MAP

Mission San Gabriel Mass for LA Fires Mission San Gabriel Mass for LA Fires  (Archdiocese of Los Angeles/John Rueda.)

ಲಾಸ್ ಏಂಜಲಸ್: ಕಥೋಲಿಕ ವಿಶ್ವಾಸ ಮತ್ತು ಭರವಸೆಯ ಕಥೆಗಳನ್ನು ಬಹಿರಂಗಪಡಿಸುತ್ತದೆ

ಲಾಸ್ ಏಂಜಲಸ್‌ನಲ್ಲಿರುವ ಏಂಜೆಲಸ್ ಸುದ್ಧಿಯ ಪ್ರಧಾನ ಸಂಪಾದಕ ಪ್ಯಾಬ್ಲೊ ಕೇರವರು, ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ವಿಶ್ವಾಸ ಮತ್ತು ಭರವಸೆಯ ಅದ್ಭುತ ಕಥೆಗಳನ್ನು ವಿವರಿಸುತ್ತಾರೆ, ಅದು ಪವಾಡದ ಬಗ್ಗೆ ಸುಳಿವು ನೀಡುತ್ತದೆ ಮತ್ತು ಕ್ಯಾಲಿಫೋರ್ನಿಯಾ ನಗರವನ್ನು ಅಪ್ಪಳಿಸಿದ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ಗಮನ ಸೆಳೆದಿರುವ 'ಮಾನವೀಯ ವಿಪತ್ತು' ಎಂದು ಅವರು ಕರೆಯುವುದರ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಲಾಸ್ ಏಂಜಲಸ್‌ನಲ್ಲಿರುವ ಏಂಜೆಲಸ್ ಸುದ್ಧಿಯ ಪ್ರಧಾನ ಸಂಪಾದಕ ಪ್ಯಾಬ್ಲೊ ಕೇರವರು, ಬೆಂಕಿಯಿಂದ ನಾಶವಾದ ಅಮೇರಿಕ ನಗರಕ್ಕೆ ವಿಶ್ವಗುರು ಫ್ರಾನ್ಸಿಸ್ ರವರ ನಿಕಟತೆಗೆ ಕೃತಜ್ಞರಾಗಿದ್ದಾರೆ ಮತ್ತು ತಮ್ಮನ್ನು "ತುಂಬಾ ಅದೃಷ್ಟಶಾಲಿ" ಎಂದು ಬಣ್ಣಿಸಿಕೊಳ್ಳುತ್ತಾರೆ. "ಬೆಂಕಿ ಅವಘಡ ಸಂಭವಿಸಿದ ಸ್ಥಳದಿಂದ ನಾವು ಸುರಕ್ಷಿತ ದೂರದಲ್ಲಿದ್ದು, ಬೆಂಕಿ ನನ್ನ ಮೇಲೆ ಅಥವಾ ನನ್ನ ಕುಟುಂಬದ ಮೇಲೆ ನೇರವಾಗಿ ಪರಿಣಾಮ ಬೀರಲಿಲ್ಲ." ಆದಾಗ್ಯೂ, ವ್ಯಾಟಿಕನ್ ಸುದ್ಧಿಗೆ ನೀಡಿದ ಈ ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಒಂದು ರೀತಿಯ 'ಮಾನವೀಯ ವಿಪತ್ತು' ಎಂದು ವಿವರಿಸುವಾಗ, 24/7 ವರದಿಯನ್ನು ಒದಗಿಸುವುದು ಅವರ ಕೆಲಸದ ಮೇಲೆ ನಾಟಕೀಯ ಪರಿಣಾಮ ಬೀರಿದೆ ಎಂದು ಅವರು ಗುರುತಿಸುತ್ತಾರೆ, ಮತ್ತು ವಿನಾಶದ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತ್ರವಲ್ಲದೆ, ಲೆಕ್ಕವಿಲ್ಲದಷ್ಟು ಕಥೆಗಳು ಮತ್ತು ಉಪಕ್ರಮಗಳು, ವಿಶೇಷವಾಗಿ ಸುಮಾರು 300 ಧರ್ಮಕೇಂದ್ರಗಳನ್ನು ಹೊಂದಿರುವ ಅತಿದೊಡ್ಡ ಅಮೇರಿಕದ ಮಹಾಧರ್ಮಕ್ಷೇತ್ರವಾದ ಲಾಸ್ ಏಂಜಲಸ್‌ನ ಕಥೋಲಿಕ ಮಹಾಧರ್ಮಕ್ಷೇತ್ರದ ಬಗ್ಗೆ ವಿವರಿಸುತ್ತಾರೆ.

ಈ ಸಂಭಾಷಣೆಯ ಸಮಯದಲ್ಲಿ, ಶ್ರೀ ಕೇರವರು ನಾಟಕೀಯ ವಿನಾಶ, ಜೀವಗಳ ನಷ್ಟ ಮತ್ತು 'ವಿಮಾ ಬಿಕ್ಕಟ್ಟಿನ' ಹೊರತಾಗಿಯೂ, ವಿಶೇಷವಾಗಿ ವಿಶ್ವಾಸ ಮತ್ತು ಭರವಸೆಯಿಂದ ನಡೆಸಲ್ಪಡುವ ದುಃಖದ ಮಧ್ಯೆಯೂ ಬಹುತೇಕ ಪವಾಡಸದೃಶ ಪ್ರಸಂಗಗಳನ್ನು ನೋಡಿದ ನಂತರ ಈ ಜ್ಯೂಬಿಲಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಎಂದು ಹೇಳಿದರು.

ಪ್ಯಾಬ್ಲೊ, ನಾವು ಜ್ಯೂಬಿಲಿ ಭರವಸೆಯ ವರ್ಷದಲ್ಲಿದ್ದೇವೆ. ವಿಶ್ವಾಸ ಮತ್ತು ಉಪಕ್ರಮಗಳ ಈ ನಂಬಲಾಗದಷ್ಟು ಹೃದಯಸ್ಪರ್ಶಿ ಕಥೆಗಳ ಹೊರತಾಗಿಯೂ ಭರವಸೆಯನ್ನು ಉಳಿಸಿಕೊಳ್ಳಲು ಕಷ್ಟಕರವಾದ ದುರಂತವನ್ನು ವರದಿ ಮಾಡುವ ಪತ್ರಕರ್ತನಾಗಿ, ಈಗ ನಿಮಗೆ ಜ್ಯೂಬಿಲಿ ಭರವಸೆಯ ಅರ್ಥವೇನು?
ಸರಿ, ಈ ಪ್ರಶ್ನೆ ನನ್ನನ್ನು ಯೋಚಿಸುವಂತೆ ಮಾಡಿದೆ, ನಾನು ನನ್ನ ಭರವಸೆಯನ್ನು ಯಾವುದರ ಮೇಲೆ ಇಡಬೇಕು? ಈ ಜ್ಯೂಬಿಲಿ ಭರವಸೆಯು ಯಾವುದರ ಬಗ್ಗೆ? ನನ್ನ ಭರವಸೆ ಭೌತಿಕ ಭದ್ರತೆಯಲ್ಲೋ? ನನ್ನ ಆರೋಗ್ಯದಲ್ಲೋ? ಸ್ಥಿರವಾದ ವೃತ್ತಿಜೀವನ, ಮನೆ, ಕಾರು ಮತ್ತು ವಿರಾಮ ಸಮಯವನ್ನು ಹೊಂದುವುದರಲ್ಲಿ ಆರಾಮವಾಗಿರುವುದರಲ್ಲೋ? ನಾನು ಅನೇಕ ಬಾರಿ ನನ್ನ ಭರವಸೆಯನ್ನು ಇದರಲ್ಲಿಯೇ ಇಟ್ಟಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನಂತೆಯೇ ಅನೇಕರು ಹಾಗೆಯೇ ಮಾಡುತ್ತಾರೆಂದು ನಾನು ಅನುಮಾನಿಸುತ್ತೇನೆ. ಆದರೆ ಧರ್ಮಸಭೆಯ ಮೂಲಕ ನಾನು ಪಡೆದ ವಿಶ್ವಾಸವು ಬೇರೆಯದೇ ಆದದ್ದನ್ನು ಹೇಳುತ್ತದೆ, ಸರಿಯೇ? ಅದೇನೆಂದರೆ, ನಮ್ಮ ಭರವಸೆ ಕ್ರಿಸ್ತರಲ್ಲಿದೆ ಮತ್ತು ಕ್ರಿಸ್ತರೊಬ್ಬನೇ ಸಾವನ್ನು ಜಯಿಸಿದ್ದಾರೆ ಎಂದು ಅದು ಹೇಳುತ್ತದೆ. ದಿನದ ಅಂತ್ಯದಲ್ಲಿ ನಾನು ಅರಿತುಕೊಂಡಿದ್ದೇನೆಂದರೆ, ಸಂತ ಪೌಲರು ಎಫೆಸದವರಿಗೆ ಬರೆದ ಪತ್ರದಲ್ಲಿ ಸೂಚಿಸುವಂತೆ, ನಾವೆಲ್ಲರೂ ಈ ಸಾವಿನ ಭಯಕ್ಕೆ ಗುಲಾಮರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಮತ್ತು ಆದ್ದರಿಂದ ನನಗೆ ಈ ಭರವಸೆ ಎಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ನಾನು ಅರಿತುಕೊಳ್ಳುತ್ತಿದ್ದೇನೆ.

ನನ್ನನ್ನು ನಿಜವಾಗಿಯೂ ಎಚ್ಚರಗೊಳಿಸಲು ಮತ್ತು ಮರು-ಕೇಂದ್ರೀಕರಿಸಲು, ನನ್ನ ಭರವಸೆ ಎಲ್ಲಿದೆ ಎಂದು ಅರಿತುಕೊಳ್ಳಲು ಮತ್ತು ನಾನು ನಿಜವಾಗಿಯೂ ನನ್ನ ಭರವಸೆಯನ್ನು ಕೇಂದ್ರೀಕರಿಸಬಹುದಾದ ಏಕೈಕ ವ್ಯಕ್ತಿ, ದೇವರು ಆತನ ಪುತ್ರ ಪ್ರಭುಯೇಸು ಕ್ರಿಸ್ತರು ಎಂದು ಕಂಡುಹಿಡಿಯಲು ನನಗೆ ಈ ಜ್ಯೂಬಿಲಿ ಭರವಸೆ ಅಗತ್ಯವಿದೆ. ನಾವು ಕೇಳುವ ವಿಷಯಗಳನ್ನು ನಾವು ಬೌದ್ಧಿಕವಾಗಿಯೂ ಅರ್ಥಮಾಡಿಕೊಳ್ಳಬಹುದು, ಆದರೆ ನಮಗೆ ಬೆಂಕಿಯಂತಹದ್ದು, ಬೆಂಕಿಯ ಸರಣಿಯಂತಹದ್ದು ಬೇಕು, ಕನಿಷ್ಠ ನನ್ನ ವಿಷಯದಲ್ಲಿ, ನನ್ನನ್ನು ಎಚ್ಚರಗೊಳಿಸಲು ಮತ್ತು ನನ್ನ ವಾಸ್ತವವನ್ನು ನೋಡಲು ಹಾಗೂ ಈ ಜ್ಯೂಬಿಲಿ ವರ್ಷದಲ್ಲಿ ಧರ್ಮಸಭೆಯು ಘೋಷಿಸುವುದನ್ನು ನಾನು ನಿಜವಾಗಿಯೂ ನಂಬುತ್ತೇನೆಯೇ ಎಂದು ನೋಡಲು ನನಗೆ ಸಹಾಯ ಮಾಡಲು ನನಗೆ ಈ ಜ್ಯೂಬಿಲಿ ಭರವಸೆ ಅಗತ್ಯವಿದೆ ಎಂದು ಹೇಳುತ್ತಾರೆ.

24 ಜನವರಿ 2025, 16:36