ಪಾಶ್ಚಿಮಾತ್ಯ ಧರ್ಮಸಭೆಗಳ ಸುದ್ದಿ ಸಮಾಚಾರ- ಜನವರಿ 17, 2025
ಈ ವಾರದ ಪೂರ್ವದ ಸುದ್ಧಿ ಸಮಾಚಾರ - ಜನವರಿ 17, 2025
ಗಾಜಾದಲ್ಲಿ ಕದನ ವಿರಾಮ
15 ತಿಂಗಳ ಯುದ್ಧದ ನಂತರ ಹಮಾಸ್ ಮತ್ತು ಇಸ್ರಯೇಲ್ ನಡುವೆ ಬುಧವಾರ ಕದನ ವಿರಾಮ ಒಪ್ಪಂದವನ್ನು ಘೋಷಿಸಲಾಯಿತು. ಇದು ಭಾನುವಾರದಿಂದ ಪ್ರಾರಂಭವಾಗುವ ಕದನ ವಿರಾಮಕ್ಕೆ ಮತ್ತು ಸುಮಾರು 1,000 ಪ್ಯಾಲೆಸ್ತೀನಿಯಾದ ಕೈದಿಗಳಿಗೆ ಬದಲಾಗಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡುತ್ತದೆ. ಜೆರುಸಲೇಮ್‌ನ ಲತೀನ್ ಪಿತೃಪ್ರಧಾನರ ಸಭೆಯು ಈ ಘೋಷಣೆಯನ್ನು ಸ್ವಾಗತಿಸಿತು, "ಅಗಾಧವಾದ ದುಃಖ" ಎಂದು ಕರೆಯುವುದನ್ನು ಈ ಒಪ್ಪಂದವು ಕೊನೆಗೊಳಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿತು. ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಬೇಕೆಂದು ಪಿತೃಪ್ರಧಾನ ಸಭೆಯು ಕರೆ ನೀಡಿತು ಮತ್ತು ಪವಿತ್ರನಾಡಿಗೆ ಯಾತ್ರಿಕರು ಮರಳುವುದನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಲೆಬನಾನ್‌ನಲ್ಲಿ ಹೊಸ ಅಧ್ಯಕ್ಷ ಮತ್ತು ಪ್ರಧಾನಿ
ಲೆಬನಾನ್‌ನಲ್ಲಿ ಈಗ ಗಣರಾಜ್ಯದ ಅಧ್ಯಕ್ಷ ಜೋಸೆಫ್ ಔನ್ ರವರು ಮತ್ತು ಪ್ರಧಾನ ಮಂತ್ರಿ ನವಾಫ್ ಸಲಾಮ್ ರವರಾಗಿದ್ದಾರೆ. ದೇಶದ ಪಂಥೀಯ ವ್ಯವಸ್ಥೆಗೆ ಅನುಗುಣವಾಗಿ, ಮೊದಲನೆಯವರು ಮರೋನೈಟ್ ಕಥೋಲಿಕರಾಗಿದ್ದು ಮತ್ತು ಎರಡನೆಯವರು ಸುನ್ನಿ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ.
ಜೋಸೆಫ್ ಔನ್ ರವರು ಒಬ್ಬ ವೃತ್ತಿಪರ ಸೈನಿಕ ಮತ್ತು ಇಲ್ಲಿಯವರೆಗೆ ಲೆಬನಾನ್ ಸೈನ್ಯದ ಮುಖ್ಯಸ್ಥರಾಗಿದ್ದರು, ಆದರೆ ನವಾಫ್ ಸಲಾಮ್ ರವರು ಒಬ್ಬ ರಾಜತಾಂತ್ರಿಕ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದ ಮಾಜಿ ಅಧ್ಯಕ್ಷರಾಗಿದ್ದರು. ಕಾರ್ಯನಿರ್ವಾಹಕ ಅಧಿಕಾರದ ಖಾಲಿ ಹುದ್ದೆಯ 2 ವರ್ಷಗಳ ನಂತರ, ದೇಶವು ಈಗ ರಾಜಕೀಯ ಸ್ಥಿರತೆಯ ನಿರೀಕ್ಷೆಯಲ್ಲಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯಾಗುವ ನಿರೀಕ್ಷೆಯಿದೆ.
ಜೋರ್ಡಾನ್‌ನಲ್ಲಿರುವ ಪ್ರಭುವಿನ ದೀಕ್ಷಾಸ್ನಾನದ ನೂತನ ದೇವಾಲಯದ ಪವಿತ್ರೀಕರಣ
ಜನವರಿ 10 ರಂದು, ಸಂತ ಸ್ನಾನಿಕ ಯೋವಾನ್ನರು ಪ್ರಭು ಯೇಸುವಿಗೆ ದೀಕ್ಷಾಸ್ನಾನ ನೀಡಿದರೆಂದು ಹೇಳಲಾಗುವ ಅಲ್-ಮಾಘ್ತಾಸ್ ಸ್ಥಳದಲ್ಲಿ, ಪ್ರಭುವಿನ ದೀಕ್ಷಾಸ್ನಾನದ ನೂತನ ದೇವಾಲಯವನ್ನು ಪವಿತ್ರಗೊಳಿಸಿ ಉದ್ಘಾಟನೆ ಮಾಡಲಾಯಿತು. ಈ ಉದ್ಘಾಟನೆಯು 15 ವರ್ಷಗಳ ಕೆಲಸದ ಪರಾಕಾಷ್ಠೆಯಾಗಿತ್ತು. ಈ ಸಾಂಭ್ರಮಿಕ ದೈವಾರಾಧನೆಯ ವಿಧಿಯನ್ನು ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು, ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರು ಅರ್ಪಿಸಿದರು ಮತ್ತು ಅನೇಕ ಭಕ್ತವಿಶ್ವಾಸಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ವಿಶ್ವದ ಅತ್ಯಂತ ಹಳೆಯ ಕ್ರೈಸ್ತ ಸಮುದಾಯಗಳಲ್ಲಿ ಒಂದಾದ ಜೋರ್ಡಾನ್, ಪ್ರಸ್ತುತ ತನ್ನ 11 ಮಿಲಿಯನ್ ನಿವಾಸಿಗಳಲ್ಲಿ 2% ರಿಂದ 4% ರವರೆಗಿನ ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.