MAP

2021.12.29 Re Magi 2021.12.29 Re Magi  (Miguel Hermoso Cuesta)

ಪ್ರಭುವಿನ ದಿನದ ಚಿಂತನೆ: 'ನಕ್ಷತ್ರಗಳು, ಕನಸುಗಳು ಮತ್ತು ದೈವಿಕ ಮಾರ್ಗಗಳು'

ಧರ್ಮಸಭೆಯು ಇಂದು ಪ್ರಭುವಿನ ದೈವದರ್ಶನ(ಎಪಿಫ್ಯಾನಿ)ದ ಹಬ್ಬವನ್ನು ಆಚರಿಸುತ್ತಿದ್ದಂತೆ, ಜೆನ್ನಿ ಕ್ರಾಸ್ಕಾರವರು ಈ ದಿನದ ದೈವಾರಾಧನಾ ವಿಧಿಯ ವಾಚನಗಳ ವಿಷಯದ ಅಡಿಯಲ್ಲಿ ತನ್ನ ಚಿಂತನೆಗಳನ್ನು ನೀಡುತ್ತಾರೆ: "ನಕ್ಷತ್ರಗಳು, ಕನಸುಗಳು ಮತ್ತು ದೈವಿಕ ಮಾರ್ಗಗಳು".

ಜೆನ್ನಿ ಕ್ರಾಸ್ಕಾ

ಪ್ರಭುವಿನ ದೈವದರ್ಶನ (ಎಪಿಫ್ಯನಿ)ದ ಹಬ್ಬವು ಮೂವರು ಜ್ಯೋತಿಷಿಗಳ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತದೆ, ಇದು ಬೆಳಕು, ಪ್ರಕಟನಾ ಮತ್ತು ರಕ್ಷಣಾಯೋಜನೆಗೆ ದೇವರ ಸಾರ್ವತ್ರಿಕ ಕರೆಯ ಆಚರಣೆಯಾಗಿದೆ. ನವಜಾತ ರಾಜನನ್ನು ಹುಡುಕಲು ನಕ್ಷತ್ರವನ್ನು ಅನುಸರಿಸಿದ ಜ್ಞಾನಿಗಳ ಪ್ರಯಾಣವನ್ನು ಪ್ರತಿಬಿಂಬಿಸಲು ಈ ವಾರದ ಶುಭಸಂದೇಶವು ನಮ್ಮನ್ನು ಆಹ್ವಾನಿಸುತ್ತದೆ.

ಜ್ಯೋತಿಷಿಗಳು ಸತ್ಯವನ್ನು ಹುಡುಕುವ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಆ ಸತ್ಯವನ್ನು ಹುಡುಕಲು ಅವರ ಆರಾಮ ವಲಯಗಳನ್ನು ಮೀರಿ ಪ್ರಯಾಣಿಸಲು ಸಿದ್ಧವಾಗಿದ್ದಾರೆ. ಅವರ ತೀರ್ಥಯಾತ್ರೆಯು ಈ ತೀರ್ಥಯಾತ್ರೆಯು ಕುತೂಹಲದಿಂದ ಹುಟ್ಟಿದ ಪ್ರಯಾಣ ಮತ್ತು ದೇವರ ಉಪಸ್ಥಿತಿಯ ಚಿಹ್ನೆಗಳನ್ನು ಅನುಸರಿಸುವ ಇಚ್ಛೆಯೊಂದಿಗೆ ಪ್ರಾರಂಭವಾಗುತ್ತದೆ ಎಂದು ನಮಗೆ ನೆನಪಿಸುತ್ತದೆ. ಜ್ಯೋತಿಷಿಗಳು ಕ್ರಿಸ್ತನನ್ನು ಮುಖಾಮಖಿಯಾಗಿ ಎದುರುಗೊಂಡು ರೂಪಾಂತರಗೊಂಡಂತೆ, ನಾವು ಕೂಡ ಆತನನ್ನು ಹುಡುಕಲು, ನಮ್ಮ ಜೀವನದಲ್ಲಿ ಆತನನ್ನು ಅಂಗೀಕರಸಲು ಮತ್ತು ಆ ಮುಖಾಮುಖಿಯಿಂದ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಕರೆಯಲ್ಪಟ್ಟಿದ್ದೇವೆ. ಪ್ರಭುವಿನ ದೈವದರ್ಶನವು (ಎಪಿಫ್ಯನಿ) ಕ್ರಿಸ್ತರ ಬೆಳಕಿಗೆ ನಮ್ಮ ಹೃದಯವನ್ನು ತೆರೆಯಲು ನಮಗೆ ಸವಾಲು ಹಾಕುತ್ತದೆ, ಇದು ಪಾಪ ಮತ್ತು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಅನುವು ಮಾಡಿಕೊಡುತ್ತದೆ.

ಜ್ಞಾನಿಗಳು ಬರಿಗೈಯಲ್ಲಿ ಯೇಸುವನ್ನು ಭೇಟಿ ಮಾಡಲು ಬರಲಿಲ್ಲ; ಅವರು ಚಿನ್ನ, ಸುಗಂಧ ತೈಲ ಮತ್ತು ರಕ್ತಬೋಳಗಳ ಉಡುಗೊರೆಗಳನ್ನು ತಂದರು. ಅವು ಯೇಸುವನ್ನು ಗೌರವಿಸುವ ಉಡುಗೊರೆಗಳಾಗಿದ್ದು, ಇದು ಅತನನ್ನು ಗುರುತಿಸುವ ಮತ್ತು ಧ್ಯೇಯದ ಸಂಕೇತಗಳಾಗಿವೆ. ಚಿನ್ನವು ಯೇಸುವನ್ನು ರಾಜರೆಂದು ಒಪ್ಪಿಕೊಳ್ಳುತ್ತದೆ, ಸುಗಂಧ ದ್ರವ್ಯವು ಅವರ ದೈವತ್ವವನ್ನು ಗೌರವಿಸುತ್ತದೆ ಮತ್ತು ರಕ್ತಬೋಳವು ನಮ್ಮ ರಕ್ಷಣಾ ಯೋಜನೆಗಾಗಿ ಅವರ ಯಾತನೆ ಮತ್ತು ತ್ಯಾಗವನ್ನು ಮುನ್ಸೂಚಿಸುತ್ತದೆ. ಈ ಉಡುಗೊರೆಗಳು, ನಮ್ಮ ಅತ್ಯುತ್ತಮವಾದದ್ದನ್ನು ಕ್ರಿಸ್ತನಿಗೆ ಸಮರ್ಪಿಸುವ ಪ್ರಾಮುಖ್ಯತೆಯನ್ನು ನಮಗೆ ನೆನಪಿಸುತ್ತವೆ - ಕೇವಲ ನಮ್ಮ ಭೌತಿಕ ಸಂಪತ್ತುಗಳಲ್ಲ, ಆದರೆ ನಮ್ಮ ಜೀವನ, ನಮ್ಮ ಸಮಯ ಮತ್ತು ನಮ್ಮ ಪ್ರತಿಭೆಗಳ ಉಡುಗೊರೆಗಳಾಗಿರಲಿ.

ಜ್ಯೋತಿಷಿಗಳ ಭೇಟಿಯು ದೇವರ ರಕ್ಷಣಾ ಯೋಜನೆಯ ವಿಸ್ತಾರ ಸ್ವರೂಪವನ್ನು ಸಹ ತಿಳಿಸುತ್ತದೆ. ಜ್ಯೋತಿಷಿಗಳು ಅನ್ಯಜನರಾಗಿದ್ದರೂ, ಕ್ರಿಸ್ತನನ್ನು ಗುರುತಿಸಿ ಆರಾಧಿಸಿದವರಲ್ಲಿ ಅವರು ಮೊದಲಿಗರಾಗಿದ್ದರು, ಯೇಸುವು ಆಯ್ಕೆಯಾದ ಕೆಲವರಿಗೆ ಮಾತ್ರವಲ್ಲದೆ ಎಲ್ಲ ಜನರಿಗಾಗಿ ಧರೆಗೆ ಬಂದಿದ್ದಾರೆ ಎಂದು ಒತ್ತಿಹೇಳಿದರು. ವಿಶೇಷವಾಗಿ, ಪ್ರತ್ಯೇಕವಾಗಿ ದೇವರಿಂದ ದೂರವಿರುವವರು ಅಥವಾ ದೇವರಿಂದ ದೂರವಾಗಿದ್ದೇವೆ ಎಂದು ಭಾವಿಸುವವರಿಗೆ ಕ್ರಿಸ್ತರ ಆಗಮನ, ಎಲ್ಲಾ ಅಡೆತಡೆಗಳನ್ನು ಒಡೆದು, ಕ್ರಿಸ್ತರ ಬೆಳಕನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ನಮಗೆ ಸವಾಲು ಹಾಕುತ್ತದೆ.

ಅವರ ಪ್ರಯಾಣದುದ್ದಕ್ಕೂ, ಜ್ಯೋತಿಷಿಗಳಿಗೆ ಕನಸಿನ ರೂಪದಲ್ಲಿ ನಕ್ಷತ್ರ ಮತ್ತು ದೈವಿಕ ಹಸ್ತಕ್ಷೇಪವು ಅವರಿಗೆ ಮಾರ್ಗದರ್ಶನ ನೀಡಿತು. ದೇವರು ಅವರನ್ನು ಕ್ರಿಸ್ತನ ದರ್ಶಿಸುವ ಭಾಗ್ಯವನ್ನು ನೀಡಿದ್ದು ಮಾತ್ರವಲ್ಲದೆ ಹೆರೋದನ ಬಂದೊಡ್ಡುವ ಅಪಾಯದಿಂದ ಅವರನ್ನು ದೂರಮಾಡಿದರು. ಒಳನೋಟ ಮತ್ತು ಅನುಗ್ರಹದ ಶಾಂತ ಕ್ಷಣಗಳ ಮೂಲಕ ದೇವರು-ತನ್ನನ್ನು ಹುಡುಕುವವರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾನೆ ಎಂದು ಇದು ನೆನಪಿಸುತ್ತದೆ. ನಾವು ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದಂತೆ, ನಮ್ಮ ಜೀವನದಲ್ಲಿ ಅವರ ಧ್ವನಿಯನ್ನು ಕೇಳಲು, ನಮ್ಮ ಕಿವಿ ಮತ್ತು ಹೃದಯವನ್ನು ತೆರೆಯೋಣ, ಅದು ನಮಗೆ ಪರಿಚಯವಿಲ್ಲದ ಮಾರ್ಗಗಳಲ್ಲಿ ಕರೆದೊಯ್ಯುವಾಗಲೂ ಅವರ ನಿರ್ದೇಶನವನ್ನು ನಂಬೋಣ.

“ಪ್ರಭುವಿನ ದೈವದರ್ಶನ (ಎಪಿಫ್ಯನಿ)" ಎಂಬ ಪದವು ಪ್ರಕಟಿಸು ಎಂದರ್ಥ - ಸತ್ಯವು ಗೋಚರಿಸುವ ಕ್ಷಣ. ಹಬ್ಬವು ರಾಷ್ಟ್ರಗಳಿಗೆ ಕ್ರಿಸ್ತರ ಪ್ರತ್ಯಕ್ಷತೆಯನ್ನು ಆಚರಿಸುತ್ತದೆ, ಇದು ಜ್ಯೋತಿಷಿಗಳ ಭೇಟಿಯಿಂದ ಸಂಕೇತಿಸಲ್ಪಟ್ಟಿದೆ. ಆದರೂ ಪ್ರಭುವಿನ ದೈವದರ್ಶನ (ಎಪಿಫ್ಯನಿ) ಕೇವಲ ಹಿಂದಿನ ಘಟನೆಯಲ್ಲ. ಕ್ರಿಸ್ತರು ಇಂದಿಗೂ ತಮ್ಮನ್ನು ಬಹಿರಂಗಪಡಿಸುವುದನ್ನು ಮುಂದುವರೆಸುತ್ತಾನೆ, ನಮ್ಮಲ್ಲಿ ಪ್ರತಿಯೊಬ್ಬರನ್ನು ತನ್ನ ಬೆಳಕನ್ನು ಅನ್ವೇಷಿಸುವವರಾಗಿ ಮತ್ತು ಇತರರಿಗೆ ಅದನ್ನು ಹೊರುವವರಾಗಿರಲು ಕರೆ ನೀಡುತ್ತಾನೆ. ಈ ವಾರ, ನಾವು ಜ್ಯೋತಿಷಿಗಳ ಪ್ರಯಾಣದ ಬಗ್ಗೆ ಧ್ಯಾನಿಸುತ್ತಿರುವಾಗ, ನಮ್ಮ ಸ್ವಂತ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಲು, ನಮ್ಮ ಉಡುಗೊರೆಗಳನ್ನು ಅರ್ಪಿಸಲು, ದೇವರ ಮಾರ್ಗದರ್ಶನವನ್ನು ಕೇಳಲು ಮತ್ತು ಕ್ರಿಸ್ತರ ಸಾರ್ವತ್ರಿಕ ಪ್ರೀತಿ ಮತ್ತು ರಕ್ಷಣಾ ಯೋಜನೆಗೆ ಸಾಕ್ಷಿಗಳಾಗಿ ಬದುಕಲು ನಾವು ಸ್ಪೂರ್ತಿಯಾಗೋಣ.

ವಿಶ್ವಾಸದ ನಕ್ಷತ್ರವನ್ನು ಅನುಸರಿಸುವ ಧೈರ್ಯವನ್ನೀಯಲು ಮತ್ತು ಅವರನ್ನು ರಾಷ್ಟ್ರಗಳ ಬೆಳಕು ಎಂದು ಅಂಗೀಕರಿಸುವ ಜ್ಞಾನವನ್ನು ನಮಗೆ ದಯಪಾಲಿಸಲೆಂದು ನಾವು ಕ್ರಿಸ್ತರ ಮುಂದೆ ಮಂಡಿಯೂರಿ ನಮ್ರತೆಯಿಂದ ಪ್ರಾರ್ಥಿಸೋಣ.

ಮೇರಿಲ್ಯಾಂಡ್ ನ ಕಥೋಲಿಕ ಸಮ್ಮೇಳನದ, ಕಾರ್ಯನಿರ್ವಾಹಕ ನಿರ್ದೇಶಕ.

05 ಜನವರಿ 2025, 13:24