MAP

LE SORELLE SINODALI FAYE E SIA LE SORELLE SINODALI FAYE E SIA 

ಸಿಸ್ಟರ್. ಮುಕಾರಿ: ಆಫ್ರಿಕಾದ ಮಹಿಳೆಯರಿಗೆ ಸಿನೊಡಾಲಿಟಿ ಒಂದು 'ಗೇಮ್-ಚೇಂಜರ್'

ಸಿನೊಡಲಿಟಿ ಕುರಿತ ಸಿನೊಡ್‌ನ ಹಿನ್ನೆಲೆಯಲ್ಲಿ, ಆಫ್ರಿಕಾದ ಕಥೋಲಿಕ ಧಾರ್ಮಿಕ ಮಹಿಳೆಯರು, ವಿಶೇಷವಾಗಿ ನಾಯಕತ್ವ ಮತ್ತು ಸಮುದಾಯದ ಪಾತ್ರಗಳಲ್ಲಿ ಮಹಿಳೆಯರನ್ನು ಹೆಚ್ಚು ಗೌರವಿಸುವ ಮತ್ತು ಒಳಗೊಳ್ಳುವ ಧರ್ಮಸಭೆಗಾಗಿ ತಮ್ಮ ಭರವಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುಸಾನ್ ನ್ಜೋಮೊ

ಅನೇಕ ಧಾರ್ಮಿಕ ಸಹೋದರಿಯರಿಗೆ, ಸಿನೊಡಲ್ ಪ್ರಕ್ರಿಯೆಯು, ಬಹಳ ಹಿಂದಿನಿಂದಲೂ ಧರ್ಮಸಭೆಯ ಚಟುವಟಿಕೆಗಳಲ್ಲಿ ಸೇರ್ಪಡೆ ಮತ್ತು ಜವಾಬ್ದಾರಿಯ ಹಂಚಿಕೆಯ ನಿರ್ಲಕ್ಷಣೆಯ ಬದಲಾವಣೆಯನ್ನು ಸೂಚಿಸುತ್ತದೆ. ನಾಯಕತ್ವವು ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ, ಸಿನೊಡ್‌ನ ಫಲಿತಾಂಶಗಳು ಪರಿವರ್ತನಾತ್ಮಕವಾಗಿರಬಹುದು ಎಂದು ಅವರು ನಂಬುತ್ತಾರೆ.

ಹಿಂದೆ, ಧರ್ಮಸಭೆಯೊಳಗಿನ ನಾಯಕತ್ವ, ವಿಶೇಷವಾಗಿ ದೈವಶಾಸ್ತ್ರ ಮತ್ತು ಅಂಗೀಕೃತ ಕ್ಷೇತ್ರಗಳಲ್ಲಿ, ಹೆಚ್ಚಾಗಿ ಪುರುಷರಿಗೆ ಮೀಸಲಾಗಿತ್ತು.

ಕಾಕಮೆಗಾದ ದೇವಮಾತೆ ಮರಿಯಮ್ಮನವರ ಸಭೆಯ ಸಿಸ್ಡರ್‌.ಲಿಡಿಯಾ ಮುಕಾರಿರವರ ಪ್ರಕಾರ, ಧಾರ್ಮಿಕ ಮಹಿಳೆಯರಿಗೆ ದೈವಶಾಸ್ತ್ರ, ಧರ್ಮಸಭೆಯ ನಿಯಮಾವಳಿ (ಕ್ಯಾನನ್ ಲಾ) ಅಥವಾ ಧರ್ಮಗ್ರಂಥದಂತಹ ಔಪಚಾರಿಕ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಲು ಸೀಮಿತ ಅವಕಾಶಗಳಿದ್ದವು ಮತ್ತು ಅವರ ಧ್ವನಿಗಳು ಹೆಚ್ಚಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಿಂದ ದೂರವಿರುತ್ತಿದ್ದವು.

ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಈ ವಿಷಯಗಳಲ್ಲಿ ಬದಲಾವಣೆ ಕಂಡುಬಂದಿದೆ. ಧಾರ್ಮಿಕ ಸಹೋದರಿಯರು ಸೇರಿದಂತೆ ಹೆಚ್ಚಿನ ಮಹಿಳೆಯರು ಈಗ ದೈವಶಾಸ್ತ್ರ ಮತ್ತು ಧರ್ಮಗ್ರಂಥಗಳಲ್ಲಿ ಉನ್ನತ ಅಧ್ಯಯನವನ್ನು ಮಾಡುತ್ತಿದ್ದಾರೆ, ಧರ್ಮಸಭೆಯೊಳಗೆ ಜ್ಞಾನವುಳ್ಳ ಕೊಡುಗೆದಾರರಾಗಿ ಸ್ಥಾನ ಪಡೆಯುವ ಅರ್ಹತೆಗಳನ್ನು ಸಾಧಿಸುತ್ತಿದ್ದಾರೆ.

ಸಿಸ್ಟರ್. ಮುಕಾರಿ ವ್ಯಾಟಿಕನ್ ಸುದ್ಧಿಗೆ ಹೇಳಿದಂತೆ, "ಹಲವು ವರ್ಷಗಳಿಂದ, ಮಹಿಳೆಯರನ್ನು ಧರ್ಮಸಭೆಯ ಧ್ಯೇಯದಲ್ಲಿ ನಿಷ್ಕ್ರಿಯವಾಗಿ ಭಾಗವಹಿಸುವವರಾಗಿ ನೋಡಲಾಗುತ್ತಿತ್ತು. ಆದರೆ ಇಂದು, ನಾವು ನಮ್ಮ ದೇವರು ನೀಡಿದ ಉಡುಗೊರೆಗಳನ್ನು ಹೆಚ್ಚು ಆಳವಾದ ರೀತಿಯಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ಪಾತ್ರಗಳಿಗೆ ಹೆಜ್ಜೆ ಹಾಕುತ್ತಿದ್ದೇವೆ. ಈ ಬದಲಾವಣೆಯು ಮಹಿಳೆಯರಿಗೆ ಮಾತ್ರವಲ್ಲ - ಇದು ಇಡೀ ಧರ್ಮಸಭೆಯನ್ನು ಬಲಪಡಿಸುವ ಕ್ರಿಯೆಯಾಗಿದೆ."

ಈ ಬದಲಾವಣೆಯು ಮಹಿಳೆಯರಿಗೆ ದೈವಶಾಸ್ತ್ರಜ್ಞರು ಮತ್ತು ಧರ್ಮಗ್ರಂಥ ವಿದ್ವಾಂಸರಾಗಿ ಪಾತ್ರಗಳನ್ನು ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ, ಧರ್ಮಸಭೆಯ ಪ್ರವಚನ ಮತ್ತು ಅಭಿವೃದ್ಧಿಗೆ ಪ್ರಭಾವ ಬೀರುವ ಮತ್ತು ಕೊಡುಗೆ ನೀಡುವ ಸಾಮರ್ಥ್ಯವನ್ನು ವಿಸ್ತರಿಸಿದೆ.

ಸಿನೊಡಲಿಟಿಯ ಮೇಲೆ ಸಿನೊಡ್‌ನ ಸಂಭಾವ್ಯ ಪರಿಣಾಮ
ಇತ್ತೀಚಿನ ಸಿನೊಡಲಿಟಿಯ ಕುರಿತಾದ ಸಿನೊಡ್, ಈ ಆವೇಗವನ್ನು ಮುಂದುವರಿಸುತ್ತದೆ ಎಂದು ಧಾರ್ಮಿಕ ಸಹೋದರಿಯರು ವಿಶೇಷವಾಗಿ ಆಶಿಸಿದ್ದಾರೆ, ಇದು ಮಹಿಳೆಯರ ಪಾತ್ರವು ಇನ್ನೂ ಬಲವಾದ ಗುರುತಿಸುವಿಕೆಗೆ ಕಾರಣವಾಗುತ್ತದೆ.

ಆಫ್ರಿಕಾ ಮತ್ತು ವಿಶ್ವಾದ್ಯಂತ ಧರ್ಮಸಭೆಗೆ, ಸಿನೊಡ್ ಒಂದು "ಗೇಮ್-ಚೇಂಜರ್" ಆಗಿ ಮಾರ್ಪಡಬಹುದು ಎಂದು ಅವರು ನಂಬುತ್ತಾರೆ.

"ಸಿನೊಡ್ ಕೇವಲ ಸಭೆಯಲ್ಲ. ಇದು ಧರ್ಮಸಭೆಯಲ್ಲಿ ನ್ಯಾಯ ಮತ್ತು ಸಮಾನತೆಯ ಕಡೆ ಸಾಗುವ ಒಂದು ಚಳುವಳಿಯಾಗಿದೆ. ಮಹಿಳಾ ನಾಯಕತ್ವವನ್ನು ಔಪಚಾರಿಕವಾಗಿ ಗುರುತಿಸುವ ಮೂಲಕ, ಧರ್ಮಸಭೆಯು ಕ್ರಿಸ್ತರನ್ನು ಒಳಗೊಳ್ಳುವ ಧ್ಯೇಯದ ನಿಜವಾದ ಪ್ರತಿಬಿಂಬವಾಗಬಹುದು" ಎಂದು ಹೇಳುವ ಮೂಲಕ ಸಿಸ್ಟರ್. ಮುಕಾರಿರವರು ಈ ಸಂಭಾವ್ಯ ಬದಲಾವಣೆಯ ಮಹತ್ವವನ್ನು ಒತ್ತಿ ಹೇಳಿದರು.

ಮಹಿಳೆಯರ ಧ್ವನಿಯನ್ನು ಹೆಚ್ಚಿಸುವ ಮೂಲಕ, ಲಿಂಗವನ್ನು ಲೆಕ್ಕಿಸದೆ ಎಲ್ಲಾ ಸದಸ್ಯರು ಅದರ ಧ್ಯೇಯ ಮತ್ತು ಭವಿಷ್ಯಕ್ಕೆ ಅವಿಭಾಜ್ಯವೆಂದು ಭಾವಿಸುವ ಸಮುದಾಯವನ್ನು ಧರ್ಮಸಭೆಯು ಬೆಳೆಸಬಹುದು.

ಸಿನೊಡ್ ಮಹಿಳೆಯರಿಗೆ ಸಮಾನ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು, ಇದು ಧರ್ಮಸಭೆಯನ್ನು ಮುನ್ನಡೆಸುವಲ್ಲಿ ಮಹಿಳೆಯರ ದೃಷ್ಟಿಕೋನಗಳ ಮೌಲ್ಯವನ್ನು ಪ್ರದರ್ಶಿಸುವ ಮೂಲಕ ಧರ್ಮಸಭೆಯನ್ನು ಶ್ರೀಮಂತಗೊಳಿಸುತ್ತದೆ ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು.

"ಆಫ್ರಿಕಾದ ಅನೇಕ ಭಾಗಗಳಲ್ಲಿ, ಮಹಿಳೆಯರು ಈಗಾಗಲೇ ಕುಟುಂಬಗಳು, ಸಮುದಾಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಧರ್ಮಸಭೆಯು ಈ ವಾಸ್ತವವನ್ನು ಔಪಚಾರಿಕವಾಗಿ ಗುರುತಿಸಿ, ಘನತೆ ಮತ್ತು ಉದ್ದೇಶದೊಂದಿಗೆ ಮುನ್ನಡೆಸಲು ನಮ್ಮನ್ನು ಆಹ್ವಾನಿಸುವ ಸಮಯ ಇದು" ಎಂದು ಸಿಸ್ಟರ್. ಮುಕಾರಿರವರು ಹೇಳಿದರು.

10 ಜನವರಿ 2025, 12:57