ನೈಟ್ಸ್ ಆಫ್ ಕೊಲಂಬಸ್ ರವರಿಂದ ಉಕ್ರೇನ್‌ನಲ್ಲಿ ಅನಾಥರಿಗೆ ಮತ್ತು ವಿಧವೆಯರಿಗೆ ಕ್ರಿಸ್ಮಸ್ ಔತಣ
ಟೊಮಾಸ್ಜ್ ಝಿಲೆಂಕಿವಿಚ್ ಮತ್ತು ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
"ನಾವು ಅನಾಥರು ಮತ್ತು ವಿಧವೆಯರಿಗೆ ಸೇವೆ ಸಲ್ಲಿಸಲು ಇಲ್ಲಿದ್ದೇವೆ" ಎಂದು ನೈಟ್ಸ್ ಆಫ್ ಕೊಲಂಬಸ್, ಯುರೋಪಿನ ಅಂತರಾರ್ಷ್ಟ್ರೀಯ ಅಭಿವೃದ್ಧಿಯ ನಿರ್ದೇಶಕರಾದ ಶ್ರೀ. ಸ್ಝೈಮನ್ ಸಿಝೆಕ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು, ಅವರು ಉಕ್ರೇನ್ ಯುದ್ಧದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡುವ ನೈಟ್ಸ್ ರವರ ಉಪಕ್ರಮವನ್ನು ನೆನಿಸಿದರು.
ವಿಧವೆಯರು ಮತ್ತು ಅನಾಥರಿಗೆ ಕ್ರಿಸ್‌ಮಸ್ ಔತಣವನ್ನು ಉಕ್ರೇನ್‌ನಲ್ಲಿ ನೈಟ್ಸ್ ಆಫ್ ಕೊಲಂಬಸ್ ಆಯೋಜಿಸಿದ್ದಾರೆ, ಒಡಿಸ್ಸಾದ ಪ್ರದೇಶದ, ಪಿವ್ಡೆನ್ನೆ ನಗರದಲ್ಲಿ ನಡೆದ ಹಾಗೆ, ಅಮೇರಿಕ ಮತ್ತು ಕೆನಡಾದಲ್ಲಿ ಅವರ ಸಹವರ್ತಿಗಳ ಬೆಂಬಲದೊಂದಿಗೆ ಕ್ರಿಸ್‌ಮಸ್ ಔತಣವು ನಡೆಯಿತು.
ಸಂಪ್ರದಾಯ ಮತ್ತು ಪ್ರಾರ್ಥನೆ
ಈ ಕ್ರಿಸ್‌ಮಸ್ ಔತಣದಲ್ಲಿ ಉಕ್ರೇನಿಯಾದ ಗ್ರೀಕ್ ಕಥೋಲಿಕ ಧರ್ಮಸಭೆಯ, ಒಡೆಸ್ಸಾದ ಎಕ್ಸಾರ್ಚ್, ಧರ್ಮಾಧ್ಯಕ್ಷರಾದ ಮೈಖೈಲೊ ಬುಬ್ನಿರವರ ನೇತೃತ್ವದಲ್ಲಿ, ನೈಟ್ಸ್ ಆಫ್ ಕೊಲಂಬಸ್ ಮತ್ತು ಯಾಜಕರ ಪ್ರತಿನಿಧಿಗಳು ಭೋಜನಕೂಟದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಪಾಲ್ಗೊಳ್ಳುವವರು ನಂತರ ತಮ್ಮ ತಮ್ಮ ಟೇಬಲ್‌ಗಳಲ್ಲಿ ಒಟ್ಟುಗೂಡಿದರು, ಅಲ್ಲಿ ಸಾಂಪ್ರದಾಯಿಕ ಕುಟಿಯಾ ಸೇರಿದಂತೆ ಸಾಂಪ್ರದಾಯಿಕ ಭಕ್ಷ್ಯಗಳನ್ನು ಬಡಿಸಲಾಗಿತ್ತು. ಆ ಸಂಜೆಯ ಇತರ ಹಬ್ಬಗಳು ಕ್ರಿಸ್‌ಮಸ್ ಕ್ಯಾರೋಲ್ ಗೀತೆಗಳೊಂದಿಗೆ ಆರಂಭವಾಯಿತು, ನಂತರ ಕಲಾತ್ಮಕ ಪ್ರದರ್ಶನಗಳು ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.
'ದೇವರು ಅವರನ್ನು ಮರೆತಿಲ್ಲ'
ಈ ಕ್ರಿಸ್‌ಮಸ್ ಕೂಟಗಳಿಗೆ ನೈಟ್ಸ್‌ನ ಗುರಿಯು ʼಒಗ್ಗಟ್ಟು ಮತ್ತು ಬೆಂಬಲʼವನ್ನು ನೀಡುವುದಾಗಿದೆ ಎಂದು ಶ್ರೀ ಸಿಝೆಕ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು.
“ವಿಧವೆಯರು ಮತ್ತು ಅನಾಥರಿಗಾಗಿ ಸೇವೆ ಸಲ್ಲಿಸಲು ನಮ್ಮ ಸಂಸ್ಥೆಯನ್ನು ಪೂಜ್ಯ ಧರ್ಮಗುರು ಮೈಕೆಲ್ ಮೆಕ್‌ಗಿವ್ನಿಯವರು ಸ್ಥಾಪಿಸಿದ್ದಾರೆ.
ಅದಕ್ಕಾಗಿಯೇ, ಕ್ರಿಸ್‌ಮಸ್ ಕಾಲದಲ್ಲಿ, "ನಾವು ಉಕ್ರೇನಿನಾದ್ಯಂತ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಕ್ರಿಸ್‌ಮಸ್ ಔತಣವನ್ನು ಆಯೋಜಿಸುತ್ತೇವೆ" ಎಂದು ಅವರು ವಿವರಿಸಿದರು. "ಈ ಪ್ರತಿಯೊಂದು ಕೂಟಗಳು, ಈ ವ್ಯಕ್ತಿಗಳಿಗೆ “ದೇವರು ಅವರನ್ನು ಮರೆತಿ”ಲ್ಲ, ಅವರ ಸಂಕಟದಲ್ಲಿಯೂ ಆತನು ಅವರಿಗೆ ಹತ್ತಿರವಾಗಿದ್ದಾನೆ ಎಂಬುದನ್ನು ನೆನಪಿಸಲು ಒಂದು ಅವಕಾಶವಾಗಿದೆ" ಎಂದು ಅವರು ಒತ್ತಿ ಹೇಳಿದರು.
ಅಗತ್ಯವಿರುವ ಮಕ್ಕಳು
ಈ ಆಚರಣೆಗಳು "ಉಕ್ರೇನಿನಲ್ಲಿ ಅಗತ್ಯವಿರುವವರಿಗೆ ನಮ್ಮ ಬಹುಮುಖಿ ಬೆಂಬಲದ ಒಂದು ಭಾಗವಾಗಿದೆ" ಎಂದು ಶ್ರೀ ಸಿಝೆಕ್ ವಿವರಿಸಿದರು.
ಸಂತ ನಿಕೋಲಸ್ ರವರ ದಿನದ ಆಚರಣೆಯನ್ನು ಆಯೋಜಿಸುವುದರ ಜೊತೆಗೆ, ನೈಟ್ಸ್ ಆಫ್ ಕೊಲಂಬಸ್ ರವರು ಮಕ್ಕಳಿಗೆ 20,000 ಕ್ಯಾಂಡಿ ಪ್ಯಾಕೇಜ್‌ಗಳನ್ನು ವಿತರಿಸಿದರು.
ಈ ಕಷ್ಟದ ಸಮಯದಲ್ಲಿ "ನಾವು ದುಃಖದಿಂದ ಗುರುತಿಸಲ್ಪಟ್ಟ ಮಕ್ಕಳಿಗೆ ಸಂತೋಷದ ಕ್ಷಣಗಳನ್ನು ತರಲು ಬಯಸುತ್ತೇವೆ" ಎಂದು ನೈಟ್ಸ್‌ನ ಅಧಿಕಾರಿಯು ಒತ್ತಿಹೇಳಿದರು.
ಕುಟುಂಬಗಳನ್ನು ಬೆಂಬಲಿಸುವುದು
"ನಾವು ಕುಟುಂಬಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ, ವಿಶೇಷವಾಗಿ ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ, " ಎಂದು ಅವರು ಹೇಳಿದರು.
"ನಾವು ಅವರಿಗಾಗಿ ಕ್ರಿಸ್‌ಮಸ್ ತಿಂಡಿಗಳ ಗಂಟುಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಈ ಕುಟುಂಬಗಳನ್ನು ನೋಡಿಕೊಳ್ಳುವ ನಮ್ಮ ಧ್ಯೇಯದಲ್ಲಿ ದೃಢವಾಗಿರುತ್ತೇವೆ, ದೇವರು ಅವರನ್ನು ಮರೆತಿಲ್ಲ ಎಂದು ಅವರಿಗೆ ತಿಳಿಸುತ್ತೇವೆ," ಎಂದು ಶ್ರೀ ಸಿಝೆಕ್ ರವರು ಭರವಸೆ ನೀಡಿದರು.