ಫ್ರಾಟೆಲ್ಲಿ ಟುಟ್ಟಿಯ ಉತ್ಸಾಹದಲ್ಲಿ ಸಂವಹನ ನಡೆಸುವ ವಿಶ್ವಾಸದ ಭಾವಚಿತ್ರಗಳು
ಸಿಸ್ಟರ್. ಬರ್ನಾಡೆಟ್ ಎಂ. ರೀಸ್, fsp
ಡೇನಿಯಲ್ ಎಪ್ಸ್ಟೀನ್ ರವರು ಪ್ರಾಕ್ಟರ್ & ಗ್ಯಾಂಬಲ್‌ನ ಮಾರ್ಕೆಟಿಂಗ್ ನ ನಿರ್ದೇಶಕರಾಗಿ 21 ವರ್ಷಗಳ ಕಾಲ ಕೆಲಸ ಮಾಡಿದರು. 36 ನೇ ವಯಸ್ಸಿನಲ್ಲಿ, ಅವರು ತಮ್ಮ ಜೀವನದಲ್ಲಿ ಹಲವಾರು ಕಷ್ಟ- ನೋವಿನ ಸನ್ನಿವೇಶಗಳನ್ನು ಎದುರಿಸುತ್ತಿದ್ದಾಗ, "ಅವರಿಗೆ ತಿಳಿಯದ ದೇವರಲ್ಲಿ ಪ್ರಾರ್ಥಿಸಲು... ಸಹಾಯ ಕೇಳಲು" ಅವರನ್ನು ಆಕರ್ಷಿಸಲಾಯಿತು.
ವಿಶ್ವಾಸದ ಭಾವಚಿತ್ರಗಳು ಹುಟ್ಟುತ್ತವೆ
ಡೇನಿಯಲ್‌ನ ಹತಾಶ ಮನವಿಯು "ಆಧ್ಯಾತ್ಮಿಕ ಪರಿಶ್ರಮ" ವಾಗಿ ಬದಲಾಯಿತು ಎಂದು ಅವರು ಹೇಳುತ್ತಾರೆ. ವ್ಯವಹಾರದ ನಿಮಿತ್ತ ವಿಶ್ವದಾದ್ಯಂತ ಪ್ರಯಾಣಿಸುವಾಗ, ಡೇನಿಯಲ್ ರವರು ಈ ಆಧ್ಯಾತ್ಮಿಕ ಅನ್ವೇಷಣೆಯನ್ನು, ಅನ್ವೇಷಿಸಲು ಹೆಚ್ಚುವರಿ ವೈಯಕ್ತಿಕ ದಿನಗಳನ್ನು ಕಳೆಯುತ್ತಿದ್ದರು. ತನ್ನ ಕ್ಯಾಮೆರಾದೊಂದಿಗೆ ಶಸ್ತ್ರಸಜ್ಜಿತನಾಗಿ, "ಅವರ ಜೀವನದಲ್ಲಿ ವಿಶ್ವಾಸದ ಪಾತ್ರ ಮತ್ತು ಆಧ್ಯಾತ್ಮಿಕ ಅನುಭವಗಳ ಬಗ್ಗೆ" ಜನರನ್ನು ಸಂದರ್ಶಿಸಲು ಪ್ರಾರಂಭಿಸಿದರು. ಡೇನಿಯಲ್ ರವರು ಸಂದರ್ಶಿಸಿದ ಈ ಎಲ್ಲಾ ಜನರ ಮೂಲಕ, ಅವರ ಸ್ವಂತ "ಹತಾಶೆ ಮತ್ತು ವಿಶ್ವಾಸದ ಕೊರತೆಯ ಪ್ರಜ್ಞೆ ಮರೆಯಾಯಿತು."
"ಒಂದು ಉನ್ನತ ಶಕ್ತಿ, ಒಂದು ಮಹತ್ವದ ಬುದ್ಧಿಶಕ್ತಿ ಮತ್ತು ವಿಶ್ವದ ಮೇಲಿನ ಮಿತಿಯಿಲ್ಲದ ಪ್ರೀತಿಯ ಮೇಲಿನ ವಿಶ್ವಾಸ, ಇತರರ ಕಥೆಗಳಿಂದ ನಾನು ಮೇಲೆತ್ತಲ್ಪಟ್ಟೆ ಮತ್ತು ರೂಪಾಂತರಗೊಂಡೆ ಹಾಗೂ ನಾನು ಸಂಪೂರ್ಣನಾದೆ."
ಅಂತಿಮವಾಗಿ, ಡೇನಿಯಲ್ ರವರು ಈ ವೀಡಿಯೊ ಸಂದರ್ಶನಗಳನ್ನು ಸಂಗ್ರಹಿಸಿ ವಿಶ್ವಾಸದ ಭಾವಚಿತ್ರಗಳನ್ನು ರಚಿಸಿದರು. 30 ದೇಶಗಳಲ್ಲಿ ಜೀವಿಸುವ 500 ಜನರ ವಿಶ್ವಾಸದ ಪ್ರಯಾಣಗಳನ್ನು ಈ ಅಂತರ್ಜಾಲ ಸಂಪರ್ಕದಲ್ಲಿ ಲಭ್ಯವಾಗಲಿದೆ.
ವಿಶ್ವಾಸವು 'ಇತರರನ್ನು' ಒಂದುಗೂಡಿಸುತ್ತದೆ
ಡೇನಿಯಲ್ ರವರ ಆಧ್ಯಾತ್ಮಿಕ ಅನ್ವೇಷಣೆಯು ವಿಶ್ವಗುರು ಫ್ರಾನ್ಸಿಸ್ ರವರು "ದೇವರೊಂದಿಗಿನ ನೈಜ ಮುಕ್ತತೆಯ ಖಾತರಿ... ನಮ್ಮ ಸಹೋದರ ಸಹೋದರಿಯರಿಯತ್ತ ನಮ್ಮ ಹೃದಯಗಳನ್ನು ತೆರೆಯಲು ಸಹಾಯ ಮಾಡುವ ವಿಶ್ವಾಸವನ್ನು ಅಭ್ಯಸಿಸುವ ಒಂದು ಮಾರ್ಗವಾಗಿದೆ" ಎಂದು ತಮ್ಮ ವಿಶ್ವಪರಿಪತ್ರ ಫ್ರಾಟೆಲ್ಲಿ ಟುಟ್ಟಿಯಲ್ಲಿ ವ್ಯಕ್ತಪಡಿಸಿದ ಅಂತಃಪ್ರಜ್ಞೆಯನ್ನು ದೃಢಪಡಿಸುತ್ತದೆ.
ಅವರ ಜೀವನದಲ್ಲಿ ಎದುರಾದ ಒಂದು ಬಿಕ್ಕಟ್ಟು, ಅವನಿಗೆ ಸಹೋದರ ಸಹೋದರಿಯಾಗುವ ಜನರ ವಿಶ್ವಾಸದಿಂದ ತುಂಬಿದ ಪ್ರಯಾಣದ ಮೂಲಕ ತಿಳುವಳಿಕೆಯನ್ನು ಹುಡುಕುವಂತೆ ಡೇನಿಯಲ್ ರವರಿಗೆ ಕಾರಣವಾಯಿತು. ಡೇನಿಯಲ್ ರವರ ಸ್ವಂತ ವಿಶ್ವಾಸವೇ ಅವರನ್ನು ಬೇರೆ ರೀತಿಯಲ್ಲಿ 'ಇತರರನ್ನು' ಭೇಟಿಯಾಗಲು ಪ್ರೇರೇಪಿಸಿತು. ಅವರ ವಿಶ್ವಾಸ ಮತ್ತು ನಂಬಿಕೆಯೇ ಅವರನ್ನು ಒಂದುಗೂಡಿಸಿತು.
"ಇಂದು ಜಗತ್ತಿನಲ್ಲಿ ವಿಶ್ವಾಸಕ್ಕೆ ವಿರುದ್ಧ ಎಲ್ಲಾ ನಕಾರಾತ್ಮಕ ಪತ್ರಿಕೆಗಳು ಎದುರಾದರೂ, ಅದು ಶಕ್ತಿಶಾಲಿ ಗುಣಪಡಿಸುವ, ಪರಿವರ್ತಕ ಮತ್ತು ಜೀವನವನ್ನು ಬದಲಾಯಿಸುವ ಸಾಧನವಾಗಿದೆ" ಎಂಬುದು ವಿಶ್ವಾಸದ ಭಾವಚಿತ್ರಗಳ ಮೂಲಕ ಡೇನಿಯಲ್ ರವರು ತಿಳಿಸುವ ಸಂದೇಶವಾಗಿದೆ.
ಇತರರನ್ನು ನೋಡುವುದರಲ್ಲಿ
ಡೇನಿಯಲ್ ರವರು ತನ್ನ ಪಥದಲ್ಲಿ ವಿಶ್ವಾಸದ ಭಾವಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ 'ಇತರರನ್ನು ನೋಡುವುದರಲ್ಲಿʼ ಪ್ರದರ್ಶನವು ಪ್ರಸ್ತುತ ಅಮೇರಿಕದ ಕೆ.ವಿ. ನಲ್ಲಿರುವ ಲೂಯಿಸ್‌ವಿಲ್ಲೆಯಲ್ಲಿರುವ ಮುಹಮ್ಮದ್ ಅಲಿ ಕೇಂದ್ರದಲ್ಲಿನ ಪ್ರದರ್ಶನದಲ್ಲಿದೆ. ಆರಂಭದಿಂದ ಕೊನೆಯವರೆಗೆ, ವಿಶ್ವಾಸದ ಭಾವಚಿತ್ರಗಳ ಸಂದರ್ಶನಗಳನ್ನು ಬಳಸಿಕೊಂಡು, ಈ ಪ್ರದರ್ಶನವು "ಜಗತ್ತಿನಲ್ಲಿ 'ಇತರರನ್ನು' ಕೆಡವಲು" ಪ್ರಯತ್ನಿಸುತ್ತದೆ.
"ಅಭದ್ರತೆ, ಇತರರ ಭಯವು ನಿರಾಕರಣೆಗೆ ಕಾರಣವಾಗುತ್ತದೆ ಮತ್ತು ಆತ್ಮರಕ್ಷಣೆಗಾಗಿ ಗೋಡೆಗಳನ್ನು ನಿರ್ಮಿಸುವ ಬಯಕೆಯನ್ನು ಉಂಟುಮಾಡುತ್ತದೆ.... ಮತ್ತೊಂದೆಡೆ, ಆರೋಗ್ಯಕರ ಸಂಸ್ಕೃತಿಯು ಅದರ ಸ್ವಭಾವತಃ ಮುಕ್ತ ಮತ್ತು ಸ್ವಾಗತಾರ್ಹವಾಗಿದೆ." - ಫ್ರಾಟೆಲ್ಲಿ ಟುಟ್ಟಿ, 146.
'ಇತರರನ್ನು ನೋಡುವುದು' ಪ್ರದರ್ಶನಕ್ಕೆ ಭೇಟಿ ನೀಡುವವರು ತಮ್ಮನ್ನು ತಾವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು: ನೀವು ಯಾರನ್ನು 'ಇತರರು' ಎಂದು ನೋಡುತ್ತೀರಿ? 'ನೀವು ಯಾವಾಗ 'ಇತರರು' ಎಂದು ಭಾವಿಸಿದ್ದೀರಿ? ನೀವು ಇತರರ ಕಥೆಗಳನ್ನು ಎಷ್ಟು ಚೆನ್ನಾಗಿ ಕೇಳುತ್ತೀರಿ? ಇತರರ ಬಗ್ಗೆ ನಿಮ್ಮ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ನೀವು ಏನು ಮಾಡಬಹುದು?
ಡೇನಿಯಲ್ ರವರು ಸಂದರ್ಶಿಸಿದ 75 ಜನರ ಭಾವಚಿತ್ರಗಳನ್ನು ಸಂದರ್ಶಕರು ನೋಡುತ್ತಿರುವಾಗ, ಪ್ರದರ್ಶನದ ಮುಖ್ಯವಾದ ಪ್ರಶ್ನೆಯ ಬಗ್ಗೆ ಯೋಚಿಸಲು ಅವರನ್ನು ಆಹ್ವಾನಿಸಲಾಗುತ್ತದೆ: ಮಾನವೀಯತೆಯ ನಡುವೆ ಹೆಚ್ಚಿನ ಏಕತೆಯನ್ನು ಸೃಷ್ಟಿಸಲು ಏನು ಮಾಡಬೇಕು?
‘ನಾನು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡದು’
ತನ್ನ ‘ಪವಿತ್ರ ಕಾರ್ಯ’ವನ್ನು ಹಿಂತಿರುಗಿ ನೋಡುತ್ತಾ, ಡೇನಿಯಲ್ ರವರು ಅದಕ್ಕೆ ತುಂಬಾ ಕೃತಜ್ಞನಾಗಿದ್ದಾರೆ ಎಂದು ಹೇಳುತ್ತಾರೆ.
“ಒಮ್ಮೆ ಒಬ್ಬ ಆಧ್ಯಾತ್ಮಿಕ ಗುರು ನನಗೆ, ‘ಡೇನಿಯಲ್, ನೀನು ಗುಣವಾಗಲು ಬಯಸುತ್ತೀಯಾ’ ಎಂದು ಹೇಳಿದರು. ಅದಕ್ಕೆ ನಾನು, ನಿಮ್ಮ ಪ್ರಕಾರ, ನಾನು ನನ್ನನ್ನು ಗುಣಪಡಿಸಿಕೊಳ್ಳುತ್ತೀನಾ ಅಥವಾ ಇತರರನ್ನು ಗುಣಪಡಿಸುತ್ತೀನಾ?’ ಎಂದು ಕೇಳಿದೆ. ಅದಕ್ಕೆ ಆಕೆಯು, ‘ನೀನು ನಿನ್ನ ಪ್ರತಿಯೊಂದು ಅಂಗಗಳ ಮರಳಿ ಪಡೆಯಲು ಬಯಸುತ್ತೀಯಾ. ಮತ್ತು ಹಾಗೆ ಮಾಡುವುದರಿಂದ, ನೀನು ಇತರರನ್ನು ಗುಣಪಡಿಸದೆ ಇರಲು ಸಾಧ್ಯವಾಗುವುದಿಲ್ಲ.’
"ಈ ಯೋಜನೆಯು ನನಗೆ ಅದನ್ನೇ ಮಾಡಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದಲ್ಲಿ ಒಂದು ಪವಿತ್ರ ಉಪಸ್ಥಿತಿಯ ಬಗ್ಗೆ ನನಗೆ ನೆನಪಿಸಬೇಕಾಗಿತ್ತು ಮತ್ತು ಆಶಾವಾದಿಯಾಗಿರಲು ಕಾರಣಗಳಿವೆ. ನಾನು ಇತರ ಜನರ ವಿಶ್ವಾಸ ಮತ್ತು ಆಧ್ಯಾತ್ಮಿಕತೆಯ ಕಥೆಗಳನ್ನು ರಚಿಸಿದೆ, ಮತ್ತು ಹಾಗೆ ಮಾಡುವುದರಿಂದ, ಈಗ ನಾನು ಇತರ ಜನರಿಗೆ ಸಹಾಯಕವಾಗುವ ಈ ಕಥೆಗಳನ್ನು ಹಂಚಿಕೊಳ್ಳುತ್ತಿದ್ದೇನೆ ಮತ್ತು, ನಾನೂ ಸಹ ಗುಣವಾಗುತ್ತೇನೆ ಎಂದು ಭಾವಿಸುತ್ತೇನೆ."
"ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ, ನನ್ನ ಅತ್ಯುತ್ತಮ ಆವೃತ್ತಿಯಾಗಿದೆ, ನಾನು ಹೆಚ್ಚು ಬಯಸುವ, ನಾನೇ ಎಂದು ನಾನು ನೋಡಿದೆ. ಇದು ನಾನು ಊಹಿಸಲು ಅಸಾಧ್ಯವಾದಷ್ಟು ದೊಡ್ಡದು."