MAP

 Orient News cover Orient News cover 

ಪಾಶ್ಚಿಮಾತ್ಯ ಧರ್ಮಸಭೆಗಳ ಸುದ್ದಿ ಸಮಾಚಾರ- ಜನವರಿ 24, 2025

ಈ ವಾರದ ಪಾಶ್ಚಿಮಾತ್ಯ ಧರ್ಮಸಭೆಗಳ ಸುದ್ದಿಗಳು, L'Œuvre d'Orient ಸಹಯೋಗದೊಂದಿಗೆ ತಯಾರಿಸಲ್ಪಟ್ಟವು, ಕ್ರೈಸ್ತರು ಏಕತೆಗಾಗಿ ಪ್ರಾರ್ಥಿಸುತ್ತಾರೆ ಮತ್ತು ಪವಿತ್ರ ನಾಡಿಗೆ ಭೇಟಿ ನೀಡಲು ಆಹ್ವಾನಿಸಲ್ಪಡುತ್ತಾರೆ, ಇಥಿಯೋಪಿಯ ಮತ್ತು ಎರಿಟ್ರಿಯನ್ನಿನ ಕ್ರೈಸ್ತರು ಟಿಮ್ಕಾಟ್ ವನ್ನು ಆಚರಿಸುತ್ತಾರೆ.

ಈ ವಾರದ ಪೂರ್ವದ ಸುದ್ಧಿ ಸಮಾಚಾರ - ಜನವರಿ 24, 2025

ಕ್ರೈಸ್ತ ಧರ್ಮದ ಏಕತೆಗಾಗಿ ಪ್ರಾರ್ಥನಾ ವಾರ
ಜನವರಿ 18 ರಿಂದ 25 ರವರೆಗೆ, ಕ್ರೈಸ್ತ ಧರ್ಮದ ಏಕತೆಗಾಗಿ ಪ್ರಾರ್ಥನಾ ವಾರ ನಡೆಯುತ್ತದೆ, ಇದು ಧರ್ಮಸಭೆಗಳ ನಡುವಿನ ಸಂಭಾಷಣೆಯ ಮಹತ್ವವನ್ನು ಒತ್ತಿಹೇಳುತ್ತದೆ.

ಕ್ರೈಸ್ತ ಧರ್ಮವನ್ನು ಶ್ರೀಮಂತಗೊಳಿಸುವ, ಶ್ರೀಮಂತ ಆಧ್ಯಾತ್ಮಿಕ ಮತ್ತು ದೈವಾರಾಧನಾ ವಿಧಿ ಸಂಪ್ರದಾಯಗಳನ್ನು ಗೌರವಿಸುವಾಗ ಭ್ರಾತೃತ್ವಕ್ಕಾಗಿ ಕರೆ ನೀಡುವಲ್ಲಿ ಜಾಗತಿಕ ಕಾರ್ಯಕ್ರಮವು ಪೂರ್ವ ಧರ್ಮಸಭೆಗಳಿಗೆ ವಿಶೇಷ ಮಹತ್ವವನ್ನು ನೀಡುತ್ತದೆ.

ಯುದ್ಧದ ನಂತರ ಸನಾತನ (ಆರ್ಥೊಡಾಕ್ಸ್) ಧರ್ಮಸಭೆಗಳ ನಡುವಿನ ವಿಭಜನೆಗಳಿಂದ ಗುರುತಿಸಲ್ಪಟ್ಟ ಉಕ್ರೇನ್‌ನಲ್ಲಿ, ಜನವರಿ 18 ರಂದು ಕೈವ್‌ನಲ್ಲಿರುವ ಗ್ರೀಕ್ ಕಥೋಲಿಕ ಪ್ರಧಾನಾಲಯದಲ್ಲಿ ನಡೆದ ಅಂತರ್ಧರ್ಮೀಯ ಪ್ರಾರ್ಥನೆಯಲ್ಲಿ ಮಹತ್ವದ ಕ್ಷಣ ಸಂಭವಿಸಿತು.

ಉಕ್ರೇನ್ನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥ, ಪ್ರಧಾನ ಮಹಾಧರ್ಮಾಧ್ಯಕ್ಷರಾದ ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು, "ಪುನರುತ್ಥಾನದ ವಿಶ್ವಾಸದಲ್ಲಿ ಏಕತೆಯು ನಮ್ಮ ಭರವಸೆಯ ಮೂಲವಾಗಿದೆ" ಎಂಬುದನ್ನು ಅಲ್ಲಿ ನೆರಿದಿದ್ದವರಿಗೆ ನೆನಪಿಸಿದರು.

ಪವಿತ್ರ ನಾಡಿನ ಯಾತ್ರಿಕರು
ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾರವರು ಮತ್ತು ಪವಿತ್ರ ನಾಡಿನ ಕಸ್ಟೋಸ್ ಧರ್ಮಗುರು. ಫ್ರಾನ್ಸೆಸ್ಕೊ ಪ್ಯಾಟನ್ ರವರು, ಕ್ರೈಸ್ತ ಭಕ್ತವಿಶ್ವಾಸಿಗಳನ್ನು ಪವಿತ್ರ ನಾಡಿನ ತೀರ್ಥಯಾತ್ರೆಗೆ ಮರಳಲು ಆಹ್ವಾನಿಸುತ್ತಿದ್ದಾರೆ.

ಜನವರಿ 18ರ ಶನಿವಾರದಂದು ಪವಿತ್ರ ಸಮಾಧಿಯ ಮುಂದೆ ನಿಂತು, ಅವರು ಟೆರಾ ಸಾಂತಾ ಸುದ್ಧಿಯಲ್ಲಿ ಪ್ರಕಟಿಸಿದ ವೀಡಿಯೊದಲ್ಲಿ ಆಹ್ವಾನವನ್ನು ನೀಡಿದರು.

ಇಸ್ರಯೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದಿಂದಾಗಿ ಪರಿಸ್ಥಿತಿ "ಸುರಕ್ಷಿತ" ಎಂದು ಪಿತಾಮಹ ಪಿಜ್ಜಾಬಲ್ಲಾರವರು ಭರವಸೆ ನೀಡಿದರು ಮತ್ತು ಯಾತ್ರಿಕರ ಮೇಲೆ ಜೀವನೋಪಾಯ ಅವಲಂಬಿಸಿರುವ ಸ್ಥಳೀಯ ಕ್ರೈಸ್ತ ಕುಟುಂಬಗಳಿಗೆ ಬೆಂಬಲವನ್ನು ಪ್ರೋತ್ಸಾಹಿಸಿದರು.

ಈ ಜ್ಯೂಬಿಲಿ ವರ್ಷದಲ್ಲಿ ಕ್ರೈಸ್ತರು "ಭರವಸೆಯ ಯಾತ್ರಿಕರು" ಆಗಬೇಕೆಂದು ಧರ್ಮಗುರು. ಪ್ಯಾಟನ್ ರವರು ಕರೆ ನೀಡಿದರು.

ಟಿಮ್ಕಾಟ್ 2025
ಜನವರಿ 18 ರಿಂದ 20 ರವರೆಗೆ, ಗೀಜ್ ವಿಧಿಯ ಇಥಿಯೋಪಿಯ ಮತ್ತು ಎರಿಟ್ರಿಯನ್ನಿನ ಕ್ರೈಸ್ತರು ಟಿಮ್ಕಾಟ್ ನ್ನು ಆಚರಿಸಿದರು.

ಈ ಪ್ರಮುಖ ದೈವಾರಾಧನಾ ವಿಧಿಯ ಹಬ್ಬವು ಪ್ರಭುಕ್ರಿಸ್ತರ ದೀಕ್ಷಾಸ್ನಾನ ಮತ್ತು ದೈವದರ್ಶನದ ಹಬ್ಬವನ್ನು ಸ್ಮರಿಸುತ್ತದೆ. ಈ ಆಚರಣೆಯ ಸಮಯದಲ್ಲಿ, ಪ್ರತಿ ಗೀಜ್ ಧರ್ಮಸಭೆಯಿಂದ ʼಟ್ಯಾಬೋಟ್ʼ ಎಂದು ಕರೆಯಲ್ಪಡುವ ಕಾನೂನಿನ ಫಲಕಗಳ ಪ್ರತಿಕೃತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ, ಬಟ್ಟೆಯಲ್ಲಿ ಸುತ್ತಿ, ವರ್ಣರಂಜಿತ ಉಡುಪಿನಲ್ಲಿ ಅಲಂಕರಿಸಲ್ಪಟ್ಟ ಯಾಜಕರ ಶಿರಸ್ಸಿನ ಮೇಲೆ ಈ ಫಲಕಗಳನ್ನು ಇರಿಸಲಾಗುತ್ತದೆ.

ಮೆರವಣಿಗೆಯು ನೀರಿರುವ ಮುಖ್ಯ ಭಾಗಕ್ಕೆ ಕರೆದೊಯ್ಯುತ್ತದೆ, ನಂತರ ಅದನ್ನು ಆಶೀರ್ವದಿಸಲಾಗುತ್ತದೆ, ಆದಾದ ಮೇಲೆ ಆಶೀರ್ವದಿಸಲಾದ ನೀರಿನ್ನು ಭಕ್ತವಿಶ್ವಾಸಿಗಳ ಮೇಲೆ ಚಿಮುಕಿಸಲಾಗುತ್ತದೆ, ಕೆಲವರು ತಮ್ಮ ದೀಕ್ಷಾಸ್ನಾನ ಪ್ರತಿಜ್ಞೆಯನ್ನು ನವೀಕರಿಸಲು ತಮ್ಮನ್ನು ತಾವು ನೀರಿನಲ್ಲಿ ಮುಳುಗಿಸಿಕೊಳ್ಳುತ್ತಾರೆ.

ಸಾಂಪ್ರದಾಯಿಕ ಹಾಡುಗಳು ಮತ್ತು ನೃತ್ಯಗಳೊಂದಿಗೆ, ಈ ಕಾರ್ಯಕ್ರಮವು ವಾರ್ಷಿಕವಾಗಿ ಸಾವಿರಾರು ಯಾತ್ರಿಕರನ್ನು ಒಟ್ಟುಗೂಡಿಸುತ್ತದೆ. ಟಿಮ್ಕಾಟ್ ನ್ನು 2019 ರಿಂದ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಪಟ್ಟಿ ಮಾಡಲಾಗಿದೆ.

24 ಜನವರಿ 2025, 16:46