ಥೈಲ್ಯಾಂಡ್‌ನ ಪ್ರಪ್ರಥಮ ಕಥೋಲಿಕ ನರ್ಸಿಂಗ್ ಕಾಲೇಜಿನಲ್ಲಿ, ನಾಲ್ಕು ದಶಕಗಳ ಸೇವೆಯ ವಾರ್ಷಿಕೋತ್ಸವ
ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ - ಥೈಲ್ಯಾಂಡ್, ಲಿಕಾಸ್ ಸುದ್ಧಿ
ಜನವರಿ 24, ಶುಕ್ರವಾರ ನಡೆದ ಈ ಆಚರಣೆಯಲ್ಲಿ ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷ-ನೇಮಿತ ಧರ್ಮಾಧ್ಯಕ್ಷ ಫ್ರಾನ್ಸಿಸ್ ಕ್ಸೇವಿಯರ್ ವೀರ ಅರ್ಪೋನ್ರತಾನರವರ ನೇತೃತ್ವದಲ್ಲಿ ಸಾಂಭ್ರಮಿಕ ದೈವಾರಾಧನಾ ವಿಧಿಯನ್ನು ಅರ್ಪಿಸಲಾಯಿತು.
ತಮ್ಮ ಭಾಷಣದ ಸಮಯದಲ್ಲಿ, ಧರ್ಮಾಧ್ಯಕ್ಷ ಅರ್ಪೋನ್ರತಾನರವರು ಕಾಲೇಜಿನ ಸಂಸ್ಥಾಪಕ, ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷ- ಪರಮಪೂಜ್ಯ(ಎಮೆರಿಟಸ್) ಕಾರ್ಡಿನಲ್ ಮೈಕೆಲ್ ಮಿಚೈ ಕಿಟ್‌ಬಂಚುರವರಿಗೆ ಗೌರವ ಸಲ್ಲಿಸಿದರು.
ಆರೋಗ್ಯದ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದಿದ್ದರೂ, ಕಾರ್ಡಿನಲ್ ಕಿಟ್ಬಂಚುರವರು ಕಾಲೇಜು ಸಮಿತಿಯ ಅಧ್ಯಕ್ಷರಾಗಿ ಸಕ್ರಿಯ ಪಾತ್ರವನ್ನು ವಹಿಸುತ್ತಿದ್ದಾರೆ.
ಅವರ ಮಾರ್ಗದರ್ಶನವು- ಸಂಸ್ಥೆಯು ಥೈಲ್ಯಾಂಡ್‌ನ ಶೈಕ್ಷಣಿಕ ಕಾನೂನುಗಳನ್ನು ಪಾಲಿಸುವಾಗ ವಿಶ್ವಾಸ ಆಧಾರಿತ ಶಿಕ್ಷಣದ ಧ್ಯೇಯಕ್ಕೆ ಪ್ರಾಮಾಣಿಕವಾಗಿದೆ ಎಂದು ಖಚಿತಪಡಿಸುತ್ತದೆ.
ಕಾಲೇಜಿನ ಇತಿಹಾಸವನ್ನು ಪ್ರತಿಬಿಂಬಿಸುತ್ತಾ, ಸಿಸ್ಟರ್ ಕ್ರಿಸ್ಟೋಫ್ ಕೆ. ಭೆಕಾನನ್, ಎಸ್‌ಪಿಸಿ, 1984ರಲ್ಲಿ ವಿಶ್ವಗುರು ದ್ವಿತೀಯ ಜಾನ್ ಪಾಲ್ ರವರ ಥೈಲ್ಯಾಂಡ್ ಭೇಟಿಯಿಂದ ಪ್ರೇರಿತರಾಗಿ ಅದರ ಸ್ಥಾಪನೆಯನ್ನು ನೆನಪಿಸಿಕೊಂಡರು.
ಕಾರ್ಡಿನಲ್ ಕಿಟ್ಬಂಚುರವರು, ಮದರ್ ಮಿರಿಯಮ್ ಕಿಚರೋಯೆನ್ ರವರು (ಆಗ ಥೈಲ್ಯಾಂಡ್‌ನಲ್ಲಿ ಸಂತ ಪಾಲ್ ಡಿ ಚಾರ್ಟ್ರೆಸ್ ಸಿಸ್ಟರ್ಸ್ ಸಭೆಯ ಪ್ರಧಾನ ಶ್ರೇಷ್ಠ ಅಧಿಕಾರಿ) ಮತ್ತು ಡಾ. ಮನಾ ಬೂನ್‌ಖಾನ್‌ಫೋಲ್ ರವರು(ಆಗ ಸಂತ ಲೂಯಿಸ್ ಆಸ್ಪತ್ರೆಯ ನಿರ್ದೇಶಕಿ) ಅವರೊಂದಿಗಿನ ವಿಶ್ವಗುರುಗಳ ಭೇಟಿಯು ಮಹಾಧರ್ಮಕ್ಷೇತ್ರದಲ್ಲಿ ಒಂದು ನರ್ಸಿಂಗ್ ಕಾಲೇಜನ್ನು ಸ್ಥಾಪಿಸುವ ಕನಸಿಗೆ ಕಾರಣವಾಯಿತು.
1985ರಲ್ಲಿ, ವಿಶ್ವವಿದ್ಯಾನಿಲಯ ವ್ಯವಹಾರಗಳ ಸೇವಾಕಾರ್ಯವು ಪ್ರೊಫೆಸರ್ ಡಾ. ಬೂನ್ಸಮ್ ಮಾರ್ಟಿನ್ ರವರು ಮತ್ತು ಚಾರ್ಟ್ರೆಸ್ ನ ಸಂತ ಪೌಲರ ಕನ್ಯಾಸ್ತ್ರೀನಿಯರ ಸಭೆಯ (ಸಿಸ್ಟರ್ಸ್ ಆಫ್ ಸೇಂಟ್ ಪಾಲ್ ಡಿ ಚಾರ್ಟ್ರೆಸ್) ನೇತೃತ್ವದಲ್ಲಿ ಸಂಥ ಲೂಯಿಸ್ ಕಾಲೇಜ್ ಆಫ್ ನರ್ಸಿಂಗ್ ರಚನೆಗೆ ಅನುಮೋದನೆ ನೀಡಿತು.
ಸಂಸ್ಥೆಯು "ಉಬಿ ಕ್ಯಾರಿತಾಸ್ ಎಟ್ ಅಮೋರ್, ಡೀಯುಸ್ ಐಬಿ ಎಸ್ಟ್" ("ದಾನ ಮತ್ತು ಪ್ರೀತಿ ಇರುವಲ್ಲಿ, ದೇವರು ಇದ್ದಾರೆ") ಎಂಬ ಮಾರ್ಗದರ್ಶಿ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ.
ಜೂನ್ 2024ರಲ್ಲಿ ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷರಾಗಿ ನಿವೃತ್ತರಾದ ಕಾರ್ಡಿನಲ್ ಫ್ರಾನ್ಸಿಸ್ ಕ್ಸೇವಿಯರ್ ಕ್ರಿಂಗ್‌ಸಾಕ್ ಕೋವಿಥವಾನಿಜ್ ರವರು ಕಾರ್ಡಿನಲ್ ಕಿಟ್‌ಬಂಚುರವರ ಪರಿವರ್ತನಾತ್ಮಕ ನಾಯಕತ್ವವನ್ನು ಎತ್ತಿ ತೋರಿಸಿದರು.
"ಅವರ ನಾಯಕತ್ವದಲ್ಲಿ ದಯೆ, ಸೌಮ್ಯ ಮತ್ತು ಕರುಣೆಯಿಂದ ಕೂಡಿತ್ತು, ನಾವು ಪ್ರಭುಯೇಸು ಕ್ರಿಸ್ತರಿಂದ ಕಲಿತ ʻಪ್ರೀತಿಯ ನಾಗರಿಕತೆʼಯನ್ನು ಸಾಕಾರಗೊಳಿಸುತ್ತಾರೆ," ಎಂದು ಕಾರ್ಡಿನಲ್ ಕೋವಿಥವಾನಿಜ್ ರವರು ತಮ್ಮ ಅಭಿನಂದನಾ ಸಂದೇಶದಲ್ಲಿ ಹಂಚಿಕೊಂಡರು.
"ಪ್ರೀತಿಯ ಬೆಳಕನ್ನು ಬೆಳಗಿಸುವ" ಧ್ಯೇಯಕ್ಕಾಗಿ ಅವರು ಸಂಸ್ಥೆಯನ್ನು ಶ್ಲಾಘಿಸಿದರು, ಅದರ ಆಡಳಿತಾಧಿಕಾರಿಗಳು, ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಹಾನುಭೂತಿ ಮತ್ತು ಕರುಣೆಯನ್ನು ಬೆಳೆಸುವಲ್ಲಿ ಮಾಡಿದ ಸಮರ್ಪಣೆಯನ್ನು ಶ್ಲಾಘಿಸಿದರು.
ಸಂತ ಲೂಯಿಸ್ ಕಾಲೇಜಿನ ಪ್ರಸ್ತುತ ಅಧ್ಯಕ್ಷರಾದ ಸಿಸ್ಟರ್ ಕ್ರಿಸ್ಟೋಫ್ ರವರು, ಕಳೆದ ನಾಲ್ಕು ದಶಕಗಳಲ್ಲಿ ಸಾಮರ್ಥ್ಯ ಮತ್ತು ಸಹಾನುಭೂತಿ ಎರಡನ್ನೂ ಹೊಂದಿರುವ ವೃತ್ತಿಪರರನ್ನು ಪೋಷಿಸುವ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.
"ಆರಂಭದಿಂದಲೂ, ಕಾರ್ಡಿನಲ್ ಕಿಟ್ಬಂಚುರವರು ಸಂತ ಲೂಯಿಸ್ ಕಾಲೇಜನ್ನು ಪ್ರೀತಿ, ಸಹಾನುಭೂತಿ ಮತ್ತು ರೋಗಿಗಳ ಆರೈಕೆಗೆ ಬದ್ಧತೆಯನ್ನು ತುಂಬುವ ಕಥೋಲಿಕ ಸಂಸ್ಥೆಯಾಗಿ ಕಲ್ಪಿಸಿಕೊಂಡರು" ಎಂದು ಅವರು ಗಮನಿಸಿದರು.
96 ವರ್ಷ ವಯಸ್ಸಿನಲ್ಲೂ, ಕಾರ್ಡಿನಲ್ ಕಿಟ್‌ಬಂಚುರವರು ಕಾಲೇಜಿನ ನಿರ್ದೇಶನವನ್ನು ರೂಪಿಸುವಲ್ಲಿ ಪ್ರಭಾವಶಾಲಿಯಾಗಿ ಉಳಿದಿದ್ದಾರೆ, ವಿಶ್ವಾಸ ಮತ್ತು ಸೇವಾ-ಆಧಾರಿತ ಶಿಕ್ಷಣದ ಸ್ಥಾಪಕ ತತ್ವಗಳಿಗೆ ಅದು ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಸಂತ ಲೂಯಿಸ್ ಕಾಲೇಜಿನ ಪ್ರಭಾವವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಯ ಮೂಲಕ ರಾಷ್ಟ್ರೀಯ ಗಡಿಗಳನ್ನು ಮೀರಿ ವಿಸ್ತರಿಸುತ್ತದೆ.
ದಸ್ತಾವೇಜಿನ ತಿಳುವಳಿಕೆಗಳು (MOUs), ಅದರ ಬೋಧನೆ, ಸಂಶೋಧನೆ ಮತ್ತು ಶೈಕ್ಷಣಿಕ ಸೇವೆಗಳನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸಿವೆ.
ಸಂತ ಲೂಯಿಸ್ ಆಸ್ಪತ್ರೆಯನ್ನೂ ಸಹ ನಿರ್ವಹಿಸುವ ಚಾರ್ಟ್ರೆಸ್ ನ ಸಂತ ಪೌಲರ ಕನ್ಯಾಸ್ತ್ರೀನಿಯರು (ಸಿಸ್ಟರ್ಸ್ ಆಫ್ ಸೇಂಟ್ ಪಾಲ್ ಡಿ ಚಾರ್ಟ್ರೆಸ್) ಕಾಲೇಜಿನ ಧ್ಯೇಯವನ್ನು ಮುನ್ನಡೆಸುವಲ್ಲಿ ಅವಿಭಾಜ್ಯ ಪಾತ್ರ ವಹಿಸಿದ್ದಾರೆ.
"40 ವರ್ಷಗಳಿಂದ, ಸಂತ ಪೌಲರ ಸಭೆಯ ಕನ್ಯಾಸ್ತ್ರೀನಿಯರು ದೇವರ ಪ್ರೀತಿ ಮತ್ತು ಕರುಣೆಯ ಬೀಜಗಳನ್ನು ಬಿತ್ತಿದ್ದಾರೆ" ಎಂದು ಸಿಸ್ಟರ್ ಕ್ರಿಸ್ಟೋಫ್ ರವರು ಹೇಳಿದರು. "ಅವರ ಬದ್ಧತೆಯು ಇಡೀ ಕಾಲೇಜು ಸಮುದಾಯವನ್ನು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ, ಪ್ರೀತಿ ಮತ್ತು ಕರುಣೆಯನ್ನು ಸಾಕಾರಗೊಳಿಸಲು ಪ್ರೇರೇಪಿಸುತ್ತದೆ."