ಇಥಿಯೋಪಿಯದ ಗುರುವಿದ್ಯಾರ್ಥಿಗಳು ಯುದ್ಧಾನಂತರದ ಸೌಖ್ಯವನ್ನು ನೀಡಲು ಸಿದ್ಧರಾಗಿದ್ದಾರೆ
ಹಿಕ್ಮಾ ಎ. ಅಬ್ದುಲ್ಮೆಜಿದ್, ಸಿಎನ್‌ಇಡಬ್ಲ್ಯೂಎ
ಇಥಿಯೋಪಿಯಾದ ಉತ್ತರ ಟೈಗ್ರೇ ಪ್ರದೇಶದಲ್ಲಿ ತನ್ನ ಪ್ರಾಂತ್ಯಾಧಿಕಾರದಲ್ಲಿ(ಎಪಾರ್ಕಿಯ) ಜನರನ್ನು ಭಯಭೀತಗೊಳಿಸಿದ ಎರಡು ವರ್ಷಗಳ ಯುದ್ಧದ ಭೀಕರತೆಯನ್ನು ವಿವರಿಸುವಾಗ ಧರ್ಮಾಧ್ಯಕ್ಷರ ಧ್ವನಿ ನಡುಗಿತು.
"ಕ್ರಿಸ್‌ಮಸ್ ಹಬ್ಬದ ಆಚರಣೆಯಿಂದ ಹೊರಗೆಳೆದು, ನಮ್ಮ ಸ್ವಂತ ಭಕ್ತಾಧಿಗಳನ್ನು ಹತ್ಯೆ ಮಾಡಲಾಯಿತು. ಕ್ರಿಸ್‌ಮಸ್ ಹಬ್ಬದಂದು ದೈವಾರಾಧನೆ ವಿಧಿ ಅರ್ಪಿಸುತ್ತಿದ್ದಾಗ ಧರ್ಮಗುರುಗಳನ್ನು ಬಲಿಪೀಠದಿಂದ ಕರೆದೊಯ್ಯಲಾಯಿತು" ಎಂದು ಇಥಿಯೋಪಿಯದ, ಅಡಿಗ್ರಾಟ್‌ನ ಕಥೋಲಿಕ ಪ್ರಾಂತ್ಯಾಧಿಕಾರಿ(ಎಪಾರ್ಕಿ) ಅಬುನೆ ಟೆಸ್ಫಾಸೆಲಾಸಿ ಮೆಧಿನ್ ರವರು ಹೇಳಿದರು. "ನನ್ನನ್ನೂ ಒಳಗೊಂಡಂತೆ; ನನ್ನ ಪ್ರಧಾನಾಲಯದಿಂದ ನನ್ನನ್ನು ಎಳೆದುಕೊಂಡು ಕೊಲೆಗಾರ ಪಡೆಗಳು ಸುತ್ತುವರೆದವು. ಆದರೆ ನನ್ನ ಗುರುಗಳು ನನ್ನನ್ನು ರಕ್ಷಿಸಿದರು, ಮತ್ತು ದೇವರ ಅದ್ಭುತ ರಕ್ಷಣೆಯಿಂದ ನಾವೆಲ್ಲರೂ ಬದುಕುಳಿದೆವು."
ಯುದ್ಧದ ಸಂದಿಗ್ಧ ಪರಿಸ್ಥಿತಿಯಲ್ಲಿನ ತಮ್ಮ ಸ್ಥಳೀಯ ದರ್ಮಸಭೆಯ ಭಯಾನಕ ಚಿತ್ರಣವನ್ನು ಧರ್ಮಾಧ್ಯಕ್ಷರು ಚಿತ್ರಿಸಿದರು. ಹಿಂದೆ ವೈವಿಧ್ಯಮಯ ಹಿನ್ನೆಲೆಯ, ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದ ಸ್ಥಳಗಳಲ್ಲಿ, ಹಿಂಸಾಚಾರದಿಂದ ಯಾರನ್ನೂ ಅಥವಾ ಯಾವುದೂ ಹೊರತಾಗಿರಲಿಲ್ಲ.
ನವೆಂಬರ್ 2020 ರಲ್ಲಿ, ಟೈಗ್ರೇ ಪೀಪಲ್ಸ್ ಲಿಬರೇಶನ್ ಫ್ರಂಟ್ ಮತ್ತು ಎರಿಟ್ರಿಯನ್ ರಕ್ಷಣಾ ಪಡೆಗಳ ಬೆಂಬಲದೊಂದಿಗೆ ಇಥಿಯೋಪಿಯದ ರಾಷ್ಟ್ರೀಯ ರಕ್ಷಣಾ ಪಡೆಗಳ ನಡುವೆ ರಕ್ತಸಿಕ್ತ ಸಶಸ್ತ್ರ ಸಂಘರ್ಷ ಭುಗಿಲೆದ್ದಿತು.
2021ರ ಮಧ್ಯಭಾಗದ ವೇಳೆಗೆ, 5.2 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ - ಆ ಸಮಯದಲ್ಲಿ ಟೈಗ್ರೇನ ಬಹುತೇಕ ಸಂಪೂರ್ಣ ಜನಸಂಖ್ಯೆಗೆ - ತುರ್ತು ಆಹಾರ ಸಹಾಯದ ಅಗತ್ಯವಿತ್ತು ಮತ್ತು ಲಕ್ಷಾಂತರ ಜನರು ಕ್ಷಾಮದಂತಹ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದರು. ಲೈಂಗಿಕ ಹಿಂಸಾಚಾರವು ಹೆಚ್ಚಾಗಿತ್ತು ಮತ್ತು 2,204 ಬದುಕುಳಿದವರು ವೈದ್ಯಕೀಯ ಸಹಾಯವನ್ನು ಕೋರಿದ್ದರು.
ನವೆಂಬರ್ 2022ರಲ್ಲಿ ಕದನ ವಿರಾಮ ಜಾರಿಗೆ ಬರುವ ಹೊತ್ತಿಗೆ, ಅಂದಾಜು 600,000 ನಾಗರಿಕರು ಕೊಲ್ಲಲ್ಪಟ್ಟರು ಮತ್ತು 2.6 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದರು. ಅಂದಾಜು 10,000 ಜನರು, ಮುಖ್ಯವಾಗಿ ಮಹಿಳೆಯರು ಮತ್ತು ಹುಡುಗಿಯರು, ಯುದ್ಧದ ತಂತ್ರವಾಗಿ ಲೈಂಗಿಕ ಹಿಂಸೆಗೆ ಬಲಿಯಾದರು.
"ನಾವು ಪ್ರತಿಯೊಂದು ರೀತಿಯಲ್ಲೂ ನರಮೇಧವನ್ನು ಕಣ್ಣಾರೆ ಕಂಡಿದ್ದೇವೆ" ಎಂದು ಧರ್ಮಾಧ್ಯಕ್ಷರು ಹೇಳಿದರು, ಹೇಳಲಾಗದ ಅಂದರೆ ವ್ಕಕ್ತಪಡಿಸಲಾಗದ ಕಥೆಗಳ ಭಾರದಿಂದ ಅವರ ಕಣ್ಣುಗಳು ಕಣ್ಣೀರಿನಿಂದ ಭಾರವಾಗಿದ್ದವು. "ನಮ್ಮ ಮಹಿಳೆಯರು ಹೇಳಲಾಗದ ದೌರ್ಜನ್ಯಗಳನ್ನು ಅನುಭವಿಸಿದರು."
ತಮ್ಮ ಕುರ್ಚಿಯ ತೋಳಿನ ರೆಸ್ಟ್ ಅನ್ನು ಹಿಡಿದುಕೊಂಡು ಅವರು ಹೇಳಿದರು: "ಏನಾಯಿತು, ಏನು ನಡೆಯಿತು ಎಂಬುದರ ಬಗ್ಗೆ ಬಹಳ ಕಡಿಮೆ ಹೇಳಲಾಗಿದೆ, ಆದರೆ ನನ್ನನ್ನು ನಂಬಿರಿ, ಸತ್ಯವು ಒಂದು ದಿನ ಹೊರಬರುತ್ತದೆ."
ಸುಮಾರು ಎರಡು ವರ್ಷಗಳ ನಂತರ, ಅಕ್ಟೋಬರ್ 2024 ರಲ್ಲಿ, ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ಪ್ರಕಾರ, ಟೈಗ್ರೇನಲ್ಲಿ ಸುಮಾರು ಒಂದು ಮಿಲಿಯನ್ ಜನರು ಇನ್ನೂ ಸ್ಥಳಾಂತರಗೊಳ್ಳುತ್ತಿದ್ದಾರೆ. ಕಳೆದ ವರ್ಷದ ಬರಗಾಲದಿಂದ ಉಲ್ಬಣಗೊಂಡ ಸುಮಾರು 4 ಮಿಲಿಯನ್ ಜನರು ಆಹಾರ ಅಭದ್ರತೆಯನ್ನು ಎದುರಿಸಿದ್ದಾರೆ ಎಂದು ಕಥೋಲಿಕ ಪರಿಹಾರ ಸೇವೆ ವರದಿ ಮಾಡಿದೆ.
ಆರೋಗ್ಯ ಸೇವೆ ಮತ್ತು ಶಿಕ್ಷಣದ ಸೌಕರ್ಯವು ತೀವ್ರವಾಗಿ ನಿರ್ಬಂಧಿಸಲ್ಪಟ್ಟಿದೆ. ಯುದ್ಧದಲ್ಲಿ ಶೇಕಡಾ 88 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಶೇಕಡಾ 77 ರಷ್ಟು ಆರೋಗ್ಯ ಸೌಲಭ್ಯಗಳು ಹಾನಿಗೊಳಗಾದವು ಎಂದು ಪ್ರಾಂತ್ಯಾಧಿಕಾರಿ, ಶಿಕ್ಷಣ ಸಂಯೋಜಕರಾದ ಡೇನಿಯಲ್ ಜಿಗ್ಟಾರವರು ಹೇಳಿದರು.
ಸೌಖ್ಯಪಡಿಸುವಿಕೆ ಮತ್ತು ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಧರ್ಮಸಭೆಯ ಪಾತ್ರವು ಮಹತ್ವದ್ದಾಗಿದೆ ಎಂದು ಅಬುನೆ ಟೆಸ್ಫಾಸೆಲಾಸ್ಸಿರವರು ಹೇಳಿದರು. ಈ ಪ್ರದೇಶದಲ್ಲಿ ಕಥೋಲಿಕ ಜನಸಂಖ್ಯೆಯು ಕೇವಲ 25,000 ರಷ್ಟಿದೆ - ಇದು ಟೈಗ್ರೇನ ಒಟ್ಟು 6 ಮಿಲಿಯನ್ ಜನಸಂಖ್ಯೆಯ ಸುಮಾರು 0.4 ಪ್ರತಿಶತದಷ್ಟಿದೆ - ಮತ್ತು 34 ಧರ್ಮಕೇಂದ್ರಗಳಲ್ಲಿ 99 ಧರ್ಮಗುರುಗಳು ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕದಾಗಿದ್ದರೂ, ಸ್ಥಳೀಯ ಧರ್ಮಸಭೆಯು ತನ್ನ ಕಾಳಜಿಯನ್ನು ಎಲ್ಲರಿಗೂ ವಿಸ್ತರಿಸುತ್ತದೆ.
ಪ್ರಾಂತ್ಯಾಧಿಕಾರಿ ಧರ್ಮಗುರುವಿನ ಕಾರ್ಯನಿರ್ವಹಕರು ಮತ್ತು ಮಹಿಳಾ ಧಾರ್ಮಿಕ ಸಮುದಾಯಗಳು, ವಿಶೇಷವಾಗಿ ಡಾಟರ್ಸ್ ಆಫ್ ಚಾರಿಟಿ, ಅಗಾಧ ಚೈತನ್ಯಭರಿತ ಸೇವೆಗಳನ್ನು ನೀಡುತ್ತಿವೆ, ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಸಮಾಲೋಚನೆಗಾಗಿ ಆಸ್ಪತ್ರೆಗಳಿಗೆ ನಿರ್ದೇಶಿಸುತ್ತಿವೆ ಮತ್ತು ಅಗತ್ಯವಿರುವವರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುತ್ತಿವೆ.
ಅಡಿಗ್ರಾಟ್ ನಗರದ ಎರಿಟ್ರಿಯನ್ ಗಡಿಯಿಂದ ಸುಮಾರು 25 ಮೈಲುಗಳಷ್ಟು ದೂರದಲ್ಲಿ ಅಡಿಗ್ರಾಟ್ ಕಥೋಲಿಕ ಪ್ರಧಾನ ಗುರುವಿದ್ಯಾಮಂದಿರ ಇದೆ. ಎಂಟು ವರ್ಷಗಳ ಈ ಕಾರ್ಯಕ್ರಮವು ಬೌದ್ಧಿಕ, ಆಧ್ಯಾತ್ಮಿಕ, ಮಾನವ ಮತ್ತು ಗುರು ತರಬೇತಿಯ ರಚನೆಯನ್ನು ನೀಡುತ್ತದೆ. ಮೂರು ವರ್ಷಗಳು ತತ್ವಶಾಸ್ತ್ರದ ಅಧ್ಯಯನಕ್ಕೆ, ನಾಲ್ಕು ವರ್ಷಗಳು ದೈವಶಾಸ್ತ್ರಕ್ಕೆ ಮತ್ತು ಒಂದು ವರ್ಷ ಯಾಜಕ ಸೇವೆಗೆ ಮೀಸಲಾಗಿವೆ. ಪರೀಕ್ಷೆಗಳನ್ನು ಪವಿತ್ರ ಪೀಠ ಅಧಿಕಾರಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳು, ವಿಶೇಷವಾಗಿ ರೋಮ್‌ನಲ್ಲಿರುವ ವಿಶ್ವಗುರುಗಳ ಉರ್ಬಾನಿಯಾ ವಿಶ್ವವಿದ್ಯಾಲಯವು ನೋಡಿಕೊಳ್ಳುತ್ತದೆ.
ಯುದ್ಧದ ಸಮಯದಲ್ಲಿ ಉಪಯಾಜಕ ಬೆರಿಹೋಮ್ ಬೆರ್ಹೆ ಗುರುವಿದ್ಯಾಮಂದಿರಲ್ಲಿದ್ದರು. ಅಕ್ಟೋಬರ್ 2021 ರಲ್ಲಿ ಹಿಂಸಾಚಾರ ಅಡಿಗ್ರಾಟ್ ಸಮೀಪಿಸುತ್ತಿದ್ದಂತೆ, ಅವರು ಮತ್ತು ಇತರ 10 ಗುರುವಿದ್ಯಾಮಂದಿರದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಓಡಿಹೋದರು. ಅವರು ಅಸಿಂಬಾ ಪರ್ವತದ ಬಳಿಯ ಮರುಭೂಮಿಯನ್ನು ದಾಟಿ ಒಂದು ತಿಂಗಳು ಅಂಜೂರದ ಹಣ್ಣುಗಳನ್ನು ತಿಂದು ಬದುಕುಳಿದರು.
"ಪ್ರತಿದಿನ ಜನರು ಕೊಲ್ಲಲ್ಪಡುತ್ತಿದ್ದಾರೆಂದು ತಿಳಿದು ನಾವು ಅಡಗಿಕೊಂಡೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಸ್ಥಳೀಯರು ತಮ್ಮಲ್ಲಿದ್ದ ಆಹಾರವನ್ನು ಹಂಚಿಕೊಳ್ಳುವ ಮೂಲಕ ಗುರುವಿದ್ಯಾಮಂದಿರದ ವಿದ್ಯಾರ್ಥಿಗಳನ್ನು ಪೋಷಿಸಲು ಸಹಾಯ ಮಾಡಿದರು. "ಅವರು ನಮ್ಮನ್ನು ತಮ್ಮ ಮಕ್ಕಳಂತೆ ನೋಡಿದರು. ದೇವರಿಗೆ ಮತ್ತು ನಂತರ ನನ್ನ ಜನರಿಗೆ ಧನ್ಯವಾದಗಳು, ನಾವು ಬದುಕುಳಿದೆವು."
"ಅವರು ನಿಮ್ಮಲ್ಲಿ ಮಾತನಾಡಲು ಬಯಸುತ್ತಾರೆ ಮತ್ತು ನೀವು ಅವರ ಮಾತನ್ನು ಕೇಳಬೇಕು, ಹೆಚ್ಚಿನ ಜನರು ಈ ಕ್ರಿಯೆಯ ಮೂಲಕ ಬದಲಾಗಿದ್ದಾರೆ." ಎಂದು ಅವರು ಹೇಳಿದರು.
ಯುದ್ಧಕಾಲದ ಅದೇ ದೃಢಸಂಕಲ್ಪ ಮತ್ತು ಬದ್ಧತೆಯೊಂದಿಗೆ, ಈ ಆಕ್ರಮಿತ ಪ್ರದೇಶಗಳಲ್ಲಿನ ಯಾಜಕರು ತಮ್ಮ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೆ, ಭರವಸೆ ಮತ್ತು ಬೆಂಬಲವನ್ನು ನೀಡುತ್ತಾರೆ. ಅವರ ಸೇವೆಯು ಕೆಲವೊಮ್ಮೆ ಆಧ್ಯಾತ್ಮಿಕ ಆರೈಕೆಯನ್ನು ಮೀರಿ, ಸಶಸ್ತ್ರ ಪಡೆಗಳು ಮತ್ತು ನಾಗರಿಕರ ನಡುವೆ ಮಧ್ಯಪ್ರವೇಶಿಸುತ್ತದೆ, ಕೆಲವೊಮ್ಮೆ ಶಾಂತಿಯ ಸನ್ನೆಗಳೊಂದಿಗೆ ಅಥವಾ ವಿರಳ ಆಹಾರ ಸರಬರಾಜುಗಳನ್ನು ಒದಗಿಸುವ ಮೂಲಕ ಹಿಂಸಾಚಾರವನ್ನು ತಪ್ಪಿಸುತ್ತದೆ.
"ಕ್ರಿಸ್ತರು ನಮ್ಮ ಪಾಪಗಳಿಗಾಗಿ ಹಾಗೂ ಮಾನವೀಯತೆಗಾಗಿ ಯಾತನೆ ಅನುಭವಿಸಿದರು ಮತ್ತು ಅದೇ ರೀತಿ, ಧರ್ಮಸಭೆ, ಅದರ ಅನುಯಾಯಿಗಳು, ಯಾಜಕರು ಮತ್ತು ಧರ್ಮಪ್ರಚಾರಕರು ಬಿಕ್ಕಟ್ಟಿನ ಸಮಯದಲ್ಲಿ ಅವರು ಸೇವೆ ಸಲ್ಲಿಸುವ ಸಮುದಾಯಗಳೊಂದಿಗೆ ಇರಬೇಕು" ಎಂದು ಧರ್ಮಾಧ್ಯಕ್ಷರು ಹೇಳಿದರು.
"ನೀವು ಅವಲಂಬಿಸಬಹುದಾದ ಏಕೈಕ ವಿಷಯವೆಂದರೆ ದೇವರ ಕರುಣೆ ಮತ್ತು ದೇವರ ಕೃಪೆ."