ಪ್ರಭುವಿನ ದಿನದ ಚಿಂತನೆ: ಇಂದು ಆ ದಿನ
ಧರ್ಮಗುರು ಲ್ಯೂಕ್ ಗ್ರೆಗೊರಿರವರು, OFM
ಇಂದಿನ ಶುಭಸಂದೇಶವು ಯೇಸು ತನ್ನ ಹುಟ್ಟೂರಾದ ನಜರೇತ್‌ಗೆ ಹಿಂದಿರುಗಿದ ಬಗ್ಗೆ ಹೇಳುತ್ತದೆ, ಅವರು ಬೆಳೆದ ಪರಿಚಿತ ಸ್ಥಳ, ಅಲ್ಲಿ ಎಲ್ಲರೂ ಅವರನ್ನು ತಿಳಿದಿದ್ದರು. ಅಲ್ಲಿ ಅವರು ತನ್ನ ಹೆತ್ತವರು ಮತ್ತು ನೆರೆಹೊರೆಯವರೊಂದಿಗೆ ಪ್ರಾರ್ಥನಾ ಮಂದಿರಕ್ಕೆ (ಸಿನಗಾಗ್‌ಗೆ) ಹಾಜರಾದರು, ಆ ಪರಿಚಿತ ಸನ್ನಿವೇಶದಲ್ಲಿ ಅವರು ಪ್ರವಾದಿ ಯೆಶಾಯರು ಬರೆದ ವಾಕ್ಯಗಳನ್ನು ಓದುತ್ತಾರೆ.
"ದೇವರಾತ್ಮ ನನ್ನ ಮೇಲಿದೆ. ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಸ್ವಾತಂತ್ರ್ಯ ನೀಡಲೂ ಶೋಷಿತರಿಗೆ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, “ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು.”
ಪ್ರವಾದಿಯ ಆ ವಾಕ್ಯಗಳು ಪ್ರಭುಯೇಸುವಿನ ಸೇವಾಜೀವನದ ಮೊದಲ ದಾಖಲೆಯಾಗಿದ್ದು, ಆದ್ದರಿಂದ ಅವರ ಮತ್ತು ನಮ್ಮ ಧ್ಯೇಯಗಳಿಗೆ ಪ್ರಮುಖ ಮಹತ್ವವನ್ನು ನೀಡಿವೆ.
ತನ್ನ ಆರಂಭಿಕ ವರ್ಷಗಳಲ್ಲಿ ಅವರು ಖಂಡಿತವಾಗಿಯೂ ತನ್ನ ಜನರೊಂದಿಗೆ ಹಂಚಿಕೊಳ್ಳಲು ಬಯಸುವ ಜೀವನದ ಬಗ್ಗೆ ಗಮನ ಹರಿಸುತ್ತಿದ್ದಾರೆ ಮತ್ತು ವಿವೇಚಿಸುತ್ತಿದ್ದಾರೆ. ಅವರಿಗೆ ಯಾವುದು ಹೆಚ್ಚು ಮುಖ್ಯವಾದುದು ಮತ್ತು ಸಾಕಾರಗೊಳಿಸಲು, ಬದುಕಲು ಮತ್ತು ಹಂಚಿಕೊಳ್ಳಲು ಬಯಸುವ ಮೌಲ್ಯಗಳ ಬಗ್ಗೆ ಅವರು ಯೋಚಿಸಿರಬಹುದು. ಅವರು ಭೂತಕಾಲಕ್ಕೆ ಹಿಂತಿರುಗುತ್ತಿಲ್ಲ ಅಥವಾ ಭವಿಷ್ಯವನ್ನು ಊಹಿಸಲು ಪ್ರಯತ್ನಿಸುತ್ತಿಲ್ಲ. ಅವರು ತನ್ನ ಸ್ವಗ್ರಾಮದಲ್ಲಿ ತನ್ನ ಸ್ವಂತ ಜನರ ಬಳಿಗೆ ಬಂದು ಇಂದಿನ ಬಗ್ಗೆ ನೇರವಾಗಿ ಮಾತನಾಡುತ್ತಾನೆ. ಇಂದು ಆ ನೆರವೇರಿಕೆಯ ದಿನ ಎಂದು ಅವರು ಹೇಳುತ್ತಾರೆ.
"ದೇವರಾತ್ಮ ನನ್ನ ಮೇಲಿದೆ. ಇದು ಅಭಿಷೇಕದ ದಿನ; ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಸ್ವಾತಂತ್ರ್ಯ ನೀಡಲೂ ಶೋಷಿತರಿಗೆ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಇದು ಪ್ರಭುವಿನ ಕೃಪೆಯ ವರ್ಷ. ಆದ್ದರಿಂದ ಇಂದು ನಾವು "ಭರವಸೆಯ ಯಾತ್ರಿಕರು" ಎಂದು ಘೋಷಿಸುವ ದಿನವಾಗಿದೆ.
"ಭರವಸೆಯ ಯಾತ್ರಿಕರು" ಎಂಬುದಕ್ಕೆ ಈ ಘೋಷಣೆಯನ್ನು ಓದುವುದರೊಂದಿಗೆ ಪೂರ್ಣಗೊಳ್ಳುವುದಿಲ್ಲ, ಅದನ್ನು ಅರಿತುಕೊಳ್ಳಬೇಕು ಮತ್ತು ವಿಶ್ವದ ಕಟ್ಟಕಡೆಯವರೆಗೆ ಈ ವಾರ್ತೆಯನ್ನು ಸಾರಬೇಕು, ಏಕೆಂದರೆ ಇಂದು ಪ್ರೀತಿಸುವ, ಸತ್ಯವಂತರಾಗುವ, ಕ್ಷಮಿಸುವ, ನಿರಾಶ್ರಿತರು ಮತ್ತು ವಲಸಿಗರನ್ನು ಸ್ವಾಗತಿಸುವ, ಹಸಿದವರಿಗೆ ಆಹಾರ ನೀಡುವ, ಸಮನ್ವಯಗೊಳಿಸುವ ಮತ್ತು ಎಲ್ಲಾ ಪುರುಷರು ಮತ್ತು ಮಹಿಳೆಯರ ನಡುವೆ ಶಾಂತಿಯನ್ನು ಸ್ಥಾಪಿಸುವ ದಿನವಾಗಿದೆ.
ಇಂದು ನಾವು ಏನು ಮಾಡುತ್ತೇವೆ ಎಂದು ಯೋಚಿಸುವಾಗ, ನಾವು ನಿನ್ನೆಯ ಬಗ್ಗೆ ಅಥವಾ ನಾಳೆಯ ಬಗ್ಗೆ ಯೋಚಿಸುವುದಿಲ್ಲ, ನಾಳೆ ಏನಾಗಬಹುದು ಎಂಬುದು ನಮಗೆ ತಿಳಿದಿಲ್ಲ, ಆದ್ದರಿಂದ ಈ ದಿನವೇ ಆ ನೆರವೇರಿಕೆಯ ದಿನವಾಗಿದೆ. ನಾವು ನಿನ್ನೆಗೆ ಹಿಂತಿರುಗಲು ಸಾಧ್ಯವಿಲ್ಲ ಮತ್ತು ನಾಳೆ ಏನಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ.
ಇಂದು ಆ ದಿನ. ಇವತ್ತಲ್ಲದಿದ್ದರೆ, ಯಾವಾಗ? ಇಂದು ನಮ್ಮ ಸ್ವಂತ ಜೀವನದಲ್ಲಿ ಈ ನೆರವೇರಿಕೆ ಯಾವ ರೀತಿಯಲ್ಲಿ ನಡೆಯುತ್ತಿದೆ? ಇಂದು ನಮ್ಮ ಸಹೋದರ ಸಹೋದರಿಯರ ಜೀವನದಲ್ಲಿ, ವಿಶೇಷವಾಗಿ ನೆರವಿನ ಅಗತ್ಯವಿರುವವರ ಜೀವನದಲ್ಲಿ, ನಮ್ಮ ಭರವಸೆಯನ್ನು ಹಂಚಿಕೊಳ್ಳುತ್ತಾ, ಅವರಿಗೆ ಭರವಸೆಯನ್ನು ನೀಡುತ್ತಾ ನಾವು ಯಾವ ರೀತಿಯಲ್ಲಿ ಈ ನೆರವೇರಿಕೆಯಲ್ಲಿ ಭಾಗವಹಿಸುತ್ತಿದ್ದೇವೆ? ಯೇಸು ಬಯಸಿದ ಮತ್ತು ನಿರೀಕ್ಷಿಸಿದ ನೆರವೇರಿಕೆಯು ಈ ಲೋಕದಲ್ಲಿ ಭರವಸೆಯ ಯಾತ್ರಿಕರಾಗಿ ಮುಂದುವರಿಯಲು, ಅಭಿವೃದ್ಧಿ ಹೊಂದಲು ಮತ್ತು ಸಂತೋಷದಿಂದ ಪ್ರಗತಿ ಸಾಧಿಸಲು, ಆ ದಾರಿಯುದ್ದಕ್ಕೂ ನಾವು ರಕ್ಷಣಾ ಸಂದೇಶದೊಂದಿಗೆ ಭೇಟಿಯಾಗುವವರನ್ನು ಸ್ಪರ್ಶಿಸಲು ನಮ್ಮನ್ನು ಪ್ರೇರೇಪಿಸುತ್ತದೆ.
ಹಾಗಾದರೆ, ಇಂದು ನಾವು ನಮ್ಮನ್ನು ಸರ್ಪಿಸಿಕೊಳ್ಳಲು ಸಿದ್ಧರಿದ್ದೇವೆಯೇ? ಕ್ರಿಸ್ತರನ್ನು ನಮ್ಮ ಜೀವನದಲ್ಲಿ ಮತ್ತು ನಮ್ಮ ಮೂಲಕ ಇತರರ ಜೀವನದಲ್ಲಿ ಪ್ರವೇಶಿಸಲು ನಾವು ಅನುಮತಿಸುತ್ತೇವೆಯೇ? ಯೇಸು ಅಭಿಷಿಕ್ತನು, ("ಅಭಿಷಿಕ್ತನು" ಶುಭಸಂದೇಶವನ್ನು, ಸೌಖ್ಯವನ್ನು ಮತ್ತು ವಿಮೋಚನೆಯನ್ನು ತರುತ್ತಾನೆ ಎಂದು ಹೇಳಲಾಗುತ್ತದೆ) ಆದರೆ ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಮತ್ತು ಅವರು ಇಂದು ತನ್ನ ತವರೂರಾದ ನಜರೇತ್‌ನಲ್ಲಿ ಸ್ಪಷ್ಟವಾಗಿ ಘೋಷಿಸಿದಂತೆ, ಆತನ ಧ್ಯೇಯವನ್ನು ಹಂಚಿಕೊಳ್ಳಲು ಕೇಳಿಕೊಳ್ಳಲಾಗಿದೆ. ಹಾಗಾದರೆ ಇಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ, ನಿಜವಾದ "ಭರವಸೆಯ ಯಾತ್ರಿಕರು" ಆಗಿ ನಮ್ಮ ಸಹೋದರ ಸಹೋದರಿಯರ ಅಭಿವೃದ್ಧಿಗಾಗಿ, ಸ್ವರ್ಗದ ರಾಜ್ಯಕ್ಕಾಗಿ ಪ್ರಭುಯೇಸು ನಮ್ಮ ಜೀವನದಲ್ಲಿ ನಾವು ಏನನ್ನು ಸಂಪೂರ್ಣಗೊಳಿಸಲು ಕೇಳುತ್ತಿದ್ದಾರೆ?