ಹೊರಹೋಗುವ ಆಂಗ್ಲಿಕನ್ ಪ್ರತಿನಿಧಿಯ ರೋಮ್‌ನಲ್ಲಿನ ಅಧಿಕಾರಾವಧಿಯ ಬಗ್ಗೆ ಚಿಂತನೆ
ಮೇರಿ ಡುಹಾಮೆಲ್ ಮತ್ತು ಜೋಸೆಫ್ ಟುಲ್ಲೊಚ್
ಕ್ಯಾಂಟರ್ಬರಿಯ ಪವಿತ್ರ ಅಧಿಕಾರ ಪೀಠದ ಮಹಾಧರ್ಮಾದ್ಯಕ್ಷರು ಮತ್ತು ರೋಮ್‌ನ ಆಂಗ್ಲಿಕನ್ ಕೇಂದ್ರದ ಮುಖ್ಯಸ್ಥ ಮಹಾಧರ್ಮಾದ್ಯಕ್ಷರಾದ ಇಯಾನ್ ಅರ್ನೆಸ್ಟ್ ರವರು ಜನವರಿ ಅಂತ್ಯದಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಅವರು ವ್ಯಾಟಿಕನ್ ಸುದ್ಧಿಯ ಮೇರಿ ಡುಹಾಮೆಲ್ ರವರೊಂದಿಗೆ ರೋಮ್‌ನಲ್ಲಿ ತಮ್ಮ ಕಾರ್ಯಾವಧಿ ಮತ್ತು ವಿಶ್ವಗುರುಗಳ ಮತ್ತು ಕ್ಯಾಂಟರ್ಬರಿಯ ಮಹಾಧರ್ಮಾದ್ಯಕ್ಷರು ಕಾರ್ಯಗಳು "ಒಟ್ಟಿಗೆ ಭರವಸೆಯ ದಾರಿದೀಪಗಳಾಗಲು" ಸಹಾಯ ಮಾಡುವ ಅವರ ಪಾತ್ರದ ಬಗ್ಗೆ ಮಾತನಾಡಿದರು.
ರೋಮ್‌ಗೆ ಹೋಗುವ ದಾರಿ
"ಬಾಲ್ಯದಿಂದಲೂ" ಕ್ರೈಸ್ತಧರ್ಮವು ಅವರ ಜೀವನದ ಗುರುತಿನ ಪ್ರಮುಖ ಭಾಗವಾಗಿದೆ ಎಂದು ಮಹಾಧರ್ಮಾದ್ಯಕ್ಷರಾದ ಅರ್ನೆಸ್ಟ್ ರವರು ಹೇಳಿದರು. ಅವರು ಕಥೋಲಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದರು ಮತ್ತು ಅವರ ತಂದೆ-ಆಂಗ್ಲಿಕನ್ ಧರ್ಮಗುರು- ಕಿರು ದೇವಾಲಯದ ಧರ್ಮಗುರುವಿನೊಂದಿಗೆ ಸ್ನೇಹಿತರಾಗಿದ್ದರು. ಗುರುವಿದ್ಯಾಮಂದಿರದಲ್ಲಿದ್ದಾಗ, ಅವರು ಮೊರಿಷಯಸ್‌ನ ಕಥೋಲಿಕ ಗುರುವಿದ್ಯಾಮಂದಿರದಲ್ಲಿ ಒಂದು ವರ್ಷ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು.
ಇದರ ಹೊರತಾಗಿಯೂ, ಕ್ಯಾಂಟರ್ಬರಿಯ ಆರ್ಚ್ಬಿಷಪ್ ರೋಮ್ನಲ್ಲಿ ತಮ್ಮ ವೈಯಕ್ತಿಕ ಪ್ರತಿನಿಧಿಯಾಗಲು ಕೇಳಿದಾಗ, ಅವರ ಮೊದಲ ಆಲೋಚನೆ "ಆ ಕೆಲಸವನ್ನು ಮಾಡಲು ನಾನು ಯಾರು?" ಎಂದು ಮಹಾಧರ್ಮಾದ್ಯಕ್ಷರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು ಎಂದು ಹೇಳಿದರು.
ಅಂತಿಮವಾಗಿ, ಈ ಕಾರ್ಯವು ದೇವರ ಸಹಾಯದಿಂದ ಮಾತ್ರ ಸಾಧ್ಯ ಎಂದು ಅರಿತುಕೊಂಡರು ಎಂದು ಅವರು ಹೇಳಿದರು: "ರೋಮ್ ನ ಕಥೋಲಿಕ ಧರ್ಮಸಭೆ ಮತ್ತು ಆಂಗ್ಲಿಕನ್ ನ ಐಕ್ಯತೆಯ ನಡುವಿನ ಸಂಬಂಧವನ್ನು ಹೆಚ್ಚಿಸುವ ಮೂಲಕ ನಾನು ಇಲ್ಲಿ ಮಾಡುತ್ತಿರುವ ಕಾರ್ಯಗಳೆಲ್ಲವೂ ದೇವರ ಅನುಗ್ರಹದಿಂದ ಮಾತ್ರ ಸಾಧ್ಯವಾಯಿತು" ಎಂದು ಹೇಳಿದರು.
ವಿಶ್ವಗುರು ಫ್ರಾನ್ಸಿಸ್ ಮತ್ತು ಜಸ್ಟಿನ್ ವೆಲ್ಬಿರವರು
ಮಹಾಧರ್ಮಾದ್ಯಕ್ಷರಾದ ಅರ್ನೆಸ್ಟ್ ರವರ ಬಹುತೇಕ ಎಲ್ಲಾ ಅಧಿಕಾರಾವಧಿಯಲ್ಲಿ ಆಂಗ್ಲಿಕನ್ ಐಕ್ಯತೆಯ ಆಧ್ಯಾತ್ಮಿಕ ನಾಯಕ ಜಸ್ಟಿನ್ ವೆಲ್ಬಿರವರು.
ಮಹಾಧರ್ಮಾದ್ಯಕ್ಷರಾದ ವೆಲ್ಬಿರವರು ವಿಶ್ವಗುರು ಫ್ರಾನ್ಸಿಸ್ ರವರಂತೆಯೇ ಅದೇ ವರ್ಷದಲ್ಲಿ ಆಯ್ಕೆಯಾದರು ಮತ್ತು ಅವರೊಂದಿಗಿನ ಅವರ ಸ್ನೇಹದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು.
2023 ರಲ್ಲಿ, ವಿಶ್ವಗುರು ಮತ್ತು ಮಹಾಧರ್ಮಾದ್ಯಕ್ಷರ, ಸ್ಕಾಟ್ಲೆಂಡ್ ಧರ್ಮಸಭೆಯ ಚರ್ಚಾ ನಿರ್ವಾಹಕರಾ(ಮಾಡರೇಟರ್)ಗಿರುವ ಪೂಜ್ಯರಾದ ಇಯಾನ್ ಗ್ರೀನ್‌ಶೀಲ್ಡ್ಸ್ ರವರೊಂದಿಗೆ ದಕ್ಷಿಣ ಸುಡಾನ್‌ಗೆ ಜಂಟಿ 'ಶಾಂತಿ ಯಾತ್ರೆ' ಮಾಡಿದರು.
ದಕ್ಷಿಣ ಸುಡಾನ್‌ಗೆ ಸಾಗಿದ ಜಂಟಿ ಪ್ರಯಾಣವು "ಭರವಸೆ ಮತ್ತು ದೇವರ ಸಾಮ್ರಾಜ್ಯದ ಸಲುವಾಗಿ" ಕೈಗೊಂಡ ಈ ಕಾರ್ಯವು ಧರ್ಮಸಭೆಗಳ ನಡುವಿನ "ಗೋಚರ ಸಹಯೋಗ"ದ ಬಗ್ಗೆ ಸೂಚಿಸುತ್ತದೆ ಎಂದು ಮಹಾಧರ್ಮಾಧ್ಯಕ್ಷರಾದ ಅರ್ನೆಸ್ಟ್ ರವರು ಹೇಳಿದರು.
ಈ ಜಂಟಿ ಉದ್ಯಮಕ್ಕೆ ಅವರು ಒಂದು ಹೆಸರನ್ನು ನೀಡಬೇಕಾದರೆ, ಮಹಾಧರ್ಮಾಧ್ಯಕ್ಷರಾದ ಅರ್ನೆಸ್ಟ್ ರವರು ವಿಶ್ವಗುರುಗಳ 2020 ರ ವಿಶ್ವ ಪರಿಪತ್ರವನ್ನು ಉಲ್ಲೇಖಿಸಿ, "ನಾನು ಅದನ್ನು 'ಫ್ರಾಟೆಲ್ಲಿ ಟುಟ್ಟಿ' ಎಂದು ಕರೆಯುತ್ತೇನೆ" ಎಂದು ಹೇಳಿದರು.
ಮಹಾಧರ್ಮಾಧ್ಯಕ್ಷರಾದ ವೆಲ್ಬಿರವರ ಪರಂಪರೆ
ಕಳೆದ ವರ್ಷದ ಕೊನೆಯಲ್ಲಿ, ಐತಿಹಾಸಿಕ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿರ್ವಹಿಸಿದ್ದಕ್ಕಾಗಿ ಮಹಾಧರ್ಮಾಧ್ಯಕ್ಷರಾದ ವೆಲ್ಬಿರವರು ರಾಜೀನಾಮೆ ನೀಡಿದರು.
ವೆಲ್ಬಿರವರು ಬಿಟ್ಟುಹೋಗುವ ಪರಂಪರೆಯ ಬಗ್ಗೆ ಕೇಳಿದಾಗ, ಮಹಾಧರ್ಮಾಧ್ಯಕ್ಷರಾದ ಅರ್ನೆಸ್ಟ್ ರವರು, ದೇವರೊಂದಿಗೆ ಮತ್ತು ಇತರರೊಂದಿಗೆ ಸಮನ್ವಯದ ಅಗತ್ಯದ ಮೇಲೆ ಅವರ ಗಮನವು ಒಂದು ಪ್ರಮುಖ ಅಂಶವಾಗಿದೆ ಎಂದು ಅವರು ಭಾವಿಸಿದ್ದಾರೆ ಎಂದು ಹೇಳಿದರು.
"ನಾವು ಯೇಸು ಕ್ರಿಸ್ತರ ಮೂಲಕ ದೇವರೊಂದಿಗೆ ಸಮನ್ವಯಗೊಂಡಿದ್ದೇವೆ" ಎಂದು ಅರ್ನೆಸ್ಟ್ ರವರು ಹೇಳಿದರು, "ಮತ್ತು ಕ್ರಿಸ್ತರ ರಕ್ತದ ಮೂಲಕ ಪರಸ್ಪರ ಸಮನ್ವಯಗೊಂಡಿದ್ದೇವೆ. [ಮಹಾಧರ್ಮಾಧ್ಯಕ್ಷರಾದ ವೆಲ್ಬಿಯವರ] ಸೇವೆಯಿಂದ ನಾವು ಅದನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ."
ಮತ್ತೊಂದು ಪ್ರಮುಖ ಅಂಶವೆಂದರೆ, ಮಹಾಧರ್ಮಾಧ್ಯಕ್ಷರಾದ ಅರ್ನೆಸ್ಟ್ ರವರು ಹೇಳುವಂತೆ, "ಧರ್ಮಸಭೆಯು ಯಾವಾಗಲೂ ಕಾರ್ಯಾಚರಣೆಯಲ್ಲಿರಬೇಕಾದ ಅಗತ್ಯ"ದ ಮೇಲೆ ತಮ್ಮ ಗಮನ ಹರಿಸಬೇಕೆಂದು ವೆಲ್ಬಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
"ಜನರನ್ನು ಗುಣಪಡಿಸುವ ವೈದ್ಯ, ಮಗುವಿಗೆ ವಿದ್ಯೆ ನೀಡುವ ಶಿಕ್ಷಕ ಮತ್ತು ಪೋಷಕರು - ನಾವೆಲ್ಲರೂ ಒಂದು ಪ್ರಮುಖವಾದ ಜವಾಬ್ದಾರಿಯನ್ನು ಹೊಂದಿದ್ದೇವೆ. ಅದೇನೆಂದರೆ, ನಮಗೆ ಬೇಕಾಗಿರುವ ದೇವರ ಕೃಪೆಯು ನಮ್ಮಲ್ಲಿ ಹರಿಯುವಂತೆ ಮಾಡುವುದು ಮತ್ತು ಸಂತ ಪೌಲರು ಹೇಳುವಂತೆ, ದೇವರು ನಮಗೆ ಮಾರ್ಗದರ್ಶನ ನೀಡುವವರಾಗಿದ್ದಾರೆ."