MAP

 Mons. Timothy Broglio USCCB presidente Mons. Timothy Broglio USCCB presidente  (Credits: Senior Airman Kristin High)

ಟ್ರಂಪ್‌ರವರ ಕೆಲವು ಕಾರ್ಯನಿರ್ವಾಹಕ ಆದೇಶಗಳು 'ತೀವ್ರ ತೊಂದರೆದಾಯಕ'

ವಲಸೆ, ಮರಣದಂಡನೆ ಮತ್ತು ಪರಿಸರದ ಕುರಿತು ಅಧ್ಯಕ್ಷ ಟ್ರಂಪ್‌ರವರ ಹೊಸ ಕ್ರಮಗಳು "ತೀವ್ರ ತೊಂದರೆದಾಯಕ" ಎಂದು ಅಮೇರಿಕದ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರು ಹೇಳುತ್ತಾರೆ, ಆದರೆ ಲಿಂಗ ಸಮಸ್ಯೆಗಳ ಕುರಿತು ಅವರ ಉಪಕ್ರಮಗಳನ್ನು ಶ್ಲಾಘಿಸುತ್ತಾರೆ. ತಮ್ಮ ಪ್ರತ್ಯೇಕ ಹೇಳಿಕೆಯಲ್ಲಿ, ವಲಸೆಯ ಕುರಿತಾದ ಧರ್ಮಾಧ್ಯಕ್ಷರುಗಳ ಸಮಿತಿಯ ಅಧ್ಯಕ್ಷರು "ರಾಷ್ಟ್ರೀಯ ಸ್ವಾರ್ಥವು ನೈತಿಕ ಕಾನೂನಿಗೆ ವಿರುದ್ಧವಾದ ಪರಿಣಾಮಗಳನ್ನು ಹೊಂದಿರುವ ನೀತಿಗಳನ್ನು ಸಮರ್ಥಿಸುವುದಿಲ್ಲ" ಎಂದು ಹೇಳುತ್ತಾರೆ.

ಜೋಸೆಫ್ ಟುಲ್ಲೊಚ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಅಧಿಕಾರ ವಹಿಸಿಕೊಂಡ ಮೊದಲ ಕೆಲವು ದಿನಗಳಲ್ಲಿ ಸಹಿ ಮಾಡಿದ ಹಲವಾರು ಕಾರ್ಯಕಾರಿ ಆದೇಶಗಳಿಗೆ ಅಮೆರಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ತಿಮೋತಿ ಬ್ರೋಗ್ಲಿಯೊರವರು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕಾರಿ ಆದೇಶಗಳಲ್ಲಿರುವ ಕೆಲವು ನಿಬಂಧನೆಗಳು "ತೀವ್ರ ತೊಂದರೆದಾಯಕ" ಮತ್ತು "ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ" ಎಂದು ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಆದರೆ ಇನ್ನಿತರ ಕಾರ್ಯಕಾರಿ ಆದೇಶಗಳನ್ನು "ಹೆಚ್ಚು ಸಕಾರಾತ್ಮಕ ಬೆಳಕಿನಲ್ಲಿ ನೋಡಬಹುದು" ಎಂದು ಹೇಳಿದ್ದಾರೆ.

ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ಟೀಕೆಗೆ ಗುರಿಯಾದ ಕ್ಷೇತ್ರಗಳು "ವಲಸಿಗರು ಮತ್ತು ನಿರಾಶ್ರಿತರ ಚಿಕಿತ್ಸೆ, ವಿದೇಶಿ ನೆರವು, ಮರಣದಂಡನೆಯ ವಿಸ್ತರಣೆ ಮತ್ತು ಪರಿಸರದ ಮೇಲೆ ಕೇಂದ್ರೀಕರಿಸಿದವು".

ಮತ್ತೊಂದೆಡೆ, "ಪ್ರತಿಯೊಬ್ಬ ಮಾನವ ವ್ಯಕ್ತಿಯ ಬಗ್ಗೆ ಪುರುಷ ಅಥವಾ ಮಹಿಳೆ ಎಂಬ ಸತ್ಯವನ್ನು ಗುರುತಿಸಿದ್ದಕ್ಕಾಗಿ" ಅವರು ಕ್ರಮಗಳನ್ನು ಶ್ಲಾಘಿಸಿದರು.

ಅಮೆರಿಕದ 'ಹಲವು ಉಡುಗೊರೆಗಳನ್ನು' ಹಂಚಿಕೊಳ್ಳುವುದು
ಕಥೋಲಿಕ ಧರ್ಮಸಭೆಯು "ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ" ಮತ್ತು "ಶ್ವೇತಭವನವನ್ನು ಯಾರೇ ಆಕ್ರಮಿಸಿಕೊಂಡರೂ ಅಥವಾ ಕ್ಯಾಪಿಟಲ್ ಬೆಟ್ಟದಲ್ಲಿ ಬಹುಮತದ ಅಧಿಕಾರವನ್ನು ಯಾರೇ ಹೊಂದಿದ್ದರೂ ಸಹ, ಧರ್ಮಸಭೆಯ ಬೋಧನೆಗಳು ಮಾತ್ರ ಬದಲಾಗದೆ ಉಳಿಯುತ್ತವೆ" ಎಂದು ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ಹೇಳಿದರು.

"ನಮ್ಮ ದೇಶದ ನಾಯಕತ್ವವು ಕೆಲವರ ಮಾನವ ಘನತೆಯನ್ನು ಮಾತ್ರವಲ್ಲದೆ ನಮ್ಮೆಲ್ಲರ ಅಂದರೆ ಮಾನವ ಘನತೆಯನ್ನು ಕಡೆಗಣಿಸುವ ಕ್ರಮಗಳನ್ನು ಮರುಪರಿಶೀಲಿಸುತ್ತದೆ ಎಂಬುದು ನಮ್ಮ ಆಶಯ" ಎಂದು ಬ್ರೋಗ್ಲಿಯೊರವರು ಒತ್ತಿ ಹೇಳಿದರು.

"ಅನೇಕ ಉಡುಗೊರೆಗಳಿಂದ ಆಶೀರ್ವದಿಸಲ್ಪಟ್ಟ ರಾಷ್ಟ್ರವಾಗಿ", ಅಮೆರಿಕದ ಕ್ರಮಗಳು "ಹುಟ್ಟಲಿರುವ ಮಕ್ಕಳು, ಬಡವರು, ವೃದ್ಧರು ಮತ್ತು ದುರ್ಬಲರು, ವಲಸಿಗರು ಮತ್ತು ನಿರಾಶ್ರಿತರು ಸೇರಿದಂತೆ, ನಮ್ಮ ಅತ್ಯಂತ ದುರ್ಬಲ ಸಹೋದರಿಯರು ಮತ್ತು ಸಹೋದರರ ಬಗ್ಗೆ ನಿಜವಾದ ಕಾಳಜಿಯನ್ನು ಪ್ರದರ್ಶಿಸಲಿ" ಎಂದು ಪ್ರಾರ್ಥಿಸುವುದಾಗಿ ಹೇಳುವ ಮೂಲಕ ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು.

ವಲಸೆ ಆದೇಶಗಳು 'ದೇವರಿಗೆ ಅವಮಾನ'
ಯುಎಸ್‌ಸಿಸಿಬಿಯ ವಲಸೆ ಸಮಿತಿಯ ಅಧ್ಯಕ್ಷರಾದ ಎಲ್ ಪಾಸೊದ ಧರ್ಮಾಧ್ಯಕ್ಷರಾದ ಮಾರ್ಕ್ ಜೆ. ಸೀಟ್ಜ್ ರವರು ತಮ್ಮ ಪ್ರತ್ಯೇಕ ಹೇಳಿಕೆಯಲ್ಲಿ ಕಾರ್ಯನಿರ್ವಾಹಕ ಆದೇಶಗಳನ್ನು ಉದ್ದೇಶಿಸಿ ಮಾತನಾಡಿದರು.

"ರಾಷ್ಟ್ರೀಯ ಸ್ವಾರ್ಥವು ನೈತಿಕ ಕಾನೂನಿಗೆ ವಿರುದ್ಧವಾದ ಪರಿಣಾಮಗಳನ್ನು ಹೊಂದಿರುವ ನೀತಿಗಳನ್ನು ಸಮರ್ಥಿಸುವುದಿಲ್ಲ" ಎಂದು ಧರ್ಮಾಧ್ಯಕ್ಷರಾದ ಸೀಟ್ಜ್ ರವರು ಹೇಳಿದರು.

"ಯಾವುದೇ ಗುಂಪನ್ನು ಅವಹೇಳನ ಮಾಡಲು ವ್ಯಾಪಕವಾದ ಸಾಮಾನ್ಯೀಕರಣಗಳನ್ನು ಬಳಸುವುದು, ಉದಾಹರಣೆಗೆ ಎಲ್ಲಾ ದಾಖಲೆರಹಿತ ವಲಸಿಗರನ್ನು 'ಅಪರಾಧಿಗಳು' ಅಥವಾ 'ಆಕ್ರಮಣಕಾರರು' ಎಂದು ವಿವರಿಸುವುದು, ಕಾನೂನಿನಡಿಯಲ್ಲಿ ಅವರಿಂದ ರಕ್ಷಣೆಯನ್ನು ಕಸಿದುಕೊಳ್ಳುವ ಕ್ರಿಯೆಗಳ, ನಮ್ಮಲ್ಲಿ ಪ್ರತಿಯೊಬ್ಬರನ್ನು ತನ್ನದೇ ಆದ ರೂಪದಲ್ಲಿ ಸೃಷ್ಟಿಸಿದ ದೇವರಿಗೆ ಮಾಡುವ ಅವಮಾನವಾಗಿದೆ."

ಹಲವಾರು ಕಾರ್ಯನಿರ್ವಾಹಕ ಆದೇಶಗಳು "ನಿರ್ದಿಷ್ಟವಾಗಿ ಫೆಡರಲ್ ಕಾನೂನಿನಲ್ಲಿ ಪ್ರತಿಪಾದಿಸಲಾದ ಮಾನವೀಯ ರಕ್ಷಣೆಗಳನ್ನು ತೆಗೆದುಹಾಕಲು ಉದ್ದೇಶಿಸಲಾಗಿದೆ" ಎಂದು ಧರ್ಮಾಧ್ಯಕ್ಷರು ಗಮನಿಸಿದರು ಮತ್ತು ಜನ್ಮಸಿದ್ಧ ಹಕ್ಕು ಕಾನೂನಿಗೆ ಪ್ರಸ್ತಾವಿತ ಬದಲಾವಣೆಯು "ಸುಪ್ರೀಂ ಕೋರ್ಟ್‌ನ ದೀರ್ಘಕಾಲದ ವ್ಯಾಖ್ಯಾನಕ್ಕೆ ವಿರುದ್ಧವಾಗಿ ಅಪಾಯಕಾರಿ ಪೂರ್ವನಿದರ್ಶನವನ್ನು ಹೊಂದಿಸುತ್ತದೆ" ಎಂದು ಒತ್ತಿ ಹೇಳಿದರು.

"ಸಾಮಾನ್ಯ ಒಳಿತನ್ನು ಹೆಚ್ಚಿಸುವ ಅರ್ಥಪೂರ್ಣ, ದ್ವಿಪಕ್ಷೀಯ ವಲಸೆ ಸುಧಾರಣೆಯನ್ನು ಸಾಧಿಸಲು" ಕಾಂಗ್ರೆಸ್ ಸದಸ್ಯರೊಂದಿಗೆ "ಸದ್ಭಾವನೆಯಿಂದ" ಕೆಲಸ ಮಾಡುವಂತೆ ಅಧ್ಯಕ್ಷ ಟ್ರಂಪ್‌ರವರಿಗೆ ಮನವಿ ಮಾಡುವ ಮೂಲಕ ಧರ್ಮಾಧ್ಯಕ್ಷರಾದ ಸೀಟ್ಜ್ ರವರು ತಮ್ಮ ಹೇಳಿಕೆಯನ್ನು ಕೊನೆಗೊಳಿಸಿದರು.

"ಶುಭಸಂದೇಶದ ಜೀವನಕ್ಕೆ ಅನುಗುಣವಾಗಿ ತಮ್ಮ ವಲಸೆ ಸಹೋದರ ಸಹೋದರಿಯರೊಂದಿಗೆ ತಮ್ಮ ನೆರವಿನ ಕಾರ್ಯಗಳನ್ನು ಮುಂದುವರೆಸುತ್ತೇವೆ," ನನ್ನ ಸಹೋದರ ಧರ್ಮಾಧ್ಯಕ್ಷರುಗಳು ಮತ್ತು ನಾನು, ಇದನ್ನು ನಾವು ಸಾಧ್ಯವಿರುವ ಯಾವುದೇ ರೀತಿಯಲ್ಲಿ ಬೆಂಬಲಿಸುತ್ತೇವೆ ಎಂದು ಸೀಟ್ಜ್ ರವರು ಹೇಳಿದರು.

23 ಜನವರಿ 2025, 12:04