ಮಧ್ಯಪ್ರಾಚ್ಯದಲ್ಲಿ ವಿಶ್ವಗುರುಗಳ ಸೇವಾನಿಯೋಗ ಕಾರ್ಯಾಚರಣೆಯ 75ನೇ ವರ್ಷದ ವಾರ್ಷಿಕೋತ್ಸವದ ಆಚರಣೆ
ಲಾರಾ ಐರಾಸಿ, CNEWA
1948ರ ಅರಬ್ ಇಸ್ರಯೇಲ್ ಯುದ್ಧದಲ್ಲಿ ತಮ್ಮ ಸ್ಥಳೀಯ ಹಳ್ಳಿಗಳಿಂದ ಹೊರಹಾಕಲ್ಪಟ್ಟ ಲಕ್ಷಾಂತರ ಪ್ಯಾಲಸ್ತೀನಿಯಾದವರನ್ನು ನೋಡಿಕೊಳ್ಳಲು 1949ರಲ್ಲಿ ಪೋಪ್ ಪಯಸ್ XII ರವರು ಪ್ಯಾಲೆಸ್ತೀನಿಯರಿಗಾಗಿ ವಿಶ್ವಗುರುಗಳ ಸೇವಾನಿಯೋಗ (ಪಾಂಟಿಫಿಕಲ್ ಮಿಷನ್) ಎಂದು ಸ್ಥಾಪಿಸಿದ ವಿಶ್ವಗುರುಗಳ ಸೇವಾನಿಯೋಗದ 75 ನೇ ವಾರ್ಷಿಕೋತ್ಸವವನ್ನು ಈ ವರ್ಷ ಆಚರಿಸುತ್ತಿದ್ದಾರೆ.
ವಿಶ್ವಗುರುವು, ವಿಶ್ವಗುರುಗಳ ಸೇವಾನಿಯೋಗದ ನಾಯಕತ್ವ ಮತ್ತು ಆಡಳಿತವನ್ನು ಪೂರ್ವ ಕಥೋಲಿಕರ ಅಭಿವೃದ್ಧಿ ಸಂಘಕ್ಕೆ (ಕ್ಯಾಥೋಲಿಕ್ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್ (CNEWA) ವಹಿಸಿದರು. ಅಂದಿನಿಂದ ಈ ಕೆಲಸವು ಪ್ಯಾಲೆಸ್ತೀನಿಯಾ ನಿರಾಶ್ರಿತರ ಆರೈಕೆಯನ್ನು ಮೀರಿ ಮಧ್ಯಪ್ರಾಚ್ಯದಲ್ಲಿ ಅಗತ್ಯವಿರುವವ ಎಲ್ಲಾ ನಿರಾಶ್ರಿತರವರೆಗೂ ವಿಸ್ತರಿಸಿದೆ.
ಲೆಬನಾನ್‌ನಲ್ಲಿ, ವಿಶ್ವಗುರುಗಳ ಸೇವಾನಿಯೋಗವು ತನ್ನ ಅನೇಕ ಕಾರ್ಯಗಳಲ್ಲಿ, ಬೈರುತ್‌ನಿಂದ ಸುಮಾರು 12ಕಿಮೀ ಉತ್ತರಕ್ಕೆ ಇರುವ ದ್ಬಯೇಹ್‌ನಲ್ಲಿರುವ ಪ್ಯಾಲೆಸ್ತೀನಿಯಾದ ನಿರಾಶ್ರಿತರ ಶಿಬಿರವನ್ನು 195 ರ ದಶಕದ ಆರಂಭದಲ್ಲಿ ಸ್ಥಾಪಿಸಿದಾಗಿನಿಂದ ಬೆಂಬಲಿಸಿದೆ.
ವಾರ್ಷಿಕೋತ್ಸವವನ್ನು ಆಚರಿಸಲು, CNEWA ಪ್ರಕಟಣೆಯಾದ ಒಂದು ಪತ್ರಿಕೆಯ ನಿಯತಕಾಲಿಕೆಯು, 1987ರಿಂದ ದ್ಬಯೇಹ್ ಶಿಬಿರದಲ್ಲಿ ನಿರಾಶ್ರಿತರ ನಡುವೆ ವಾಸಿಸುತ್ತಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಲಿಟಲ್ ಸಿಸ್ಟರ್ಸ್ ಆಫ್ ನಜರೆತ್‌ನ ಸದಸ್ಯರಾದ ಸಿಸ್ಟರ್ ಮ್ಯಾಗ್ಡಲೀನಾ ಸ್ಮೆಟ್, ಪಿ.ಎಸ್.ಎನ್. ಅವರನ್ನು ಸಂದರ್ಶಿಸಿತು.
ಪತ್ರಿಕೆ: ನಮಸ್ಕಾರ, ಸಿಸ್ಟರ್ ಮ್ಯಾಗ್ಡಾ. ನಿಮ್ಮ ಸಮುದಾಯದ ಬಗ್ಗೆ ತಿಳಿಯದ ಕೆಲವು ವೀಕ್ಷಕರಿರಬಹುದು, ಆದ್ದರಿಂದ ನಾವು ನಜರೆತ್‌ನ ಲಿಟಲ್ ಸಿಸ್ಟರ್ಸ್ ಬಗ್ಗೆ ಒಂದು ಸಣ್ಣ ಪರಿಚಯದೊಂದಿಗೆ ಪ್ರಾರಂಭಿಸಬಹುದು ಎಂದು ನಾನು ಭಾವಿಸಿದೆ. ನಿಮ್ಮ ಧ್ಯೇಯ, ನಿಮ್ಮ ವರ್ಚಸ್ಸು, ನಿಮ್ಮ ಆಧ್ಯಾತ್ಮಿಕತೆ ಏನು?
ಸಿಸ್ಟರ್ ಮ್ಯಾಗ್ಡಾ: ನಾವು 1966ರಲ್ಲಿ ಬೆಲ್ಜಿಯಂನಲ್ಲಿ ಸ್ಥಾಪನೆಯಾದ ನಜರೆತ್‌ನ ಲಿಟಲ್ ಸಿಸ್ಟರ್ಸ್ ಸಭೆಗೆ ಸೇರಿದವರು. ನಾವು ಸಂತ ಚಾರ್ಲ್ಸ್ ಡಿ ಫೌಕಾಲ್ಡ್ ರವರ ದೊಡ್ಡ ಕುಟುಂಬದ ಒಂದು ಶಾಖೆಯಾಗಿದ್ದೇವೆ. ನಜರೇತಿನ ಪವಿತ್ರ ಕುಟುಂಬದಂತೆಯೇ ಬದುಕಲು ಪ್ರಯತ್ನಿಸುವುದು ನಮ್ಮ ಧ್ಯೇಯವಾಗಿದೆ - ಯಾವಾಗಲೂ ಬಡವರಲ್ಲಿ ಅಲ್ಲ, ಆದರೆ ಅತ್ಯಂತ ದುರ್ಬಲರು, ಬಡವರಲ್ಲಿ, ಅಧಿಕಾರ ಕಳೆದುಕೊಂಡಿರುವ ಜನರಲ್ಲಿ ಕುಟುಂಬ ಉಪಸ್ಥಿತಿಯಾಗಿರುವುದು, ಏಕೆಂದರೆ ಇವರು ಪ್ರಭುವು ಪ್ರೀತಿಸುವ ಜನರಾಗಿದ್ದಾರೆ.
ಆದ್ದರಿಂದ, ಬಡವರ ಮೇಲಿನ ಪ್ರಭುವಿನ ಪ್ರೀತಿಯನ್ನು ನಾವು ಹೇಗಾದರೂ ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ - ಪದಗಳ ಮೂಲಕ ಅಲ್ಲ, ಆದರೆ ನಮ್ಮ ಜೀವನದ ಕಾಯಕದ ಮೂಲಕ. ಇದು ಸಂತ ಚಾರ್ಲ್ಸ್ ಡಿ ಫೌಕಾಲ್ಡ್ ರವರ ಆಧ್ಯಾತ್ಮಿಕತೆ.
ಪ್ರಶ್ನೆ: ನಿಮ್ಮ ಸಮುದಾಯವು ಲೆಬನಾನ್‌ನಲ್ಲಿರುವ ದ್ಬಯೇಹ್ ಶಿಬಿರಕ್ಕೆ ನಿಮ್ಮನ್ನು ಅರ್ಪಿಸಿಕೊಳ್ಳಲು ಹೇಗೆ ನಿರ್ಧರಿಸಿತು?
ವಿಶ್ವಗುರುಗಳ ಸೇವಾನಿಯೋಗಕ್ಕೆ ಧನ್ಯವಾದಗಳು, ನಾವು ಸೆಪ್ಟೆಂಬರ್ 1987 ರಿಂದ ದ್ಬಯೇಹ್‌ನಲ್ಲಿರುವ ಈ ಶಿಬಿರದಲ್ಲಿದ್ದೇವೆ. ಆದರೆ, ಇದು ಒಂದು ಕಥೆಯಾಗಿದೆ - ಮತ್ತು ಪ್ರಭುವು ತನ್ನ ಜನರ ಕಥೆಯನ್ನು ನಿರ್ದೇಶಿಸುತ್ತಾನೆ.
ಈ ಶಿಬಿರದಲ್ಲಿ ವಾಸಿಸುವ ಮೊದಲು, ನಮ್ಮ ಸಮುದಾಯವು ಮತ್ತೊಂದು ಪ್ಯಾಲೇಸ್ತೀನಿಯಾದ ಶಿಬಿರದಲ್ಲಿ ವಾಸಿಸುತ್ತಿತ್ತು. ನಾವು 1970ರಲ್ಲಿ ಲೆಬನಾನ್‌ಗೆ ಆಗಮಿಸಿ ಅತ್ಯಂತ ಜನಪ್ರಿಯ ನೆರೆಹೊರೆಯಾದ ಬೌರ್ಜ್ ಹಮ್ಮೌದ್‌ನಲ್ಲಿ ಮೂರು ವರ್ಷಗಳ ಕಾಲ ವಾಸಿಸುತ್ತಿದ್ದೆವು. ನಂತರ, ನಾನು ಕಾರ್ಖಾನೆಯಲ್ಲಿ ನನ್ನ ಕೆಲಸದ ಮೂಲಕ ಭೇಟಿಯಾದೆ - ನಾನು ಒಂದು ವರ್ಷ ಕಾರ್ಖಾನೆಯಲ್ಲಿ ಲಿಟಲ್ ಸಿಸ್ಟರ್ ಸಭೆಯ ಸದಸ್ಯಯಾಗಿ ಕೆಲಸ ಮಾಡಿದೆ - ಅಲ್ಲಿ ನಾನು ದೊಡ್ಡ ಪ್ಯಾಲೇಸ್ತೀನಿಯಾದ ಸಮುದಾಯವನ್ನು ಭೇಟಿಯಾದೆ.
ನಾವು ಅಲ್ಲಿ ಮೂರು ವರ್ಷಗಳ ಕಾಲ ವಾಸಿಸಿದೆವು, ಮತ್ತು ನಂತರ ಯುದ್ಧ ಪ್ರಾರಂಭವಾಯಿತು. ಆ ಸಮಯದಲ್ಲಿ ನಾವು ಶಿಬಿರದಲ್ಲಿದ್ದೆವು. ಯುದ್ಧದ ಸಮಯದಲ್ಲಿ ನಾವು ಅಲ್ಲಿ ಒಂದು ವರ್ಷ ಉಳಿದೆವು. ಶಿಬಿರವು ನಾಶವಾಯಿತು, ಹಾಗೆಯೇ ನಮ್ಮ ಸಣ್ಣ ಸಮುದಾಯದ ಮನೆಯೂ ನಾಶವಾಯಿತು. ಅದು ತುಂಬಾ ಚಿಕ್ಕದಾಗಿತ್ತು ಮತ್ತು ವಿನಮ್ರವಾಗಿತ್ತು. ನಾವು ಅಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಅನುಭವವನ್ನು ಅನುಭವಿಸಿದೆವು.
ಹಿಂತಿರುಗಲು ಕಾಯುತ್ತಿರುವಾಗ – ನಮಲ್ಲಿ ಏನೂ ಇಲ್ಲದ ಕಾರಣ - ನಾವು ಸ್ವಲ್ಪ ಕಾಲ ಜೋರ್ಡಾನ್‌ನಲ್ಲಿ ಪ್ಯಾಲೆಸ್ತೀನಿಯ ಜನಸಂಖ್ಯೆಯ ನಡುವೆ ವಾಸಿಸುತ್ತಿದ್ದೆವು, ಆದರೆ ಶಿಬಿರದಲ್ಲಿ ಅಲ್ಲ.
1987ರಲ್ಲಿ, ಲೆಬನಾನ್‌ಗೆ ಭೇಟಿ ನೀಡಿದಾಗ, ಅಮ್ಮಾನ್‌ನಲ್ಲಿರುವ ಜೋರ್ಡಾನ್‌ನಲ್ಲಿರುವ ವಿಶ್ವಗುರುಗಳ ಸೇವಾನಿಯೋಗವು, ಇಲ್ಲಿನ ವಿಶ್ವಗುರುಗಳ ಸೇವಾನಿಯೋಗಕ್ಕೆ ಪತ್ರಗಳನ್ನು ತಲುಪಿಸಲು ನಮ್ಮನ್ನು ಕೇಳಿತು, ಮತ್ತು ಆ ಸಮಯದಲ್ಲಿ ಇಲ್ಲಿದ್ದವರು ಅಮೇರಿಕದ ಸನ್ಯಾಸಿನಿ ಸಿಸ್ಟರ್ ಮೌರೀನ್.
ಅವರು ಹೇಳಿದರು, "ನಾನು ಬಹಳ ಕಾಲದಿಂದ ದ್ಬಯೇಹ್ ಶಿಬಿರಕ್ಕಾಗಿ ಧಾರ್ಮಿಕ ಸಹೋದರಿಯರನ್ನು ಹುಡುಕುತ್ತಿದ್ದೇನೆ."
ಇದು ನಮ್ಮ ಬಯಕೆಯೂ ಆದ ಕಾರಣ, ಗ್ರೀಕ್ ಕಥೊಲಿಕರಾಗಿರುವ ಬೈರುತ್‌ನ ಧರ್ಮಾಧ್ಯಕ್ಷರು, ಅಲ್ಲಿ ಧಾರ್ಮಿಕ ಮಹಿಳೆಯರು ಇರಬೇಕೆಂಬುದು ಅವರ ಬಯಕೆಯೂ ವ್ಯಕ್ತಪಡಿಸಿದರು. ನಮಗೆ, ಇದು "ಹಿಂತಿರುಗಿ ಬನ್ನಿ" ಎಂದು ಹೇಳುವ ಪವಿತ್ರಾತ್ಮರ ಧ್ವನಿಯಾಗಿತ್ತು ಹೀಗೆ ನಮ್ಮ ಸಮುದಾಯವು ಲೆಬನಾನ್‌ನಲ್ಲಿರುವ ದ್ಬಯೇಹ್ ಶಿಬಿರಕ್ಕೆ ನಮ್ಮನ್ನು ಅರ್ಪಿಸಿಕೊಳ್ಳಲು ನಿರ್ಧರಿಸಿತು.
ಪ್ರಶ್ನೆ: ವಾಸ್ತವವಾಗಿ, ಸಿಸ್ಟರ್ ಮಾಗ್ಡಾ, ತಾತ್ಕಾಲಿಕ ಪರಿಹಾರವಾಗಬೇಕಿದ್ದ ಈ ಶಿಬಿರವು ಶಾಶ್ವತವಾದದ್ದಂತೆ ತೋರುತ್ತದೆ. ಇದನ್ನು ನಾವು ಹೇಗೆ ವಿವರಿಸಬಹುದು?
ನಿರಾಶ್ರಿತರ ಸಮಸ್ಯೆಯನ್ನು ಪರಿಹರಿಸಲು, ರಾಜಕೀಯ ನಿರ್ಧಾರಗಳು ಬೇಕಾಗುತ್ತವೆ. ಮತ್ತು ಅದು ಇಲ್ಲಿ ವಾಸಿಸುವ ಜನರ ಮೇಲೆ ಅವಲಂಬಿತವಾಗಿಲ್ಲ - ಮತ್ತು ಖಂಡಿತವಾಗಿಯೂ ನಮ್ಮ ಮೇಲೆ ಅವಲಂಬಿತವಾಗಿಲ್ಲ. ನಾವು ಲಿಟಲ್ ಸಿಸ್ಟರ್ಸ್, ವಿದೇಶಿಯರು. ನಾವು ಇಲ್ಲಿ ಮೂವರು ಬೆಲ್ಜಿಯಂ ಲಿಟಲ್ ಸಹೋದರಿಯರು. ನಾವು ನಿರಾಶ್ರಿತರೊಂದಿಗೆ ಆಶಿಸುತ್ತೇವೆ, ನಡೆಯುತ್ತೇವೆ ಹಾಗೂ ಅವರೊಂದಿಗೆ ವಾಸಿಸುತ್ತೇವೆ.
ಪ್ರಶ್ನೆ: ಕೊನೆಯದಾಗಿ, ಸಿಸ್ಟರ್ ಮ್ಯಾಗ್ಡಾ, ನಮ್ಮ ವೀಕ್ಷಕರೊಂದಿಗೆ ನಾವು ಹಂಚಿಕೊಳ್ಳಬಹುದಾದ ಸಂದೇಶವೇನು ಎಂದು ನೀವು ಭಾವಿಸುತ್ತೀರಿ, ಬಹುಶಃ ಅವರನ್ನು ಒಗ್ಗಟ್ಟಿಗೆ ಪ್ರೇರೇಪಿಸಲು, ಲೆಬನಾನ್‌ನಲ್ಲಿ ಬಳಲುತ್ತಿರುವ ಅವರ ಸಹೋದರಿಯರು ಮತ್ತು ಸಹೋದರರನ್ನು ಪ್ರೀತಿಸುವಂತೆ ಪ್ರೇರೇಪಿಸಲು? ನಿಮ್ಮ ಸಂದೇಶವೇನು?
ನಾನು ಮೊದಲು ವಿಶ್ವಗುರುಗಳ ಸೇವಾನಿಯೋಗಕ್ಕೆ ದೊಡ್ಡ ಧನ್ಯವಾದ ಹೇಳುತ್ತೇನೆ. ಇದು ಇಲ್ಲಿಯ ಎಲ್ಲ ಜನರ ಕೃತಜ್ಞತೆಯಾಗಿದೆ ಏಕೆಂದರೆ. ವಿಶ್ವಗುರುಗಳ ಸೇವಾನಿಯೋಗದಿಂದ ಸಹಾಯ ಪಡೆಯದಿರುವ ಒಂದೇ ಒಂದು ಮನೆಯೂ ಇಲ್ಲಿ ಇಲ್ಲ, ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ವಿಶ್ವಗುರುಗಳ ಸೇವಾನಿಯೋಗದಿಂದ ಸಹಾಯ ಪಡೆಯದಿರುವವರೇ. ಆದ್ದರಿಂದ, ಎಲ್ಲಕ್ಕಿಂತ ಹೆಚ್ಚಾಗಿ, ಇಷ್ಟೊಂದು ಜನರ ಹೃದಯದಿಂದ ಬಂದ, ಕೃತಜ್ಞತಾ ದೊಡ್ಡ ಧನ್ಯವಾದ.
ಎರಡನೆಯ ಮಾತು ನನ್ನ ಮಾತಲ್ಲ. " ಈ ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೆ ಮಾಡಿದಿರಿ" ಎಂದು ಪರರ ಸೇವೆಯೇ ಪರಮಾತ್ಮನ ಸೇವೆ, ಮತ್ತಾಯರ ೨೫-೪೦ ಅಧ್ಯಾಯದ ಪ್ರಭುವಿನ ವಾಕ್ಯ ಹೇಳುತ್ತದೆ. ನನ್ನ ಪ್ರಕಾರ ಹೇಳಬೇಕಾದ ಏಕೈಕ ಮಾತುಗಳು ಅವೆಂದು ನಾನು ಭಾವಿಸುತ್ತೇನೆ.