಲ್ಸ್ ಕುಡಾರವರು ಮುಖ್ಯ ಭಾಷಣಕಾರರಾಗಿದ್ದರು.
ಆಕೆಯ ಭಾಷಣವು ವಿಶ್ವಗುರು ಫ್ರಾನ್ಸಿಸ್ ರವರು ಧರ್ಮಸಭೆಯ ಬೋಧನಾವಳಿ(ಮ್ಯಾಜಿಸ್ಟೀರಿಯಂ)ಗೆ ನೀಡಿದ ಕೊಡುಗೆಯ ಮೇಲೆ ಕೇಂದ್ರೀಕರಿಸಿತು, ಪ್ರೆಡಿಕೇಟ್ ಇವಾಂಜೆಲಿಯಂನ ಶುಭಸಂದೇಶದ ಬೋಧನಾ ಸಮುದಾಯದಿಂದ ಪ್ರಾರಂಭಿಸಿ, ಜನರು ತಮ್ಮ ದೈನಂದಿನ ಜೀವನವನ್ನು ತಮ್ಮ ನುಡಿ ಮತ್ತು ಕಾರ್ಯದಿಂದ ತೊಡಗಿಸಿಕೊಂಡು, ಅಂತರವನ್ನು ಕಡಿಮೆ ಮಾಡಿಕೊಂಡು, ಅಗತ್ಯವಿದ್ದಲ್ಲಿ ತನ್ನನ್ನು ತಾನು ತಗ್ಗಿಸಿಕೊಳ್ಳಲು ಸಿದ್ಧರಿರುವ ಮತ್ತು ಮಾನವ ಜೀವನವನ್ನು ಸ್ವೀಕರಿಸುವ, ಇತರರಲ್ಲಿ ಬಳಲುತ್ತಿರುವ ಕ್ರಿಸ್ತರ ಶರೀರವನ್ನು ಸ್ಪರ್ಶಿಸುವ ಒಂದು ಸಮುದಾಯವಾಗೋಣ.
ಇದು ಸಮುದಾಯ ಸಂಘಟನೆಯ ಆರಂಭಿಕ ಹಂತವಾಗಿದೆ, ಅಂದರೆ ಸಂಘಟಿತ ಸಮುದಾಯಗಳನ್ನು ಒಂದುಗೂಡಿಸುವ ಸೇರ್ಪಡೆ, ಸಮನ್ವಯ ಮತ್ತು ಭ್ರಾತೃತ್ವದ ಸೇತುವೆಗಳನ್ನು ನಿರ್ಮಿಸುವುದು ಎಂದು ಅವರು ಹೇಳಿದರು.
ಡಾ. ಕುಡಾರವರು ಲತೀನ್ ಅಮೆರಿಕದ ವಿಶ್ವಗುರುಗಳ ಆಯೋಗದ ಕಾರ್ಯವನ್ನು ವಿವರಿಸುತ್ತಾ ಮುಂದುವರೆಸಿದರು, ಇದು ಅಮೆರಿಕದಾದ್ಯಂತ ಸಮನ್ವಯವನ್ನು ಒಳಗೊಂಡಿದೆ. ಇದು "ರಕ್ಷಣೆಯ ಮಾರ್ಗವಾಗಿ" ಏಕತೆಯ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿದೆ, ಇದನ್ನು ಅವರು "ವಿಭಜನೆ ಮತ್ತು ಧ್ರುವೀಕರಣದಿಂದ ಗುರುತಿಸಲ್ಪಟ್ಟ ವಿಶ್ವಕ್ಕೆ ಇದು ಕಥೋಲಿಕರ ಕೊಡುಗೆಯಾಗಿದೆ" ಎಂದು ವಿವರಿಸಿದರು.
ಒಗ್ಗಟ್ಟನ್ನು ನಿರ್ಮಿಸಲು, ಸಂಘಟಿತ ಸಮುದಾಯಗಳು ಎಲ್ಲರೊಂದಿಗೆ ಪರಸ್ಪರ ಸಂವಾದ ನಡೆಸಬೇಕು, ಅದು ಶಾಂತಿಯನ್ನು ಖಾತರಿಪಡಿಸುವ ಅತ್ಯುತ್ತಮ ಸಾಧನವಾಗಿದೆ ಎಂದು ಅವರು ಹೇಳಿದರು.
ಆದ್ದರಿಂದ, ಕಥೋಲಿಕ ಸಾಮಾಜಿಕ ಸೇವಾಕಾರ್ಯದ ನಾಯಕರು ನಿಜವಾದ ಭರವಸೆಯನ್ನು ಕಳೆದುಕೊಳ್ಳದೆ, ಬದಲಿಗೆ ವಿಶ್ವಾಸವನ್ನು ಸಂಘಟಿಸಲು ತಮ್ಮನ್ನು ತಾವು ಬದ್ಧರಾಗಿಸಿಕೊಳ್ಳಬೇಕು: ನಾವೆಲ್ಲರೂ ಒಂದೇ ಧರ್ಮಸಭೆಯಾಗಿ ಹೊರಟು, ಯಾರನ್ನೂ ಕಡೆಗಣಿಸದೆ ಅಥವಾ ಹಿಂದೆ ದೂಡದೆ ಸಂವಹನದ ಸೇತುವೆಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.