ಪೂರ್ವದ ಸುದ್ದಿ ಸಮಾಚಾರ– ಜನವರಿ 10, 2025
ಪೂರ್ವದ ಸುದ್ದಿ ಸಮಾಚಾರ– ಜನವರಿ 10, 2025
ಈ ವಾರದ ಪೂರ್ವ ಚರ್ಚುಗಳಿಂದ ಬಂದ ಸುದ್ದಿಗಳು, ಲ್ಯೂವ್ರೆ ಡಿ'ಓರಿಯಂಟ್ ಸಹಯೋಗದೊಂದಿಗೆ ತಯಾರಿಸಲ್ಪಟ್ಟವು, ಜೂಲಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುವ ಕ್ರೈಸ್ತರು ಕ್ರಿಸ್‌ಮಸ್ ಆಚರಿಸುತ್ತಾರೆ, ಪಾಶ್ಚಿಮಾತ್ಯ ಸರ್ಕಾರಗಳು ಸಿರಿಯಾದ ಹೊಸ ನಾಯಕರನ್ನು ಸಂಪರ್ಕಿಸುತ್ತವೆ ಮತ್ತು ROACO ರೋಮ್‌ನಲ್ಲಿ ಸಭೆ ಸೇರುತ್ತದೆ.
ಪೂರ್ವದ ಸುದ್ಧಿ ಸಮಾಚಾರದಿಂದ ಈ ವಾರದ ಸುದ್ದಿ:
ಕ್ರಿಸ್‌ಮಸ್ ಆಚರಣೆಗಳು
ಜನವರಿ 7, ಮಂಗಳವಾರ, ಜೂಲಿಯನ್ ಕ್ಯಾಲೆಂಡರ್ ನ್ನು ಅನುಸರಿಸುವ ಕ್ರೈಸ್ತರು ಕ್ರಿಸ್ತಜಯಂತಿಯ ಹಬ್ಬವನ್ನು ಆಚರಿಸಿದರು.
ಬೆತ್ಲಹೇಮ್ ನಲ್ಲಿ ಕಂಡುಬರುವ ಗ್ರೀಕ್ ಸನಾತನ (ಆರ್ಥೊಡಾಕ್ಸ್) ಧರ್ಮಸಭೆ, ಉಕ್ರೇನ್‌ನ ಆರ್ಥೊಡಾಕ್ಸ್ ಧರ್ಮಸಭೆಯ ಭಾಗ, ಕಾಪ್ಟಿಕ್ ಧರ್ಮಸಭೆ, ಇಥಿಯೋಪಿಯದ ಧರ್ಮಸಭೆಗಳು ಮತ್ತು ಅರ್ಮೇನಿಯದ ಧರ್ಮಸಭೆಗಳು ಸೇರಿವೆ.
ಸಿರಿಯಾಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಮರಳುವಿಕೆ
ಸಿರಿಯಾದ ಹೊಸ ನಾಯಕತ್ವಕ್ಕೆ ಹಲವಾರು ಪಾಶ್ಚಿಮಾತ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸಿವೆ.
ಜನವರಿ 3 ರಂದು, ಫ್ರಾನ್ಸ್ ಮತ್ತು ಜರ್ಮನಿಯ ವಿದೇಶಾಂಗ ಮಂತ್ರಿಗಳು ದಮಾಸ್ಕಸ್‌ನಲ್ಲಿ ಹೊಸ ಸಿರಿಯದ ನಾಯಕ ಅಹ್ಮದ್ ಅಲ್-ಚರಾರವರನ್ನು ಭೇಟಿಯಾದರು, ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಇದಕ್ಕೆ ಒಂದು ಮಹತ್ವದ ತಿರುವು ಸಿಕ್ಕಿದೆ.
ಜನವರಿ 6 ರಂದು, ಮಾನವೀಯ ನೆರವು ನೀಡಲು ಆರು ತಿಂಗಳ ನಿರ್ಬಂಧಗಳನ್ನು ಸಡಿಲಿಸುವುದಾಗಿ ಅಮೆರಿಕವು ಘೋಷಿಸಿದೆ.
ದೇಶದ ಎಲ್ಲಾ ಧಾರ್ಮಿಕ ಸಮುದಾಯಗಳನ್ನು ಗೌರವಿಸುವ ಪ್ರಜಾಪ್ರಭುತ್ವ ಆಡಳಿತಕ್ಕೆ ಸಿರಿಯಾ ಪರಿವರ್ತನೆಗೊಳ್ಳುವುದನ್ನು ಬೆಂಬಲಿಸುವುದು ಹಂಚಿಕೆಯ ಗುರಿಯಾಗಿದೆ.
ಡಿಸೆಂಬರ್ 31 ರಂದು ಧರ್ಮಾಧ್ಯಕ್ಷರ ನಿಯೋಗದೊಂದಿಗೆ ನಡೆದ ಸತ್ಕಾರದ ಸಮಾರಂಭದಲ್ಲಿ, ಹೊಸ ನಾಯಕರು "ಒಳಗೊಂಡಿರುವ" ಸಿರಿಯಾವನ್ನು ನಿರ್ಮಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು.
ಹಲವಾರು ಕ್ರೈಸ್ತ ಧರ್ಮಸಭೆಗಳು ದೇಶದ ಭವಿಷ್ಯಕ್ಕೆ ಕೊಡುಗೆ ನೀಡುವ ಬದ್ಧತೆಯನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ರೋಮ್‌ನಲ್ಲಿ ROACO ಸ್ಟೀರಿಂಗ್ ಸಮಿತಿ
ಜನವರಿ 9 ಮತ್ತು 10 ರಂದು, ರೋಮ್ ROACO (ಪೂರ್ವದ ಧರ್ಮಸಭೆಗಳಿಗೆ ನೆರವು ನೀಡುವ ಸಂಸ್ಥೆಗಳ ಪುನರ್ಮಿಲನ)ದ ಸ್ಟೀರಿಂಗ್ ಸಮಿತಿಯನ್ನು ಆಯೋಜಿಸಿತು. ವಾರ್ಷಿಕ ಸಭೆಯು ವಿವಿಧ ಸಂಘಗಳ ಕ್ರಮಗಳನ್ನು ಸಂಘಟಿಸುವ ಗುರಿಯನ್ನು ಹೊಂದಿದೆ.
ಸಮಿತಿಯ ಸದಸ್ಯರಲ್ಲಿ CNEWA ಅಮೆರಿಕದವರು, ಕಲೋನ್ ಮಹಾಧರ್ಮಕ್ಷೇತ್ರದ ಜರ್ಮನ್ನಿನ ಜನರು ಮತ್ತು L’Œuvre d’Orient ನ ಫ್ರೆಂಚ್ ಜನರು ಸೇರಿದ್ದಾರೆ.
ಈ ವಾರದ ಚರ್ಚೆಗಳು ಲೆಬನಾನ್ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳು, ಜನಸಂಖ್ಯೆಯ ಮೇಲೆ ಅವುಗಳ ವಿನಾಶಕಾರಿ ಪರಿಣಾಮ ಮತ್ತು ಧರ್ಮಸಭೆಗಳ ಮೇಲೆ ಅವುಗಳ ಪರಿಣಾಮಗಳ ಮೇಲೆ ಕೇಂದ್ರೀಕರಿಸಿದವು.